For Quick Alerts
ALLOW NOTIFICATIONS  
For Daily Alerts
 

MI vs SRH: ಪಂದ್ಯದಲ್ಲಿ ನಿಮ್ಮ ಡ್ರೀಮ್ ಟೀಮ್ ಗೆಲ್ಲಲು ತಂಡವನ್ನು ಹೀಗೆ ರಚಿಸಿ, ಈತನಿಗೆ ನಾಯಕತ್ವ ನೀಡಿ

IPL 2022: Mumbai Indians vs Sunrisers Hyderabad dream team prediction

ಸದ್ಯ ನಡೆಯುತ್ತಿರುವ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಲೀಗ್ ಹಂತ ಮುಕ್ತಾಯದ ಸನಿಹಕ್ಕೆ ಬಂದಿದ್ದು, ಪ್ಲೇಆಫ್ ಸುತ್ತಿಗೆ ಅರ್ಹತೆ ಪಡೆದುಕೊಳ್ಳುವಲ್ಲಿ ತಂಡಗಳ ನಡುವೆ ಪೈಪೋಟಿ ಆರಂಭವಾಗಿದೆ. ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟನ್ಸ್ ಈಗಾಗಲೇ ಪ್ಲೇಆಫ್ ಸುತ್ತಿಗೆ ಲಗ್ಗೆ ಇಟ್ಟಿದ್ದು, ಎರಡನೇ ಸ್ಥಾನಕ್ಕಾಗಿ ರಾಜಸ್ಥಾನ್ ರಾಯಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳ ನಡುವೆ ಪೈಪೋಟಿ ಏರ್ಪಟ್ಟಿದೆ. ಇನ್ನು ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡು ಪ್ಲೇಆಫ್ ಸುತ್ತಿಗೆ ಪ್ರವೇಶಿಸಲು ರಾಯಲ್ ಚಾಲೆಂಜರ್ಸ್ ಬೆಂಗಳೂರು, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳ ನಡುವೆ ಪೈಪೋಟಿ ಏರ್ಪಟ್ಟಿದ್ದರೆ, ಸತತ ಐದು ಪಂದ್ಯಗಳಲ್ಲಿ ಗೆದ್ದು ಆರ್ಭಟಿಸಿದ್ದ ಸನ್ ರೈಸರ್ಸ್ ಹೈದರಾಬಾದ್ ನಂತರ ಸತತ ಐದು ಪಂದ್ಯಗಳಲ್ಲಿ ಗೆದ್ದು ಇದೀಗ ಪ್ಲೇಆಫ್ ಸುತ್ತಿಗೆ ಅರ್ಹತೆ ಪಡೆದುಕೊಳ್ಳುವ ರೇಸ್‌ನಿಂದ ಹೊರಬಿದ್ದಿದೆ ಎನ್ನಬಹುದು.

ಹೀಗೆ ಟೂರ್ನಿಯಲ್ಲಿ ಎಡವಿರುವ ಸನ್ ರೈಸರ್ಸ್ ಹೈದರಾಬಾದ್ ಇದೀಗ ತನ್ನ 13ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ಸೆಣಸಾಟ ನಡೆಸಲಿದ್ದು, ಈ ಪಂದ್ಯ ನಾಳೆ ( ಮೇ 17 ) ಮುಂಬೈನ ವಾಂಖೆಡೆ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಇನ್ನು ಮುಂಬೈ ಇಂಡಿಯನ್ಸ್ ಈಗಾಗಲೇ ಪ್ಲೇಆಫ್ ಸುತ್ತನ್ನು ಪ್ರವೇಶಿಸುವ ಅರ್ಹತೆಯನ್ನು ಕಳೆದುಕೊಂಡಿದೆ. ಹೀಗಾಗಿ ಇತ್ತಂಡಗಳ ನಡುವಿನ ಪಂದ್ಯದ ಫಲಿತಾಂಶ ಪ್ಲೇ ಆಫ್ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎನ್ನಬಹುದು. ಹೀಗಾಗಿ ಈ ಪಂದ್ಯ ಹೆಚ್ಚಿನ ಕುತೂಹಲವನ್ನು ಹುಟ್ಟಿಸಿಲ್ಲದೇ ಇದ್ದರೂ ಕೆಲ ಕ್ರಿಕೆಟ್ ಪ್ರೇಮಿಗಳು ಈ ಪಂದ್ಯಕ್ಕಾಗಿ ಡ್ರೀಮ್ ಟೀಮ್ ರಚಿಸುವಲ್ಲಿ ನಿರತರಾಗಿದ್ದಾರೆ.

ಹೀಗೆ ಈ ಪಂದ್ಯಕ್ಕಾಗಿ ಡ್ರೀಮ್ ಟೀಮ್ ರಚಿಸುತ್ತಿರುವ ಕ್ರಿಕೆಟ್ ಅಭಿಮಾನಿಗಳು ಈ ಕೆಳಕಂಡಂತೆ ಆಟಗಾರರನ್ನು ಆಯ್ಕೆ ಮಾಡಿದರೆ ಉತ್ತಮ ಎನ್ನಬಹದು..

ಡ್ರೀಮ್ ಟೀಮ್ 1: 1 ಅಭಿಷೇಕ್ ಶರ್ಮಾ, 2 ಇಶಾನ್ ಕಿಶನ್, 3 ಕೇನ್ ವಿಲಿಯಮ್ಸನ್, 4 ತಿಲಕ್ ವರ್ಮಾ, 5 ರಾಹುಲ್ ತ್ರಿಪಾಠಿ, 6 ನಿಕೋಲಸ್ ಪೂರನ್, 7 ಡೇನಿಯಲ್ ಸ್ಯಾಮ್ಸ್, 8 ಭುವನೇಶ್ವರ್ ಕುಮಾರ್, 9 ಮಾರ್ಕೊ ಜಾನ್ಸೆನ್, 10 ಜಸ್ಪ್ರೀತ್ ಕುಮಾರ್ ಕರ್ಕೆಯ 11 .
ನಾಯಕ: ಕೇನ್ ವಿಲಿಯಮ್ಸನ್, ಉಪನಾಯಕ: ತಿಲಕ್ ವರ್ಮಾ, ವಿಕೆಟ್ ಕೀಪರ್: ಇಶಾನ್ ಕಿಶನ್

ಡ್ರೀಮ್ ಟೀಮ್ 2: 1 ರೋಹಿತ್ ಶರ್ಮಾ, 2 ಅಭಿಷೇಕ್ ಶರ್ಮಾ, 3 ಐಡೆನ್ ಮಾರ್ಕ್ರಾಮ್, 4 ತಿಲಕ್ ವರ್ಮಾ, 5 ಟಿಮ್ ಡೇವಿಡ್, 6 ನಿಕೋಲಸ್ ಡಿಪೋರಾನಿ ಸಾಮ್ಸ್ , 8 ಭುವನೇಶ್ವರ್ ಕುಮಾರ್, 9 ಹೃತಿಕ್ ಶೋಕೀನ್, 10 ಜಸ್ಪ್ರೀತ್ ಬುಮ್ರಾ, 11 ಉಮ್ರಾನ್ ಮಲಿಕ್.
ನಾಯಕ: ರೋಹಿತ್ ಶರ್ಮಾ, ಉಪನಾಯಕ: ಅಭಿಷೇಕ್ ಶರ್ಮಾ, ವಿಕೆಟ್ ಕೀಪರ್: ನಿಕೋಲಸ್ ಪೂರನ್.

ಸಂಭಾವ್ಯ ಆಡುವ ಬಳಗ:

ಮುಂಬೈ ಇಂಡಿಯನ್ಸ್: 1 ರೋಹಿತ್ ಶರ್ಮಾ (ನಾಯಕ), 2 ಇಶಾನ್ ಕಿಶನ್ (WK), 3 ರಮಣದೀಪ್ ಸಿಂಗ್, 4 ತಿಲಕ್ ವರ್ಮಾ, 5 ಟಿಮ್ ಡೇವಿಡ್, 6 ಟ್ರಿಸ್ಟಾನ್ ಸ್ಟಬ್ಸ್ / ಕೀರಾನ್ ಪೊಲಾರ್ಡ್ / ಡೆವಾಲ್ಡ್ ಬ್ರೆವಿಸ್, 7 ಡೇನಿಯಲ್ ಸ್ಯಾಮ್ಸ್, 8 ಮುರುಗನ್ ಅಶ್ವಿನ್ / ಹೃತಿಕ್ ಶೋಕೀನ್, 9 ಕುಮಾರ್ ಕಾರ್ತಿಕೇಯ, 10 ಜಸ್ಪ್ರೀತ್ ಬುಮ್ರಾ, 11 ರಿಲೆ ಮೆರೆಡಿತ್.

ಸನ್‌ರೈಸರ್ಸ್ ಹೈದರಾಬಾದ್: 1 ಕೇನ್ ವಿಲಿಯಮ್ಸನ್ (ನಾಯಕ), 2 ಅಭಿಷೇಕ್ ಶರ್ಮಾ, 3 ರಾಹುಲ್ ತ್ರಿಪಾಠಿ, 4 ಏಡೆನ್ ಮಾರ್ಕ್‌ರಾಮ್, 5 ನಿಕೋಲಸ್ ಪೂರನ್ (ವಿಕೆ), 6 ವಾಷಿಂಗ್ಟನ್ ಸುಂದರ್, 7 ಶಶಾಂಕ್ ಸಿಂಗ್, 8 ಭುವನೇಶ್ವರ್ ಕುಮಾರ್, 9 ಉಮ್ರಾನ್ ಮಲಿಕ್, 10 ಮಾರ್ಕೊ ಜಾನ್ಸನ್, 11 ಟಿ ನಟರಾಜನ್

Story first published: Monday, May 16, 2022, 18:28 [IST]
Other articles published on May 16, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+