For Quick Alerts
ALLOW NOTIFICATIONS  
For Daily Alerts
 

IPL 2022: RCB vs PBKS: ಪ್ರಮುಖ ಮೈಲಿಗಲ್ಲುಗಳ ಮೇಲೆ ಕಣ್ಣಿಟ್ಟ ಕೊಹ್ಲಿ, ಧವನ್, ಮಯಾಂಕ್!

IPL 2022: Punjab Kings vs Royal Challengers Bangalore players records and approaching milestones

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಇಂದು(ಮೇ, 13) ನಡೆಯಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯ ಸಾಕಷ್ಟು ಕುತೀಹಲ ಮೂಡಿಸಿದೆ. ಪ್ಲೇಆಫ್ ಹಂತಕ್ಕೇರುವ ಅವಕಾಶವನ್ನು ಹೆಚ್ಚಿಸಿಕೊಳ್ಳಲು ಎರಡೂ ತಂಡಗಳು ಈ ಪಂದ್ಯದಲ್ಲಿ ಜಿದ್ದಾಜಿದ್ದಿನ ಪೈಪೋಟಿಗೆ ಇಳಿಯುವುದರಲ್ಲಿ ಅನುಮಾನವಿಲ್ಲ. ಟೂಎರಡೂ ತಮಡಗಳಲ್ಲಿಯೂ ಸಾಕಷ್ಟು ಅದ್ಭುತ ಆಟಗಾರರು ಇರುವುದು ಪಂದ್ಯದ ತೀವ್ರತೆಯನ್ನು ಹೆಚ್ಚಿಸಲಿದೆ.

ಸದ್ಯ ಫಾಫ್ ಡು ಪ್ಲೆಸಿಸ್ ನೇತೃತ್ವದ ಆರ್‌ಸಿಬಿ ತಂಡ ಅಂಕಪಟ್ಟಿಯಲ್ಲಿ 12 ಪಂದ್ಯಗಳಿಂದ 14 ಅಂಕಗಳೊಂದಿಗೆ ಉತ್ತಮ ಸ್ಥಿತಿಯಲ್ಲಿದೆ. ಆದರೆ ಉಳಿದ ಎರಡು ಪಂದ್ಯಗಳಲ್ಲಿಯೂ ಗೆಲುವು ಸಾಧಿಸಿದರೆ ಮಾತ್ರವೇ ಆರ್‌ಸಿಬಿ ನಿಶ್ಚಿಂತೆಯಿಂದ ಪ್ಲೇಆಫ್‌ಗೆ ಏರಲಿದೆ. ಆದರೆ ಪಂಜಾಬ್ ಕಿಂಗ್ಸ್ ಸ್ಥಿತಿ ಇದಕ್ಕಿಂತ ಭಿನ್ನವಾಗಿದೆ. ಬಾಕಿಯಿರುವ ಮೂರು ಪಂದ್ಯಗಳ ಗೆಲುವಿನ ಜೊತೆಗೆ ಇತರ ತಂಡಗಳ ಸೋಲು ಗೆಲುವಿನ ಲೆಕ್ಕಾಚಾರ ಕೂಡ ಮಯಾಂಕ್ ಪಡೆಗೆ ಅನಿವಾರ್ಯವಾಗಿದೆ.

ಇನ್ನು ಪಂಜಾಬ್ ಕಿಂಗ್ಸ್ ಹಾಗೂ ಆರ್‌ಸಿಬಿ ಈವರೆಗೆ ಒಟ್ಟು 29 ಬಾರಿ ಮುಖಾಮುಖಿಯಾಗಿದೆ. ಇದರಲ್ಲಿ 16 ಗೆಲುವು ಸಾಧಿಸಿರುವ ಪಂಜಾಬ್ ಕಿಂಗ್ಸ್ ಮುನ್ನಡೆಯಲ್ಲಿದೆ. ಆರ್‌ಸಿಬಿ 13 ಪಂದ್ಯಗಳನ್ನು ಮಾತ್ರ ಗೆದ್ದುಕೊಂಡಿದೆ. ಈ ಆವೃತ್ತಿಯಲ್ಲಿ ನಡೆದ ಮೊದಲ ಮುಖಾಮುಖಿಯಲ್ಲಿಯೂ ಪಂಜಾಬ್ ತಂಡ 5 ವಿಕೆಟ್‌ಗಳ ಅಂತರದಿಂದ ಗೆದ್ದಿಕೊಂಡಿತ್ತು.

ಇನ್ನು ಇಂದು ನಡೆಯಲಿರುವ ಪಂದ್ಯದಲ್ಲಿ ಆರ್‌ಸಿಬಿ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳ ಕೆಲ ಆಟಗಾರರು ಪ್ರಮುಖ ಮೈಲಿಗಲ್ಲುಗಳ ಮೇಲೆ ಕಣ್ಣಿಟ್ಟಿದ್ದಾರೆ. ಅವುಗಳ ಬಗ್ಗೆ ಮಾಹಿತಿ ಇಲ್ಲಿದೆ.

* ಆರ್‌ಸಿಬಿ ತಂಡದ ಮಾಜಿ ನಾಯಕ ಅನುಭವಿ ಬ್ಯಾಟರ್ ವಿರಾಟ್ ಕೊಹ್ಲಿ ಅವರು ಆರ್‌ಸಿಬಿ ತಂಡದ ಪರವಾಗಿ ದೊಡ್ಡ ಮೈಲಿಗಲ್ಲು ನೆಡಲು ಸಜ್ಜಾಗಿದ್ದಾರೆ. ಆರ್‌ಸಿಬಿ ಪರವಾಗಿ ಟಿ20 ಕ್ರಿಕೆಟ್‌ನಲ್ಲಿ 7000 ರನ್‌ಗಳಿಸಿದ ಆಟಗಾರ ಎನಿಸಲು ಕೊಹ್ಲಿಗೆ 77 ರನ್‌ಗಳ ಅಗತ್ಯವಿದೆ. ಐಪಿಎಲ್‌ನಲ್ಲಿ ಕೊಹ್ಲಿ ಆರ್‌ಸಿಬಿ ಪರವಾಗಿ ಈವರೆಗೆ 6499 ರನ್‌ಗಳನ್ನು ಗಳಿಸಿದ್ದರೆ ಪ್ರಸ್ತುತ ಸ್ಥಗಿತವಾಗಿರುವ ಚಾಂಪಿಯನ್ಸ್ ಲೀಗ್ ಕ್ರಿಕೆಟ್‌ನಲ್ಲಿ ಆರ್‌ಸಿಬಿ ಪರವಾಗಿ 424 ರನ್‌ಗಳಿಸಿದ್ದಾರೆ ವಿರಾಟ್ ಕೊಹ್ಲಿ.

* ಆರ್‌ಸಿಬಿ ವೇಗಿ ಮೊಹಮ್ಮದ್ ಸಿರಾಜ್ ರಾಯಲ್ ಚಾಲೆಂಜರ್ಸ್ ಪರ 50 ವಿಕೆಟ್‌ಗಳನ್ನು ಪೂರೈಸಲು ಕೇವಲ 2 ವಿಕೆಟ್‌ಗಳ ಅಗತ್ಯವಿದೆ.

* ಆರ್‌ಸಿಬಿ ವೇಗಿ ಹರ್ಷಲ್ ಪಟೇಲ್ ಐಪಿಎಲ್‌ನಲ್ಲಿ ಈವರೆಗೆ 92 ವಿಕೆಟ್‌ಗಳನ್ನು ಪಡೆದುಕೊಂಡಿದ್ದಾರೆ. ಇಮದಿನ ಪಂದ್ಯದಲ್ಲಿ ಅವರು 1 ವಿಕೆಟ್ ಪಡೆದರೆ ಐಪಿಎಲ್‌ನಲ್ಲಿ ಮೋಹಿತ್ ಶರ್ಮಾ ಮತ್ತು ಶೇನ್ ವ್ಯಾಟ್ಸನ್ ಅವರನ್ನು ಹಿಂದಿಕ್ಕಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ 21ನೇ ಸ್ಥಾನಕ್ಕೆ ಏರಬಹುದು.

* ಆರ್‌ಸಿಬಿಯ ಆಸ್ಟ್ರೇಲಿಯನ್ ವೇಗಿ ಜೋಶ್ ಹ್ಯಾಜಲ್‌ವುಡ್ ಒಟ್ಟಾರೆ ಟಿ20 ಮಾದರಿಯಲ್ಲಿ 100 ವಿಕೆಟ್‌ಗಳನ್ನು ಪೂರೈಸಲು 1 ವಿಕೆಟ್ ಅಗತ್ಯವಿದೆ.

* ಪಂಜಾಬ್ ಕಿಂಗ್ಸ್ ನಾಯಕ ಮಯಾಂಕ್ ಅಗರ್ವಾಲ್ ಪಂಜಾಬ್ ಫ್ರಾಂಚೈಸಿಪರವಾಗಿ 1500 ರನ್ ಪೂರೈಸಲು 9 ರನ್‌ ಗಳಿಸಬೇಕಿದೆ.

* ಪಂಜಾಬ್ ನಾಯಕ ಮಯಾಂಕ್ ಅಗರ್ವಾಲ್ ಇಂದಿನ ಪಂದ್ಯದಲ್ಲಿ 9 ಬೌಂಡರಿ ಸಿಡಿಸಿದರೆ ಪಂಜಾಬ್ ಕಿಂಗ್ಸ್ ಪರವಾಗಿ 150 ಬೌಂಡರಿಗಳನ್ನು ಪೂರ್ಣಗೊಳಿಸಿದಂತಾಗುತ್ತದೆ

* ಪಂಜಾಬ್ ಕಿಂಗ್ಸ್ ತಂಡದ ವೇಗದ ಬೌಲರ್ ಕಗಿಸೊ ರಬಾಡ ಐಪಿಎಲ್‌ನಲ್ಲಿ 100 ವಿಕೆಟ್‌ಗಳ ಗಡಿಯನ್ನು ತಲುಪಲು 6 ವಿಕೆಟ್‌ಗಳ ಅಗತ್ಯವಿದೆ.

* ಪಂಜಾಬ್ ಬ್ಯಾಟ್ಸ್‌ಮನ್ ಜಾನಿ ಬೈರ್‌ಸ್ಟೋ ಐಪಿಎಲ್‌ನಲ್ಲಿ 50 ಸಿಕ್ಸರ್‌ಗಳನ್ನು ಪೂರ್ಣಗೊಳಿಸಲು ಇನ್ನೂ 3 ಸಿಕ್ಸರ್‌ಗಳನ್ನು ಸಿಡಿಸಬೇಕಿದೆ.
* ಪಂಜಾಬ್ ಕಿಂಗ್ಸ್ ತಂಡದ ಆರಂಭಿಕ ಆಟಗಾರ ಶಿಖರ್ ಧವನ್ ಐಪಿಎಲ್‌ನಲ್ಲಿ 700 ಬೌಂಡರಿಗಳ ಗಡಿ ತಲುಪಲು ಇನ್ನೂ 6 ಬೌಂಡರಿ ಸಿಡಿಸಬೇಕಿದೆ ಅಗತ್ಯವಿದೆ. ಇದು ಸಾಧ್ಯವಾದರೆ ಐಪಿಎಲ್‌ನಲ್ಲಿ ಈ ಸಾಧನೆ ಮಾಡಿದ ಮೊದಲ ಆಟಗಾರ ಎನಿಸಲಿದ್ದಾರೆ.

Story first published: Friday, May 13, 2022, 10:43 [IST]
Other articles published on May 13, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+