IPL 2022: ಇಂದಿಗೂ ಆಡುತ್ತಿದ್ದಾರೆ 2008ರ ಐಪಿಎಲ್‌ನಲ್ಲಿ ಕಣಕ್ಕಿಳಿದಿದ್ದ ಈ 15 ಕ್ರಿಕೆಟಿಗರು!

ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ, ಜಗತ್ತಿನ ಅತಿ ದೊಡ್ಡ ಹಾಗೂ ಶ್ರೀಮಂತ ಫ್ರಾಂಚೈಸಿ ಕ್ರಿಕೆಟ್ ಟೂರ್ನಿ ಎಂದೇ ಖ್ಯಾತಿಯನ್ನು ಪಡೆದಿರುವ ಟೂರ್ನಿಯಾಗಿದೆ. ಚುಟುಕು ಕ್ರಿಕೆಟ್ ಆರಂಭವಾದ ಕೂಡಲೇ ಈ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯನ್ನು 2008ರಲ್ಲಿ ಆರಂಭಿಸಲಾಗಿತ್ತು. ಹೀಗೆ ನೂತನ ಕ್ರಿಕೆಟ್ ಟೂರ್ನಿ ಆರಂಭವಾದಾಗ ಮುಂದೊಂದು ದಿನ ಇದು ಬೃಹತ್ ಕ್ರಿಕೆಟ್ ಟೂರ್ನಿಯಾಗಿ ಬೆಳೆಯುತ್ತದೆ ಎಂದು ಬಹುಶಃ ಯಾರೂ ಸಹ ಊಹಿಸಿರಲಿಲ್ಲ.
2007ರ ಟಿ ಟ್ವೆಂಟಿ ವಿಶ್ವಕಪ್ ಭರ್ಜರಿ ಯಶಸ್ಸು ಕಂಡ ಬೆನ್ನಲ್ಲೇ ಬಿಸಿಸಿಐ ಈ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯನ್ನು ನಡೆಸಿತು ಹಾಗೂ ಈ ಆವೃತ್ತಿಯಲ್ಲಿ ಪಾಕಿಸ್ತಾನದ ಆಟಗಾರರೂ ಸೇರಿದಂತೆ ವಿಶ್ವದ ಹಲವಾರು ದೇಶಗಳ ಆಟಗಾರರು ಭಾಗವಹಿಸಿದ್ದರು. ಇನ್ನು ಐಪಿಎಲ್‌ನಲ್ಲಿ ತಂಡಗಳು ಆಟಗಾರನೋರ್ವನಿಗೆ ಪದೇ ಪದೇ ಅವಕಾಶ ನೀಡಬೇಕೆಂದರೆ ಆತ ಉತ್ತಮ ಪ್ರದರ್ಶನ ನೀಡಲೇಬೇಕು. ಇಲ್ಲವಾದರೆ ಆತನಿಗೆ ಮತ್ತೆ ಅವಕಾಶ ಸಿಗುವುದು ತೀರಾ ಕಷ್ಟ ಎಂದೇ ಹೇಳಬಹುದು. ಇನ್ನು ಉದ್ಘಾಟನಾ ಆವೃತ್ತಿಯಲ್ಲಿ ಕಣಕ್ಕಿಳಿದಿದ್ದ 15 ಆಟಗಾರರು ಪ್ರಸ್ತುತ ನಡೆಯುತ್ತಿರುವ ಐಪಿಎಲ್ ಟೂರ್ನಿಯಲ್ಲಿಯೂ ಕಣಕ್ಕಿಳಿದಿದ್ದಾರೆ. ಕೆಲವರು ಅಂದಿನಿಂದ ಇಂದಿನವರೆಗೂ ಸತತವಾಗಿ ಆಡುತ್ತಿದ್ದರೆ, ಇನ್ನೂ ಕೆಲವರು ಕೆಲ ಆವೃತ್ತಿಗಳಲ್ಲಿ ಆಡದೇ ಕೈತಪ್ಪಿಸಿಕೊಂಡಿದ್ದಾರೆ. ಒಟ್ಟಾರೆ 2008ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಕಣಕ್ಕಿಳಿದು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿಯೂ ಕಣಕ್ಕಿಳಿದಿರುವ ಆ 15 ಆಟಗಾರರ ಪಟ್ಟಿ ಈ ಕೆಳಕಂಡಂತಿದೆ ಓದಿ..

2008ರ ಐಪಿಎಲ್‌ನಲ್ಲಿ ಕಣಕ್ಕಿಳಿದು ಈ ಬಾರಿಯೂ ಆಡುತ್ತಿರುವ 15 ಆಟಗಾರರ ಪಟ್ಟಿ
ವಿರಾಟ್ ಕೊಹ್ಲಿ 2008ರಲ್ಲಿ - ರಾಯಲ್ ಚಾಲೆಂಜರ್ಸ್ ಬೆಂಗಳೂರು, ಈ ಬಾರಿ - ರಾಯಲ್ ಚಾಲೆಂಜರ್ಸ್ ಬೆಂಗಳೂರು
ವೃದ್ಧಿಮಾನ್ ಸಹಾ 2008ರಲ್ಲಿ - ಕೋಲ್ಕತ್ತಾ ನೈಟ್ ರೈಡರ್ಸ್ ಈ ಬಾರಿ - ಗುಜರಾತ್ ಟೈಟಾನ್ಸ್
ಎಂಎಸ್ ಧೋನಿ 2008ರಲ್ಲಿ - ಚೆನ್ನೈ ಸೂಪರ್ ಕಿಂಗ್ಸ್ ಈ ಬಾರಿ - ಚೆನ್ನೈ ಸೂಪರ್ ಕಿಂಗ್ಸ್
ರೋಹಿತ್ ಶರ್ಮಾ 2008ರಲ್ಲಿ - ಡೆಕ್ಕನ್ ಚಾರ್ಜರ್ಸ್ ಈ ಬಾರಿ - ಮುಂಬೈ ಇಂಡಿಯನ್ಸ್
ರವೀಂದ್ರ ಜಡೇಜಾ 2008ರಲ್ಲಿ - ರಾಜಸ್ಥಾನ್ ರಾಯಲ್ಸ್ ಈ ಬಾರಿ - ಚೆನ್ನೈ ಸೂಪರ್ ಕಿಂಗ್ಸ್
ಶಿಖರ್ ಧವನ್ 2008ರಲ್ಲಿ - ಡೆಲ್ಲಿ ಡೇರ್ ಡೆವಿಲ್ಸ್ ಈ ಬಾರಿ - ಪಂಜಾಬ್ ಕಿಂಗ್ಸ್
ದಿನೇಶ್ ಕಾರ್ತಿಕ್ 2008ರಲ್ಲಿ - ಡೆಲ್ಲಿ ಕ್ಯಾಪಿಟಲ್ಸ್ ಈ ಬಾರಿ - ರಾಯಲ್ ಚಾಲೆಂಜರ್ಸ್ ಬೆಂಗಳೂರು
ಪ್ರದೀಪ್ ಸಾಂಗ್ವಾನ್ 2008ರಲ್ಲಿ - ಡೆಲ್ಲಿ ಕ್ಯಾಪಿಟಲ್ಸ್ಈ ಬಾರಿ - ಗುಜರಾತ್ ಟೈಟಾನ್ಸ್
ಸಿದ್ದಾರ್ಥ್ ಕೌಲ್ 2008ರಲ್ಲಿ - ಕೋಲ್ಕತ್ತಾ ನೈಟ್ ರೈಡರ್ಸ್ ಈ ಬಾರಿ - ರಾಯಲ್ ಚಾಲೆಂಜರ್ಸ್ ಬೆಂಗಳೂರು
ಆರ್ ಅಶ್ವಿನ್ 2008ರಲ್ಲಿ - ಚೆನ್ನೈ ಸೂಪರ್ ಕಿಂಗ್ಸ್ ಈ ಬಾರಿ - ರಾಜಸ್ಥಾನ್ ರಾಯಲ್ಸ್
ಮನೀಶ್ ಪಾಂಡೆ 2008ರಲ್ಲಿ - ಮುಂಬೈ ಇಂಡಿಯನ್ಸ್ ಈ ಬಾರಿ - ಲಕ್ನೋ ಸೂಪರ್ ಜೈಂಟ್ಸ್
ರಾಬಿನ್ ಉತ್ತಪ್ಪ 2008ರಲ್ಲಿ - ಮುಂಬೈ ಇಂಡಿಯನ್ಸ್ ಈ ಬಾರಿ - ಚೆನ್ನೈ ಸೂಪರ್ ಕಿಂಗ್ಸ್
ಡ್ವೇನ್ ಬ್ರಾವೋ 2008ರಲ್ಲಿ - ಮುಂಬೈ ಇಂಡಿಯನ್ಸ್ ಈ ಬಾರಿ - ಚೆನ್ನೈ ಸೂಪರ್ ಕಿಂಗ್ಸ್
ಅಜಿಂಕ್ಯ ರಹಾನೆ 2008ರಲ್ಲಿ - ಮುಂಬೈ ಇಂಡಿಯನ್ಸ್ ಈ ಬಾರಿ - ಕೋಲ್ಕತ್ತಾ ನೈಟ್ ರೈಡರ್ಸ್
ರಿಷಿ ಧವನ್ 2008ರಲ್ಲಿ - ಕಿಂಗ್ಸ್ XI ಪಂಜಾಬ್ ಈ ಬಾರಿ - ಪಂಜಾಬ್ ಕಿಂಗ್ಸ್

ವಿರಾಟ್ ಕೊಹ್ಲಿ ಮಾತ್ರ ಒಂದೇ ಫ್ರಾಂಚೈಸಿ ಪರ ಕಣಕ್ಕಿಳಿದಿರುವ ಆಟಗಾರ
ಇನ್ನು ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಒಂದೇ ಫ್ರಾಂಚೈಸಿ ಪರ ಕಣಕ್ಕಿಳಿದಿರುವ ಏಕೈಕ ಆಟಗಾರನೆಂದರೆ ಅದು ವಿರಾಟ್ ಕೊಹ್ಲಿ. 2008ರ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಕಣಕ್ಕಿಳಿದಿದ್ದ ವಿರಾಟ್ ಕೊಹ್ಲಿ ಇಲ್ಲಿಯವರೆಗೆ ನಡೆದಿರುವ ಎಲ್ಲಾ ಆವೃತ್ತಿಗಳಲ್ಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರವೇ ಕಣಕ್ಕಿಳಿದಿದ್ದಾರೆ.

ಮೊದಲ ಪಂದ್ಯದಿಂದ ಆಡುತ್ತಿರುವ ಇಬ್ಬರು ಆಟಗಾರರು
ಇನ್ನು 2008ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಸೆಣಸಾಟ ನಡೆಸಿದ್ದವು. ಆಗ ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರನಾಗಿದ್ದರು ಹಾಗೂ ವೃದ್ಧಿಮಾನ್ ಸಹಾ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಆಟಗಾರನಾಗಿದ್ದರು. ಹೀಗಾಗಿ ಈ ಇಬ್ಬರು ಐಪಿಎಲ್‌ನ ಚೊಚ್ಚಲ ಪಂದ್ಯ ಮತ್ತು ಈ ಆವೃತ್ತಿಯಲ್ಲಿ ಕಣಕ್ಕಿಳಿದಿರುವ ಆಟಗಾರರು ಎನಿಸಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications