ಐಪಿಎಲ್ 2022: ರವೀಂದ್ರ ಜಡೇಜಾ ನಾಯಕತ್ವ ತೊರೆಯಲು ಕಾರಣ ಬಿಚ್ಚಿಟ್ಟ ಕ್ಯಾಪ್ಟನ್ ಧೋನಿ!

ಐಪಿಎಲ್ 2022ರ ಆವೃತ್ತಿಯಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡ ಈ ಬಾರಿಯ ಆವೃತ್ತಿಯಲ್ಲಿ ಕಳಪೆ ಪ್ರದರ್ಶನ ನೀಡಿದ್ದು ಇದರ ಪರಿಣಾಮವಾಗಿ ತಂಡದ ನಾಯಕತ್ವ ಬದಲಾವಣೆಯಾಗಿದೆ. ಐಪಿಎಲ್‌ನಲ್ಲಿ ಇದೇ ಮೊದಲ ಬಾರಿಗೆ ನಾಯಕತ್ವದ ಜವಾಬ್ಧಾರಿ ವಹಿಸಿಕೊಂಡಿದ್ದ ರವೀಂದ್ರ ಜಡೇಜಾ ನಾಯಕತ್ವದಲ್ಲಿ ಮಾತ್ರವಲ್ಲದೆ ಆಟಗಾರನಾಗಿಯೂ ವೈಫಲ್ಯವನ್ನು ಅನುಭವಿಸಿದರು. ಹೀಗಾಗಿ ಮತ್ತೆ ಸಿಎಸ್‌ಕೆ ನಾಯಕತ್ವ ಎಂಎಸ್ ಧೋನಿ ಹೆಗಲಿಗೆ ಬಿದ್ದದೆ.
ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಎಂಎಸ್ ಧೋನಿ ನಾಯಕನಾಗಿ ಕಣಕ್ಕಿಳಿಯುವ ಮೂಲಕ ಮತ್ತೆ ನಾಯಕತ್ವದ ಹೊಣೆ ಹೊತ್ತಿದ್ದಾರೆ. ಈ ಪಂದ್ಯದ ಮುಕ್ತಾಯದ ಬಳಿಕ ಮಾತನಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ರವೀಂದ್ರ ಜಡೇಜಾ ನಾಯಕತ್ವ ತೊರೆದ ವಿಚಾರವಾಗಿ ಮಾತನಾಡಿದ್ದಾರೆ. ರವೀಂದ್ರ ಜಡೇಜಾ ನಾಯಕತ್ವ ತೊರೆಯಲು ಕಾರಣವೇನು ಎಂಬುದನ್ನು ಮಾಹಿ ಬಹಿರಂಗಪಡಿಸಿದ್ದಾರೆ.

ನಾಯಕತ್ವ ಜಡೇಜಾಗೆ ಹೊರೆಯಾಯಿತು
ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯ ಮುಕ್ತಾಯದ ಬಳಿಕ ಮಾತನಾಡಿದ ಎಂಎಸ್ ಧೋನಿ ನಾಯಕತ್ವದ ಹೊಣೆಗಾರಿಗೆ ಬಗ್ಗೆ ಮಾತನಾಡಿದ್ದಾರೆ. "ನೀವು ನಾಯಕನಾಗಾದ ನಾಕಷ್ಟು ನಿರೀಕ್ಷೆಗಳು ನಿಮ್ಮ ಮೇಲಿರುತ್ತದೆ. ಹೊಣೆಗಾರಿಗೆ ಹೆಚ್ಚಾದಂತೆಯೇ ರವೀಂದ್ರ ಜಡೇಜಾ ಮನಸ್ಸಿನ ಮೇಲೆ ಪರಿಣಾಮ ಬಿದ್ದಿದೆ. ನನ್ನ ಪ್ರಕಾರ ನಾಯಕತ್ವದ ಜವಾಬ್ಧಾರಿ ಆತನಿಗೆ ಹೊರೆಯಾಯಿತು. ಆ ಜವಾಬ್ಧಾರಿ ನಿಧಾನಕ್ಕೆ ಹೊಂದಿಕೆಯಾಗುತ್ತದೆ" ಎಂದಿದ್ದಾರೆ ಎಂಎಸ್ ಧೋನಿ.

ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲೇಬೇಕು
ಮುಂದುವರಿದು ಮಾತನಾಡಿದ ಎಂಎಸ್ ಧೋನಿ, "ಎಲ್ಲವನ್ನೂ ಹೇಳಿಕೊಡುತ್ತಾ ಹೋದರೆ ಅದು ನಾಯಕತ್ವಕ್ಕೆ ಸಹಾಯವಾಗುವುದಿಲ್ಲ. ಮೈದಾನದಲ್ಲಿ ಕೆಲ ಪ್ರಮುಖ ನಿರ್ಧಾರಗಳನ್ನು ನಾಯಕನಾದವನು ತೆಗೆದುಕೊಳ್ಳೇಬೇಕಾಗುತ್ತದೆ. ಆ ನಿರ್ಧಾರಗಳಿಗೆ ನೀವು ಜವಾಬ್ಧಾರರೂ ಆಗಿರಬೇಕು. ಒಮ್ಮೆ ನಾಯಕನಾದ ನಂತರ ಹಲವು ವಿಚಾರಗಳ ಮೇಲೆ ಎಚ್ಚರಿಕೆ ವಹಿಸಬೇಕಾಗುತ್ತದೆ. ಅದರಲ್ಲೂ ತಮ್ಮ ವೈಯಕ್ತಿಮ ಪ್ರದರ್ಶನ ಕೂಡ ಒಂದು" ಎಂದಿದ್ದಾರೆ ಎಂಎಸ್ ಧೋನಿ.

ನಾಯಕನಾಗಿ ಇದೇ ಕೊನೆಯ ಆವೃತ್ತಿ ಎಂದು ಜಡೇಜಾಗೆ ಗೊತ್ತಿತ್ತು
ಎಂಎಸ್ ಧೋನಿ ಈ ಸಂದರ್ಭದಲ್ಲಿ ಮಾತನಾಡುತ್ತಾ ಮತ್ತೊಂದು ಕುತೂಹಲಕಾರಿ ಅಂಶವನ್ನು ಕೂಡ ಬಹಿರಂಗಪಡಿಸಿದ್ದಾರೆ. "ನನ್ನ ಪ್ರಕಾರ ಜಡೇಜಾಗೆ ನಾಯಕನಾಗಿ ಇದು ಕೊನೆಯ ಆವೃತ್ತಿಯಾಗಲಿದೆ ಎಂದು ಮೊದಲೇ ಗೊತ್ತಿತ್ತು. ಮೊದಲ ಎರಡು ಪಂದ್ಯಗಳಲ್ಲಿ ಆತನ(ಜಡೇಜಾ) ನಾಯಕತ್ವದ ಜವಾಬ್ಧಾರಿಯನ್ನು ಮೇಲ್ನೋಟಕ್ಕೆ ವಹಿಸಿಕೊಂಡಿದ್ದೆ. ಆದರೆ ನಂತರ ಆತನಿಗೆ ಸಂಪೂರ್ಣವಾಗಿ ಆತನಿಗೆ ಬಿಟ್ಟಿದ್ದು ಎಲ್ಲಾ ಜವಾಬ್ಧಾರಿಯನ್ನು ತೆಗೆದುಕೊಳ್ಳಲು ತಿಳಿಸಿದ್ದೆ. ನೀವು ನಾಯಕತ್ವದಿಂದ ಬಿಡುಗಡೆಯಾದರೂ ನಿಮ್ಮಿಂದ ಅತ್ಯುತ್ತಮ ಪ್ರದರ್ಶನ ಬೇಕಿದೆ. ಅದನ್ನು ತಂಡ ಬಯಸುತ್ತದೆ" ಎಂದಿದ್ದಾರೆ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂಎಸ್ ಧೋನಿ.

ನಾವು ಅತ್ಯುತ್ತಮ ಫೀಲ್ಡರ್‌ನನ್ನು ಕೂಡ ಕಳೆದುಕೊಂಡೆವು
ಎಂಎಸ್ ಧೋನಿ ನಾಯಕನಾಗಿ ಜಡೇಜಾ ವೈಫಲ್ಯದ ಬಗ್ಗೆ ಬೊಟ್ಟು ಮಾಡಿದರು. ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಸಂಪೂರ್ಣ ವೈಫಲ್ಯವನ್ನು ಅನುಭವಿಸಿದ ನಂತರ ವಿಶ್ವದ ಅತ್ಯುತ್ತಮ ಫಿಲ್ಡರ್ ಎನಿಸಿಕೊಂಡ ಜಡೇಜಾ ಫೀಲ್ಡಿಂಗ್‌ನಲ್ಲಿಯೂ ಕೆಲ ಕ್ಯಾಚ್‌ಗಳನ್ನು ಕೈಚೆಲ್ಲುವ ಮೂಲಕ ಅಚ್ಚರಿ ಮೂಡಿಸಿದರು. ಈ ಬಗ್ಗೆ ಮಾಹಿ ಮಾನಾಡಿದ್ದಾರೆ "ನಾವು ಅತ್ಯುತ್ತಮ ಫೀಲ್ಡರ್‌ನನ್ನು ಕೂಡ ಕಳೆದುಕೊಂಡೆವು. ನಾವು 17-18 ಕ್ಯಾಚ್‌ಗಳನ್ನು ಕೈಚೆಲ್ಲಿರುವುದು ನಿಜಕ್ಕೂ ಕಳವಳ ಮೂಡಿಸುತ್ತದೆ" ಎಂದಿದ್ದಾರೆ ಎಂಎಸ್ ಧೋನಿ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications