ಸಿರಾಜ್‌ಗೆ ಟೀಮ್ ಇಂಡಿಯಾದಲ್ಲಿ ಅವಕಾಶ ಸಿಗದಿರುವುದಕ್ಕೆ ಕಾರಣ ಬಿಚ್ಚಿಟ್ಟ ಆರ್‌ಸಿಬಿಯ ಮೈಕ್ ಹೆಸನ್

ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭಕ್ಕೆ ದಿನಗಣನೆ ಆರಂಭವಾಗಿದ್ದು, ಚೊಚ್ಚಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಸೆಣಸಾಟ ನಡೆಸಲಿವೆ. ಇನ್ನು ಟೂರ್ನಿಯ ಎರಡನೇ ದಿನದಂದು ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಸೆಣಸಾಟ ನಡೆಸುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ಪಯಣವನ್ನು ಆರಂಭಿಸಲಿದ್ದು, ಈ ಬಾರಿ ನೂತನ ನಾಯಕ ಫಾಫ್ ಡು ಪ್ಲೆಸಿಸ್ ನೇತೃತ್ವದಲ್ಲಿ ಕಣಕ್ಕಿಳಿಯಲಿದೆ. ಇನ್ನು ತನ್ನ ಉತ್ತಮ ಕಮ್‌ಬ್ಯಾಕ್ ಮೂಲಕ ರಾಯಲ್ ಚಾಲೆಂಜರ್ಸ್ ತಂಡದ ಪ್ರಮುಖ ಆಟಗಾರ ಎನಿಸಿಕೊಂಡಿದ್ದ ಮೊಹಮ್ಮದ್ ಸಿರಾಜ್ ಈ ಬಾರಿಯ ರಿಟೆನ್ಷನ್ ಪ್ರಕ್ರಿಯೆಯಲ್ಲಿ ತಂಡದಲ್ಲಿಯೇ ಉಳಿದುಕೊಂಡಿದ್ದು, ಐಪಿಎಲ್‌ನಲ್ಲಿ ತಾನು ನೀಡಿದ ಉತ್ತಮ ಪ್ರದರ್ಶನದಿಂದ ಅಂತರರಾಷ್ಟ್ರೀಯ ತಂಡದಲ್ಲಿಯೂ ಸಹ ಸ್ಥಾನ ಗಿಟ್ಟಿಸಿಕೊಂಡಿದ್ದರು.
ಹೀಗೆ ಐಪಿಎಲ್ ಹಾಗೂ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮಿಂಚಿದ ಮೊಹಮ್ಮದ್ ಸಿರಾಜ್ ಕುರಿತು ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಿರ್ದೇಶಕ ಮೈಕ್ ಹೆಸನ್ ಮಾತನಾಡಿದ್ದು, ಮೊಹಮ್ಮದ್ ಸಿರಾಜ್ ಓರ್ವ ತೀರ್ ನತದೃಷ್ಟ ಕ್ರಿಕೆಟಿಗ ಎಂದಿದ್ದಾರೆ. ಹಲವಾರು ಕ್ರಿಕೆಟಿಗರು ತಾವು ಉತ್ತಮ ಫಾರ್ಮ್‌ನಲ್ಲಿದ್ದಾಗ ಮಾತ್ರ ಉತ್ಸಾಹವನ್ನು ತೋರುತ್ತಾರೆ, ಆದರೆ ಮೊಹಮ್ಮದ್ ಸಿರಾಜ್ ತಾನು ಕಳಪೆ ಫಾರ್ಮ್ ಹೊಂದಿದ್ದಾಗಲೂ ಉತ್ಸಾಹದಿಂದ ಕಣಕ್ಕಿಳಿಯುತ್ತಿದ್ದರು ಎಂದು ಮೈಕ್ ಹೆಸನ್ ಮೊಹಮ್ಮದ್ ಸಿರಾಜ್ ಓರ್ವ ಉತ್ಸಾಹಿ ಕ್ರಿಕೆಟಿಗ ಎಂದಿದ್ದಾರೆ. ಇನ್ನೂ ಮುಂದುವರೆದು ಮಾತನಾಡಿರುವ ಮೈಕ್ ಹೆಸನ್ ಸದ್ಯ ಭಾರತ ಕ್ರಿಕೆಟ್ ಹಲವಾರು ಪ್ರತಿಭಾವಂತ ವೇಗಿಗಳಿಂದ ಕೂಡಿದ್ದು, ಮೊಹಮ್ಮದ್ ಸಿರಾಜ್‌ಗೆ ಏಕದಿನ ಹಾಗೂ ಟಿ ಟ್ವೆಂಟಿ ಕ್ರಿಕೆಟ್‌ನಲ್ಲಿ ಸರಿಯಾದ ಅವಕಾಶಗಳು ಸಿಗುತ್ತಿಲ್ಲ ಹೀಗಾಗಿ ಆತ ನತದೃಷ್ಟ ಆಟಗಾರ ಎಂದಿದ್ದಾರೆ. ಹಾಗೂ ಟೀಮ್ ಇಂಡಿಯಾದಲ್ಲಿ ಸದ್ಯಕ್ಕಿರುವ ಪ್ರಮುಖ ವೇಗಿಗಳು ನಿವೃತ್ತಿ ಹೊಂದಿದ ನಂತರ ಮೊಹಮ್ಮದ್ ಸಿರಾಜ್‌ಗೆ ಸರಿಯಾದ ಅವಕಾಶಗಳು ಸಿಗಲಿವೆ ಎಂದು ಮೈಕ್ ಹೆಸನ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮೊಹಮ್ಮದ್ ಸಿರಾಜ್ ಅಂತರರಾಷ್ಟ್ರೀಯ ಕ್ರಿಕೆಟ್ ಅಂಕಿಅಂಶ
ಮೊಹಮ್ಮದ್ ಸಿರಾಜ್ ಇದುವರೆಗೂ ಒಟ್ಟು 23 ಟೆಸ್ಟ್ ಇನ್ನಿಂಗ್ಸ್‌ನಲ್ಲಿ ಬೌಲಿಂಗ್ ಮಾಡಿದ್ದು, 36 ವಿಕೆಟ್‌ಗಳನ್ನು ಪಡೆದಿದ್ದಾರೆ. ಹಾಗೂ ಮೊಹಮ್ಮದ್ ಸಿರಾಜ್ ಟೆಸ್ಟ್ ಕ್ರಿಕೆಟ್‌ನಲ್ಲಿ ಎರಡು ಬಾರಿ ನಾಲ್ಕು ವಿಕೆಟ್‌ಗಳ ಗೊಂಚಲು ಹಾಗೂ ಒಂದು ಬಾರಿ ಐದು ವಿಕೆಟ್‌ಗಳ ಗೊಂಚಲನ್ನು ಪಡೆದಿದ್ದಾರೆ. ಇನ್ನು ಕೇವಲ 4 ಏಕದಿನ ಪಂದ್ಯಗಳಲ್ಲಿ ಮಾತ್ರ ಕಣಕ್ಕಿಳಿದಿರುವ ಮೊಹಮ್ಮದ್ ಸಿರಾಜ್ 5 ವಿಕೆಟ್‌ಗಳನ್ನು ಪಡೆದಿದ್ದಾರೆ. ಇನ್ನುಳಿದಂತೆ 5 ಅಂತರರಾಷ್ಟ್ರೀಯ ಟಿ ಟ್ವೆಂಟಿ ಪಂದ್ಯಗಳನ್ನಾಡಿರುವ ಮೊಹಮ್ಮದ್ ಸಿರಾಜ್ 5 ವಿಕೆಟ್‌ಗಳನ್ನು ಪಡೆದಿದ್ದಾರೆ. ಹೀಗೆ ಸೀಮಿತ ಓವರ್ ಕ್ರಿಕಟ್ ಪಂದ್ಯಗಳಲ್ಲಿ ಹೆಚ್ಚು ಅವಕಾಶ ಸಿಗದ ಮೊಹಮ್ಮದ್ ಸಿರಾಜ್ ತನಗೆ ಅವಕಾಶ ಸಿಕ್ಕರೆ ಉತ್ತಮ ಪ್ರದರ್ಶನ ನೀಡಬಲ್ಲೆ ಎಂಬುದನ್ನು ತನ್ನ ಟೆಸ್ಟ್ ಕ್ರಿಕೆಟ್ ಅಂಕಿಅಂಶದ ಮೂಲಕ ತಿಳಿಸಿದ್ದಾರೆ.
ಮೊಹಮ್ಮದ್ ಸಿರಾಜ್ ಐಪಿಎಲ್ ಅಂಕಿಅಂಶ
ಇನ್ನು ತನ್ನ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭದ ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿದ ಕಾರಣ ಸಾಕಷ್ಟು ಟೀಕೆ ಹಾಗೂ ಟ್ರೋಲ್‌ಗಳಿಗೆ ಒಳಗಾಗಿದ್ದ ಮೊಹಮ್ಮದ್ ಸಿರಾಜ್ ನಂತರದ ಆವೃತ್ತಿಗಳಲ್ಲಿ ತನ್ನ ಮಾರಕ ಬೌಲಿಂಗ್ ದಾಳಿಯಿಂದ ಉತ್ತಮ ಪ್ರದರ್ಶನ ನೀಡಿ ಟೀಕೆ ಮಾಡಿದ್ದ ಜನರಿಂದಲೇ ಪ್ರಶಂಸೆ ಗಿಟ್ಟಿಸಿಕೊಂಡರು. ಹೀಗೆ ಇಲ್ಲಿಯವರೆಗೂ ಒಟ್ಟು 50 ಐಪಿಎಲ್ ಪಂದ್ಯಗಳನ್ನಾಡಿರುವ ಮೊಹಮ್ಮದ್ ಸಿರಾಜ್ 50 ವಿಕೆಟ್‌ಗಳನ್ನು ಪಡೆದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications