Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

SRH vs PBKS: ಪಂಜಾಬ್ ಕಿಂಗ್ಸ್‌ಗೆ 158 ರನ್‌ಗಳ ಗುರಿ ನಿಗದಿಪಡಿಸಿದ ಸನ್‌ರೈಸರ್ಸ್ ಹೈದರಾಬಾದ್‌

IPL 2022: Punjab Kings need 158 runs to win against Sunrisers Hyderabad

ಇಂಡಿಯನ್ ಪ್ರೀಮಿಯರ್ ಲೀಗ್‌ 15ನೇ ಆವೃತ್ತಿಯ ಲೀಗ್ ಹಂತದ ಅಂತಿಮ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪಂಜಾಬ್ ಕಿಂಗ್ಸ್ ತಂಡಕ್ಕೆ 15 ರನ್‌ಗಳ ಗುರಿಯನ್ನು ನಿಗದಿಪಡಿಸಿದೆ. ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ಮಾಡಿದ ಸನ್‌ರೈಸರ್ಸ್ ಹೈದರಾಬಾದ್ ತಂಡ ನಿಧಾನಗತಿಯ ಬ್ಯಾಟಿಂಗ್‌ನ ಮೊರೆ ಹೋಯಿತು. ಆದರೆ ಅಂತಿಮ ಹಂತದಲ್ಲಿ ವೇಗವನ್ನು ಹೆಚ್ಚಿಸಿಕೊಂಡ ಸನ್‌ರೈಸರ್ಸ್ ಹೈದರಾಬಾದ್ ತಂಡ 158 ರನ್‌ಗಳ ಗುರಿ ನೀಡಲು ಯಶಸ್ವಿಯಾಯಿತು.

ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಸನ್‌ರೈಸರ್ಸ್ ಹೈದರಾಬಾದ್ ತಂಡ ಆರಂಭಿಕ ವಿಕೆಟ್‌ಅನ್ನು ಶೀಘ್ರವಾಗಿಯೇ ಕಳೆದುಕೊಂಡಿತು. ಪ್ರಿಯಂ ಗರ್ಗ್ 4 ರನ್‌ಗಳಿಸಿ ವಿಕೆಟ್ ಕಳೆದುಕೊಂಡರು. ಆದರೆ ಎರಡನೇ ವಿಕೆಟ್‌ಗೆ ಅಭಿಶೇಕ್ ಶರ್ಮಾ ಹಾಗೂ ತ್ರಿಪಾಠಿ ಉತ್ತಮ ಜೊತೆಯಾಟವೊಂದನ್ನು ನೀಡಿದರು. 20 ರನ್‌ಗಳ ಕೊಡುಗೆ ನೀಡಿದ ರಾಹುಲ್ ತ್ರಿಪಾಠಿ ಔಟಾದ ಬಳಿಕ 43 ರನ್‌ಗಳಿಸಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದ ಅಭಿಶೇಕ್ ಶರ್ಂಆ ವಿಕೆಟ್ ಕಳೆದುಕೊಂಡರು. ಪೂರನ್ ಐದು ರನ್‌ಗಳಿಗೆ ಔಟಾಗಿ ನಿರಾಸೆ ಮೂಡಿಸಿದರೆ ನಂತರ ಮಾರ್ಕ್ರಮ್ ಕೂಡ 21 ರನ್‌ಗಳ ಕೊಡುಗೆ ನಿಡಿ ನಿರ್ಗಮಿಸಿದರು.

ಬಳಿಕ ವಾಶಿಂಗ್ಟನ್ ಸುಂದರ್ ಹಾಗೂ ರೊಮಾರಿಯೋ ಶೆಫರ್ಡ್ ಅವರಿಂದ ಮಹತ್ವದ ಜೊತೆಯಾಟವೊಂದು ಎಸ್‌ಆರ್‌ಹೆಚ್ ತಂಡಕ್ಕೆ ಲಭ್ಯವಾಯಿತು. ಈ ಜೊತೆಯಾಟದ ಕಾರಣದಿಂದಾಗಿ ಸನ್‌ರೈಸರ್ಸ್ ಹೈದರಾಬಾದ್ 8 ವಿಕೆಟ್ ಕಳೆದುಕೊಂಡು 157 ರನ್‌ಗಳನ್ನು ಗಳಿಸಲು ಯಶಸ್ವಿಯಾಯಿತು. ವಾಶಿಂಗ್ಟನ್ ಸುಂದರ್ 25 ರನ್‌ಗಳಿಸಿ ಔಟಾದರೆ ಶೆಫರ್ಡ್ 15 ಎಸೆತಗಳಲ್ಲಿ 26 ರನ್‌ಗಳ ಕೊಡುಗೆ ನೀಡಿದರು.

ಸನ್‌ರೈಸರ್ಸ್ ಹೈದರಾಬಾದ್: ಅಭಿಷೇಕ್ ಶರ್ಮಾ, ಪ್ರಿಯಾಂ ಗಾರ್ಗ್, ರಾಹುಲ್ ತ್ರಿಪಾಠಿ, ಐಡೆನ್ ಮಾರ್ಕ್ರಾಮ್, ನಿಕೋಲಸ್ ಪೂರನ್ (ವಿಕೆಟ್ ಕೀಪರ್), ರೊಮಾರಿಯೋ ಶೆಫರ್ಡ್, ವಾಷಿಂಗ್ಟನ್ ಸುಂದರ್, ಜಗದೀಶ ಸುಚಿತ್, ಭುವನೇಶ್ವರ್ ಕುಮಾರ್ (ನಾಯಕ), ಫಜಲ್ಹಕ್ ಫಾರೂಕಿ, ಉಮ್ರಾನ್ ಮಲಿಕ್

ಬೆಂಚ್: ಟಿ ನಟರಾಜನ್, ಗ್ಲೆನ್ ಫಿಲಿಪ್ಸ್, ಸೀನ್ ಅಬಾಟ್, ರವಿಕುಮಾರ್ ಸಮರ್ಥ್, ಶ್ರೇಯಸ್ ಗೋಪಾಲ್, ಶಶಾಂಕ್ ಸಿಂಗ್, ವಿಷ್ಣು ವಿನೋದ್, ಕಾರ್ತಿಕ್ ತ್ಯಾಗಿ, ಮಾರ್ಕೊ ಜಾನ್ಸೆನ್, ಅಬ್ದುಲ್ ಸಮದ್, ಸುಶಾಂತ್ ಮಿಶ್ರಾ

Wankhede Stadiumನಲ್ಲಿ RCB ಅಭಿಮಾನಿಗಳು ಮಾಡಿದ ವಿಶೇಷ ಕೆಲಸ | Oneindia Kannada

ಪಂಜಾಬ್ ಕಿಂಗ್ಸ್ ಆಡುವ ಬಳಗ: ಜಾನಿ ಬೈರ್‌ಸ್ಟೋವ್, ಶಿಖರ್ ಧವನ್, ಲಿಯಾಮ್ ಲಿವಿಂಗ್‌ಸ್ಟೋನ್, ಮಯಾಂಕ್ ಅಗರ್ವಾಲ್ (ನಾಯಕ), ಶಾರುಖ್ ಖಾನ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಪ್ರೇರಕ್ ಮಂಕಡ್, ಹರ್‌ಪ್ರೀತ್ ಬ್ರಾರ್, ನಾಥನ್ ಎಲ್ಲಿಸ್, ಕಗಿಸೊ ರಬಾಡ, ಅರ್ಶ್‌ದೀಪ್ ಸಿಂಗ್
ಬೆಂಚ್: ಭಾನುಕಾ ರಾಜಪಕ್ಸೆ, ರಿಷಿ ಧವನ್, ರಾಹುಲ್ ಚಾಹರ್, ಬೆನ್ನಿ ಹೋವೆಲ್, ಸಂದೀಪ್ ಶರ್ಮಾ, ಬಲ್ತೇಜ್ ಸಿಂಗ್, ರಿಟಿಕ್ ಚಟರ್ಜಿ, ಓಡಿಯನ್ ಸ್ಮಿತ್, ಇಶಾನ್ ಪೊರೆಲ್, ಅಥರ್ವ ಟೈಡೆ, ಪ್ರಭಾಸಿಮ್ರಾನ್ ಸಿಂಗ್, ವೈಭವ್ ಅರೋರಾ, ಅನ್ಶ್ ಪಟೇಲ್, ರಾಜ್ ಬಾವಾ

Story first published: Sunday, May 22, 2022, 21:49 [IST]
Other articles published on May 22, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+