PBKS vs RCB : 413 ರನ್‌ಗಳ ಹೊಳೆ ಹರಿದರೂ ಕೆಟ್ಟ ದಾಖಲೆ ಬರೆದ ಆರ್‌ಸಿಬಿ vs ಪಂಜಾಬ್ ಕಿಂಗ್ಸ್ ಪಂದ್ಯ!

ರಾಯಲ್ ಚಾಲೆಂಜರ್ಸ್ ಬೆಂಗಳೂರು ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ತನ್ನ ಚೊಚ್ಚಲ ಪಂದ್ಯದಲ್ಲಿಯೇ ಸೋಲುವುದರ ಮೂಲಕ ಕಳಪೆ ಆರಂಭವನ್ನು ಪಡೆದುಕೊಂಡಿದೆ. ಹೌದು, ಮಾರ್ಚ್ 27ರ ಭಾನುವಾರದಂದು ಸಂಜೆ 7.30ಕ್ಕೆ ಮುಂಬೈನ ಡಿವೈ ಪಾಟೀಲ್ ಕ್ರಿಕೆಟ್ ಅಕಾಡೆಮಿ ಕ್ರೀಡಾಂಗಣದಲ್ಲಿ ನಡೆದ ಪಂಜಾಬ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕ ಫಾಫ್ ಡು ಪ್ಲೆಸಿಸ್, ದಿನೇಶ್ ಕಾರ್ತಿಕ್ ಮತ್ತು ವಿರಾಟ್ ಕೊಹ್ಲಿ ಉತ್ತಮ ಬ್ಯಾಟಿಂಗ್ ನೆರವಿನಿಂದ 20 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 205 ರನ್ ಕಲೆಹಾಕಿ ಎದುರಾಳಿ ಪಂಜಾಬ್ ಕಿಂಗ್ಸ್ ತಂಡಕ್ಕೆ ಗೆಲ್ಲಲು 206 ರನ್‌ಗಳ ಗುರಿಯನ್ನು ನೀಡಿತು. ಈ ಗುರಿಯನ್ನು ಬೆನ್ನತ್ತಿದ ಮಯಾಂಕ್ ಅಗರ್ವಾಲ್ ನಾಯಕತ್ವದ ಪಂಜಾಬ್ ಕಿಂಗ್ಸ್ ತಂಡ ಇನ್ನೂ ಆರು ಎಸೆತಗಳು ಬಾಕಿ ಇರುವಾಗಲೇ ಬೃಹತ್ ಮೊತ್ತವನ್ನು ಯಶಸ್ವಿಯಾಗಿ ಚೇಸ್ ಮಾಡಿ 5 ವಿಕೆಟ್‌ಗಳ ಭರ್ಜರಿ ಜಯವನ್ನು ಸಾಧಿಸಿತು.
ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ನಾಯಕ ಫಾಫ್ ಡು ಪ್ಲೆಸಿಸ್ 57 ಎಸೆತಗಳಲ್ಲಿ 88 ರನ್, ದಿನೇಶ್ ಕಾರ್ತಿಕ್ 14 ಎಸೆತಗಳಲ್ಲಿ ಅಜೇಯ 32 ರನ್ ಹಾಗೂ ವಿರಾಟ್ ಕೊಹ್ಲಿ 29 ಎಸೆತಗಳಲ್ಲಿ ಅಜೇಯ 41 ರನ್ ಗಳಿಸಿ ಅಬ್ಬರಿಸಿದರೆ, ಪಂಜಾಬ್ ಕಿಂಗ್ಸ್ ತಂಡದ ಪರ ಶಿಖರ್ ಧವನ್ 29 ಎಸೆತಗಳಲ್ಲಿ 43 ರನ್, ಭಾನುಕ ರಾಜಪಕ್ಸ 22 ಎಸೆತಗಳಲ್ಲಿ 43 ರನ್, ಶಾರುಖ್ ಖಾನ್ 20 ಎಸೆತಗಳಲ್ಲಿ 24 ರನ್ ಹಾಗೂ ಓಡಿಯನ್ ಸ್ಮಿತ್ 8 ಎಸೆತಗಳಲ್ಲಿ 25 ರನ್ ಬಾರಿಸಿ ಅಬ್ಬರಿಸಿದರು. ಹೀಗೆ ಈ ಪಂದ್ಯದಲ್ಲಿ ಎರಡೂ ತಂಡಗಳ ಆಟಗಾರರು ರನ್ ಹೊಳೆ ಹರಿಸಿದ್ದು, ಪಂದ್ಯದಲ್ಲಿ ಒಟ್ಟು 413 ರನ್‌ಗಳ ರನ್ ಹೊಳೆ ಹರಿಯಿತು. ಇನ್ನು ಬ್ಯಾಟ್ಸ್‌ಮನ್‌ಗಳು ಈ ಪಂದ್ಯದಲ್ಲಿ ಮನಬಂದಂತೆ ಬ್ಯಾಟ್ ಬೀಸಿ ರನ್ ಹೊಳೆ ಹರಿಸಿದರೆ, ಬೌಲರ್‌ಗಳು ಹೆಚ್ಚು ಹೆಚ್ಚು ರನ್ ನೀಡುವುದರ ಮೂಲಕ ದುಬಾರಿಯಾಗಿದ್ದಾರೆ. ಹೀಗೆ ಬೌಲರ್‌ಗಳು ಈ ಪಂದ್ಯದಲ್ಲಿ ದೊಡ್ಡ ಮಟ್ಟದ ರನ್ ಬಿಟ್ಟುಕೊಟ್ಟದ್ದು ಮಾತ್ರವಲ್ಲದೇ ಹೆಚ್ಚುವರಿ ರನ್‌ಗಳನ್ನು ನೀಡಿ 15 ವರ್ಷಗಳ ಹಿಂದಿನ ಬೇಡವಾದ ದಾಖಲೆ ಮುರಿಯಲು ಕಾರಣರಾಗಿದ್ದಾರೆ. ಈ ಕುರಿತಾದ ಮಾಹಿತಿ ಈ ಕೆಳಕಂಡಂತಿದೆ ಓದಿ..

