IPL 2022: ಜ್ವರದಿಂದ ಬಳಲುತ್ತಿರುವ ಪೃಥ್ವಿ ಶಾ ಟೂರ್ನಿಯಿಂದಲೇ ಹೊರಕ್ಕೆ?

ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಹಾಯಕ ಕೋಚ್ ಶೇನ್ ವ್ಯಾಟ್ಸನ್ ತಮ್ಮ ತಂಡದ ಆರಂಭಿಕ ಆಟಗಾರ ಪೃಥ್ವಿ ಶಾ ಅನಾರೋಗ್ಯದ ಕುರಿತು ಮಾತನಾಡಿದ್ದಾರೆ. ತೀವ್ರ ಜ್ವರದಿಂದ ಬಳಲುತ್ತಿರುವ ಪೃಥ್ವಿ ಶಾ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು ಹಲವು ದಿನಗಳು ಕಳೆದರೂ ಸಹ ಚೇತರಿಸಿಕೊಳ್ಳದೇ ಇರುವುದರಿಂದ ಅವರು ಮತ್ತೆ ತಂಡಕ್ಕೆ ಯಾವಾಗ ಸೇರಲಿದ್ದಾರೆ ಎಂಬುದರ ಕುರಿತು ಗೊಂದಲಗಳು ಹಾಗೂ ಅನುಮಾನಗಳು ಉಂಟಾಗಿವೆ.
ಇನ್ನು ಮೇ 1ರಂದು ನಡೆದಿದ್ದ ಲಕ್ನೋ ಸೂಪರ್ ಜಯಂಟ್ಸ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿದಿದ್ದ ಪೃಥ್ವಿ ಶಾ ನಂತರ ನಡೆದ 3 ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಇನ್ನು ಬುಧವಾರ ನಡೆದ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯ ಮುಕ್ತಾಯವಾದ ಬಳಿಕ ಮಾತನಾಡಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್ ಪೃಥ್ವಿ ಶಾ ಬಹುಶಃ ವಿಷಮಶೀತ ಜ್ವರದಿಂದ ಬಳಲುತ್ತಿರಬಹುದು ಎಂದು ಹೇಳಿದ್ದರು.
ಇನ್ನು ಇದೀಗ ಮಾತನಾಡಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಹಾಯಕ ಕೋಚ್ ಯುವ ಆಟಗಾರನಾದ ಪೃಥ್ವಿ ಶಾ ತಂಡದಲ್ಲಿ ಇಲ್ಲದೇ ಇರುವುದು ತಂಡಕ್ಕೆ ದೊಡ್ಡ ನಷ್ಟವೆಂದಿದ್ದಾರೆ. ಹಾಗೂ ಕಳೆದ ಕೆಲ ಪಂದ್ಯಗಳಿಗೆ ತೀವ್ರ ಅನಾರೋಗ್ಯದ ಕಾರಣದಿಂದ ಅಲಭ್ಯರಾಗಿರುವ ಪೃಥ್ವಿ ಶಾ ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದಿರುವ ಅವರು ತಂಡದ ಲೀಗ್ ಹಂತದ ಕೊನೆಯ ಎರಡು ಪಂದ್ಯಗಳಿಗೆ ಪೃಥ್ವಿ ಶಾ ಲಭ್ಯರಾಗುವುದರ ಕುರಿತು ಸಂದೇಹ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಪೃಥ್ವಿ ಶಾ ಟೂರ್ನಿಯಿಂದ ಹೊರಬೀಳುವ ಸಾಧ್ಯತೆಗಳು ಹೆಚ್ಚಿವೆ ಎನ್ನಬಹುದು.
ಡೆಲ್ಲಿ ಕ್ಯಾಪಿಟಲ್ಸ್ ತಂಡ:
ರಿಷಭ್ ಪಂತ್, ಅಕ್ಷರ್ ಪಟೇಲ್, ಪೃಥ್ವಿ ಶಾ, ಅನ್ರಿಚ್ ನಾರ್ಟ್ಜೆ, ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಶಾರ್ದೂಲ್ ಠಾಕೂರ್, ಮುಸ್ತಫಿಜುರ್ ರೆಹಮಾನ್, ಕುಲದೀಪ್ ಯಾದವ್, ಅಶ್ವಿನ್ ಹೆಬ್ಬಾರ್, ಸರ್ಫರಾಜ್ ಖಾನ್, ಕೆಎಸ್ ಭರತ್, ಕಮಲೇಶ್ ನಾಗರಕೋಟಿ, ಮನದೀಪ್ ಸಿಂಗ್, ಖಲೀಲ್ ಅಹ್ಮದ್, ಚೇತನ್ ಸದ್ಕಾವ್, ಚೇತನ್ ಸದ್ಕಾವ್ , ರಿಪಾಲ್ ಪಟೇಲ್, ಯಶ್ ಧುಲ್, ರೋವ್‌ಮನ್ ಪೊವೆಲ್, ಪ್ರವೀಣ್ ದುಬೆ, ಲುಂಗಿ ಎನ್‌ಗಿಡಿ, ಟಿಮ್ ಸೀಫರ್ಟ್, ವಿಕಿ ಓಸ್ಟ್ವಾಲ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications