
ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭವಾಗಿದ್ದು, ರಾಜಸ್ಥಾನ್ ರಾಯಲ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಟೂರ್ನಿಯಲ್ಲಿನ ಚೊಚ್ಚಲ ಪಂದ್ಯದಲ್ಲಿ ಇಂದು ( ಮಾರ್ಚ್ 29 ) ಮುಖಾಮುಖಿಯಾಗುತ್ತಿವೆ. ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಹಲವಾರು ತಂಡಗಳ ನಾಯಕರ ಬದಲಾವಣೆಯಾಗಿದ್ದರೆ, ರಾಜಸ್ಥಾನ್ ರಾಯಲ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮಾತ್ರ ಹಳೆಯ ನಾಯಕರ ನಾಯಕತ್ವದಲ್ಲಿಯೇ ಕಣಕ್ಕಿಳಿಯುತ್ತಿವೆ.
ಇನ್ನು ರಾಜಸ್ಥಾನ್ ರಾಯಲ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳ ನಡುವೆ ನಡೆಯಲಿರುವ ಈ ಪಂದ್ಯದಲ್ಲಿ ಯಾವ ತಂಡ ಗೆಲ್ಲಲಿದೆ ಹಾಗೂ ಯಾವ ತಂಡ ಸೋಲಲಿದೆ ಮತ್ತು ಯಾವ ಆಟಗಾರರು ಉತ್ತಮ ಪ್ರದರ್ಶನ ನೀಡಲಿದ್ದಾರೆ ಹಾಗೂ ಯಾವ ತಂಡ ಕಳಪೆ ಪ್ರದರ್ಶನ ನೀಡಲಿದ್ದಾರೆ ಎಂಬ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ಆರಂಭಗೊಂಡಿದ್ದು, ಕೆಲ ಕ್ರಿಕೆಟ್ ಪ್ರೇಮಿಗಳು ಈ ಪಂದ್ಯದಲ್ಲಿ ಮಿಂಚಬಹುದಾದ ಆಟಗಾರರನ್ನು ಊಹಿಸಿ ಆರಿಸಿ ತಮ್ಮದೇ ಡ್ರೀಮ್ ಟೀಮ್ ಕಟ್ಟುತ್ತಿದ್ದಾರೆ. ಹೀಗೆ ಪ್ರೇಕ್ಷಕರು ಮಾಡುತ್ತಿರುವ ಡ್ರೀಮ್ ಟೀಮ್‌ನಲ್ಲಿ ಈ ಕೆಳಕಂಡ ಮೂವರು ಆಟಗಾರರನ್ನು ಆರಿಸದಿದ್ದರೆ ಉತ್ತಮ ಎನ್ನಬಹುದು.
1. ಮಾರ್ಕೊ ಜನ್ಸೆನ್: ಟೆಸ್ಟ್ ಕ್ರಿಕೆಟ್‌ನಲ್ಲಿ ಅಂತರರಾಷ್ಟ್ರೀಯ ತಂಡದ ಆಟಗಾರನಾಗಿ ಮಿಂಚಿರುವವ ದಕ್ಷಿಣ ಆಫ್ರಿಕಾದ ಆಲ್‌ರೌಂಡರ್ ಮಾರ್ಕೊ ಜನ್ಸೆನ್ ಕಳೆದ ಭಾರತ ವಿರುದ್ಧದ ಟಿ ಟ್ವೆಂಟಿ ಸರಣಿ ಮೂಲಕ ಅಂತರರಾಷ್ಟ್ರೀಯ ಟಿ ಟ್ವೆಂಟಿ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದಾರೆ. ಹೀಗೆ ದೊಡ್ಡ ಅನುಭವವನ್ನೇನೂ ಹೊಂದಿಲ್ಲದ ಮಾರ್ಕೊ ಜನ್ಸೆನ್ ಅವರನ್ನು ನಿಮ್ಮ ಡ್ರೀಮ್ ಟೀಮ್‌ನಿಂದ ಹೊರಗಿಡುವುದು ಉತ್ತಮ ಆಯ್ಕೆ ಎನ್ನಬಹುದು.
2. ವಾನ್ ಡರ್ ಡಸೆನ್: ದಕ್ಷಿಣ ಆಫ್ರಿಕಾದ ವಾನ್ ಡರ್ ಡಸೆನ್ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಕಣಕ್ಕಿಳಿಯುತ್ತಿದ್ದು, ಇಂದಿನ ಪಂದ್ಯದಲ್ಲಿ ನಿಮ್ಮ ಡ್ರೀಮ್ ಟೀಮ್‌ನಿಂದ ಹೊರಗಿಡುವುದು ಸೂಕ್ತ ಎನ್ನಬಹುದು. 140 ಟಿ ಟ್ವೆಂಟಿ ಪಂದ್ಯಗಳನ್ನಾಡಿ 4000 ರನ್ ಕಲೆಹಾಕಿರುವ ವಾನ್ ಡರ್ ಡಸೆನ್ ಮೂರು ಬಾರಿ ಶತಕವನ್ನೂ ಸಹ ಬಾರಿಸಿದ್ದಾರೆ. ಹೀಗೆ ವಾನ್ ಡರ್ ಡಸೆನ್ ಉತ್ತಮ ಪ್ರದರ್ಶನ ನೀಡಿದ್ದರೂ ಇತರೆ ವಿದೇಶಿ ಆಟಗಾರರ ಲಭ್ಯತೆ ಹೆಚ್ಚಿರುವುದರಿಂದ ಕಾರಣದಿಂದಾಗಿ ಆತ ಇಂದು ಕಣಕ್ಕಿಳಿಯುವುದು ಅನುಮಾನ ಮೂಡಿಸಿದೆ.
3. ರಿಯಾನ್ ಪರಾಗ್: ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಸ್ಥಾನ್ ರಾಯಲ್ಸ್ ಪರ ಕಣಕ್ಕಿಳಿಯಲಿರುವ ರಿಯಾನ್ ಪರಾಗ್ ಅವರನ್ನು ಈ ಪಂದ್ಯದ ನಿಮ್ಮ ಡ್ರೀಮ್ ಟೀಮ್‌ನಿಂದ ದೂರ ಇಡುವುದು ಉತ್ತಮ. ಇನ್ನು ತಂಡದಲ್ಲಿ ಯುಜುವೇಂದ್ರ ಚಹಲ್ ಹಾಗೂ ರವಿಚಂದ್ರನ್ ಅಶ್ವಿನ್ ಅವರ ಸ್ಪಿನ್ ಜೋಡಿಯಿದ್ದು, ರಿಯಾನ್ ಪರಾಗ್ ಈ ಪಂದ್ಯದಲ್ಲಿ ಅವಕಾಶ ಪಡೆದುಕೊಳ್ಳುವ ಸಾಧ್ಯತೆ ತೀರ ಕಡಿಮೆಯಿದೆ. ತಂಡದಲ್ಲಿ ಇಬ್ಬರು ಸ್ಪಿನ್ ಬೌಲರ್‌ಗಳು ಇರುವ ಕಾರಣ ತಂಡ ರಿಯಾನ್ ಪರಾಗ್ ಬಿಟ್ಟು ಬೇರೆ ಆಲ್‌ರೌಂಡರ್ ಆಟಗಾರರು ಕಣಕ್ಕಿಳಿಯುವ ಸಾಧ್ಯತೆ ಸಾಧ್ಯತೆಗಳಿವೆ.
ನಾಯಕ, ಉಪನಾಯಕನ ಆಯ್ಕೆ:
ರಾಜಸ್ಥಾನ್ ರಾಯಲ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳ ನಡುವಿನ ಈ ಪಂದ್ಯಕ್ಕೆ ಸಂಬಂಧಿಸಿದ ನಿಮ್ಮ ಡ್ರೀಮ್ ಟೀಮ್‌ನಲ್ಲಿ ಸಂಜು ಸ್ಯಾಮ್ಸನ್ ಅಥವಾ ಕೇನ್ ವಿಲಿಯಮ್ಸನ್ ಅವರನ್ನು ನಾಯಕ ಎಂದು ಆರಿಸಿ. ಹಾಗೂ ಉಪನಾಯಕನ ಸ್ಥಾನಕ್ಕೆ ನಿಕೋಲಸ್ ಪೂರನ್ ಅಥವಾ ದೇವದತ್ ಪಡಿಕ್ಕಲ್ ಅವರನ್ನು ಆರಿಸಿ.
ಡ್ರೀಮ್ ಟೀಮ್ ಹೀಗಿರಲಿ:
ತಂಡ 1: ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್, ನಿಕೋಲಸ್ ಪೂರನ್, ಕೇನ್ ವಿಲಿಯಮ್ಸನ್ (ನಾಯಕ), ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ದೇವದತ್ ಪಡಿಕ್ಕಲ್ (ಉಪನಾಯಕ), ಐಡೆನ್ ಮಾರ್ಕ್ರಾಮ್, ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಾಹಲ್, ಟಿ ನಟರಾಜನ್, ಉಮ್ರಾನ್ ಮಲಿಕ್
ತಂಡ 2: ಸಂಜು ಸ್ಯಾಮ್ಸನ್ (ನಾಯಕ), ನಿಕೋಲಸ್ ಪೂರನ್ (ಉಪನಾಯಕ), ಕೇನ್ ವಿಲಿಯಮ್ಸನ್, ಶಿಮ್ರಾನ್ ಹೆಟ್ಮೆಯರ್, ರಾಹುಲ್ ತ್ರಿಪಾಠಿ, ದೇವದತ್ ಪಡಿಕ್ಕಲ್, ವಾಷಿಂಗ್ಟನ್ ಸುಂದರ್, ರವಿಚಂದ್ರನ್ ಅಶ್ವಿನ್, ಭುವನೇಶ್ವರ್ ಕುಮಾರ್, ಟ್ರೆಂಟ್ ಬೌಲ್ಟ್, ಟಿ ನಟರಾಜನ್