ಹರ್ಷಲ್, ಸಿರಾಜ್ ಜೊತೆಗೆ ಮಾತಿನ ಚಕಮಕಿ ವೇಳೆ ನಡೆದಿದ್ದೇನು?: ಬಹಿರಂಗಪಡಿಸಿದ ರಿಯಾನ್ ಪರಾಗ್

ರಾಜಸ್ಥಾನ್ ರಾಯಲ್ಸ್ ತಂಡದ ಆಲ್‌ರೌಂಡರ್ ರಿಯಾನ್ ಪರಾಗ್ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಮತ್ತೊಮ್ಮೆ ಕಳಪೆ ಆವೃತ್ತಿಯನ್ನು ಕಂಡಿದ್ದರೂ ಈ ಆವೃತ್ತಿಯಲ್ಲಿ ಫೀಲ್ಡಿಂಗ್‌ನಲ್ಲಿ ಮಿಂಚಿದ್ದರು. ಆದರೆ ಈ ಸಂದರ್ಭದಲ್ಲಿ ಮೈದಾನದಲ್ಲಿ ಪರಾಗ್ ಕೆಲ ಸಂದರ್ಭಗಳಲ್ಲಿ ವರ್ತಿಸಿದ ರೀತಿಗೆ ಅಭಿಮಾನಿಗಳಿಂದ ಭಾರೀ ಟೀಕೆಗೂ ಗುರಿಯಾಗಿದ್ದಾರೆ. ಇದರ ಜೊತೆಗೆ ಆರ್‌ಸಿಬಿ ಆಟಗಾರರಿಬ್ಬರ ಜೊತೆಗೆ ಮಾತಿನ ಚಕಮಕಿಯಲ್ಲಿ ಭಾಗಿಯಾಗಿ ಪರಾಗ್ ಸುದ್ದಿಯಾಗಿದ್ದರು. ಇದೀಗ ಆ ಸಂದರ್ಭದಲ್ಲಿ ಏನಾಗಿತ್ತು ಎಂಬ ಅಂಶವನ್ನು ಅವರು ಬಹಿರಂಗಪಡಿಸಿದ್ದಾರೆ.
ರಾಜಸ್ಥಾನ್ ರಾಯಲ್ಸ್ ವಿರುದ್ಧ ಆರ್‌ಸಿಬಿ ಆಡಿದ್ದ ಲೀಗ್ ಪಂದ್ಯದಲ್ಲಿ ಈ ಘಟನೆ ನಡೆದಿತ್ತು. ಈ ಪಂದ್ಯದಲ್ಲಿ ಹರ್ಷಲ್ ಪಟೇಲ್ ಅವರ ಅಂತಿಮ ಓವರ್‌ನಲ್ಲಿ ರಿಯಾನ್ ಪರಾಗ್ ಬೌಂಡರಿ ಮೇಲೆ ಬೌಂಡರಿ ಚಚ್ಚಿದ್ದರು. ಈ ಇನ್ನಿಂಗ್ಸ್ ಮುಕ್ತಾಯದ ಬಳಿಕ ರಿಯಾನ್ ಪರಾಗ್ ಹಾಗೂ ಹರ್ಷಲ್ ಪಟೇಲ್ ಮಧ್ಯೆ ಮಾತಿನ ಚಕಮಕಿ ನಡೆಯಿತು. ಈ ಸಂದರ್ಭದಲ್ಲಿ ಆರ್‌ಸಿಬಿ ವೇಗಿ ಮೊಹಮ್ಮದ್ ಸಿರಾಜ್ ಕೂಡ ಭಾಗಿಯಾಗಿದ್ದರು. ಈ ಪಂದ್ಯದ ಮುಕ್ತಾಯದ ಬಳಿಕ ರಿಯಾನ್ ಪರಾಗ್ ಹರ್ಷಲ್ ಪಟೇಲ್ ಅವರ ಕೈಕುಲುಕಲು ಬಂದಿದ್ದರೂ ಅದಕ್ಕೆ ಹರ್ಷಲ್ ನಿರಾಕರಿಸಿದ್ದರು.
ಈ ಘಟನೆಯ ಬಗ್ಗೆ ಮಾತನಾಡಿದ ರಿಯಾನ್ ಪರಾಗ್ ಅಂದು ನಡೆದಿದ್ದೇನು ಎಂಬುದನ್ನು ಬಹಿರಂಗಪಡಿಸಿದ್ದಾರೆ. ಈ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್‌ನ ಮುಕ್ತಾಯದ ಬಳಿಕ ಆರ್‌ಸಿಬಿ ವೇಗಿ ಮೊಹಮ್ಮದ್ ಸಿರಾಜ್ ತನ್ನನ್ನು ಉದ್ಧೇಶಿಸಿ ನೀನಿನ್ನು ಮಗು. ಮಗುವಿನಂತೆ ವರ್ತಿಸು" ಎಂದಿದ್ದನ್ನು ಹೇಳಿಕೊಂಡಿದ್ದಾರೆ.
"ನಾನು ಹರ್ಷಲ್ ಪಟೇಲ್ ಅವರ ಬೌಲಿಂಗ್ ಶೈಲಿಯನ್ನು ಅನುಕರಿಸಿ ಮತ್ತೆ ಬೌಲಿಂಗ್ ಮಾಡಲು ಹೋಗುವಂತೆ ಸನ್ನೆ ಮಾಡಿದ್ದೆ. ನಾನು ಆ ಸಂದರ್ಭದಲ್ಲಿ ಯಾವುದೇ ಶಬ್ದವನ್ನು ಉಪಯೋಗಿಸಲಿಲ್ಲ. ಅದಾದ ಬಳಿಕ ಇನ್ನುಂಗ್ಸ್ ಮುಕ್ತಾಯದ ನಂತರ ತಂಡದ ಡಗೌಟ್‌ನತ್ತ ಹೋಗುತ್ತಿದ್ದಾಗ ನನ್ನನ್ನು ತಡೆದರು. ಈ ಸಂದರ್ಬದಲ್ಲಿ ಸಿರಾಜ್, ಓಯ್ ಓಯ್.. ಮಗು ನೀನು.. ಮಗುವಿನ ರೀತಿಯಲ್ಲೇ ವರ್ತಿಸು" ಎಂದಿದ್ದರು. ಎಂದು ಅಂದು ನಡೆದ ಘಟನೆಯ ಬಗ್ಗೆ ರಿಯಾನ್ ಪರಾಗ್ ಪ್ರತಿಕ್ರಿಯೆ ನೀಡಿದ್ದಾರೆ.
ಇನ್ನು ಈ ಬಾರಿಯ ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ 14 ವರ್ಷಗಳ ಬಳಿಕ ಐಪಿಎಲ್ ಫೈನಲ್‌ಗೇರಿದ ಸಾಧನೆ ಮಾಡಿತ್ತು. ಆದರೆ ಐಪಿಎಲ್‌ನಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಸೋಲು ಅನುಭವಿಸಿದ ರಾಜಸ್ಥಾನ್ ರಾಯಲ್ಸ್ ಎರಡನೇ ಬಾರಿಗೆ ಟ್ರೋಫಿ ಗೆಲ್ಲುವ ಕನಸನ್ನು ಭಗ್ನಗೊಳಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications