For Quick Alerts
ALLOW NOTIFICATIONS  
For Daily Alerts
 

Cost of all 10 IPL teams: ಎಲ್ಲಾ 10 ತಂಡಗಳ ಬೆಲೆಯ ವಿವರ ಇಲ್ಲಿದೆ; ದುಬಾರಿ ತಂಡ ಯಾವುದು?

IPL 2022: Price of all 10 teams in the tournament in kannada

ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಕಳೆದ ಮಾರ್ಚ್ 26ರಿಂದ ಆರಂಭವಾಗಿದ್ದು, ಈ ಬಾರಿಯ ಟೂರ್ನಿಯಲ್ಲಿ ಟ್ರೋಫಿಗಾಗಿ ಒಟ್ಟು ಹತ್ತು ತಂಡಗಳ ನಡುವೆ ಸೆಣಸಾಟ ನಡೆಯುತ್ತಿದೆ. ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ನೂತನ ತಂಡಗಳಾದ ಲಕ್ನೋ ಸೂಪರ್ ಜಯಂಟ್ಸ್ ಮತ್ತು ಗುಜರಾತ್ ಟೈಟನ್ಸ್ ಸೇರ್ಪಡೆಗೊಂಡಿದ್ದು, ಭಾರೀ ಮೊತ್ತಕ್ಕೆ ಈ ಎರಡೂ ತಂಡಗಳು ಹರಾಜಿನಲ್ಲಿ ಬಿಕರಿಯಾಗಿದ್ದವು.

ಇನ್ನು ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಕಣಕ್ಕಿಳಿದಿರುವ ಎಲ್ಲಾ ಹತ್ತು ತಂಡಗಳನ್ನು ಎಷ್ಟು ಮೊತ್ತಕ್ಕೆ ಖರೀದಿಸಿರಬಹುದು ಎಂಬ ಕುತೂಹಲ ಹಲವಾರು ಕ್ರಿಕೆಟ್ ಪ್ರೇಮಿಗಳಲ್ಲಿದ್ದು, ಎಲ್ಲಾ 10 ತಂಡಗಳನ್ನು ಆಯಾ ಫ್ರಾಂಚೈಸಿಗಳು ಎಷ್ಟು ಮೊತ್ತಕ್ಕೆ ಖರೀದಿಸಿವೆ ಎಂಬುದರ ಕುರಿತಾದ ಮಾಹಿತಿ ಈ ಕೆಳಕಂಡಂತಿದೆ.

10. ಸನ್ ರೈಸರ್ಸ್ ಹೈದರಾಬಾದ್

10. ಸನ್ ರೈಸರ್ಸ್ ಹೈದರಾಬಾದ್

ಡೆಕ್ಕನ್ ಚಾರ್ಜರ್ಸ್ ಫ್ರಾಂಚೈಸಿಯ ನಂತರ ಹೈದರಾಬಾದ್ ತಂಡವನ್ನು 2012ರಲ್ಲಿ ಸನ್ ಗ್ರೂಪ್ ಖರೀದಿಸಿತು. ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ ಸನ್ ಗ್ರೂಪ್ ಈ ತಂಡವನ್ನು 425 ಕೋಟಿಗೆ ಖರೀದಿಸಿ ಸನ್ ರೈಸರ್ಸ್ ಹೈದರಾಬಾದ್ ಎಂದು ನಾಮಕರಣ ಮಾಡಿತು.

9. ರಾಜಸ್ಥಾನ್ ರಾಯಲ್ಸ್

9. ರಾಜಸ್ಥಾನ್ ರಾಯಲ್ಸ್

ಐಪಿಎಲ್ ಉದ್ಘಾಟನಾ ಆವೃತ್ತಿಯ ಚಾಂಪಿಯನ್ ಎನಿಸಿಕೊಂಡಿರುವ ರಾಜಸ್ಥಾನ್ ರಾಯಲ್ಸ್ ತಂಡವನ್ನು 508 ಕೋಟಿ ರೂಗೆ ಟೆಸ್ಕೋ ಇಂಟರ್‌ನ್ಯಾಷನಲ್ ಲಿಮಿಟೆಡ್, ಎಮರ್ಜಿಂಗ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಮತ್ತು ಬ್ಲೂ ವಾಟರ್ ಎಸ್ಟೇಟ್ಸ್ ಲಿಮಿಟೆಡ್ ಕಂಪೆನಿಗಳು ಕೂಡು ಪಾಲುದಾರಿಕೆಯಲ್ಲಿ ಖರೀದಿಸಿದ್ದವು ಎಂದು ಇ ಎಸ್ ಪಿ ಎನ್ ವರದಿ ಮಾಡಿದೆ.

8. ಕೋಲ್ಕತ್ತಾ ನೈಟ್ ರೈಡರ್ಸ್

8. ಕೋಲ್ಕತ್ತಾ ನೈಟ್ ರೈಡರ್ಸ್

ಕೋಲ್ಕತ್ತ ನೈಟ್ ರೈಡರ್ಸ್ ತಂಡವನ್ನು ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್‌ ಮತ್ತು ಮೆಹ್ತಾ ಗ್ರೂಪ್ 569 ಕೋಟಿ ರೂಪಾಯಿಗಳಿಗೆ ಖರೀದಿಸಿದ್ದವು. ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್‌ ಶಾರುಖ್ ಖಾನ್ ಒಡೆತನದ ಕಂಪನಿಯಾಗಿದ್ದರೆ, ಮೆಹ್ತಾ ಗ್ರೂಪ್ ಜೂಹಿ ಚಾವ್ಲಾ ಪತಿ ಜಯ್ ಮೆಹ್ತಾ ಒಡೆತನದ್ದಾಗಿದೆ.

7. ಪಂಜಾಬ್ ಕಿಂಗ್ಸ್

7. ಪಂಜಾಬ್ ಕಿಂಗ್ಸ್

ಈ ಹಿಂದೆ ಕಿಂಗ್ಸ್ ಇಲೆವೆನ್ ಪಂಜಾಬ್ ಎಂಬ ಹೆಸರನ್ನು ಹೊಂದಿದ್ದ ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯನ್ನು ರಿಪಬ್ಲಿಕ್ ವರ್ಲ್ಡ್ ಎಂಬ ಕಂಪನಿ 576 ಕೋಟಿ ರೂಪಾಯಿಗಳಿಗೆ ಖರೀದಿಸಿತ್ತು. ಪಂಜಾಬ್ ಕಿಂಗ್ಸ್ ಬಾಲಿವುಡ್ ನಟಿ ಪ್ರೀತಿ ಜಿಂಟಾ ಮತ್ತು ಉದ್ಯಮಿಗಳಾದ ನೆಸ್ ವಾಡಿಯಾ, ಕರಣ್ ಪೌಲ್ ಹಾಗೂ ಮೋಹಿತ್ ಬರ್ಮನ್ ಒಡೆತನದಲ್ಲಿದೆ.

6. ಡೆಲ್ಲಿ ಕ್ಯಾಪಿಟಲ್ಸ್

6. ಡೆಲ್ಲಿ ಕ್ಯಾಪಿಟಲ್ಸ್

2018ರವರೆಗೂ ಡೆಲ್ಲಿ ಡೇರ್ ಡೆವಿಲ್ಸ್ ಎಂಬ ಹೆಸರನ್ನು ಹೊಂದಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 630 ಕೋಟಿ ರೂಪಾಯಿಗಳಿಗೆ ಜಿಎಂಆರ್ ಗ್ರೂಪ್ ಖರೀದಿ ಮಾಡಿತ್ತು. ಇನ್ನು 2018ರಲ್ಲಿ ಜಿಂದಾಲ್ ಸೌತ್ ವೆಸ್ಟ್ ಗ್ರೂಪ್ ಫ್ರಾಂಚೈಸಿ 50% ಒಡೆತನವನ್ನು ಪಡೆದುಕೊಂಡಿತು.

5. ಚೆನ್ನೈ ಸೂಪರ್ ಕಿಂಗ್ಸ್

5. ಚೆನ್ನೈ ಸೂಪರ್ ಕಿಂಗ್ಸ್

ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಯಶಸ್ಸು ಸಾಧಿಸಿರುವ ಫ್ರಾಂಚೈಸಿಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸಿಮೆಂಟ್ ತಯಾರಿಕಾ ಕಂಪೆನಿ ಇಂಡಿಯಾ ಸಿಮೆಂಟ್ಸ್ 689 ಕೋಟಿಗೆ ಖರೀದಿಸಿತ್ತು.

4. ರಾಯಲ್ ಚಾಲೆಂಜರ್ಸ್ ಬೆಂಗಳೂರು

4. ರಾಯಲ್ ಚಾಲೆಂಜರ್ಸ್ ಬೆಂಗಳೂರು

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಹರಾಜಿನಲ್ಲಿ ಉದ್ಯಮಿ ವಿಜಯ್ ಮಲ್ಯ ತಮ್ಮ ಕಂಪೆನಿ ಯುನೈಟೆಡ್ ಸ್ಪಿರಿಟ್ಸ್ ಅಡಿಯಲ್ಲಿ 845 ಕೋಟಿ ರೂಪಾಯಿಗಳಿಗೆ ಖರೀದಿಯನ್ನು ಮಾಡಿದ್ದರು. ಆದರೆ ನಂತರದ ದಿನಗಳಲ್ಲಿ ವಿಮಾನ ಉದ್ಯಮದಲ್ಲಿ ವಿಜಯ್ ಮಲ್ಯ ನಷ್ಟ ಅನುಭವಿಸಿದ ಕಾರಣ ಸದ್ಯ ಡಿಯಾಜಿಯೋ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಹೆಚ್ಚು ಷೇರನ್ನು ಹೊಂದಿದೆ.

3. ಮುಂಬೈ ಇಂಡಿಯನ್ಸ್

3. ಮುಂಬೈ ಇಂಡಿಯನ್ಸ್

ಮುಂಬೈ ಇಂಡಿಯನ್ಸ್ ತಂಡವನ್ನು ರಿಲಯನ್ಸ್ ಕಂಪೆನಿಯ ಮುಖೇಶ್ ಅಂಬಾನಿ 850 ಕೋಟಿಗೆ 2008ರ ಹರಾಜಿನಲ್ಲಿ ಖರೀದಿಸಿದ್ದರು.

2. ಗುಜರಾತ್ ಟೈಟನ್ಸ್

2. ಗುಜರಾತ್ ಟೈಟನ್ಸ್

ಅಹ್ಮದಾಬಾದ್ ಮೂಲದ ಗುಜರಾತ್ ಟೈಟನ್ಸ್ ಫ್ರಾಂಚೈಸಿಯನ್ನು ಸಿವಿಸಿ ಕ್ಯಾಪಿಟಲ್ ಪಾರ್ಟನರ್ಸ್ ಕಂಪೆನಿ 5600 ಕೋಟಿ ರೂಪಾಯಿಗಳಿಗೆ ಖರೀದಿಸಿದೆ.

RR ಮುಂದೆ RCB ಸೋಲ್ತು ಅಂದುಕೊಳ್ಳುವಷ್ಟರಲ್ಲೇ ಅಬ್ಬರಿಸಿದ ದಿನೇಶ್ ಕಾರ್ತಿಕ್ | Dinesh Karthik| Oneindia Kannada
1. ಲಕ್ನೋ ಸೂಪರ್ ಜೈಂಟ್ಸ್

1. ಲಕ್ನೋ ಸೂಪರ್ ಜೈಂಟ್ಸ್

2021ರ ಹರಾಜಿನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿಯನ್ನು ಸಂಜೀವ್ ಗೋಯೆಂಕಾ ಮಾಲೀಕತ್ವದ ಆರ್ ಪಿ ಎಸ್ ಜಿ ಗ್ರೂಪ್ 7090 ಕೋಟಿಗೆ ಖರೀದಿಸಿತು. ಈ ಹಿಂದೆ ಇದೇ ಗ್ರೂಪ್ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ಫ್ರಾಂಚೈಸಿಯನ್ನು ಕೂಡ ಖರೀದಿಸಿತ್ತು.

ಗುಜರಾತ್ ಟೈಟನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಇತ್ತೀಚಿನ ದಿನಗಳಲ್ಲಿ ಬಿಕರಿಯಾದ ಕಾರಣ ದೊಡ್ಡ ಮೊತ್ತಕ್ಕೆ ಹರಾಜಾಗಿದ್ದು, ಉಳಿದ ತಂಡಗಳು ಐಪಿಎಲ್ ಉದ್ಘಾಟನೆಯಾದಾಗಲೇ ಹರಾಜಾಗಿರುವ ಕಾರಣ ಅಂದಿನ ದಿನಕ್ಕೆ ತಕ್ಕ ಬೆಲೆಗಳಿಗೆ ಬಿಕರಿಯಾಗಿದ್ದವು ಹಾಗೂ ಆ ತಂಡಗಳ ಬಿಕರಿಯ ಮೊತ್ತ ಅಂದಿನ ಕಾಲಕ್ಕೆ ಭಾರೀ ದೊಡ್ಡ ಮೊತ್ತವಾಗಿತ್ತು.

Story first published: Wednesday, April 6, 2022, 9:45 [IST]
Other articles published on Apr 6, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+