Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾವನಾತ್ಮಕ ಕ್ಷಣಕ್ಕೆ ಸಾಕ್ಷಿಯಾಗಲಿದೆ MI vs RR ಪಂದ್ಯ: ಶನಿವಾರದ ಪಂದ್ಯದಲ್ಲಿ ಶೇನ್ ವಾರ್ನ್‌ಗೆ ಗೌರವ

IPL 2022: Rajasthan Royals will pay tribute to Shane Warne in IPL match against Mumbai Indians

ದಿಗ್ಗಜ ಕ್ರಿಕೆಟಿಗ ಸ್ಪಿನ್ನರ್ ಶೇನ್ ವಾರ್ನ್ ಇತ್ತೀಚೆಗಷ್ಟೇ ಹೃದಯಾಘಾತದಿಂದ ಅಗಲಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ತನ್ನ ಮಾಜಿ ನಾಯಕನಿಗೆ ವಿಶೇಷ ಗೌರವ ನೀಡಲು ನಿರ್ಧರಿಸಿದೆ. ಶನಿವಾರ ಮುಂಬೈ ಇಂಡಿಯನ್ಸ್ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಆಸ್ಟ್ರೇಲಿಯಾದ ದಿಗ್ಗಜ ಸ್ಪಿನ್ನರ್ ಶೇನ್ ವಾರ್ನ್ ಅವರ ಜೀವನವನ್ನು ಸಂಭ್ರಮಿಸಲಿದೆ ರಾಜಸ್ಥಾನ್ ರಾಯಲ್ಸ್ ತಂಡ.

ಐಪಿಎಲ್ ಆರಂಭಿಕ ಆವೃತ್ತಿ 2008ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕನಾಗಿದ್ದ ಶೇನ್ ವಾರ್ನ್ ಚೊಚ್ಚಲ ಆವೃತ್ತಿಯಲ್ಲಿ ಆರ್‌ಆರ್ ಟ್ರೋಫಿ ಎತ್ತಿ ಹಿಡಿಯುವಂತೆ ಮಾಡಿದ್ದರು. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಅಂದು ನಡೆದಿದ್ದ ಪಂದ್ಯದಲ್ಲ ನಾಯಕನಾಗಿ ಮಾತ್ರವಲ್ಲದೆ ಬೌಲಿಂಗ್‌ನಲ್ಲಿ ಮೂರು ವಿಕೆಟ್ ಪಡೆದು ತಂಡದ ಗೆಲುವಿಗೆ ಕಾರಣವಾಗಿದ್ದರು. ಆ ವಿಶೇಷ ದಿನಕ್ಕೆ 14 ವರ್ಷ ತುಂಬಲಿರುವ ಕಾರಣ ಶನಿವಾರದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಶೇನ್ ವಾರ್ನ್‌ಗೆ ವಿಶೇಷ ಗೌರವ ನೀಡಲಿದೆ.

ಈ ಬಗ್ಗೆ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ಅಧಿಕೃತ ಮಾಹಿತಿ ನೀಡಿದೆ. ಈ ಸಂಭ್ರಮದಲ್ಲಿ ಶೇನ್ ವಾರ್ನ್ ಅವರ ಸೋದರ ಜಾನ್ಸನ್ ಕೂಡ ಭಾಗವಹಿಸಲಿದ್ದು ಫ್ರಾಂಚೈಸಿ ನೀಡಿರುವ ಆಹ್ವಾನವನ್ನು ಜಾನ್ಸನ್ ಒಪ್ಪಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದೆ. ಶೇನ್ ವಾರ್ನ್ 2008ರಲ್ಲಿ ಐಪಿಎಲ್ ಟ್ರೋಫಿ ಎತ್ತಿ ಹಿಡಿದಿದ್ದ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿಯೇ ಈ ಗೌರವ ಸಲ್ಲಿಸಲು ಫ್ರಾಂಚೈಸಿ ನಿರ್ಧರಿಸಿದೆ. ಬಿಸಿಸಿಐನ ಬೆಂಬಲದೊಂದಿಗೆ ಆರ್‌ಆರ್ ಫ್ರಾಂಚೈಸಿ ಈ ಗೌರವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಕ್ರೀಡಾಂಗಣದಲ್ಲಿ ವಿಶೇಷ ಗ್ಯಾಲರಿ

ಕ್ರೀಡಾಂಗಣದಲ್ಲಿ ವಿಶೇಷ ಗ್ಯಾಲರಿ

ಇನ್ನು ಈ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಆಟಗಾರರು 'SW23' ಎಂದು ಬರೆದುಕೊಂಡಿರುವ ವಿಶೇಷ ಜರ್ಸಿಯನ್ನು ಧರಿಸಿ ಅಂಗಳಕ್ಕಿಳಿಯಲಿದ್ದಾರೆ. ಅಲ್ಲದೆ ಡಿವೈ ಪಾಟೀಲ್ ಸ್ಟೇಡಿಯಂನ ಒಂದು ಭಾಗದಲ್ಲಿ ಶೇನ್ ವಾರ್ನ್ ಜೀವನದ ಮಹತ್ವದ ಕ್ಷಣಗಳನ್ನು ಸ್ಮರಿಸುವ ವಿಶೇಷ ಗ್ಯಾಲರಿ ಸಜ್ಜುಗೊಳಿಸಲಿದ್ದು ಪಂದ್ಯ ವೀಕ್ಷಣೆಗೆ ಬರುವ ಎಲ್ಲಾ ಕ್ರಿಕೆಟ್ ಪ್ರೇಮಿಗಳಿಗೂ ಈ ಗ್ಯಾಲರಿಗೆ ಭೇಟಿ ನೀಡುವ ಅವಕಾಶ ದೊರೆಯಲಿದೆ

ಅಕಾಲಿಕ ಸಾವನ್ನಪ್ಪಿದ ವಾರ್ನ್

ಅಕಾಲಿಕ ಸಾವನ್ನಪ್ಪಿದ ವಾರ್ನ್

ವಿಶ್ವದ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರು ಎನಿಸಿಕೊಂಡಿರುವ ಶೇನ್ ವಾರ್ನ್ ಕಳೆದ ತಿಂಗಳು ಥಾಯ್ಲೆಂಡ್‌ಗೆ ಖಾಸಗೀ ಪ್ರವಾಸಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ಸಂಜೆಯ ವೇಳೆಗೆ ಥಾಯ್ಲೆಂಡ್‌ನ ವಿಲ್ಲಾದಲ್ಲಿ ಸ್ನೇಹಿತರೊಂದಿಗೆ ಇದ್ದ ಶೇನ್ ವಾರ್ನ್ ಸಂಜೆಯ ವೇಳೆಗೆ ಪ್ರಜ್ಞಾಹೀನವಾಗಿ ಪತ್ತೆಯಾಗಿದ್ದರು. ಹೃದಯಾಘಾತದಿಂದ ವಾರ್ನ್ ಮೃತಪಟ್ಟಿರುವುದಾಗಿ ಶಂಕಿಸಲಾಗಿದ್ದು ಮರಣೋತ್ತರ ಪರೀಕ್ಷೆಯಲ್ಲಿಯೂ ಶೇನ್ ವಾರ್ನ್ ಅವರದ್ದು ಸಹಜ ಸಾವು ಎಂಬುದು ಸಾಬೀತಾಗಿದೆ. ಈ ವಿಚಾರವಾಗಿ ಸ್ಥಳೀಯ ಪೊಲೀಸ್ ಅಧಿಕಾರಿಯೊಬ್ಬರು ರಾಯ್ಟರ್ಸ್ ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿದ್ದು ಪ್ರಜ್ಞಾಹೀನವಾಗಿ ಪತ್ತೆಯಾಗುದ್ದ ವಾರ್ನ್ ಅವರ ಪ್ರಾಣ ಉಳಿಸುವ ಪ್ರಯತ್ನವನ್ನು ಸ್ನೇಹಿತರು ನಡೆಸಿದರು ಎಂದು ಮಾಹಿತಿ ನೀಡಿದ್ದರು.

ದಿಗ್ಗಜನ ಸಾಧನೆ

ದಿಗ್ಗಜನ ಸಾಧನೆ

145 ಟೆಸ್ಟ್ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ತಂಡವನ್ನು ಪ್ರತಿನಿಧಿಸಿರುವ ಶೇನ್ ವಾರ್ನ್ 708 ವಿಕೆಟ್‌ಗಳನ್ನು ಪಡೆದುಕೊಂಡಿದ್ದು 194 ಏಕದಿನ ಪಂದ್ಯಗಳಲ್ಲಿ 293 ವಿಕೆಟ್ ಸಂಪಾದಿಸಿದ್ದಾರೆ. ಈ ಮೂಲಕ ಅವರು ವಿಶ್ವ ಕ್ರಿಕೆಟ್‌ನಲ್ಲಿ ವಿಶ್ವ ಶ್ರೇಷ್ಠ ಸ್ಪಿನ್ನರ್‌ಗಳಲ್ಲಿ ಒಬ್ಬರು ಎನಿಸಿದ್ದಾರೆ.

ವಾರ್ನ್ ಬಗ್ಗೆ ಭಾವುಕ ಪತ್ರ ಬರೆದಿದ್ದ ಆರ್‌ಆರ್

ವಾರ್ನ್ ಬಗ್ಗೆ ಭಾವುಕ ಪತ್ರ ಬರೆದಿದ್ದ ಆರ್‌ಆರ್

ಶೇನ್ ವಾರ್ನ್ ಅವರ ಅಕಾಲಿಕ ನಿಧನದ ನಂತರ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ವಾರ್ನ್ ಬಗ್ಗೆ ಭಾವನಾತ್ಮಕ ಪತ್ರವೊಂದನ್ನು ಬರೆದು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿತ್ತು. "ಶೇನ್ ವಾರ್ನ್.. ಮಾಯಾಜಾಲಕ್ಕೆ ಮತ್ತೊಂದು ಹೆಸರು. ನಮ್ಮ ಪ್ರಥಮ ರಾಯಲ್. ಅಸಾಧ್ಯ ಎಂಬುದು ಒಂದು ಸುಳ್ಳು ಎಂದು ನಂಬುವಂತೆ ಮಾಡಿದ ವ್ಯಕ್ತಿ. ತನ್ನ ಹಾದಿಯಲ್ಲೇ ನಡೆದ, ತಾನು ನುಡಿದ ಮಾತಿನಂತೆಯೇ ಆಡಿದ, ಅಂಡರ್‌ಡಾಗ್‌ಗಳಾಗಿದ್ದವರನ್ನು ಚಾಂಪಿಯನ್ನರನ್ನಾಗಿಸಿದ ಶ್ರೇಷ್ಠ ಆಟಗಾರ. ಮುಟ್ಟಿದ್ದೆಲ್ಲವನ್ನೂ ಚಿನ್ನವಾಗಿಸುವ ಸಾಮರ್ಥ್ಯವಿದ್ದ ಮಾರ್ಗದರ್ಶಕ"

"ಈ ಕ್ಷಣದಲ್ಲಿ ನಮ್ಮ ಭಾವನೆಯನ್ನು ಪದಗಳಲ್ಲಿ ವ್ಯಕ್ತಪಡಿಸಲು ಅಸಾಧ್ಯ. ಆದರೆ ಅವರ ಮುಗುಳ್ನಗೆಯಿಲ್ಲದೆ, ಅವರ ಬುದ್ದಿವಂತಿಕೆಯಿಲ್ಲದೆ, ಜೀವನವನ್ನು ಸಂಪೂರ್ಣವಾಗಿ ಆನಂದಿಸುವ ಅವರ ಲವಲವಿಕೆಯನ್ನು ಕಳೆದುಕೊಂಡು ಜಗತ್ತು ಎಷ್ಟು ಬಡವಾಗಿದೆ ಎಂಬುದು ಅರ್ಥವಾಗಿದೆ. ಜಗತ್ತಿನ ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ರೀತಿ ನಮ್ಮ ಹೃದಯ ಕೂಡ ಪೂರ್ಣ ಛಿದ್ರವಾಗಿದೆ" ಎಂದು ರಾಜಸ್ಥಾನ್ ರಾಯಲ್ಸ್ ಭಾವನಾತ್ಮಕ ನುಡಿ ನಮನ ಸಲ್ಲಿತ್ತು.

Story first published: Friday, April 29, 2022, 13:07 [IST]
Other articles published on Apr 29, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+