Ayush Badoni : ರಣಜಿ ತಂಡಕ್ಕೂ ಬೇಡವಾಗಿದ್ದ ಬದೋನಿ ಈಗ ಐಪಿಎಲ್ ಹೀರೋ: ಮೆಚ್ಚುಗೆಯ ಸುರಿಮಳೆಗೈದ ನಾಯಕ ರಾಹುಲ್

ಐಪಿಎಲ್ 15ನೇ ಆವೃತ್ತಿಯ ಆರಂಭ ಭರ್ಜರಿಯಾಗಿ ಶುರುವಾಗಿದೆ. ಎಲ್ಲಾ ತಂಡಗಳು ಕೂಡ ಭರ್ಜರಿ ಪ್ರದರ್ಶನವನ್ನು ನೀಡುತ್ತಾ ತೀವ್ರ ಪೈಪೋಟಿ ನಡೆಸುತ್ತಿದೆ. ಈ ಟೂರ್ನಿಯ ಆರಂಭದಲ್ಲಿಯೇ ಓರ್ವ ಯುವ ಆಟಗಾರನ ಹೆಸರು ಎಲ್ಲರ ಬಾಯಿಲ್ಲೂ ಹರಿದಾಡುತ್ತಿದೆ. ಈ ಐಪಿಎಲ್ ಆರಂಭಕ್ಕೂ ಮುನ್ನ ಅಪರಿಚಿತವಾಗಿದ್ದ ಈ ತುವ ಆಟಗಾರ ಈಗ ಐಪಿಎಲ್ ಪ್ರೇಮಿಗಳ ನೆಚ್ಚಿನ ಆಟಗಾರನಾಗಿದ್ದಾರೆ.
ಈ ಬಾರಿಯ ಐಪಿಎಲ್‌ನ ಆರಂಭದಲ್ಲಿಯೇ ಮಿಂಚಿ ಸದ್ದು ಮಾಡುತ್ತಿರುವ ಆಟಗಾರ ಬೇರೆ ಯಾರೂ ಅಲ್ಲ. ಲಕ್ನೋ ಸೂಪರ್ ಜೈಂಟ್ಸ್ ತಂಡದ ಯುವ ಆಟಗಾರ ಆಯುಷ್ ಬದೋನಿ. ಈ ಭಾರಿಯ ಐಪಿಎಲ್‌ನಲ್ಲಿ ಆಡಿದ ಎರಡೂ ಪಂದ್ಯಗಳಲ್ಲಿಯೂ ಅಮೋಘ ಪ್ರದರ್ಶನ ನಿಡುವ ಮೂಲಕ ಕ್ರಿಕೆಟ್ ಪ್ರೇಮಿಗಳ ಮನಗೆಲ್ಲುವಲ್ಲಿ ಆಯುಷ್ ಬದೋನಿ ಯಶಸ್ವಿಯಾಗಿದ್ದಾರೆ. ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ಆಯುಷ್ ಬದೋನಿ ಅರ್ಧ ಶತಕ ಗಳಿಸಿ ಮಿಂಚಿದ್ದರೆ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಒತ್ತಡದ ಸಂದರ್ಭದಲ್ಲಿ ನೀಡಿದ ಪ್ರದರ್ಶನ ಯುವ ಆಟಗಾರನ ಸಾಮರ್ಥ್ಯವನ್ನು ಬಹಿರಂಗಪಡಿಸಿದೆ.

ಬ್ಯಾಟ್ ಮೂಲಕ ಡಿಡಿಸಿಎಗೆ ಪ್ರತ್ಯುತ್ತರ
ಆಯುಷ್ ಬದೋನಿ ದೆಹಲಿ ಮೂಲದ ಆಟಗಾರ. ಆದರೆ ದೆಹಲಿ ಮತ್ತು ಡಿಸ್ಟ್ರಿಕ್ಟ್ ಕ್ರಿಕೆಟ್ ಅಸೊಸಿಯೇಶನ್ ಆಯುಷ್ ಬದೋನಿ ಸಾಮರ್ಥ್ಯವನ್ನು ಸಂಪೂರ್ಣವಾಗಿ ಅಂದಾಜಿಸುವಲ್ಲಿ ವಿಫಲವಾಗಿತ್ತು. ದೆಹಲಿ ರಣಜಿ ತಂಡಕ್ಕೂ ಆಯುಷ್ ಬದೋನಿ ಆಯ್ಕೆಯಾಗಿರಲಿಲ್ಲ. ಇದೀಗ ಐಪಿಎಲ್‌ನಲ್ಲಿ ಅಬ್ಬರಿಸುವ ಮೂಲಕ ತನ್ನ ಸಾಮರ್ಥ್ಯವನ್ನು ಬದೋನಿ ಪ್ರದರ್ಶಿಸಿದ್ದಾರೆ. ಈ ಮೂಲಕ ಎಲ್ಲರಿಗೂ ಬ್ಯಾಟ್ ಮೂಲಕವೇ ಉತ್ತರ ನೀಡುವಲ್ಲಿ ಸಫಲವಾಗಿದ್ದಾರೆ.

ನಾಯಕ ಕೆಎಲ್ ರಾಹುಲ್ ಮನ ಗೆದ್ದ ಬದೋನಿ
ಲಕ್ನೋ ಸೂಪರ್ ಜೈಂಟ್ಸ್ ತಮಡದ ಪರವಾಗಿ ಸತತ ಎರಡು ಪಂದ್ಯಗಳಲ್ಲಿ ಅಮೋಘ ಪ್ರದರ್ಶನ ನೀಡಿದ ಆಯುಷ್ ಬದೋನಿ ವಯಸ್ಸು ಕೇವಲ 22. ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಒತ್ತಡದ ಸಂದರ್ಭದಲ್ಲಿ ಬದೋನಿ ನೀಡಿದ ಪ್ರದರ್ಶನವನ್ನು ಮೆಚ್ಚಿರುವ ಎಲ್‌ಎಸ್‌ಜಿ ನಾಯಕ ಕೆಎಲ್ ರಾಹುಲ್ ಯುವ ಬ್ಯಾಟರ್ ಬಗ್ಗೆ ವಿಶೇಷ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ವೈಟ್‌ಬಾಲ್ ಕ್ರಿಕೆಟ್‌ನಲ್ಲಿ ಭಾರತ ಕ್ರಿಕೆಟ್‌ನ ದೃಷ್ಟಿಯಿಮದ ಭವಿಷ್ಯದ ಆಟಗಾರನಾಗಬಲ್ಲ ಸಾಮರ್ಥ್ಯವಿರುವ ಆಟಗಾರ ಎಂದು ರಾಹುಲ್ ಕೊಂಡಾಡಿದ್ದಾರೆ.

ನಾಯಕ ಕೆಎಲ್ ರಾಹುಲ್ ಹೇಳಿದ್ದಿಷ್ಟು
ಪಂದ್ಯದ ಮುಕ್ತಾಯದ ಬಳಿಕ ಮಾತನಾಡಿದ ಕೆಎಲ್ ರಾಹುಲ್ "ಬದೋನಿ ಅವರ ಬ್ಯಾಟಿಂಗ್‌ನ ಕೆಲ ವಿಡಿಯೋಗಳನ್ನು ನಾನು ಗಮನಿಸಿದ್ದೆ. ಉತ್ತಮ ಹೊಡೆತಗಳನ್ನೇ ನಾನು ನೋಡಿದ್ದೆ. ಈಗ ಅವರು ಪಂದ್ಯದಲ್ಲಿ ನೀಡುತ್ತಿರುವ ಪ್ರದರ್ಶನ ಅಮೋಘವಾಗಿದೆ. ಆತ ಬಲಿಷ್ಠ 360 ಡಿಗ್ರಿ ಆಟಗಾರ. ವೈಟ್‌ಬಾಲ್ ಕ್ರಿಕೆಟ್‌ಗೆ ಅದ್ಭುತ ಅಸ್ತ್ರವಾಗಬಲ್ಲರು. ಇದೊಂದು ಅದ್ಭುತವಾದ ಆಯ್ಕೆಯಾಗಿದೆ" ಎಂದು ಕೆಎಲ್ ರಾಹುಲ್ ಆಯುಷ್ ಬದೋನಿ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

20 ಲಕ್ಷಕ್ಕೆ ಹರಾಜಾಗಿದ್ದ ಆಟಗಾರ
ಈ ಬಾರಿಯ ಮೆಗಾ ಹರಾಜಿನಲ್ಲಿ ಆಯುಷ್ ಬದೋನಿಯನ್ನು ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿ ಕೇವಲ 20 ಲಕ್ಷಕ್ಕೆ ತೆಕ್ಕೆಗೆ ಹಾಕಿಕೊಂಡಿದೆ. ಗುಜರಾತ್ ಟೈಂಟ್ಸ್ ವಿರುದ್ಧ ತಾನಾಡಿದ ಮೊದಲ ಪಂದ್ಯದಲ್ಲಿಯೇ ಬದೋನಿ 41 ಎಸೆತಗಳಲ್ಲಿ 54 ರನ್ ಗಳಿಸಿ ಮಿಂಚಿದ್ದರು. ಇನ್ನು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧಧ ಪಂದ್ಯದಲ್ಲಿ 6ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಅವರು ಕೇವಲ 9 ಎಸೆತಗಳಲ್ಲಿ 19 ರನ್ ಗಳಿಸುವ ಮೂಲಕ ಬೃಹತ್ ಮೊತ್ತವನ್ನು ಮೀರಿ ನಿಲ್ಲಲು ಕಾರಣವಾದರು. ಒತ್ತಡದ ಸಂದರ್ಭದಲ್ಲಿಯೂ ಬದೋನಿ ನೀಡಿದ ಪ್ರದರ್ಶನ ಎಲ್ಲರ ಮನಗೆದ್ದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications