For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2022: ರಾಜಸ್ಥಾನ್ ರಾಯಲ್ಸ್ ತಂಡದ ನೂತನ ಜರ್ಸಿ ಬಿಡುಗಡೆ

IPL 2022: Rajasthan Royals unveils New jersey for ahead of IPL 2022
Photo Credit: Twitter

ಐಪಿಎಲ್ ಫ್ರಾಂಚೈಸಿ ರಾಯಲ್ಸ್ ಚಾಲೆಂಜರ್ಸ್ ತಂಡ ಕಡೆಗೂ ಐಪಿಎಲ್ 2022ರ ಆವೃತ್ತಿಗೆ ನೂತನ ಜರ್ಸಿಯನ್ನು ಅನಾವರಣಗೊಳಿಸಿದೆ. ಆರ್‌ಆರ್ ಫ್ರಾಂಚೈಸಿ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿರುವ ವಿಶೇಷ ವಿಡಿಯೋದಲ್ಲಿ ವಿಭಿನ್ನವಾಗಿ ನೂತನ ಮಾದರಿಯ ಜರ್ಸಿಯನ್ನು ಅನಾವರಣಗೊಳಿಸಲಾಗಿದೆ. ಈ ಜರ್ಸಿಯಲ್ಲಿ ಪಿಂಕ್ ಬಣ್ಣವನ್ನು ರಾಜಸ್ಥಾನ್ ರಾಯಲ್ಸ್ ಉಳಿಸಿಕೊಂಡಿದ್ದು ಟೈಟಲ್ ಸ್ಪಾನ್ಸರ್ ಬದಲಾವಣೆಯಾಗಿದೆ. ದುಬೈ ಎಕ್ಸ್‌ಪೋ ಸ್ಥಾನದಲ್ಲಿ ಹ್ಯಾಪಿಲೋ ಟೈಟಲ್ ಸ್ಪಾನ್ಸರ್ ಆಗಿ ಕಾಣಿಸಿಕೊಂಡಿದೆ. ಈ ಜರ್ಸಿಯನ್ನು ರಾಜಸ್ಥಾನದ ವಿಭಿನ್ನ ಶೈಲಿಯಾದ 'ಲೆಹೆರಿಯಾ' ಶೈಲಿಯಿಂದ ಸ್ಪೂರ್ತಿ ಪಡೆದು ಸಿದ್ಧ ಪಡಿಸಲಾಗಿದೆ.

ರಾಜಸ್ಥಾನ್ ರಾಯಲ್ಸ್ ಸ್ಕ್ವಾಡ್ ಸೇರಿಕೊಂಡ ಕನ್ನಡಿಗರು: ಇನ್ನು ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ಈ ಬಾರಿಯ ಮೆಗಾ ಹರಾಜಿನಲ್ಲಿ ಮೂವರು ಕನ್ನಡಿಗ ಆಟಗಾರರನ್ನು ತಂಡಕ್ಕೆ ಸೇರ್ಪಡೆಗೊಳಿಸಿತ್ತು. ಕರುಣ್ ನಾಯರ್, ದೇವದತ್ ಪಡಿಕ್ಕಲ್ ಹಾಗೂ ಪ್ರಸಿದ್ಧ್ ಕೃಷ್ಣ ಆರ್‌ಆರ್ ತಂಡದ ಸದಸ್ಯರಾಗಿದ್ದಾರೆ. ಮಂಗಳವಾರ ಮಾರ್ಚ್ 15ರಂದು ಈ ಮೂವರು ಆಟಗಾರರು ಕೂಡ ಮುಂಬೈನಲ್ಲಿ ರಾಜಸ್ಥಾನ್ ರಾಯಲ್ಸ್ ತಮಡದ ಹೋಟೆಲ್‌ಗೆ ಸೇರಿಕೊಂಡಿದ್ದಾರೆ.

ಇನ್ನು ಈ ಮೂವರು ಆಟಗಾರರು ತಂಡದ ಹೋಟೆಲ್‌ಗೆ ಸೇರಿಕೊಳ್ಳುತ್ತಿರುವ ಸಣ್ಣ ವಿಡಿಯೋವನ್ನು ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ಹಂಚಿಕೊಂಡಿದೆ. ದೇವದತ್ ಪಡಿಕ್ಕಲ್ ಹಾಗೂ ಪ್ರಸಿದ್ಧ ಕೃಷ್ಣ ಒಬ್ಬೊಬ್ಬರಾಗಿ ಆಗಮಿಸಿದ್ದರೆ ಕರುಣ್ ನಾಯರ್ ತಮ್ಮ ಪತ್ನಿಯೊಂದಿಗೆ ತಂಡದ ಬಯೋಬಬಲ್‌ಅನ್ನು ಸೇರಿಕೊಂಡಿದ್ದಾರೆ.

ಕರುಣ್ ನಾಯರ್ ಹಾಗೂ ಪ್ರಸಿದ್ಧ್ ಕೃಷ್ಣ ಈ ಹಿಂದಿನ ಆವೃತ್ತಿಯಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಪರವಾಗಿ ಆಡಿದ್ದರೆ ದೇವದತ್ ಪಡಿಕ್ಕಲ್ ಈ ಹಿಂದಿನ ಆವೃತ್ತಿಗಳಲ್ಲಿ ಆರ್‌ಸಿಬಿ ತಂಡದ ಪರವಾಗಿ ಕಣಕ್ಕಿಳಿದು ಮಿಂಚಿದ್ದರು. ಇದೇ ಮೊದಲ ಬಾರಿಗೆ ದೇವದತ್ ಪಡಿಕ್ಕಲ್ ತವರಿನ ಫ್ರಾಂಚೈಸಿ ಬಿಟ್ಟು ಬೇರೆ ಫ್ರಾಂಚೈಸಿಯ ಪಾಲಾಗಿದ್ದಾರೆ. ಕರುಣ್ ನಾಯರ್ ಅವರನ್ನು ರಾಜಸ್ಥಾನ್ ರಾಯಲ್ಸ್ 1.4 ಕೋಟಿ ನೀಡಿ ಖರೀದಿಸಿದರೆ ಪ್ರಸಿದ್ಧ್ ಕೃಷ್ಣ 10 ಕೋಟಿ ಹಾಗೂ ದೇವದತ್ ಪಡಿಕ್ಕಲ್ 7.75 ಕೋಟಿಗೆ ಆರ್‌ಆರ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. 2008ರ ಆವೃತ್ತಿಯ ಚಾಂಪಿಯನ್ ತಂಡವಾಗಿರುವ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಈ ಬಾರಿ ಲಸಿತ್ ಮಲಿಂಗಾ ಬೌಲಿಂಗ್ ಕೋಚ್ ಆಗಿ ಸೇರ್ಪಡೆಯಾಗಿದ್ದ

ರಾಜಸ್ಥಾನ್ ರಾಯಲ್ಸ್ ಸ್ಕ್ವಾಡ್: ಸಂಜು ಸ್ಯಾಮ್ಸನ್, ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ಟ್ರೆಂಟ್ ಬೋಲ್ಟ್, ರವಿಚಂದ್ರನ್ ಅಶ್ವಿನ್, ಶಿಮ್ರೋನ್ ಹೆಟ್ಮೆಯರ್, ದೇವದತ್ ಪಡಿಕ್ಕಲ್, ಪ್ರಸಿದ್ಧ್ ಕೃಷ್ಣ, ಯುಜ್ವೇಂದ್ರ ಚಾಹಲ್, ರಿಯಾನ್ ಪರಾಗ್, ಕೆಸಿ ಕಾರಿಯಪ್ಪ, ನವದೀಪ್ ಸೈನಿ, ಓಬೇದ್ ಮೆಕಾಯ್, ಅರುಣಯ್ ಸಿಂಗ್, ಕುಲದೀಪ್ ಸೇನ್, ಕರುಣ್ ನಾಯರ್, ಧ್ರುವ್ ಜುರೆಲ್, ತೇಜಸ್ ಬರೋಕಾ, ಕುಲದೀಪ್ ಯಾದವ್, ಶುಭಂ ಗರ್ವಾಲ್, ಡೇರಿಲ್ ಮಿಚೆಲ್, ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್, ನಾಥನ್ ಕೌಲ್ಟರ್-ನೈಲ್, ಜೇಮ್ಸ್ ನೀಶಮ್

Story first published: Wednesday, March 16, 2022, 10:08 [IST]
Other articles published on Mar 16, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+