ಐಪಿಎಲ್: ಈತನೇ ಪಂಜಾಬ್ ಕಿಂಗ್ಸ್ ನೂತನ ನಾಯಕ; ಈ ದಿನದಂದು ಅಧಿಕೃತವಾಗಿ ಘೋಷಿಸಲಿದೆ ಫ್ರಾಂಚೈಸಿ

ವಿಶ್ವ ಕ್ರಿಕೆಟ್‌ನ ಅತಿ ದೊಡ್ಡ ಹಾಗೂ ಶ್ರೀಮಂತ ಫ್ರಾಂಚೈಸಿ ಕ್ರಿಕೆಟ್ ಲೀಗ್ ಎನಿಸಿಕೊಂಡಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಹದಿನೈದನೇ ಆವೃತ್ತಿ ಮಾರ್ಚ್ 26ರಂದು ಆರಂಭಗೊಳ್ಳಲಿದೆ. ಇನ್ನು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯನ್ನು ಸಂಪೂರ್ಣವಾಗಿ ಭಾರತ ನೆಲದಲ್ಲಿಯೇ ನಡೆಸಲು ಬಿಸಿಸಿಐ ಚಿಂತನೆ ನಡೆಸಿದ್ದು, ಕಳೆದ ಆವೃತ್ತಿಗಳ ರೀತಿ ಬೇರೆ ದೇಶಗಳಿಗೆ ಐಪಿಎಲ್ ಟೂರ್ನಿಯನ್ನು ಈ ಬಾರಿ ಸ್ಥಳಾಂತರಿಸಬಾರದು ಎನ್ನುವತ್ತ ಚಿತ್ತ ನೆಟ್ಟಿದೆ. ಹೀಗಾಗಿ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯನ್ನು ಭಾರತದಲ್ಲಿ ನಡೆಸಲು ಪಣತೊಟ್ಟು ನಿಂತಿರುವ ಬಿಸಿಸಿಐ ನಿಗಾ ವಹಿಸಿ ಯೋಜನೆಗಳನ್ನು ಹಾಕುತ್ತಿದೆ.
ಹೀಗೆ ಒಂದೆಡೆ ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಆರಂಭಕ್ಕೆ ದಿನಗಣನೆ ಆರಂಭವಾಗಿದ್ದರೆ, ಮತ್ತೊಂದೆಡೆ ವಿವಿಧ ಫ್ರಾಂಚೈಸಿಗಳ ಆಟಗಾರರು ಇನ್ನೇನು ಕೆಲವೇ ದಿನಗಳಲ್ಲಿ ತಾವು ಪ್ರತಿನಿಧಿಸುವ ನಗರಗಳ ಕ್ರೀಡಾಂಗಣಗಳನ್ನು ತಲುಪಲಿದ್ದು ಅಭ್ಯಾಸವನ್ನು ಆರಂಭಿಸಲಿದ್ದಾರೆ. ಅತ್ತ ಇಲ್ಲಿಯವರೆಗೂ ಕೂಡ ತಮ್ಮ ನಾಯಕ ಯಾರೆಂಬುದನ್ನು ಪ್ರಕಟಿಸದೇ ಇರುವ ಫ್ರಾಂಚೈಸಿಗಳು ತಮ್ಮ ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಲು ಕಾರಣರಾಗಿದ್ದಾರೆ. ಅದರಲ್ಲಿಯೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ತಂಡಗಳ ಮುಂದಿನ ನಾಯಕ ಯಾರಾಗಬಹುದು ಎಂಬ ಕುತೂಹಲ ಕ್ರಿಕೆಟ್ ವೀಕ್ಷಕರಲ್ಲಿ ಹೆಚ್ಚಾಗಿ ಇದ್ದು, ಸಾಮಾಜಿಕ ಜಾಲತಾಣದಲ್ಲಿ ಈ ಕುರಿತಾಗಿ ಸಾಕಷ್ಟು ದೊಡ್ಡ ಮಟ್ಟದ ಚರ್ಚೆಗಳು ಕೂಡ ನಡೆಯುತ್ತಿವೆ.
ಇನ್ನು ಪಂಜಾಬ್ ಕಿಂಗ್ಸ್ ತಂಡದ ಮುಂದಿನ ನಾಯಕ ಯಾರಾಗಬಹುದು ಎಂಬ ವಿಷಯ ಐಪಿಎಲ್ ವೀಕ್ಷಕರಲ್ಲಿ ಸಾಕಷ್ಟು ಗೊಂದಲವನ್ನು ಮೂಡಿಸಿದ್ದು, ಮೊದಲಿಗೆ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಆಟಗಾರರ ಮೆಗಾ ಹರಾಜು ಪ್ರಕ್ರಿಯೆಯಲ್ಲಿ 8.25 ಕೋಟಿಗೆ ಪಂಜಾಬ್ ಕಿಂಗ್ಸ್ ಪಾಲಾಗಿದ್ದ ಶಿಖರ್ ಧವನ್ ಅವರಿಗೆ ಪಂಜಾಬ್ ಕಿಂಗ್ಸ್ ತಂಡದ ನಾಯಕತ್ವವನ್ನು ನೀಡಲಾಗುವುದು ಎನ್ನಲಾಗುತ್ತಿತ್ತು, ನಂತರ ಶಿಖರ್ ಧವನ್ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡುವ ನಿರ್ಧಾರದಿಂದ ಹಿಂದೆ ಸರಿದ ಪಂಜಾಬ್ ಕಿಂಗ್ಸ್ ರಿಟೆನ್ಷನ್ ಪ್ರಕ್ರಿಯೆಯಲ್ಲಿ ತಾನು ರಿಟೈನ್ ಮಾಡಿಕೊಂಡಿದ್ದ ಮಯಾಂಕ್ ಅಗರ್ವಾಲ್ ಹೆಗಲಿಗೆ ತಂಡದ ನಾಯಕತ್ವವನ್ನು ಹಾಕಲಿದೆ ಎಂಬ ಸುದ್ದಿ ಕೂಡ ಹೆಚ್ಚಾಗಿ ಹರಿದಾಡತೊಡಗಿತು. ಹೀಗೆ ಈ 2 ಸುದ್ದಿಗಳು ಪಂಜಾಬ್ ಕಿಂಗ್ಸ್ ತಂಡದ ಅಭಿಮಾನಿಗಳು ಗೊಂದಲಕ್ಕೀಡುವಾಗುವಂತೆ ಮಾಡಿದ್ದು, ಸದ್ಯ ಪಂಜಾಬ್ ಕಿಂಗ್ಸ್ ತಂಡದ ಹಿರಿಯ ಅಧಿಕಾರಿಯೋರ್ವರು ನೀಡಿರುವ ಮಾಹಿತಿಯ ಪ್ರಕಾರ ನಾಯಕನ ಆಯ್ಕೆಯನ್ನು ಪಂಜಾಬ್ ಕಿಂಗ್ಸ್ ತಂಡ ಈ ಕೆಳಕಂಡಂತೆ ಮಾಡಲಿದೆ.

ಶಿಖರ್ ಧವನ್ ಅಲ್ಲ ಮಯಾಂಕ್ ಅಗರ್ವಾಲ್ ನಾಯಕ
ಶಿಖರ್ ಧವನ್ ಅವರನ್ನು ಪಂಜಾಬ್ ಕಿಂಗ್ಸ್ ತಂಡಕ್ಕೆ ಖರೀದಿಸಿದ ನಂತರ ಪಂಜಾಬ್ ಕಿಂಗ್ಸ್ ತಂಡದ ಮುಂದಿನ ನಾಯಕ ಯಾರು ಎಂಬ ಚರ್ಚೆಗಳು ಆರಂಭವಾದವು. ಹಾಗೂ ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಕೂಡ ಶಿಖರ್ ಧವನ್ ಹೆಗಲಿಗೆ ನಾಯಕತ್ವದ ಜವಾಬ್ದಾರಿಯನ್ನು ಹಾಕುವ ಚಿಂತನೆಯಲ್ಲಿದೆ ಎನ್ನಲಾಗಿತ್ತು. ಆದರೆ ಈ ಗೊಂದಲಕ್ಕೆ ತೆರೆ ಎಳೆದಿರುವ ಪಂಜಾಬ್ ಕಿಂಗ್ಸ್ ತಂಡದ ಹಿರಿಯ ಅಧಿಕಾರಿ ಮಯಾಂಕ್ ಅಗರ್ವಾಲ್ ಅವರನ್ನೇ ನಾಯಕನನ್ನಾಗಿ ಪಂಜಾಬ್ ಕಿಂಗ್ಸ್ ಪ್ರಾಂಚೈಸಿ ಆಯ್ಕೆ ಮಾಡಲಿದೆ ಎಂದಿದ್ದಾರೆ.

ನಾಯಕನ ಘೋಷಣೆ ಈ ದಿನದಂದು
ಇನ್ನು ಮಯಾಂಕ್ ಅಗರ್ವಾಲ್ ಅವರನ್ನು ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ನಾಯಕನನ್ನಾಗಿ ಅಧಿಕೃತವಾಗಿ ಮಾರ್ಚ್ 5ರಂದು ಘೋಷಿಸಲಿದೆ ಎಂದು ಇದೇ ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪಂಜಾಬ್ ಕಿಂಗ್ಸ್ ತಂಡ
ಮಯಾಂಕ್ ಅಗರ್ವಾಲ್, ಅರ್ಶ್ದೀಪ್ ಸಿಂಗ್, ಶಿಖರ್ ಧವನ್, ಕಗಿಸೊ ರಬಾಡ, ಜಾನಿ ಬೈರ್‌ಸ್ಟೋವ್, ರಾಹುಲ್ ಚಾಹರ್, ಶಾರುಖ್ ಖಾನ್, ಹರ್‌ಪ್ರೀತ್ ಬ್ರಾರ್, ಪ್ರಭಾಸಿಮ್ರಾನ್ ಸಿಂಗ್, ಜಿತೇಶ್ ಶರ್ಮಾ, ಇಶಾನ್ ಪೊರೆಲ್, ಲಿಯಾಮ್ ಲಿವಿಂಗ್‌ಸ್ಟೋನ್, ಓಡಿಯನ್ ಸ್ಮಿತ್, ಸಂದೀಪ್ ಶರ್ಮಾ, ರಾಜ್ ಬಾವಾ, ಪ್ರೀರಾಕ್ ಮಾನ್ಕಾ , ವೈಭವ್ ಅರೋರಾ, ರಿಟಿಕ್ ಚಟರ್ಜಿ, ಬಲ್ತೇಜ್ ಧಂಡಾ, ಅನ್ಶ್ ಪಟೇಲ್, ನಾಥನ್ ಎಲ್ಲಿಸ್, ಅಥರ್ವ ತೈದೆ, ಭಾನುಕಾ ರಾಜಪಕ್ಸೆ, ಬೆನ್ನಿ ಹೋವೆಲ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications