For Quick Alerts
ALLOW NOTIFICATIONS  
For Daily Alerts
 

LSG vs RR: ಪಂದ್ಯದ ಡ್ರೀಮ್ ಟೀಮ್ ಪ್ರೆಡಿಕ್ಷನ್ ಮತ್ತು ಸಂಭಾವ್ಯ ಆಡುವ ಬಳಗದ ಮಾಹಿತಿ

IPL 2022: Rajasthan Royals vs Lucknow Super Giants dream team prediction and probable playing 11

ಸದ್ಯ ನಡೆಯುತ್ತಿರುವ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 63ನೇ ಪಂದ್ಯ ನಾಳೆ ( ಮೇ 15 ) ಮುಂಬೈನ ಬ್ರಬೌರ್ನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಲಿವೆ. ಇನ್ನು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಗುಜರಾತ್ ಟೈಟನ್ಸ್ ತಂಡದ ನಂತರ ಪ್ಲೇಆಫ್ ಪ್ರವೇಶಿಸುವ ಅವಕಾಶವನ್ನು ತೀರಾ ದೊಡ್ಡ ಮಟ್ಟದಲ್ಲಿ ಹೊಂದಿರುವ ತಂಡವಾದ ಲಕ್ನೋ ಸೂಪರ್ ಜೈಂಟ್ಸ್ ಈ ಪಂದ್ಯದಲ್ಲಿ ಗೆದ್ದರೆ ಅಧಿಕೃತವಾಗಿ ಪ್ಲೇಆಫ್ ಸುತ್ತಿಗೆ ಲಗ್ಗೆ ಇಡಲಿದೆ.

ಹೌದು, ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಇಲ್ಲಿಯವರೆಗೂ ಒಟ್ಟು 12 ಪಂದ್ಯಗಳನ್ನಾಡಿ 8 ಪಂದ್ಯಗಳಲ್ಲಿ ಗೆದ್ದು ಉಳಿದ 4 ಪಂದ್ಯಗಳಲ್ಲಿ ಸೋತು 16 ಅಂಕಗಳನ್ನು ಪಡೆದುಕೊಂಡು ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಲಕ್ನೋ ಸೂಪರ್ ಜೈಂಟ್ಸ್ ಇನ್ನೊಂದು ಪಂದ್ಯದಲ್ಲಿ ಗೆದ್ದರೂ ಪ್ಲೇಆಫ್ ಸುತ್ತಿಗೆ ಪ್ರವೇಶ ಪಡೆದುಕೊಳ್ಳಲಿದ್ದು, ಈ ಪಂದ್ಯದಲ್ಲಿ ಹಾಗೂ ಮುಂದಿನ ಪಂದ್ಯದಲ್ಲಿ ಗೆದ್ದು ಟಾಪ್ 2 ಸ್ಥಾನವನ್ನು ಪಡೆದುಕೊಳ್ಳುವ ಯೋಜನೆಯಲ್ಲಿದ್ದರೆ, ಟೂರ್ನಿಯಲ್ಲಿ ಇಲ್ಲಿಯವರೆಗೂ 12 ಪಂದ್ಯಗಳನ್ನಾಡಿ 7 ಪಂದ್ಯಗಳಲ್ಲಿ ಗೆದ್ದು 5 ಪಂದ್ಯಗಳಲ್ಲಿ ಸೋತು 14 ಅಂಕಗಳನ್ನು ಪಡೆದುಕೊಳ್ಳುವುದರ ಮೂಲಕ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ರಾಜಸ್ಥಾನ್ ರಾಯಲ್ಸ್ ಇನ್ನೆರಡು ಪಂದ್ಯಗಳಲ್ಲಿ ಗೆದ್ದರೆ ಪ್ಲೇಆಫ್ ಪ್ರವೇಶವನ್ನು ಪಡೆದುಕೊಳ್ಳಲಿದೆ. ಹೀಗಾಗಿ ಈ ಪಂದ್ಯದಲ್ಲಿ ಗೆಲ್ಲುವತ್ತ ರಾಜಸ್ಥಾನ್ ರಾಯಲ್ಸ್ ಕೂಡ ಕಣ್ಣಿಟ್ಟಿದ್ದು, ಪಂದ್ಯ ಕುತೂಹಲವನ್ನು ಕೆರಳಲಿಸಿದೆ.

ಈ ಕುತೂಹಲಕಾರಿ ಪಂದ್ಯದಲ್ಲಿ ಯಾವ ತಂಡ ಗೆದ್ದು ಟಾಪ್ ಸ್ಥಾನವನ್ನು ಪಡೆದುಕೊಳ್ಳಲಿದೆ ಎಂಬುದರ ಕುರಿತು ಕೆಲ ಕ್ರಿಕೆಟ್ ಅಭಿಮಾನಿಗಳು ಚಿಂತಿಸುತ್ತಿದ್ದರೆ, ಇನ್ನೂ ಕೆಲ ಕ್ರಿಕೆಟ್ ಅಭಿಮಾನಿಗಳು ಈ ಪಂದ್ಯಕ್ಕಾಗಿ ಡ್ರೀಮ್ ಟೀಮ್ ರಚಿಸುತ್ತಿದ್ದು, ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಬಲ್ಲ ಆಟಗಾರರನ್ನು ಆರಿಸುವಲ್ಲಿ ನಿರತರಾಗಿದ್ದಾರೆ. ಇನ್ನು ಈ ಪಂದ್ಯಕ್ಕೆ ಡ್ರೀಮ್ ಟೀಮ್ ರಚಿಸಲಿರುವ ಕ್ರಿಕೆಟ್ ಅಭಿಮಾನಿಗಳು ಈ ಕೆಳಕಂಡಂತೆ ಆಟಗಾರರನ್ನು ಆರಿಸಿದರೆ ತಂಡ ಬಲಿಷ್ಠವಾಗಿರಲಿದೆ ಎನ್ನಬಹುದು.

ಡ್ರೀಮ್ ಟೀಮ್ 1: 1 ಜೋಸ್ ಬಟ್ಲರ್, 2 ಕ್ವಿಂಟನ್ ಡಿ ಕಾಕ್, 3 ಸಂಜು ಸ್ಯಾಮ್ಸನ್, 4 ದೀಪಕ್ ಹೂಡಾ, 5 ಕೃನಾಲ್ ಪಾಂಡ್ಯ, 6 ದೇವದತ್ ಪಡಿಕ್ಕಲ್, 7 ಆರ್ ಅಶ್ವಿನ್, 8 ಟ್ರೆಂಟ್ ಬೌಲ್ಟ್ 9 ಮೊಹ್ಸಿನ್ ಖಾನ್, 10 ಅವೇಶ್ ಖಾನ್ 11. ಚಮೇರಾ ಡಿ.
ನಾಯಕ: ಸಂಜು ಸ್ಯಾಮ್ಸನ್, ಉಪನಾಯಕ: ಜೋಸ್ ಬಟ್ಲರ್, ವಿಕೆಟ್ ಕೀಪರ್: ಕ್ವಿಂಟನ್ ಡಿ ಕಾಕ್.

ಡ್ರೀಮ್ ಟೀಮ್ 2: 1 ಕೆಎಲ್ ರಾಹುಲ್, 2 ಜೋಸ್ ಬಟ್ಲರ್, 3 ದೀಪಕ್ ಹೂಡಾ, 4 ಕೃನಾಲ್ ಪಾಂಡ್ಯ, 5 ರಿಯಾನ್ ಪರಾಗ್, 6 ಆಯುಷ್ ಬಡೋನಿ, 7 ಜೇಸನ್ ಹೋಲ್ಡರ್, 8 ಪ್ರಸಿದ್ಧ್ ಕೃಷ್ಣ, 9 ಯುಜ್ವೇಂದ್ರ ಚಾಹಲ್, 10 ಟ್ರೆಂಟ್ ಬೌಲ್ಟ್, 11 ಕುಲ್ ದೀಪ್ ಸೇನ್.
ನಾಯಕ: ಕೆಎಲ್ ರಾಹುಲ್, ಉಪನಾಯಕ: ದೀಪಕ್ ಹೂಡಾ, ವಿಕೆಟ್ ಕೀಪರ್: ಜೋಸ್ ಬಟ್ಲರ್.

ಸಂಭಾವ್ಯ ಆಡುವ ಬಳಗ: ಲಕ್ನೋ ಸೂಪರ್ ಜೈಂಟ್ಸ್: 1 ಕೆಎಲ್ ರಾಹುಲ್, 2 ಕ್ವಿಂಟನ್ ಡಿ ಕಾಕ್, 3 ದೀಪಕ್ ಹೂಡಾ, 4 ಕೃನಾಲ್ ಪಾಂಡ್ಯ, 5 ಆಯುಷ್ ಬಡೋನಿ, 6 ಮಾರ್ಕಸ್ ಸ್ಟೊಯಿನಿಸ್, 7 ಜೇಸನ್ ಹೋಲ್ಡರ್ / ಆಂಡ್ರ್ಯೂ ಟೈ, 8 ದುಷ್ಮಂತ ಚಮೀರಾ, 9 ಅವೇಶ್ ಖಾನ್, 10 ಮೊಹ್ಸಿನ್, 10 ಮೊಹ್ಸಿನ್ ಬಿಷ್ಣೋಯಿ.

ರಾಜಸ್ಥಾನ್ ರಾಯಲ್ಸ್: 1. ಜೋಸ್ ಬಟ್ಲರ್, 2. ಯಶಸ್ವಿ ಜೈಸ್ವಾಲ್, 3. ಸಂಜು ಸ್ಯಾಮ್ಸನ್ (ನಾಯಕ ಮತ್ತು ವಿಕೆ), 4. ರಿಯಾನ್ ಪರಾಗ್, 5. ​​ದೇವದತ್ ಪಡಿಕ್ಕಲ್, 6. ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್ / ಶಿಮ್ರಾನ್ ಹೆಟ್ಮೆಯರ್ / ಜೇಮ್ಸ್ ನೀಶಮ್, 7. ರೆ ಅಶ್ವಿನ್ , 8. ಟ್ರೆಂಟ್ ಬೌಲ್ಟ್, 9. ಪ್ರಸಿದ್ಧ್ ಕೃಷ್ಣ, 10. ಯುಜ್ವೇಂದ್ರ ಚಹಾಲ್, 11. ಕುಲದೀಪ್ ಸೇನ್.

Story first published: Saturday, May 14, 2022, 17:28 [IST]
Other articles published on May 14, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+