RCB vs CSK: ಪಂದ್ಯದಲ್ಲಿ ಗೆಲ್ಲಬೇಕೆಂದರೆ ನಿಮ್ಮ ಡ್ರೀಮ್ ಟೀಮ್ ಹೀಗಿರಲಿ; ಈತನಿಗೆ ನಾಯಕತ್ವ ನೀಡಿ

ಪ್ರಸ್ತುತ ನಡೆಯುತ್ತಿರುವ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 49ನೇ ಪಂದ್ಯದಲ್ಲಿ ಇಂದು ( ಮೇ 4 ) ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ. ಇತ್ತಂಡಗಳ ನಡುವಿನ ಈ ಪಂದ್ಯ ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಈ ಪಂದ್ಯ ಎರಡೂ ತಂಡಗಳಿಗೂ ಕೂಡ ಮಹತ್ವದ್ದಾಗಿದೆ.
ಹೌದು, ಟೂರ್ನಿಯ ಆರಂಭದಲ್ಲಿ ಸಾಲುಸಾಲು ಪಂದ್ಯಗಳಲ್ಲಿ ಜಯ ಸಾಧಿಸುವುದರ ಮೂಲಕ ಸುಲಭವಾಗಿ ಪ್ಲೇಆಫ್ ತಲುಪಲಿದೆ ಎಂಬ ಭರವಸೆಯನ್ನು ಹುಟ್ಟುಹಾಕಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಇತ್ತೀಚೆಗೆ ಹ್ಯಾಟ್ರಿಕ್ ಸೋಲನ್ನು ಕಂಡ ಕಾರಣ ಇದೀಗ ಪ್ಲೇಆಫ್ ಪ್ರವೇಶಿಸುವುದರಲ್ಲಿಯೂ ಕೂಡ ಅನುಮಾನ ಮೂಡಿಸಿದೆ. ಅತ್ತ ಟೂರ್ನಿಯ ಆರಂಭದ ಪಂದ್ಯಗಳಲ್ಲಿ ಸಾಲುಸಾಲು ಸೋಲನ್ನು ಕಂಡಿದ್ದ ಚೆನ್ನೈ ಸೂಪರ್ ಕಿಂಗ್ಸ್ ಇದೀಗ ಎಂ ಎಸ್ ಧೋನಿ ನಾಯಕತ್ವವನ್ನು ಮರಳಿ ವಹಿಸಿಕೊಂಡ ನಂತರ ಕಮ್ ಬ್ಯಾಕ್ ಮಾಡಿದ್ದು ತನ್ನ ಪ್ಲೇ ಆಫ್ ಪ್ರವೇಶಿಸುವ ಆಸೆಯನ್ನು ಜೀವಂತವಾಗಿರಿಸಿಕೊಳ್ಳಬೇಕೆಂದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಈ ಪಂದ್ಯದಲ್ಲಿ ಕಡ್ಡಾಯವಾಗಿ ಗೆಲ್ಲಲೇಬೇಕಿದೆ.
ಇನ್ನು ಟೂರ್ನಿಯಲ್ಲಿ ಇಲ್ಲಿಯವರೆಗೂ ಒಟ್ಟು 10 ಪಂದ್ಯಗಳನ್ನಾಡಿ 5 ಪಂದ್ಯಗಳಲ್ಲಿ ಗೆದ್ದು ಉಳಿದ 5 ಪಂದ್ಯಗಳಲ್ಲಿ ಸೋತು 10 ಅಂಕಗಳನ್ನು ಪಡೆದುಕೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಂಕಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದ್ದರೆ, ಇಲ್ಲಿಯವರೆಗೂ 9 ಪಂದ್ಯಗಳನ್ನಾಡಿ 3 ಪಂದ್ಯಗಳಲ್ಲಿ ಜಯ ಸಾಧಿಸಿ 6 ಪಂದ್ಯಗಳಲ್ಲಿ ಸೋತಿರುವ ಚೆನ್ನೈ ಸೂಪರ್ ಕಿಂಗ್ಸ್ ಅಂಕಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದೆ. ಇನ್ನು ಈ ಪಂದ್ಯದಲ್ಲಿ ಗೆಲ್ಲಲಿರುವ ತಂಡ ತನ್ನ ಪ್ಲೇಆಫ್ ಪ್ರವೇಶದ ಆಸೆಯನ್ನು ಜೀವಂತವಾಗಿರಿಸಿಕೊಳ್ಳಲಿದ್ದು, ಸೋತ ತಂಡ ಪ್ಲೇಆಫ್ ರೇಸ್‌ನಿಂದ ಬಹುತೇಕ ಹೊರಗುಳಿಯಲಿದೆ. ಈ ಮಟ್ಟಿಗಿನ ಮಹತ್ವವನ್ನು ಹೊಂದಿರುವ ಈ ಪಂದ್ಯದಲ್ಲಿ ಯಾವ ತಂಡ ಜಯ ಸಾಧಿಸಬಹುದು ಎಂಬ ಲೆಕ್ಕಾಚಾರಗಳಲ್ಲಿ ಕ್ರಿಕೆಟ್ ಅಭಿಮಾನಿಗಳು ತೊಡಗಿಕೊಂಡಿದ್ದರೆ, ಮತ್ತೊಂದಷ್ಟು ಕ್ರಿಕೆಟ್ ಪ್ರೇಮಿಗಳು ಈ ಪಂದ್ಯಕ್ಕಾಗಿ ಡ್ರೀಮ್ ಟೀಮ್ ರಚಿಸುತ್ತಿದ್ದು ಯಾವ ಆಟಗಾರರನ್ನು ಆಯ್ಕೆ ಮಾಡಿಕೊಳ್ಳಬೇಕು ಎನ್ನುವತ್ತ ಚಿತ್ತ ನೆಟ್ಟಿದ್ದಾರೆ. ಇನ್ನು ಈ ಪಂದ್ಯಕ್ಕಾಗಿ ಕ್ರಿಕೆಟ್ ಪ್ರೇಮಿಗಳು ರಚಿಸಲಿರುವ ಡ್ರೀಮ್ ಟೀಮ್‌ನಲ್ಲಿ ಯಾವ ಆಟಗಾರರನ್ನು ಹಾಕಿಕೊಂಡರೆ ಹೆಚ್ಚಿನ ಅಂಕಗಳು ಬರಲಿದೆ ಎಂಬುದರ ಕುರಿತಾದ ಮಾಹಿತಿ ಈ ಕೆಳಕಂಡಂತಿದೆ.

ಟೂರ್ನಿಯಲ್ಲಿ ಹೆಚ್ಚು ಅಂಕ ಪಡೆದಿರುವ ಆಟಗಾರರಿವರು
ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ಪೈಕಿ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಹೆಚ್ಚು ಫ್ಯಾಂಟಸಿ ಅಂಕಗಳನ್ನು ಪಡೆದಿರುವ ಟಾಪ್ 5 ಆಟಗಾರರ ಪಟ್ಟಿ ಈ ಕೆಳಕಂಡಂತಿದೆ.
1. ವನಿಂದು ಹಸರಂಗ - 15 ವಿಕೆಟ್‌ಗಳು - 528 ಅಂಕಗಳು
2. ದಿನೇಶ್ ಕಾರ್ತಿಕ್ - 218 ರನ್‌ಗಳು - 403 ಅಂಕಗಳು
3. ಫಾಫ್ ಡು ಪ್ಲೆಸಿಸ್ - 278 ರನ್‌ಗಳು - 401 ಅಂಕಗಳು
4. ಶಹಬಾಜ್ ಅಹ್ಮದ್ - 197 ರನ್‌ಗಳು - 376 ಅಂಕಗಳು
5. ರಾಬಿನ್ ಉತ್ತಪ್ಪ - 228 ರನ್‌ಗಳು - 375 ಅಂಗಳು

ನಿಮ್ಮ ಡ್ರೀಮ್ ಟೀಮ್ ಹೀಗರಲಿ
ತ್ತಂಡಗಳ ನಡುವಿನ ಈ ಪಂದ್ಯಕ್ಕಾಗಿ ನೀವು ರಚಿಸುತ್ತಿರುವ ಡ್ರೀಮ್ ಟೀಮ್ ಈ ಕೆಳಕಂಡಂತೆ ಇದ್ದರೆ ನಿಮ್ಮ ತಂಡ ಹೆಚ್ಚು ಫ್ಯಾಂಟಸಿ ಅಂಕಗಳನ್ನು ಪಡೆದುಕೊಳ್ಳಲಿದೆ.
ತಂಡ 1: ಎಂಎಸ್ ಧೋನಿ, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್) , ವಿರಾಟ್ ಕೊಹ್ಲಿ, ಡೆವೊನ್ ಕಾನ್ವೇ (ನಾಯಕ), ರಜತ್ ಪಾಟಿದಾರ್, ರುತುರಾಜ್ ಗಾಯಕ್ವಾಡ್, ಗ್ಲೆನ್ ಮ್ಯಾಕ್ಸ್‌ವೆಲ್, ಶಹಬಾಜ್ ಅಹ್ಮದ್, ಹರ್ಷಲ್ ಪಟೇಲ್, ವನಿಂದು ಹಸರಂಗ, ಮುಖೇಶ್ ಚೌಧರಿ
ತಂಡ 2: ದಿನೇಶ್ ಕಾರ್ತಿಕ್, ರಾಬಿನ್ ಉತ್ತಪ್ಪ, ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ಡೆವೊನ್ ಕಾನ್ವೇ, ರುತುರಾಜ್ ಗಾಯಕ್ವಾಡ್, ರವೀಂದ್ರ ಜಡೇಜಾ, ಗ್ಲೆನ್ ಮ್ಯಾಕ್ಸ್‌ವೆಲ್, ಜೋಶ್ ಹ್ಯಾಜಲ್‌ವುಡ್, ವನಿಂದು ಹಸರಂಗ, ಮುಖೇಶ್ ಚೌಧರಿ (ಉಪನಾಯಕ)

ಇವರಿಗೆ ನಾಯಕತ್ವ ನೀಡಿ
ಇನ್ನು ಈ ಪಂದ್ಯಕ್ಕಾಗಿ ಡ್ರೀಮ್ ಟೀಮ್ ರಚಿಸುತ್ತಿರುವ ಹಲವಾರು ಕ್ರಿಕೆಟ್ ಪ್ರೇಮಿಗಳು ಫಾಫ್ ಡು ಪ್ಲೆಸಿಸ್ ಅಥವಾ ಡಿವೋನ್ ಕಾನ್ವೆಗೆ ನಾಯಕ ಸ್ಥಾನವನ್ನು ನೀಡುವುದು ಉತ್ತಮ ಎನ್ನಬಹುದು ಹಾಗೂ ದಿನೇಶ್ ಕಾರ್ತಿಕ್ ಅಥವಾ ಮುಖೇಶ್ ಚೌದರಿಗೆ ಉಪ ನಾಯಕನ ಸ್ಥಾನವನ್ನು ನೀಡಿ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications