
ಡೆಲ್ಲಿ ಕ್ಯಾಪಿಟಲ್ಸ್
2008ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ( ಆಗಿನ ಡೆಲ್ಲಿ ಡೇರ್ ಡೆವಿಲ್ಸ್ ) ತಂಡವನ್ನು ಇಂಧನ ಮತ್ತು ವಿಮಾನ ನಿಲ್ದಾಣಗಳ ವ್ಯವಹಾರವನ್ನು ನಿರ್ವಹಿಸುವ ಸಂಸ್ಥೆಯಾದ ಜಿಎಂಆರ್ ಗ್ರೂಪ್ ಖರೀದಿಸಿತ್ತು. 2019ರವರೆಗೂ ಡೆಲ್ಲಿ ಫ್ರಾಂಚೈಸಿಯ ಏಕೈಕ ಮಾಲೀಕರಾಗಿದ್ದ ಜಿಎಂಆರ್ ಗ್ರೂಪ್ ನಂತರ ಸ್ಟೀಲ್ ವ್ಯವಹಾರದ ಪ್ರಮುಖ ಕಂಪೆನಿ ಜೆಎಸ್‌ಡಬ್ಲ್ಯೂ ಜೊತೆ 50:50 ಒಡೆತನವನ್ನು ಹಂಚಿಕೊಂಡಿದೆ.

ಸನ್ ರೈಸರ್ಸ್ ಹೈದರಾಬಾದ್
ಸದ್ಯ ಸನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಸನ್ ಟಿವಿ ಗ್ರೂಪ್ ಒಡೆತನದಲ್ಲಿದೆ. ಈ ಸನ್ ಟಿವಿ ಗ್ರೂಪ್ 6 ಭಾಷೆಗಳ ಟಿವಿ ಚಾನೆಲ್‌ಗಳು, ದಿನಪತ್ರಿಕೆಗಳು ಹಾಗೂ 67 ರೇಡಿಯೋ ಸ್ಟೇಷನ್‌ಗಳನ್ನೂ ಸಹ ಹೊಂದಿದೆ.

ಪಂಜಾಬ್ ಕಿಂಗ್ಸ್
ಪಂಜಾಬ್ ಕಿಂಗ್ಸ್ ತಂಡವನ್ನು ಮೋಹಿತ್ ಬರ್ಮನ್, ನೆಸ್ ವಾಡಿಯಾ, ಪ್ರೀತಿ ಜಿಂಟಾ ಮತ್ತು ಕರಣ್ ಪೌಲ್ ಪಾಲುದಾರಿಯಲ್ಲಿ ಮಾಲೀಕರಾಗಿ ಮುನ್ನಡೆಸುತ್ತಿದ್ದಾರೆ.

ರಾಜಸ್ಥಾನ್ ರಾಯಲ್ಸ್
ರಾಜಸ್ಥಾನ್ ರಾಯಲ್ಸ್ ಮಾಲೀಕತ್ವದ ಬಹುಪಾಲನ್ನು ( 65% ) ಎಮರ್ಜಿಂಗ್ ಮೀಡಿಯಾ ಪ್ರೈವೇಟ್ ಲಿಮಿಟೆಡ್‌ನ ಮಾಲೀಕ ಮನೋಜ್ ಬದಲೆ ಹೊಂದಿದ್ದಾರೆ. ಇನ್ನುಳಿದಂತೆ ಲಾಚ್ಲಾನ್ ಮುರ್ಡೋಕ್ ಮತ್ತು ರೆಡ್‌ಬರ್ಡ್ ಕ್ಯಾಪಿಟಲ್ ಪಾರ್ಟ್‌ನರ್ಸ್ ಕೂಡ ರಾಜಸ್ಥಾನ್ ರಾಯಲ್ಸ್‌ನ ಮಾಲೀಕರಾಗಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು
ಆರಂಭದಲ್ಲಿ ವಿಜಯ್ ಮಲ್ಯ ಒಡೆತನದಲ್ಲಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸದ್ಯ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್‌ನ ಒಡೆತನದಲ್ಲಿದೆ. ಮದ್ಯದ ವ್ಯವಹಾರದಲ್ಲಿ ಅತಿದೊಡ್ಡ ಮಾರುಕಟ್ಟೆ ಹೊಂದಿದೆ. ಇನ್ನು ಈ ಕಂಪೆನಿಯ ಹಿರಿಯ ಕಾರ್ಯನಿರ್ವಾಹಕರಾದ ಪ್ರತ್ಮೇಶ್ ಮಿಶ್ರಾ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಧ್ಯಕ್ಷರಾಗಿದ್ದಾರೆ.

ಗುಜರಾತ್ ಟೈಟನ್ಸ್
ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ನೂತನವಾಗಿ ಆಗಮಿಸಿರುವ ಫ್ರಾಂಚೈಸಿಯಾದ ಗುಜರಾತ್ ಟೈಟನ್ಸ್ ತಂಡವನ್ನು 5,625 ಕೋಟಿಗೆ ಖರೀದಿಸಿದ ಸಿವಿಸಿ ಕ್ಯಾಪಿಟಲ್ ಪಾರ್ಟ್‌ನರ್ಸ್ ಮಾಲೀಕರಾಗಿದ್ದಾರೆ.

ಲಕ್ನೋ ಸೂಪರ್ ಜೈಂಟ್ಸ್
ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ನೂತನವಾಗಿ ಆಗಮಿಸಿರುವ ಮತ್ತೊಂದು ತಂಡವಾದ ಲಕ್ನೋ ಸೂಪರ್ ಜೈಂಟ್ಸ್‌ನ್ನು ಹರಾಜಿನಲ್ಲಿ 7090 ಕೋಟಿಗೆ ಖರೀದಿಸಿದ ಆರ್‌ಪಿಎಸ್‌ಜಿ ಗ್ರೂಪ್‌ನ ಸಂಜೀವ್ ಗೊಯೆಂಕ ಮಾಲೀಕರಾಗಿದ್ದಾರೆ.

ಮುಂಬೈ ಇಂಡಿಯನ್ಸ್
ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಅತಿಹೆಚ್ಚು ಟ್ರೋಫಿಗಳನ್ನು ಗೆದ್ದಿರುವ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಅಂಬಾನಿ ಗ್ರೂಪ್ಸ್‌ನ ಮುಖೇಶ್ ಅಂಬಾನಿಯ ಒಡೆತನದಲ್ಲಿದೆ.

ಚೆನ್ನೈ ಸೂಪರ್ ಕಿಂಗ್ಸ್
ಇದುವರೆಗೂ ಒಟ್ಟು ನಾಲ್ಕು ಬಾರಿ ಐಪಿಎಲ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಲೀಕತ್ವವನ್ನು ಇಂಡಿಯಾ ಸಿಮೆಂಟ್ಸ್‌ನ ಮಾಲೀಕ ಎನ್ ಶ್ರೀನಿವಾಸನ್ ಹೊಂದಿದ್ದಾರೆ.


ಕೋಲ್ಕತ್ತಾ ನೈಟ್ ರೈಡರ್ಸ್
ಕೋಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿಯ 55% ಮಾಲೀಕತ್ವವನ್ನು ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಹೊಂದಿದ್ದರೆ, 45% ಮಾಲೀಕತ್ವವನ್ನು ಮೆಹ್ತಾ ಗ್ರೂಪ್ ಹೊಂದಿದೆ. ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಬಾಲಿವುಡ್ ನಟ ಶಾರುಖ್ ಖಾನ್ ಮಾಲೀಕತ್ವದ ಒಡೆತನದಲ್ಲಿದ್ದು, ಮೆಹ್ತಾ ಗ್ರೂಪ್ ಸಂಸ್ಥೆ ಬಾಲಿವುಡ್ ನಟಿ ಜೂಹಿ ಚಾವ್ಲಾ ಅವರ ಪತಿ ಜಯ್ ಮೆಹ್ತಾ ಒಡೆತನದಲ್ಲಿದೆ.


Click it and Unblock the Notifications
