IPL 2022: ಚೆನೈ ತಂಡಲ್ಲಿರುವ ಈ ಸ್ಪಿನ್ನರ್‌ಗೆ 'ಬುದ್ದಿವಂತ' ಎಂದು ಹೊಗಳಿದ ಸೆಹ್ವಾಗ್

ಚೆನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಎಲೆಮರೆ ಕಾಯಿಯಂತಿರುವ ಅನೇಕ ಪ್ರತಿಭಾವಂತ ಆಟಗಾರರಿಗೆ ವೇದಿಕೆಯನ್ನು ಕಲ್ಪಿಸುವ ಮೂಲಕ ಅಂತಾರಾಷ್ಟ್ರಿಯ ಮಟ್ಟದಲ್ಲಿ ಹೆಸರುವಾಸಿಯಾಗುವಂತೆ ಮಾಡುತ್ತಿದೆ. ಈ ಲಿಸ್ಟ್‌ಗೆ ಮತ್ತೊಬ್ಬ ಆಟಗಾರ ಸೇರ್ಪಡೆಯಾಗಿದ್ದು, ಲಂಕಾದ ಯುವ ಸ್ಪಿನ್ನರ್ ಸಿಎಸ್‌ಕೆ ಪರ ಮಿಂಚುತ್ತಿದ್ದಾನೆ.
ಎಂ. ಎಸ್ ಧೋನಿ ನೇತೃತ್ವದಲ್ಲಿ ನಾಲ್ಕು ಆವೃತ್ತಿಗಳಲ್ಲಿ ಚಾಂಪಿಯನ್ ಪಟ್ಟ ಧರಿಸಿದ್ದ ಸಿಎಸ್‌ಕೆ ಪರ ಅಮೋಘ ಸ್ಪಿನ್ ಬಲವಿತ್ತು. ಇತಿಹಾಸದ ಪುಟಗಳನ್ನ ಒಮ್ಮೆ ನೋಡಿದ್ರೆ ಸ್ಪಿನ್ನರ್ ವಿಭಾಗದಲ್ಲಿ ಅತ್ಯುತ್ತಮ ಆಟಗಾರರನ್ನು ಹೊಂದಿತ್ತು. ಅಶ್ವಿನ್ ಮತ್ತು ಹರ್ಭಜನ್ ಸಿಂಗ್ ಅವರಂತಹ ಭರವಸೆಯ ಮಾಂತ್ರಿಕ್ ಸ್ಪಿನ್‌ರ್‌ಗಳನ್ನು ಕಳೆದುಕೊಂಡು ಬೌಲಿಂಗ್ ನ ಸ್ಪಿನ್ನರ್ ವಿಭಾಗ ದುರ್ಬಲವಾಗಿತ್ತು. 15 ನೇ ಆವೃತ್ತಿಗೆ ಸ್ಪಿನ್ನರ್ ವಿಭಾಗವನ್ನು ಬಲಪಡಿಸಿಕೊಳ್ಳಲು ನಿರ್ಧರಿಸಿದ ಸಿಎಸ್‌ಕೆ ಮುಂದೆ ಇದ್ದಿದ್ದ ಆಯ್ಕೆ ಶ್ರೀಲಂಕಾ ದೇಶದ ಯುವ ಸ್ಪಿನ್ ಮಾಂತ್ರಿಕ ಮಹೇಶ್ ತಿಕ್ಷಣಾ.

2022ರ ಐಪಿಎಲ್ ನಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದ 21 ವರ್ಷದ ಈ ಸ್ಪಿನ್ನರ್ ತಿಕ್ಷಣಾ ಅವರನ್ನು ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಖರೀದಿಸಲು ಆಸಕ್ತಿ ತೊರಿಸಿತ್ತಾದರೂ ಚೆನೈ ತಂಡವು 70 ಲಕ್ಷಕ್ಕೆ ಮೆಗಾ ಆಕ್ಷನ್ ನಲ್ಲಿ ಖರೀದಿ ಮಾಡಿತ್ತು. ಆರಂಭಿಕ ಮೂರು ಪಂದ್ಯಗಳಲ್ಲಿ ಸೋಲು ಅನುಭವಿಸುವ ಮೂಲಕ ಮುಖಭಂಗಕ್ಕೆ ಒಳಗಾಗಿದ್ದ ಸಿಎಸ್‌ಕೆ ತಂಡ ನಾಲ್ಕನೇ ಪಂದ್ಯದಲ್ಲಿ ತಿಕ್ಷಣಾ ಅವರಿಗೆ ಪ್ಲೇಯಿಂಗ್ 11ನಲ್ಲಿರುವ ಅವಕಾಶ ನೀಡಿತು
ಚೆನೈ ತಂಡದ ಮೂಲಕ ಐಪಿಎಲ್ ಪಾದಾರ್ಪಣೆ ಮಾಡಿದ ತಿಕ್ಷಣ ಕಳೆದ ಎರಡು ಪಂದ್ಯಗಳಲ್ಲಿ ಉತ್ತಮವಾದ ಪ್ರದರ್ಶನ ನೀಡಿದ್ದಾರೆ. ಸನ್ ರೈಸರ್ಸ್ ಹೈದರಾಬಾದ್ ವಿರುದ್ದದ ಮೊದಲ ಪಂದ್ಯದಲ್ಲಿ 4 ಓವರ್ ಬೌಲಿಂಗ್ ಮಾಡಿ 31 ರನ್ ನೀಡಿ ಯಾವುದೇ ವಿಕೆಟ್ ಪಡೆಯಲು ಸಾಧ್ಯವಾಗಿರಲಿಲ್ಲ. ಆದ್ರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ದ ಎರಡನೇ ಪಂದ್ಯದಲ್ಲಿ ಸಿಕ್ಕ ಅವಕಾಶವನ್ನು ಸೂಕ್ತವಾಗಿ ಬಳಸಿಕೊಂಡ ತಿಕ್ಷಣಾ 4 ಓವರ್ ಬೌಲಿಂಗ್ ಮಾಡಿ 33 ರನ್ ನೀಡಿ ಪಾಫ್ ಡುಪ್ಲೆಸಿಸ್, ಅನುಜ್ ರಾವತ್, ಶಹಬಾಜ್ ಅಹ್ಮದ್, ಸುಯೇಶ್ ಪ್ರಭುದೇಸಾಯಿ ಅವರ ವಿಕೆಟ್‌ಗಳನ್ನು ಉರುಳಿಸುವ ಮೂಲಕ ಬ್ಯಾಟಿಂಗ್ ಬಲವನ್ನು ಕುಗ್ಗಿಸುವಲ್ಲಿ ಯಶಸ್ವಿಯಾಗಿ ಮಿಂಚಿದರು.
ಈ ವರೆಗೂ ತಿಕ್ಷಣ ನಾಲ್ಕು ಅಂತರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ 6 ವಿಕೆಟ್ ಪಡೆದಿದ್ದು, 50 ಟಿ20 ಪಂದ್ಯಗಳಲ್ಲಿ 55ವಿಕೆಟ್ ಪಡೆದಿದ್ದಾರೆ. ಆರ್‌ಸಿಬಿ ವಿರುದ್ದದ ಪಂದ್ಯದಲ್ಲಿ ತಿಕ್ಷಣಾ ಅವರ ಬೌಲಿಂಗ್ ಪ್ರದರ್ಶನದಿಂದ ವಿರೇಂದ್ರ ಸೆಹ್ವಾಗ್ ಅವರು ಪ್ರಭಾವಿತರಾಗಿ ಟ್ವಿಟ್ಟರ್‌ನಲ್ಲಿ ಹೊಗಳಿದ್ದಾರೆ. ತಿಕ್ಷಣಾ ಎಂಬ ಹೆಸರನ್ನು ಎರಡು ಭಾಗಗಳನ್ನಾಗಿಸಿ ತಿಕ್-ಶಾಣಾ (ಹಿಂದಿ ಭಾಷೆಯಲ್ಲಿ ಬುದ್ದಿವಂತ) ಎಂದು ಹೊಗಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications