IPL 2022 : '10 ಕೋಟಿ ಸಿಗಬೇಕಿದ್ದ ಈ ಆಟಗಾರನಿಗೆ ಸಿಕ್ಕಿದ್ದು 2 ಕೋಟಿ; ಫ್ರಾಂಚೈಸಿ ವಿರುದ್ಧ ಕಿಡಿಕಾರಿದ ಕೋಚ್!

ಇಂಡಿಯನ್ ಪ್ರೀಮಿಯರ್ ಲೀಗ್ ಜಗತ್ತಿನ ಅತಿ ದೊಡ್ಡ ಹಾಗೂ ಶ್ರೀಮಂತ ಫ್ರಾಂಚೈಸಿ ಕ್ರಿಕೆಟ್ ಟೂರ್ನಮೆಂಟ್ ಎಂದು ಖ್ಯಾತಿಯನ್ನು ಪಡೆದಿರುವ ಮಹಾ ಕ್ರಿಕೆಟ್ ಟೂರ್ನಿಯಾಗಿದೆ. ಸುಮಾರು ಎರಡು ತಿಂಗಳುಗಳವರೆಗೆ ನಡೆಯಲಿರುವ ಈ ಫ್ರಾಂಚೈಸಿ ಕ್ರಿಕೆಟ್ ಟೂರ್ನಿಯಲ್ಲಿ ಭಾಗಹಿಸುವುದಕ್ಕೋಸ್ಕರ ಹಲವಾರು ವಿದೇಶಿ ಆಟಗಾರರು ತಮ್ಮ ದೇಶದ ತಂಡಗಳನ್ನು ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಪ್ರತಿನಿಧಿಸುವುದನ್ನೂ ಸಹ ಕೈಬಿಟ್ಟಿರುವ ಹಲವಾರು ಉದಾಹರಣೆಗಳು ಇವೆ. ಇನ್ನು ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಭಾಗವಹಿಸುವ ಆಟಗಾರರಿಗೆ ಫ್ರಾಂಚೈಸಿಗಳು ದೊಡ್ಡಮಟ್ಟದ ಸಂಭಾವನೆಯನ್ನೇ ನೀಡಲಿದ್ದು, ವಿಶ್ವದ ಇತರೆ ಫ್ರಾಂಚೈಸಿ ಕ್ರಿಕೆಟ್ ಲೀಗ್ ಟೂರ್ನಿಯಲ್ಲಿ ಸಿಗುವ ಹಣಕ್ಕಿಂತ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಹೆಚ್ಚಿನ ಹಣ ಸಿಗಲಿದೆ.
ಇತ್ತ ಸ್ವದೇಶಿ ಆಟಗಾರರಿಗೆ ಇಂಡಿಯನ್ ಪ್ರೀಮಿಯರ್ ಲೀಗ್ ತಮ್ಮಲ್ಲಿನ ಪ್ರತಿಭೆಯನ್ನು ಬಹಿರಂಗಪಡಿಸಲು ಇರುವ ದೊಡ್ಡ ವೇದಿಕೆ ಎಂದೇ ಖ್ಯಾತಿಯನ್ನು ಪಡೆದಿದ್ದು, ಇಲ್ಲಿಯವರೆಗೂ ನಡೆದಿರುವ ಒಟ್ಟು ಹದಿನಾಲ್ಕು ಟೂರ್ನಿಗಳ ಪೈಕಿ ಹಲವಾರು ಯುವ ಪ್ರತಿಭೆಗಳು ಬೆಳಕಿಗೆ ಬಂದು ಖ್ಯಾತಿಯನ್ನು ಪಡೆದುಕೊಂಡಿದ್ದಾರೆ ಹಾಗೂ ಹಲವಾರು ಕ್ರಿಕೆಟಿಗರು ಭಾರತ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಇನ್ನು ಈಗಾಗಲೇ ಭಾರತ ತಂಡದಲ್ಲಿ ಸ್ಥಾನ ಪಡೆದುಕೊಂಡು ಕಳಪೆ ಫಾರ್ಮ್ ಹೊಂದಿ ತಂಡದಿಂದ ಹೊರಬಿದ್ದಿರುವ ಹಲವಾರು ಆಟಗಾರರಿಗೂ ಸಹ ಈ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ತಮ್ಮ ಸಾಮರ್ಥ್ಯವನ್ನು ತೋರಿಸಲು ಸಹಕಾರಿಯಾಗಿದೆ. ಹೀಗೆ ಯುವ ಹಾಗೂ ಅನುಭವಿ ಕ್ರಿಕೆಟಿಗರೆಲ್ಲರಿಗೂ ಸಹಾಯಕವಾಗಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಕೆಟ್ಟ ಹೆಸರನ್ನೂ ಕೂಡ ಸಂಪಾದಿಸಿದೆ.
ಹೌದು, ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ವಿರುದ್ಧವಾಗಿ ಹಲವಾರು ಮಾಜಿ ಕ್ರಿಕೆಟಿಗರು ಮಾತನಾಡಿದ್ದು, ತಮಗಾದ ಅವಮಾನ ಹಾಗೂ ಕಡೆಗಣನೆಗಳನ್ನು ಸಂದರ್ಶನಗಳಲ್ಲಿ ಬಿಚ್ಚಿಟ್ಟಿದ್ದಾರೆ. ಈ ಸಾಲಿಗೆ ಇದೀಗ ಕುಲ್‌ದೀಪ್ ಯಾದವ್ ಅವರ ಬಾಲ್ಯದ ಕೋಚ್ ಕಪಿಲ್ ಪಾಂಡೆ ಕೂಡ ಸೇರಿಕೊಂಡಿದ್ದು, ಫ್ರಾಂಚೈಸಿಯೊಂದರ ವಿರುದ್ಧ ಈ ಕೆಳಕಂಡಂತೆ ಕಿಡಿಕಾರಿದ್ದಾರೆ.

ಕುಲ್‌ದೀಪ್ ಯಾದವ್‌ನನ್ನು ಸೇವಕನ ಹಾಗೆ ಕಾಣುತ್ತಿದ್ದರು
ಸಂದರ್ಶನವೊಂದರಲ್ಲಿ ಮಾತನಾಡಿರುವ ಕುಲ್‌ದೀಪ್ ಯಾದವ್ ಬಾಲ್ಯದ ಕೋಚ್ ಕಪಿಲ್ ಪಾಂಡೆ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಕಿಡಿಕಾರಿದ್ದಾರೆ. ಕಳೆದೆರಡು ಆವೃತ್ತಿಗಳಲ್ಲಿ ಕುಲ್‌ದೀಪ್ ಯಾದವ್‌ಗೆ ಸರಿಯಾದ ಅವಕಾಶವನ್ನು ನೀಡದ ಕೋಲ್ಕತ್ತಾ ನೈಟ್ ರೈಡರ್ಸ್ ಆತನನ್ನು ಸೇವಕನ ಹಾಗೆ ಕಂಡಿತ್ತು ಎಂದಿದ್ದಾರೆ. ಅಷ್ಟೇ ಅಲ್ಲದೇ ಕೆಕೆಆರ್ ಕುಲ್‌ದೀಪ್ ಯಾದವ್‌ನನ್ನು ತಂಡದಿಂದ ಕೈಬಿಟ್ಟ ದಿನ ನಾವೆಲ್ಲಾ ಸಂತಸಪಟ್ಟಿದ್ದೆವು ಎಂದು ತಿಳಿಸಿದ್ದಾರೆ.

ಹತ್ತು ಕೋಟಿ ಬರಬೇಕಿತ್ತು
ಇನ್ನೂ ಮುಂದುವರೆದು ಮಾತನಾಡಿರುವ ಕಪಿಲ್ ಪಾಂಡೆ ಕುಲ್‌ದೀಪ್ ಯಾದವ್‌ಗೆ ಕೆಕೆಆರ್ ಸರಿಯಾದ ಅವಕಾಶ ನೀಡದ ಕಾರಣ ಆತನಿಗೆ ಮೆಗಾ ಹರಾಜಿನಲ್ಲಿ ಕೇವಲ ಎರಡು ಕೋಟಿ ಸಿಕ್ಕಿದೆ ಎಂದಿದ್ದಾರೆ. ಆತನಿಗೆ ಸರಿಯಾದ ಅವಕಾಶ ಸಿಕ್ಕಿದ್ದರೆ ಮೆಗಾ ಹರಾಜಿನಲ್ಲಿ 9-10 ಕೋಟಿ ಸಿಕ್ಕಿರುತ್ತಿತ್ತು ಎಂದೂ ಸಹ ಕಪಿಲ್ ಪಾಂಡೆ ಹೇಳಿದ್ದಾರೆ. ಹಾಗೂ ಕುಲ್‌ದೀಪ್ ಯಾದವ್‌ಗೆ ಹಣಕಾಸಿನ ಸಮಸ್ಯೆಯೂ ಇದ್ದು, ಹರಾಜಿನಲ್ಲಿ ಕಡಿಮೆ ಮೊತ್ತಕ್ಕೆ ಬಿಕರಿಯಾಗುವುದು ಅವಮಾನವಲ್ಲ, ಕ್ರಿಕೆಟ್ ಆಡಲು ಕಷ್ಟ ಪಡಬೇಕು, ಹಣಸಂಪಾದಿಸಲು ಕ್ರಿಕೆಟ್ ಆಡಬಾರದು ದೇಶಕ್ಕಾಗಿ ಆಡಬೇಕು ಎಂದು ಆತನಿಗೆ ಸಮಾಧಾನ ಮಾಡಿದೆ ಎಂದು ಕಪಿಲ್ ಪಾಂಡೆ ಹೇಳಿದ್ದಾರೆ.

ಪಾಂಡೆ ಬಳಿ ನೋವು ತೋಡಿಕೊಂಡಿದ್ದ ಯಾದವ್
ಇನ್ನು ಕೆಕೆಆರ್ ತಂಡದಲ್ಲಿ ತನಗೆ ಅವಕಾಶ ಸಿಗದೇ ಇದ್ದಿದ್ದರ ಕುರಿತು ಕುಲ್‌ದೀಪ್ ಯಾದವ್ ತನ್ನ ಬಳಿ ಹೇಳಿಕೊಂಡು ನೋವನ್ನು ಹೊರಹಾಕಿದ್ದರು ಎಂದು ಕಪಿಲ್ ಪಾಂಡೆ ತಿಳಿಸಿದ್ದಾರೆ. ಸಮಸ್ಯೆ ಏನೆಂಬುದೇ ನನಗೆ ಅರ್ಥವಾಗುತ್ತಿಲ್ಲ, ತಂಡ ನನಗೆ ಅವಕಾಶ ನೀಡುತ್ತಿಲ್ಲ ಎಂದು ಕುಲ್‌ದೀಪ್ ಯಾದವ್ ಬೇಸರ ಹೊರಹಾಕಿದ್ದ ಸಂಗತಿಯನ್ನು ಕುಲ್‌ದೀಪ್ ಯಾದವ್ ಬಿಚ್ಚಿಟ್ಟಿದ್ದಾರೆ. ಸದ್ಯ ಈ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಕಣಕ್ಕಿಳಿದ ಪ್ರಥಮ ಪಂದ್ಯದಲ್ಲಿಯೇ ಮಿಂಚಿರುವ ಕುಲ್‌ದೀಪ್ ಯಾದವ್ ಮುಂಬೈ ವಿರುದ್ಧದ ಈ ಪಂದ್ಯದಲ್ಲಿ 4 ಓವರ್ ಬೌಲಿಂಗ್ ಮಾಡಿ 18 ರನ್ ನೀಡಿ 3 ವಿಕೆಟ್‌ಗಳನ್ನು ಪಡೆದು ಮಿಂಚಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications