CSK vs PBKS: ನಿಮ್ಮ ಡ್ರೀಮ್ ಟೀಮ್ ಗೆಲ್ಲಬೇಕೆಂದರೆ ಈ ಮೂವರನ್ನು ಹೊರಗಿಡಿ; ಈತನಿಗೆ ನಾಯಕತ್ವ ನೀಡಿ

ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭವಾಗಿದ್ದು, ಕಳೆದ ಬಾರಿಯ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದ ಚೆನ್ನೈ ಸೂಪರ್ ಕಿಂಗ್ಸ್ ಈ ಬಾರಿಯ ಟೂರ್ನಿಯ ತನ್ನ ಮೊದಲ ಎರಡು ಪಂದ್ಯಗಳಲ್ಲಿ ಸೋತು ಮಂಕಾಗಿದೆ. ಮೊದಲಿಗೆ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಸೋತ ಚೆನ್ನೈ ಸೂಪರ್ ಕಿಂಗ್ಸ್ ನಂತರ ನೂತನ ತಂಡ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಕೂಡ ಸೋಲುಂಡಿತು. ಹೀಗೆ ಸತತ ಎರಡು ಸೋಲಿನ ಮೂಲಕ ಕಂಗೆಟ್ಟಿರುವ ಚೆನ್ನೈ ಸೂಪರ್ ಕಿಂಗ್ಸ್ ತನ್ನ ಮೂರನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಸೆಣಸಾಡುತ್ತಿದೆ. ಅತ್ತ ಟೂರ್ನಿಯಲ್ಲಿನ ತನ್ನ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಗೆದ್ದು ಶುಭಾರಂಭ ಮಾಡಿದ್ದ ಪಂಜಾಬ್ ಕಿಂಗ್ಸ್ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಸೋಲನ್ನು ಅನುಭವಿಸಿತ್ತು.
ಇನ್ನು ಇತ್ತಂಡಗಳ ನಡುವಿನ ಈ ಪಂದ್ಯ ಇಂದು ( ಏಪ್ರಿಲ್ 3 ) ಮುಂಬೈನ ಬ್ರಬೌರ್ನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲ್ಲಿದ್ದು ಎರಡೂ ತಂಡಗಳು ಚಿತ್ತ ನೆಟ್ಟಿವೆ. ಒಂದೆಡೆ ಇತ್ತಂಡಗಳು ಗೆಲ್ಲುವ ಯೋಜನೆಯಲ್ಲಿದ್ದರೆ, ಮತ್ತೊಂದೆಡೆ ಕ್ರಿಕೆಟ್ ಪ್ರೇಮಿಗಳು ಈ ಪಂದ್ಯಕ್ಕಾಗಿ ಇತ್ತಂಡಗಳ ಆಟಗಾರರನ್ನೊಳಗೊಂಡಂತೆ ಡ್ರೀಮ್ ಟೀಮ್ ರಚಿಸುತ್ತಿದ್ದು, ಉತ್ತಮ ಆಟಗಾರರನ್ನು ನಾಯಕ ಮತ್ತು ಉಪನಾಯಕರನ್ನಾಗಿ ಆಯ್ಕೆ ಮಾಡುತ್ತಿದ್ದಾರೆ. ಹೀಗೆ ಕ್ರಿಕೆಟ್ ಪ್ರೇಮಿಗಳು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಈ ಪಂದ್ಯಕ್ಕಾಗಿ ರಚಿಸುತ್ತಿರುವ ಡ್ರೀಮ್ ಟೀಮ್‌ನಲ್ಲಿ ಯಾವ ಆಟಗಾರರನ್ನು ಆರಿಸಬೇಕು, ಯಾವ ಆಟಗಾರರನ್ನು ಆರಿಸಬಾರು ಹಾಗೂ ಯಾರಿಗೆ ನಾಯಕತ್ವ ಮತ್ತು ಉಪನಾಯಕ ಸ್ಥಾನ ನೀಡಿದರೆ ಉತ್ತಮ ಎಂಬುದರ ಕುರಿತಾದ ವಿವರ ಈ ಕೆಳಕಂಡಂತಿದೆ.

ಈ ಮೂವರು ಆಟಗಾರರನ್ನು ಹೊರಗಿಡಿ
ಪಂಜಾಬ್ ಕಿಂಗ್ಸ್ ಪರ ಪ್ರಥಮ ಪಂದ್ಯದಲ್ಲಿ ಶೂನ್ಯಕ್ಕೆ ಔಟ್ ಆಗಿ ದ್ವಿತೀಯ ಪಂದ್ಯದಲ್ಲಿ 13 ಎಸೆತಗಳಿಗೆ 11 ರನ್ ಬಾರಿಸಿದ್ದ ರಾಜ್ ಬಾವಾ ಅವರನ್ನು ಈ ಪಂದ್ಯದಿಂದ ಸಾಧ್ಯತೆಗಳಿವೆ. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಕಣಕ್ಕಿಳಿದು ಐಪಿಎಲ್‌ಗೆ ಪದಾರ್ಪಣೆ ಮಾಡಿ 3.3 ಓವರ್‌ಗಳಲ್ಲಿ 39 ರನ್ ನೀಡಿದ್ದರು. ಕಳೆದ ಪಂದ್ಯದಲ್ಲಿ ಸಂದೀಪ್ ಶರ್ಮಾ ಬದಲಾಗಿ ಕಗಿಸೊ ರಬಾಡರನ್ನು ಕಣಕ್ಕಿಳಿಸಿದ್ದ ಪಂಜಾಬ್ ಕಿಂಗ್ಸ್ ಈ ಪಂದ್ಯದಲ್ಲಿ ಮತ್ತೆ ಸಂದೀಪ್ ಶರ್ಮಾಗೆ ಅವಕಾಶ ನೀಡುವುದು ಅನುಮಾನ ಮೂಡಿಸಿದೆ. ಹೀಗಾಗಿ ಈ ಮೂವರು ಆಟಗಾರರನ್ನು ಇಂದಿನ ಪಂದ್ಯದ ಡ್ರೀಮ್ ಟೀಮ್‌ನಿಂದ ಹೊರಗಿಡುವುದು ಉತ್ತಮ ಎನ್ನಬಹುದು.
ನಾಯಕ ಮತ್ತು ಉಪನಾಯಕ
ನಿಮ್ಮ ಡ್ರೀಮ್ ಟೀಮ್‌ನಲ್ಲಿ ಈ ಕೆಳಕಂಡ ಆಟಗಾರರಿಗೆ ನಾಯಕ ಮತ್ತು ಉಪನಾಯಕನ ಸ್ಥಾನ ನೀಡಿ..
ನಾಯಕ- ಮೊಯಿನ್ ಅಲಿ ರಾಬಿನ್ ಉತ್ತಪ್ಪ
ಉಪನಾಯಕ - ಶಿಖರ್ ಧವನ್, ಭಾನುಕಾ ರಾಜಪಕ್ಸೆ
ಡ್ರೀಮ್ ಟೀಮ್ ಹೀಗಿರಲಿ
ತಂಡ 1: ಕೀಪರ್‌ಗಳು - ಭಾನುಕಾ ರಾಜಪಕ್ಸೆ, ಎಂಎಸ್ ಧೋನಿ
ಬ್ಯಾಟ್ಸ್‌ಮನ್‌ಗಳು - ರಾಬಿನ್ ಉತ್ತಪ್ಪ, ಶಿಖರ್ ಧವನ್ (ಉಪನಾಯಕ), ಮಯಾಂಕ್ ಅಗರ್ವಾಲ್
ಆಲ್ ರೌಂಡರ್‌ಗಳು - ಮೊಯಿನ್ ಅಲಿ (ನಾಯಕ), ರವೀಂದ್ರ ಜಡೇಜಾ, ಲಿಯಾಮ್ ಲಿವಿಂಗ್‌ಸ್ಟೋನ್
ಬೌಲರ್‌ಗಳು - ಡ್ವೇನ್ ಬ್ರಾವೋ, ರಾಹುಲ್ ಚಹಾರ್, ಕಗಿಸೊ ರಬಾಡ
ತಂಡ 2: ಕೀಪರ್ಸ್ - ಭಾನುಕಾ ರಾಜಪಕ್ಸೆ (ಉಪನಾಯಕ)
ಬ್ಯಾಟ್ಸ್‌ಮನ್‌ಗಳು - ರಾಬಿನ್ ಉತ್ತಪ್ಪ (ನಾಯಕ), ಶಿಖರ್ ಧವನ್, ರುತುರಾಜ್ ಗಾಯಕ್ವಾಡ್
ಆಲ್ ರೌಂಡರ್‌ಗಳು - ಮೊಯಿನ್ ಅಲಿ, ರವೀಂದ್ರ ಜಡೇಜಾ, ಲಿಯಾಮ್ ಲಿವಿಂಗ್‌ಸ್ಟೋನ್, ಓಡಿಯನ್ ಸ್ಮಿತ್
ಬೌಲರ್‌ಗಳು - ಡ್ವೇನ್ ಬ್ರಾವೋ, ರಾಹುಲ್ ಚಹಾರ್, ಕಗಿಸೊ ರಬಾಡ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications