RCB vs LSG: ಎಲಿಮಿನೇಟರ್ ಪಂದ್ಯದಲ್ಲಿ ಗೆಲ್ಲಲು ಡ್ರೀಮ್ ಟೀಮ್ಸ್ ಹೀಗಿರಬೇಕು; ಈತ ನಾಯಕನಾಗಬೇಕು!

ಕಳೆದ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಯಲ್ಲಿ ಯಶಸ್ವಿಯಾಗಿ ಪ್ಲೇ ಆಫ್ ಪ್ರವೇಶಿಸಿ ಎಲಿಮಿನೇಟರ್ ಪಂದ್ಯದಲ್ಲಿ ಸೋತು ಹೊರಬಿದ್ದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿ ಕೂಡಾ ಪ್ಲೇ ಆಫ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ.
ಲೀಗ್ ಹಂತದಲ್ಲಿನ ತನ್ನ ಅಂತಿಮ ಪಂದ್ಯದಲ್ಲಿ ಬಲಿಷ್ಠ ಗುಜರಾತ್ ಟೈಟನ್ಸ್ ವಿರುದ್ಧ ಜಯ ಸಾಧಿಸಿ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಂತರ ಮುಂಬೈ ಇಂಡಿಯನ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಸೋಲು ಕಂಡ ಕಾರಣ ಪ್ಲೇ ಆಫ್ ಪ್ರವೇಶಿಸುವಲ್ಲಿ ಯಶಸ್ವಿಯಾಯಿತು. ಹೀಗೆ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಹೊಂದುವುದರ ಮೂಲಕ ಪ್ಲೇ ಆಫ್ ಸುತ್ತಿಗೆ ಲಗ್ಗೆ ಇಟ್ಟಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಎಲಿಮಿನೇಟರ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಸೆಣಸಾಟ ನಡೆಸಲಿದೆ.
ಈ ಪಂದ್ಯದಲ್ಲಿ ಫಾಫ್ ಡು ಪ್ಲೆಸಿಸ್ ಪಡೆ ಗೆದ್ದರೆ ಎರಡನೇ ಕ್ವಾಲಿಫೈಯರ್ ಸುತ್ತಿಗೆ ಅರ್ಹತೆಯನ್ನು ಪಡೆದುಕೊಳ್ಳಲಿದ್ದು ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸಲಿದೆ. ಒಂದುವೇಳೆ ಈ ಪಂದ್ಯದಲ್ಲಿ ಏನಾದರೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೋತರೆ ಟೂರ್ನಿಯಿಂದ ಕಳೆದ ಬಾರಿಯಂತೆ ಈ ಬಾರಿಯೂ ಕೂಡ ಹೊರಬೀಳಲಿದೆ. ಹೀಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಈ ಪಂದ್ಯ ಎಷ್ಟು ಮುಖ್ಯವೋ ಅಷ್ಟೇ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಈ ಪಂದ್ಯ ಪ್ರಮುಖವಾದದ್ದಾಗಿದೆ. ಈ ಹಿನ್ನೆಲೆಯಲ್ಲಿ ಕೋಲ್ಕತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಇಂದು ನಡೆಯಲಿರುವ ಪಂದ್ಯದಲ್ಲಿ ಯಾವ ತಂಡ ಜಯ ಸಾಧಿಸಬಹುದು ಎಂಬ ಊಹೆಗಳಲ್ಲಿ ಕೆಲ ಕ್ರಿಕೆಟ್ ಪ್ರೇಮಿಗಳು ತೊಡಗಿಕೊಂಡಿದ್ದರೆ, ಮತ್ತಷ್ಟು ಕ್ರಿಕೆಟ್ ಪ್ರೇಮಿಗಳು ಈ ಪಂದ್ಯಕ್ಕಾಗಿ ಡ್ರೀಮ್ ಟೀಮ್ ರಚಿಸುತ್ತಿದ್ದು, ಉತ್ತಮ ಪ್ರದರ್ಶನ ನೀಡಬಲ್ಲ ಆಟಗಾರರನ್ನು ಆಯ್ಕೆ ಮಾಡುವುದರಲ್ಲಿ ನಿರತರಾಗಿದ್ದಾರೆ. ಹೀಗೆ ಡ್ರೀಮ್ ಟೀಮ್ ರಚಿಸುತ್ತಿರುವ ಕ್ರಿಕೆಟ್ ಪ್ರೇಮಿಗಳು ಈ ಕೆಳಕಂಡಂತೆ ತಂಡವನ್ನು ರಚಿಸಿದರೆ ಪಂದ್ಯದಲ್ಲಿ ಒಳ್ಳೆಯ ಫ್ಯಾಂಟಸಿ ಅಂಕಗಳನ್ನು ಕಲೆ ಹಾಕಬಹುದು.

ಡ್ರೀಮ್ ಟೀಮ್ 1
1 ಕೆಎಲ್ ರಾಹುಲ್, 2 ಫಾಫ್ ಡು ಪ್ಲೆಸಿಸ್, 3 ದೀಪಕ್ ಹೂಡಾ, 4 ಗ್ಲೆನ್ ಮ್ಯಾಕ್ಸ್‌ವೆಲ್, 5 ಕೃನಾಲ್ ಪಾಂಡ್ಯ, 6 ದಿನೇಶ್ ಕಾರ್ತಿಕ್, 7 ವನಿಂದು ಹಸರಂಗ, 8 ಜೇಸನ್ ಹೋಲ್ಡರ್, 9 ಮೊಹ್ಸಿನ್ ಖಾನ್, 10 ಅವೇಶ್ ಖಾನ್, 11 ಮೊಹಮ್ಮದ್ ಸಿರಾಜ್.
ನಾಯಕ: ಫಾಫ್ ಡು ಪ್ಲೆಸಿಸ್, ಉಪನಾಯಕ: ದೀಪಕ್ ಹೂಡಾ, ವಿಕೆಟ್ ಕೀಪರ್: ದಿನೇಶ್ ಕಾರ್ತಿಕ್.

ಡ್ರೀಮ್ ಟೀಮ್ 2
1 ಕೆಎಲ್ ರಾಹುಲ್, 2 ಕ್ವಿಂಟನ್ ಡಿ ಕಾಕ್, 3 ವಿರಾಟ್ ಕೊಹ್ಲಿ, 4 ರಜತ್ ಪಾಟಿದಾರ್, 5 ಮಾರ್ಕಸ್ ಸ್ಟೊಯಿನಿಸ್, 6 ದಿನೇಶ್ ಕಾರ್ತಿಕ್, 7 ವನಿಂದು ಹಸರಂಗ, 8 ಮೊಹ್ಸಿನ್ ಖಾನ್, 9 ಜೋಶ್ ಹ್ಯಾಜಲ್‌ವುಡ್, 10 ರವಿ ಬಿಷ್ಣೋಯ್, 11 ಮೊಹಮ್ಮದ್ ಸಿರಾಜ್.
ನಾಯಕ: ಕೆಎಲ್ ರಾಹುಲ್, ಉಪನಾಯಕ: ದಿನೇಶ್ ಕಾರ್ತಿಕ್, ವಿಕೆಟ್ ಕೀಪರ್: ಕ್ವಿಂಟನ್ ಡಿ ಕಾಕ್.

ಸಂಭಾವ್ಯ ಆಡುವ ಬಳಗಗಳು
ರಾಯಲ್ ಚಾಲೆಂಜರ್ಸ್ ಬೆಂಗಳೂರು: 1 ಫಾಫ್ ಡು ಪ್ಲೆಸಿಸ್ (ನಾಯಕ), 2, ವಿರಾಟ್ ಕೊಹ್ಲಿ, 3 ಗ್ಲೆನ್ ಮ್ಯಾಕ್ಸ್‌ವೆಲ್, 4 ರಜತ್ ಪಾಟಿದಾರ್, 5 ಮಹಿಪಾಲ್ ಲೊಮ್ರೋರ್, 6 ಶಹಬಾಜ್ ಅಹ್ಮದ್, 7 ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), 8 ವನಿಂದು ಹಸರಂಗ, 9 ಹರ್ಷಲ್ ಪಟೇಲ್, 10 ಜೋಶ್ ಹೇಜಲ್ ವುಡ್, 11 ಸಿರಾಜ್.
ಲಕ್ನೋ ಸೂಪರ್ ಜೈಂಟ್ಸ್: 1 ಕೆಎಲ್ ರಾಹುಲ್, 2 ಕ್ವಿಂಟನ್ ಡಿ ಕಾಕ್, 3 ದೀಪಕ್ ಹೂಡಾ, 4 ಕೃನಾಲ್ ಪಾಂಡ್ಯ, 5 ಆಯುಷ್ ಬಡೋನಿ, 6 ಮಾರ್ಕಸ್ ಸ್ಟೋನಿಸ್, 7 ಜೇಸನ್ ಹೋಲ್ಡರ್, 8 ದುಷ್ಮಂತ ಚಮೀರಾ, 9 ಅವೇಶ್ ಖಾನ್, 10 ಮೊಹ್ಸಿನ್ ಖಾನ್, 11 ರವಿ ಬಿಷ್ಣೋಯ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications