Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

DC vs GT: ನಿಮ್ಮ ಡ್ರೀಮ್ ಟೀಮ್ ಗೆಲ್ಲಲು ಈ ಆಟಗಾರರು ನಿಮ್ಮ ತಂಡದಲ್ಲಿರಬೇಕು; ಈತನಿಗೆ ನಾಯಕತ್ವ ನೀಡಿ

IPL 2022: Players who may play well and play bad in Delhi Capitals vs Gujarat Titans match

ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಗೊಂಡಿದ್ದು, ಟೂರ್ನಿಯ ಮೊದಲ ವಾರದ ಅಂತಿಮ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಗುಜರಾತ್ ಟೈಟನ್ಸ್ ತಂಡಗಳು ಸೆಣಸಾಟ ನಡೆಸುತ್ತಿವೆ. ಇತ್ತಂಡಗಳ ನಡುವಿನ ಈ ಪಂದ್ಯ ಟೂರ್ನಿಯ ಹತ್ತನೇ ಪಂದ್ಯವಾಗಿದ್ದು, ಈ ಪಂದ್ಯ ಪುಣೆಯ ಎಂಸಿಎ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಇನ್ನು ಗುಜರಾತ್ ಟೈಟನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಟೂರ್ನಿಯಲ್ಲಿ ಇಲ್ಲಿಯವರೆಗೂ ತಲಾ ಒಂದೊಂದು ಪಂದ್ಯದಲ್ಲಿ ಕಣಕ್ಕಿಳಿದಿದ್ದು, ಎರಡೂ ತಂಡಗಳು ಕೂಡ ಆ ಪಂದ್ಯಗಳಲ್ಲಿ ಜಯ ಸಾಧಿಸಿವೆ.

ನೂತನ ಫ್ರಾಂಚೈಸಿಯಾದ ಗುಜರಾತ್ ಟೈಟನ್ಸ್ ಮತ್ತೊಂದು ನೂತನ ಫ್ರಾಂಚೈಸಿಯಾದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಜಯ ಸಾಧಿಸಿದರೆ, ಡೆಲ್ಲಿ ಕ್ಯಾಪಿಟಲ್ಸ್ ಬಲಿಷ್ಟ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಗೆದ್ದು ಬೀಗಿದೆ. ಹೀಗೆ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ತಮ್ಮ ಮೊದಲ ಪಂದ್ಯಗಳಲ್ಲಿ ಜಯಗಳಿಸಿರುವ ಈ ಎರಡೂ ತಂಡಗಳ ಮುಖಾಮುಖಿಯಲ್ಲಿ ಹಾರ್ದಿಕ್ ಪಾಂಡ್ಯಾ ನಾಯಕತ್ವದ ಗುಜರಾತ್ ಟೈಟನ್ಸ್ ಜಯ ಸಾಧಿಸುತ್ತಾ ಅಥವಾ ರಿಷಭ್ ಪಂತ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ಜಯ ಸಾಧಿಸುತ್ತಾ ಎಂಬುದು ಕುತೂಹಲ ಮೂಡಿಸಿದೆ. ಇನ್ನು ಇತ್ತಂಡಗಳೂ ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ಗೆಲುವಿನ ಪಯಣವನ್ನು ಮುನ್ನಡೆಸುವ ತವಕದಲ್ಲಿದ್ದರೆ, ಅತ್ತ ಕ್ರಿಕೆಟ್ ಪ್ರೇಮಿಗಳು ಇತ್ತಂಡಗಳ ನಡುವಿನ ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಬಲ್ಲ ಆಟಗಾರರನ್ನೊಳಗೊಂಡ ತಂಡಗಳನ್ನು ಕಟ್ಟಿ ಡ್ರೀಮ್ ಟೀಮ್ ರಚಿಸುತ್ತಿದ್ದಾರೆ.

ಹೀಗೆ ಇತ್ತಂಡಗಳ ನಡುವಿನ ಪಂದ್ಯಕ್ಕಾಗಿ ಕ್ರಿಕೆಟ್ ಪ್ರೇಮಿಗಳು ರಚಿಸುತ್ತಿರುವ ತಂಡಗಳಲ್ಲಿ ಯಾವ ಆಟಗಾರರಿಗೆ ಸ್ಥಾನ ನೀಡಬೇಕು, ಯಾವ ಆಟಗಾರರನ್ನು ನಾಯಕರನ್ನಾಗಿ ಮತ್ತು ಉಪನಾಯಕರನ್ನಾಗಿ ನೇಮಿಸಬೇಕು ಎಂಬುದರ ಕುರಿತಾದ ಕೆಲ ಸಲಹೆಗಳು ಈ ಕೆಳಕಂಡಂತಿವೆ..

dc

ಈ ಆಟಗಾರರು ತಂಡದಲ್ಲಿರಬೇಕು:

ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಗುಜರಾತ್ ಟೈಟನ್ಸ್ ತಂಡಗಳ ನಡುವಿನ ಈ ಪಂದ್ಯಕ್ಕಾಗಿ ಡ್ರೀಮ್ ಟೀಮ್ ರಚಿಸುತ್ತಿರುವ ಕ್ರಿಕೆಟ್ ಪ್ರೇಮಿಗಳು ಹಾರ್ದಿಕ್ ಪಾಂಡ್ಯಾ, ಮ್ಯಾಥ್ಯೂ ವೇಡ್, ಶುಬ್ಮನ್ ಗಿಲ್, ಅಕ್ಷರ್ ಪಟೇಲ್, ಟಿಮ್ ಸೈಫರ್ಟ್ ಹಾಗೂ ರಿಷಭ್ ಪಂತ್ ಈ ಆಟಗಾರರನ್ನು ತಪ್ಪದೇ ಆಯ್ಕೆ ಮಾಡಬೇಕಿದೆ. ಇಲ್ಲಿ ಉಲ್ಲೇಖಿಸಿರುವ ಆಟಗಾರರು ಇಂದಿನ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಬಲ್ಲ ಆಟಗಾರರಾಗಿದ್ದು ನಿಮ್ಮ ಡ್ರೀಮ್ ಟೀಮ್‌ನಲ್ಲಿ ಇರಲೇಬೇಕಾದ ಆಟಗಾರರಾಗಿದ್ದಾರೆ.

ನಾಯಕರು ಮತ್ತು ಉಪನಾಯಕರು:

ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಗುಜರಾತ್ ಟೈಟನ್ಸ್ ನಡುವಿನ ಈ ಪಂದ್ಯಕ್ಕೆ ನೀವು ರಚಿಸಲಿರುವ ತಂಡದಲ್ಲಿ ನಾಯಕನ ಸ್ಥಾನಕ್ಕೆ ಶುಬ್‌ಮನ್ ಗಿಲ್ ಅಥವಾ ಟಿಮ್ ಸೈಫರ್ಟ್ ಈ ಇಬ್ಬರು ಆಟಗಾರರನ್ನು ಆರಿಸುವುದು ಉತ್ತಮ. ಹಾಗೂ ಉಪನಾಯಕನ ಸ್ಥಾನಕ್ಕೆ ರಿಷಭ್ ಪಂತ್ ಅಥವಾ ಮ್ಯಾಥ್ಯೂ ವೇಡ್ ಈ ಇಬ್ಬರು ಆಟಗಾರರನ್ನು ಆಯ್ಕೆ ಮಾಡುವುದು ಉತ್ತಮ.

ಆಟದಲ್ಲಿ ಸೋತಾಗ ಅಥವಾ ಗೆದ್ದಾಗ ತಂಡದೊಳಗೆ ಏನೆಲ್ಲಾ ನಡೆಯುತ್ತೆ ಗೊತ್ತಾ? | Oneindia Kannada

ಡ್ರೀಮ್ ಟೀಮ್‌ಗಳು:
ಇತ್ತಂಡಗಳ ನಡುವಿನ ಈ ಪಂದ್ಯಕ್ಕಾಗಿ ನೀವು ರಚಿಸಲಿರುವ ಡ್ರೀಮ್ ಟೀಮ್ ಹೀಗಿರಲಿ

ತಂಡ 1: ಕೀಪರ್ಸ್ - ರಿಷಬ್ ಪಂತ್ (ಉಪ ನಾಯಕ), ಮ್ಯಾಥ್ಯೂ ವೇಡ್

ಬ್ಯಾಟ್ಸ್‌ಮನ್‌ಗಳು - ಪೃಥ್ವಿ ಶಾ, ಡೇವಿಡ್ ಮಿಲ್ಲರ್, ಶುಭಮನ್ ಗಿಲ್ (ನಾಯಕ)

ಆಲ್ ರೌಂಡರ್‌ಗಳು - ಅಕ್ಷರ್ ಪಟೇಲ್, ರಾಹುಲ್ ತೆವಾಟಿಯಾ, ಹಾರ್ದಿಕ್ ಪಾಂಡ್ಯ

ಬೌಲರ್‌ಗಳು - ಮೊಹಮ್ಮದ್ ಶಮಿ, ಕುಲದೀಪ್ ಯಾದವ್, ರಶೀದ್ ಖಾನ್

ತಂಡ 2: ಕೀಪರ್‌ಗಳು - ರಿಷಬ್ ಪಂತ್, ಮ್ಯಾಥ್ಯೂ ವೇಡ್ (ಉಪನಾಯಕ), ಟಿಮ್ ಸೀಫರ್ಟ್ (ನಾಯಕ)

ಬ್ಯಾಟ್ಸ್‌ಮನ್‌ಗಳು - ಪೃಥ್ವಿ ಶಾ, ಡೇವಿಡ್ ಮಿಲ್ಲರ್, ಶುಭಮನ್ ಗಿಲ್

ಆಲ್ ರೌಂಡರ್ಸ್ - ಅಕ್ಷರ್ ಪಟೇಲ್, ಹಾರ್ದಿಕ್ ಪಾಂಡ್ಯ

ಬೌಲರ್‌ಗಳು - ಮೊಹಮ್ಮದ್ ಶಮಿ, ರಶೀದ್-ಖಾನ್, ಶಾರ್ದೂಲ್ ಠಾಕೂರ್

Story first published: Saturday, April 2, 2022, 17:25 [IST]
Other articles published on Apr 2, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+