ಹೆಚ್ವುವರಿ ರನ್ ಕೆಟ್ಟ ದಾಖಲೆ
ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ತಂಡಗಳ ನಡುವೆ ನಡೆದ ಈ ಪಂದ್ಯ ಐಪಿಎಲ್ ಇತಿಹಾಸದಲ್ಲೇ ಅತಿಹೆಚ್ಚು ಎಕ್ಸ್ಟ್ರಾ ರನ್‌ಗಳು ಬಂದ ಪಂದ್ಯ ಎಂಬ ಕೆಟ್ಟ ದಾಖಲೆಯನ್ನು ನಿರ್ಮಿಸಿದೆ. ಈ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡದ ಬೌಲರ್‌ಗಳು 23 ಎಕ್ಸ್ಟ್ರಾ ರನ್‌ಗಳನ್ನು ನೀಡಿದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು 22 ಎಕ್ಸ್ಟ್ರಾ ರನ್‌ಗಳನ್ನು ನೀಡಿದೆ. ಈ ಮೂಲಕ ಈ ಪಂದ್ಯದಲ್ಲಿ ಒಟ್ಟು 45 ಎಕ್ಸ್ಟ್ರಾ ರನ್‌ಗಳು ಬಂದಿದ್ದು, ಹದಿನೈದು ವರ್ಷಗಳ ಹಿಂದೆ ನಿರ್ಮಾಣವಾಗಿದ್ದ ದಾಖಲೆಯನ್ನು ಅಳಿಸಿ ಹಾಕಿದೆ.

15 ವರ್ಷಗಳ ಹಿಂದೆ ನಿರ್ಮಾಣವಾಗಿತ್ತು ಈ ಕೆಟ್ಟ ದಾಖಲೆ
ಇನ್ನು ಅತಿಹೆಚ್ಚು ಎಕ್ಸ್ಟ್ರಾ ರನ್‌ಗಳು ಹರಿದು ಬಂದ ಪಂದ್ಯ ಎಂಬ ಕೆಟ್ಟ ದಾಖಲೆಗೆ 2008ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ನಡೆದಿದ್ದ ಡೆಕ್ಕನ್ ಚಾರ್ಜರ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳ ನಡುವಿನ ಪಂದ್ಯ ಸಾಕ್ಷಿಯಾಗಿತ್ತು. ಅಂದು ನಡೆದಿದ್ದ ಇತ್ತಂಡಗಳ ನಡುವಿನ ಪಂದ್ಯದಲ್ಲಿ ಒಟ್ಟು 38 ಎಕ್ಸ್ಟ್ರಾ ರನ್‌ಗಳು ಹರಿದು ಬಂದಿದ್ದವು ಹಾಗೂ ಈ ಕೆಟ್ಟ ದಾಖಲೆಯನ್ನು ಹದಿನೈದು ಆವೃತ್ತಿಗಳ ಐಪಿಎಲ್‌ನಲ್ಲಿ ಯಾವ ಪಂದ್ಯವೂ ಸಹ ಮುರಿದಿರಲಿಲ್ಲ. ಆದರೆ ಈ ವರ್ಷದ ಮೂರನೇ ಪಂದ್ಯವೇ ಈ ಕೆಟ್ಟ ದಾಖಲೆಯನ್ನು ಮುರಿದುಹಾಕಿದ ಬೇಡವಾದ ಹೆಸರನ್ನು ಸಂಪಾದಿಸಿದೆ.

ಎಕ್ಸ್ಟ್ರಾ ರನ್ ನೀಡಿದ್ದೇ ಆರ್‌ಸಿಬಿಗೆ ಮುಳುವಾಯಿತಾ?
ಇನ್ನು ಮೊದಲು ಬೌಲಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ತಂಡಕ್ಕಿಂತ ನಂತರ ಬೌಲಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಎಕ್ಸ್‌ಟ್ರಾ ರನ್ ನೀಡಿದ್ದು ಹಿನ್ನಡೆಯನ್ನು ಉಂಟುಮಾಡಿತು ಎಂದು ಹೇಳಬಹುದು. ಹೌದು, ತಂಡವೊಂದು ಒಂದಷ್ಟು ಮೊತ್ತವನ್ನು ಗುರಿಯನ್ನಾಗಿ ನೀಡಿದಾಗ ಎದುರಾಳಿ ತಂಡಕ್ಕೆ ತಾನು ಬಿಟ್ಟುಕೊಡುವ ಎಕ್ಸ್‌ಟ್ರಾ ರನ್‌ಗಳಿಂದ ಅನುಕೂಲವಾಗಬಹುದು. ಅಷ್ಟು ಮಾತ್ರವಲ್ಲದೇ ಈ ಎಕ್ಸ್‌ಟ್ರಾ ರನ್ ತಮ್ಮ ತಂಡವನ್ನು ಒತ್ತಡಕ್ಕೆ ಸಿಲುಕಿಸಲಿದ್ದು, ಎದುರಾಳಿ ತಂಡದ ಒತ್ತಡವನ್ನು ತುಸು ಕಡಿಮೆ ಮಾಡಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications