ಐಪಿಎಲ್ 2022: ಈ ತಾಣದಲ್ಲಿಯೇ ಟೂರ್ನಿ ಬಹುತೇಕ ನಿಶ್ಚಿತ: ಫೆಬ್ರವರಿಯಲ್ಲಿ ಘೋಷಣೆ

ಕೊರೊನಾವೈರಸ್‌ನ ಕಾರಣದಿಂದಾಗಿ ಈ ಬಾರಿಯ ಐಪಿಎಲ್ ತಾಣದ ಬಗೆಗಿನ ಗೊಂದಲ ಮುಂದುವರಿದಿದೆ. ಭಾರತದಲ್ಲಿ ಒಮೈಕ್ರಾನ್ ರೂಪಾಂತರಿಯ ಅಬ್ಬರ ಹೆಚ್ಚಾಗಿರುವ ಕಾರಣ ವಿದೇಶದಲ್ಲಿ ನಡೆಸುವುದು ಸೂಕ್ತ ಎಂಬ ಅಭಿಪ್ರಾಯಗಳು ವ್ಯಕ್ತವಾಗಿತ್ತು. ಆದರೆ ಇದೀಗ ಭಾರತದಲ್ಲಿಯೇ ಐಪಿಎಲ್ ಟೂರ್ನಿಯನ್ನು ಆಯೋಜೊಸುವ ನಿರ್ಧಾರವನ್ನು ಬಿಸಿಸಿಐ ಪ್ರಕಟಿಸುವ ಸಾಧ್ಯತೆ ದಟ್ಟವಾಗಿದೆ. ಅದರಲ್ಲೂ ಐಪಿಎಲ್ 15ನೇ ಆವೃತ್ತಿಯ ಸಂಪೂರ್ಣ ಪಂದ್ಯಗಳು ಮುಂಬೈನಲ್ಲಿಯೇ ಆಯೋಜನೆಯಾಗುವ ಸಾಧ್ಯತೆ ಹೆಚ್ಚಾಗಿದೆ.
ಬಿಸಿಸಿಐ ಪದಾಧಿಕಾರಿಗಳು ಈ ವಿಚಾರವಾಗಿ ಚರ್ಚಿಸಲು ಗುರುವಾರ ಸಬೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಐಪಿಎಲ್ ಅನ್ನು ಸಂಪೂರ್ಣವಾಗಿ ಮುಂಬೈನಲ್ಲಿ ಆಯೋಜಿಸುವುದು ಉತ್ತಮ ಪರಿಹಾರವಾಗಿದೆ ಎಂದು ಒಮ್ಮತಕ್ಕೆ ಬರಲಾಗಿದೆ ಎಂದು ವರದಿಯಾಗಿದೆ. ಫೆಬ್ರವರಿ 20 ರಂದು ಈ ಬಗ್ಗೆ ಅಧಿಕೃತ ಘೋಷಣೆ ಹೊರಬೀಳಲಿದೆ.
ದಿ ಟೆಲಿಗ್ರಾಫ್ ವರದಿಯ ಪ್ರಕಾರ ಮುಂಬೈ ಮತ್ತು ಸುತ್ತಮುತ್ತಲಿನ 3 ತಾಣಗಳಲ್ಲಿ ಐಪಿಎಲ್‌ನ ಎಲ್ಲಾ ಪಂದ್ಯಗಳನ್ನು ಆಯೋಜಿಸಲು ಸಾಧ್ಯವಾಗುವ ಕಾರಣದಿಂದಾಗಿ ಮಂಡಳಿಯು ಮುಂಬೈಯನ್ನು ಐಪಿಎಲ್ ನಡೆಸಲು ಉತ್ತಮ ತಾಣ ಎಂದು ನಿರ್ಧರಿಸಿದೆ ಎನ್ನಲಾಗಿದೆ.
"ನಾವು ಇಲ್ಲಿಯವರೆಗೆ ಮುಂಬೈ ಹೊರತುಪಡಿಸಿ ಬೇರೆ ಸ್ಥಳದ ಬಗ್ಗೆ ಯೋಚಿಸುತ್ತಿಲ್ಲ. ಕೊರೊನಾವೈರಸ್‌ನ ಮೂರನೇ ಅಲೆಯ ಪ್ರಭಾವ ಕಡಿಮೆಯಾಗುತ್ತಿದೆ. ಹೀಗಾಗಿ ಟೂರ್ನಿಯನ್ನು ವಿದೇಶದಲ್ಲಿ ಆಯೋಜಿಸುವ ಅಗತ್ಯವಿಲ್ಲ" ಎಂದು ಬಿಸಿಸಿಐನ ಮೂಲಗಳ ಹೇಳಿಕೆಯನ್ನು ಉಲ್ಲೇಖಿಸಿ ಟೆಲಿಗ್ರಾಫ್ ವರದಿ ಮಾಡಿದೆ.
ಬಿಸಿಸಿಐ ತನ್ನ ಇತ್ತೀಚಿನ ಅಧಿಕೃತ ಹೇಳಿಕೆಯಲ್ಲಿ ಐಪಿಎಲ್ ಮಾರ್ಚ್ 27 ರಂದು ಆರಂಬವಾಗಲಿದೆ ಎಂದು ತಿಳಿಸಿದೆ. ಭಾರತದಲ್ಲಿಯೇ ಐಪಿಎಲ್ ಅನ್ನು ಆಯೋಜಿಸಲು ಮಂಡಳಿ ಮತ್ತು ಫ್ರಾಂಚೈಸಿಗಳು ಉತ್ಸುಕವಾಗಿವೆ ಎಂದು ಬಿಸಿಸಿಐನ ಕಾರ್ಯದರ್ಶಿ ಜಯ್ ಶಾ ಕಳೆದ ವಾರ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದರು. ಅದೇ ಹಿನ್ನಲೆಯಲ್ಲಿ ಭಾರತದಲ್ಲಿ ಪ್ರಸ್ತುತ ಕೋವಿಡ್-19 ಪರಿಸ್ಥಿತಿಯನ್ನು ಗಮನಿಸಿ ಬಿಸಿಸಿಐ ಪದಾಧಿಕಾರಿಗಳು ಮುಂಬೈನಲ್ಲಿ ಐಪಿಎಲ್‌ನ ಸಂಪೂರ್ಣ ಋತುವನ್ನು ಆಯೋಜಿಸಲು ಒಪ್ಪಿಗೆಯನ್ನು ನೀಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications