RCB vs KKR: ಡ್ರೀಮ್ ಟೀಮ್‌ನಲ್ಲಿ ಈ 5 ಆಟಗಾರರಿದ್ದರೆ ಗೆಲುವು ನಿಮ್ಮದೇ; ಈತನನ್ನು ಕ್ಯಾಪ್ಟನ್ ಮಾಡಿ

ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಉದ್ಘಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಜಯ ಸಾಧಿಸುವುದರ ಮೂಲಕ ಶುಭಾರಂಭವನ್ನು ಮಾಡಿರುವ ಕೋಲ್ಕತ್ತಾ ನೈಟ್ ರೈಡರ್ಸ್ ತನ್ನ ಎರಡನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸೆಣಸಾಟ ನಡೆಸಲಿದೆ.
ಇತ್ತ ಟೂರ್ನಿಯಲ್ಲಿನ ತನ್ನ ಚೊಚ್ಚಲ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಸೆಣಸಾಟ ನಡೆಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೊದಲು ಬ್ಯಾಟಿಂಗ್ ಮಾಡಿ ಇನ್ನೂರರ ಗಡಿ ದಾಟಿದರೂ ಸಹ ಸೋಲನ್ನು ಅನುಭವಿಸಿದ್ದು, ತನ್ನ ಎರಡನೇ ಪಂದ್ಯದಲ್ಲಿ ಜಯ ಗಳಿಸಿ ಗೆಲುವಿನ ಖಾತೆ ತೆರೆಯುವ ಗುರಿಯನ್ನೊಂದಿದೆ.
ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳ ನಡುವಿನ ಪಂದ್ಯ ಇಂದು ( ಮಾರ್ಚ್ 30 ) ಸಂಜೆ 7.30ಕ್ಕೆ ಆರಂಭವಾಗಲಿದ್ದು, ಮುಂಬೈನ ಡಾ ಡಿವೈ ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಹೀಗೆ ಇತ್ತಂಡಗಳ ನಡುವೆ ನಡೆಯಲಿರುವ ಈ ಪಂದ್ಯದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿದ್ದು, ಕೆಲವರು ಎರಡೂ ತಂಡಗಳ 11 ಆಟಗಾರರನ್ನೊಳಗೊಂಡಂತೆ ತಮ್ಮದೇ ಆದ ಡ್ರೀಮ್ ಟೀಮ್‌ಗಳನ್ನು ರಚಿಸುತ್ತಿದ್ದಾರೆ. ಹೀಗೆ ಡ್ರೀಮ್ ಟೀಮ್ ರಚಿಸುವವರು ಈ ಕೆಳಕಂಡ ಆಟಗಾರರಿಗೆ ತಂಡದಲ್ಲಿ ಸ್ಥಾನ ನೀಡಿದರೆ ತಮ್ಮ ತಂಡ ಉತ್ತಮ ಹಂತ ತಲುಪುವಲ್ಲಿ ಯಶಸ್ವಿಯಾಗಲಿದೆ.

ನಿಮ್ಮ ಡ್ರೀಮ್ ಟೀಮ್‌ನಲ್ಲಿ ಈ ಐವರು ಆಟಗಾರರು ಇರಲೇಬೇಕು
ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳ ನಡುವೆ ನಡೆಯಲಿರುವ ಪಂದ್ಯಕ್ಕೆ ಡ್ರೀಮ್ ಟೀಮ್ ರಚಿಸುವವರು ಫಾಫ್ ಡು ಪ್ಲೆಸಿಸ್, ವಿರಾಟ್ ಕೊಹ್ಲಿ, ಮೊಹಮ್ಮದ್ ಸಿರಾಜ್, ವೆಂಕಟೇಶ್ ಐಯ್ಯರ್ ಹಾಗೂ ಶ್ರೇಯಸ್ ಐಯ್ಯರ್ ಈ ಐವರು ಆಟಗಾರರನ್ನು ತಪ್ಪದೇ ಆಯ್ಕೆ ಮಾಡಬೇಕಿದೆ. ಮೊದಲ ಪಂದ್ಯದಲ್ಲಿಯೇ 88 ರನ್ ಬಾರಿಸಿ ಅಬ್ಬರಿಸಿ ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ ಅಗ್ರಾಸ್ಥಾನದಲ್ಲಿರುವ ಫಾಫ್ ಈ ಪಂದ್ಯದಲ್ಲಿಯೂ ಅಬ್ಬರಿಸುವ ಸಾಧ್ಯತೆಗಳಿವೆ. ಇನ್ನು ಕಳೆದ ಪಂದ್ಯದಲ್ಲಿ ಜವಾಬ್ದಾರಿಯುತ ಆಟವನ್ನಾಡಿದ್ದ ವಿರಾಟ್ ಕೊಹ್ಲಿ ಕೂಡ ಈ ಪಂದ್ಯದಲ್ಲಿ ಉತ್ತಮ ರನ್ ಗಳಿಸುವ ಸಾಧ್ಯತೆಗಳಿವೆ. ಕಳೆದ ಪಂದ್ಯದಲ್ಲಿ 2 ವಿಕೆಟ್ ಪಡೆದು ಮಿಂಚಿದ್ದ ಮೊಹಮ್ಮದ್ ಸಿರಾಜ್ ಈ ಪಂದ್ಯದಲ್ಲೂ ಮಿಂಚುವ ಸಾಧ್ಯತೆಗಳು ಹೆಚ್ಚಿವೆ. ಕಳೆದ ಪಂದ್ಯದಲ್ಲಿ 16 ರನ್‌ಗಳನ್ನು ಮಾತ್ರ ಬಾರಿಸಿದ್ದ ವೆಂಕಟೇಶ್ ಐಯ್ಯರ್ ಈ ಪಂದ್ಯದಲ್ಲಿ ಅಬ್ಬರಿಸುವ ಸಾಧ್ಯತೆಗಳು ಹೆಚ್ಚಿದ್ದು, ಕಳೆದ ಆವೃತ್ತಿಯಲ್ಲಿ ತಾನು ನೀಡಿದ ರೀತಿಯ ಪ್ರದರ್ಶನವನ್ನು ವೆಂಕಟೇಶ್ ಐಯ್ಯರ್ ಮತ್ತೆ ನೀಡುವ ಸಾಧ್ಯತೆ ಹೆಚ್ಚಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ಶ್ರೇಯಸ್ ಐಯ್ಯರ್ ಕಳೆದ ಪಂದ್ಯದಲ್ಲಿ ಅಜೇಯ 20 ರನ್ ಚಚ್ಚಿದ್ದು ಈ ಪಂದ್ಯದಲ್ಲೂ ಅಬ್ಬರಿಸಲಿದ್ದಾರೆ. ಹೀಗಾಗಿ ಈ ಐವರು ಆಟಗಾರರು ನಿಮ್ಮ ಡ್ರೀಮ್ ಟೀಮ್‌ನಲ್ಲಿ ಇರಲೇಬೇಕಾದ ಆಟಗಾರರಿದ್ದಾರೆ.

ನಾಯಕ ಮತ್ತು ಉಪನಾಯಕ
ನಾಯಕ - ಫಾಫ್ ಡು ಪ್ಲೆಸಿಸ್, ವಿರಾಟ್ ಕೊಹ್ಲಿ
ಉಪನಾಯಕ - ಶ್ರೇಯಸ್ ಅಯ್ಯರ್, ವೆಂಕಟೇಶ್ ಐಯರ್

ಪೂರ್ಣ ತಂಡ ಹೀಗಿರಲಿ
ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳ ನಡುವಿನ ಪಂದ್ಯಕ್ಕೆ ನೀವು ರಚಿಸಲಿರುವ ಡ್ರೀಮ್ ತಂಡ ಈ ಕೆಳಕಂಡಂತಿರಲಿ..
ತಂಡ 1: ಕೀಪರ್ - ದಿನೇಶ್ ಕಾರ್ತಿಕ್
ಬ್ಯಾಟ್ಸ್‌ಮನ್‌ಗಳು - ಫಾಫ್ ಡು ಪ್ಲೆಸಿಸ್ (ನಾಯಕ), ಶ್ರೇಯಸ್ ಅಯ್ಯರ್ (ಉಪನಾಯಕ), ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ನಿತೀಶ್ ರಾಣಾ
ಆಲ್ ರೌಂಡರ್ಸ್ - ವನಿಂದು ಹಸರಂಗ, ವೆಂಕಟೇಶ್ ಅಯ್ಯರ್
ಬೌಲರ್‌ಗಳು- ಉಮೇಶ್ ಯಾದವ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್
ತಂಡ 2: ಕೀಪರ್ - ಅನುಜ್ ರಾವತ್
ಬ್ಯಾಟ್ಸ್‌ಮನ್‌ಗಳು - ಫಾಫ್ ಡು ಪ್ಲೆಸಿಸ್, ಶ್ರೇಯಸ್ ಅಯ್ಯರ್, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ
ಆಲ್‌ರೌಂಡರ್‌ಗಳು - ವನಿಂದು ಹಸರಂಗ, ವೆಂಕಟೇಶ್ ಅಯ್ಯರ್ (ಉಪನಾಯಕ), ಆಂಡ್ರೆ ರಸೆಲ್
ಬೌಲರ್‌ಗಳು - ಉಮೇಶ್ ಯಾದವ್, ಮೊಹಮ್ಮದ್ ಸಿರಾಜ್, ಡೇವಿಡ್ ವಿಲ್ಲಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications