PBKS vs RR: ಪಂದ್ಯದ ಸಂಭಾವ್ಯ ಆಡುವ ಬಳಗ, ಡ್ರೀಮ್ ಟೀಮ್ ಪ್ರೆಡಿಕ್ಷನ್ ಇಲ್ಲಿದೆ

ಮೇ 7ರ ಶನಿವಾರದಂದು ಪ್ರಸ್ತುತ ನಡೆಯುತ್ತಿರುವ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಎರಡು ಪಂದ್ಯಗಳು ನಡೆಯಲಿದ್ದು, ಪ್ರಥಮ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾದರೆ, ಎರಡನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಲಿವೆ.
ಪಂಜಾಬ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳ ನಡುವಿನ ಪಂದ್ಯ ಟೂರ್ನಿಯ 52ನೇ ಪಂದ್ಯವಾಗಿದ್ದು, ಮುಂಬೈನ ವಾಂಖೆಡೆ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ರಾಜಸ್ಥಾನ್ ರಾಯಲ್ಸ್ ಮತ್ತು ಪಂಜಾಬ್ ಕಿಂಗ್ಸ್ ಎರಡೂ ತಂಡಗಳೂ ಸಹ ಪ್ಲೇ ಆಫ್ ರೇಸ್‌ನಲ್ಲಿರುವ ತಂಡಗಳಾದ ಕಾರಣ ಈ ಪಂದ್ಯದಲ್ಲಿ ಗೆಲ್ಲಲೇಬೇಕಾದ ಗುರಿಯನ್ನು ಹೊಂದಿವೆ. ಇನ್ನು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಜಸ್ಥಾನ್ ಇಲ್ಲಿಯವರೆಗೂ ಒಟ್ಟು 10 ಪಂದ್ಯಗಳನ್ನಾಡಿ 6 ಪಂದ್ಯಗಳಲ್ಲಿ ಜಯ ಸಾದಿಸಿ ಉಳಿದ 4 ಪಂದ್ಯಗಳಲ್ಲಿ ಸೋತು 12 ಅಂಕಗಳನ್ನು ಪಡೆದುಕೊಂಡು ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದರೆ, 10 ಪಂದ್ಯಗಳನ್ನಾಡಿ 5 ಪಂದ್ಯಗಳಲ್ಲಿ ಗೆದ್ದು ಉಳಿದ 5 ಪಂದ್ಯಗಳಲ್ಲಿ ಸೋತು 10 ಅಂಕಗಳನ್ನು ಪಡೆದುಕೊಂಡಿರುವ ಪಂಜಾಬ್ ಕಿಂಗ್ಸ್ ಅಂಕಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ.
ಈ ಪಂದ್ಯದಲ್ಲಿ ಕಣಕ್ಕಿಳಿಯಬಹುದಾದ ಆಡುವ ಬಳಗ ಮತ್ತು ಡ್ರೀಮ್ ಟೀಮ್ ಹೇಗಿದ್ದರೆ ಉತ್ತಮ ಎಂಬುದರ ಕುರಿತಾದ ಮಾಹಿತಿ ಈ ಕೆಳಕಂಡಂತಿದೆ..
ಸಂಭಾವ್ಯ ಆಡುವ ಬಳಗಗಳು:
ಪಂಜಾಬ್ ಕಿಂಗ್ಸ್ ಸಂಭಾವ್ಯ ಆಡುವ ಬಳಗ: 1. ಮಯಾಂಕ್ ಅಗರ್ವಾಲ್ (ನಾಯಕ), 2. ಶಿಖರ್ ಧವನ್, 3. ಜಾನಿ ಬೈರ್‌ಸ್ಟೋ, 4. ಭಾನುಕಾ ರಾಜಪಕ್ಸೆ, 5. ಲಿಯಾಮ್ ಲಿವಿಂಗ್‌ಸ್ಟೋನ್, 6. ಜಿತೇಶ್ ಶರ್ಮಾ (ವಿಕೆಟ್ ಕೀಪರ್), 7. ರಿಷಿ ಧವನ್, 8. ಕಗಿಸೊ ರಬಾಡ, 9. ರಾಹುಲ್ ಚಾಹರ್ , 10. ಸಂದೀಪ್ ಶರ್ಮಾ, 11. ಅರ್ಷದೀಪ್ ಸಿಂಗ್.
ರಾಜಸ್ಥಾನ್ ರಾಯಲ್ಸ್ ಸಂಭಾವ್ಯ ಆಡುವ ಬಳಗ: 1. ಜೋಸ್ ಬಟ್ಲರ್, 2. ದೇವದತ್ ಪಡಿಕ್ಕಲ್ / ಯಶಸ್ವಿ ಜೈಸ್ವಾಲ್, 3. ಸಂಜು ಸ್ಯಾಮ್ಸನ್ (ನಾಯಕ ಮತ್ತು ವಿಕೆ), 4. ರಿಯಾನ್ ಪರಾಗ್, 5. ಶಿಮ್ರಾನ್ ಹೆಟ್ಮೆಯರ್, 6. ಕರುಣ್ ನಾಯರ್, 7. ಆರ್ ಅಶ್ವಿನ್, 8. ಟ್ರೆಂಟ್ ಬೌಲ್ಟ್, 9. ಪ್ರಸಿದ್ಧ್ ಕೃಷ್ಣ, 10. ಯುಜ್ವೇಂದ್ರ ಚಹಾಲ್, 11. ಕುಲದೀಪ್ ಸೇನ್.
ಡ್ರೀಮ್ ಟೀಮ್ಸ್:
ರಾಜಸ್ಥಾನ್ ರಾಯಲ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯಕ್ಕಾಗಿ ಡ್ರೀಮ್ ಟೀಮ್ ರಚಿಸುವ ಕ್ರಿಕೆಟ್ ಪ್ರೇಮಿಗಳು ಈ ಕೆಳಕಂಡಂತೆ ತಂಡಗಳನ್ನು ರಚಿಸಿದರೆ ಉತ್ತಮ ಫ್ಯಾಂಟಸಿ ಅಂಕಗಳನ್ನು ಗಳಿಸಬಹುದು.
ಡ್ರೀಮ್ ಟೀಮ್ 1: 1. ಶಿಖರ್ ಧವನ್, 2. ಜೋಸ್ ಬಟ್ಲರ್, 3. ಸಂಜು ಸ್ಯಾಮ್ಸನ್, 4. ಭಾನುಕಾ ರಾಜಪಕ್ಸೆ, 5. ಲಿಯಾಮ್ ಲಿವಿಂಗ್‌ಸ್ಟೋನ್, 6. ಜಿತೇಶ್ ಶರ್ಮಾ, 7. ಆರ್ ಅಶ್ವಿನ್, 8. ಯುಜ್ವೇಂದ್ರ ಚಾಹಲ್, 9. ರಿಷಿ ಧವನ್, 10. ಪ್ರಸಿದ್ಧ್ ಕೃಷ್ಣ, 11. ಕಗಿಸೊ ರಬಾಡ.
ನಾಯಕ: ಸಂಜು ಸ್ಯಾಮ್ಸನ್, ಉಪನಾಯಕ: ಲಿಯಾಮ್ ಲಿವಿಂಗ್ಸ್ಟೋನ್, ವಿಕೆಟ್ ಕೀಪರ್: ಜಿತೇಶ್ ಶರ್ಮಾ.
ಡ್ರೀಮ್ ಟೀಮ್ 2: 1. ಜೋಸ್ ಬಟ್ಲರ್, 2. ಸಂಜು ಸ್ಯಾಮ್ಸನ್, 3. ಜಾನಿ ಬೈರ್‌ಸ್ಟೋ, 4. ಮಯಾಂಕ್ ಅಗರ್ವಾಲ್, 5. ಶಿಮ್ರಾನ್ ಹೆಟ್ಮೆಯರ್, 6. ರಿಯಾನ್ ಪರಾಗ್, 7. ರಾಹುಲ್ ಚಾಹರ್, 8. ಯುಜ್ವೇಂದ್ರ ಚಹಾಲ್, 9. ಪ್ರಸಿದ್ಧ್ ಕೃಷ್ಣ, 10. ಟ್ರೆಂಟ್ ಬೌಲ್ಟ್, 11. ಕುಲದೀಪ್ ಸೇನ್
ನಾಯಕ: ಮಯಾಂಕ್ ಅಗರ್ವಾಲ್, ಉಪನಾಯಕ: ಜೋಸ್ ಬಟ್ಲರ್, ವಿಕೆಟ್ ಕೀಪರ್: ಸಂಜು ಸ್ಯಾಮ್ಸನ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications