Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ 2022: ಮಯಾಂಕ್ ಹುಡುಗರ ಆರ್ಭಟ: ಮೊದಲ ಪಂದ್ಯದಲ್ಲೆ ಆರ್‌ಸಿಬಿಗೆ ಭಾರೀ ಆಘಾತ!

IPL 2022, RCB vs PBKS Highlights: Punjab Kings Beat Royal Challengers Bangalore by 5 Wickets

ಐಪಿಎಲ್ 15ನೇ ಆವೃತ್ತಿಯ 3ನೇ ಪಂದ್ಯದಲ್ಲಿ ಆರ್‌ಸಿಬಿ ತಂಡ ಆಘಾತಕಾರಿ ಆರಂಭ ಪಡೆದುಕೊಂಡಿದೆ. ಬ್ಯಾಟಿಂಗ್‌ನಲ್ಲಿ ಅಮೋಘ ಪ್ರದರ್ಶನ ನೀಡಿ ಬೃಹತ್ ಗುರಿ ಮುಂದಿಟ್ಟರೂ ಆ ಮೊತ್ತವನ್ನು ರಕ್ಷಣೆ ಮಾಡಿಕೊಳ್ಳುವಲ್ಲಿ ತಂಡ ವಿಫಲವಾಗಿದ್ದು ಭಾರೀ ಸೋಲು ಕಂಡಿದೆ. ಈ ಮೂಲಕ ಕಹಿ ಆರಂಭವನ್ನು ಪಡೆದಿದೆ ಆರ್‌ಸಿಬಿ. ಪಂಜಾಬ್ ಕಿಂಗ್ಸ್ ತಂಡದ ನಾಯಕ ಕನ್ನಡಿಗ ಮಯಾಂಕ್ ಅಗರ್ವಾಲ್ ನಾಯಕನಾಗಿ ಮೊದಲ ಪರೀಕ್ಷೆಯಲ್ಲಿ ಗೆದ್ದು ಬೀಗಿದ್ದಾರೆ.

ಡಿ ವೈ ಪಾಟೀಲ್ ಸ್ಟೇಡಿಯಂ ನಲ್ಲಿ ನಡೆದ ಪಂದ್ಯದಲ್ಲಿ ಎರಡೂ ತಂಡಗಳ ಬ್ಯಾಟರ್‌ಗಳು ಅಬ್ಬರಿಸಿದ್ದು ರನ್ ಹೊಳೆಯನ್ನೇ ಹರಿಸಿದ್ದಾರೆ. ಈ ಪಂದ್ಯದಲ್ಲಿ ಒಟ್ಟು 413 ರನ್ ಹರಿದು ಬಂದಿರುವುದು ಬ್ಯಾಟರ್‌ಗಳ ಅಬ್ಬರಕ್ಕೆ ಸಾಕ್ಷಿಯಾಗಿದೆ. ಈ ಪೈಪೋಟಿಯಲ್ಲಿ ಪಂಜಾಬ್ ಕಿಂಗ್ಸ್ ತಂಡ ಮೇಲುಗೈ ಸಾಧಿಸಲು ಯಶಸ್ವಿಯಾಗಿದ್ದು ಈ ಬಾರಿಯ ಮೊದಲ ಪಂದ್ಯದಲ್ಲಿ ಸ್ಮರಣೀಯ ಗೆಲುವು ಸಾಧಿಸಿದೆ.

ಅಬ್ಬರಿಸಿದ ನಾಯಕ ಫಾಫ್ ಡು ಪ್ಲೆಸಿಸ್

ಅಬ್ಬರಿಸಿದ ನಾಯಕ ಫಾಫ್ ಡು ಪ್ಲೆಸಿಸ್

ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ನಡೆಸಿದ ಆರ್‌ಸಿಬಿ ತಂಡ ಉತ್ತಮ ಆರಂಭ ಪಡೆಯಿತು. ಆರಂಭಿಕರಾಗಿ ಕಣಕ್ಕಿಳಿದ ನಾಯಕ ಫಾಫ್ ಡು ಪ್ಲೆಸಿಸ್ ಹಾಗೂ ಅನುಜ್ ರಾವತ್ 50 ರನ್‌ಗಳ ಜೊತೆಯಾಟ ನೀಡಿದರು. ಅನುಜ್ ರಾವತ್ 21 ರನ್ ಗಳಿಸಿ ಔಟಾದರು. ನಂತರ ಕೊಹ್ಲಿ ಜೊತೆ ಸೇರಿದ ಫಾಫ್ 118 ರನ್‌ಗಳ ಬೃಹತ್ ಜೊತೆಯಾಟವನ್ನು ನೀಡಿದರು. ಆರಂಭದಲ್ಲಿ ನಿಧಾನಗತಿಯ ಬ್ಯಾಟಿಂಗ್ ನಡೆಸಿದ ಫಾಫ್ ನಂತರ ಅಕ್ಷರಶಃ ಆರ್ಭಟಿಸಿದರು. 57 ಎಸೆತಗಳಲ್ಲಿ 88 ರನ್ ಬಾರಿಸಿದ ಫಾಫ್ ತಂಡದ ಮೊತ್ತ 168 ರನ್‌ಗಳಿದ್ದಾಗ ವಿಕೆಟ್ ಕಳೆದುಕೊಂಡರು.

ಅಂತಿಮ ಹಂತದಲ್ಲಿ ಕೊಹ್ಲಿ-ಡಿಕೆ ಜುಗಲ್‌ಬಂದಿ

ಅಂತಿಮ ಹಂತದಲ್ಲಿ ಕೊಹ್ಲಿ-ಡಿಕೆ ಜುಗಲ್‌ಬಂದಿ

ಅಂತಿಮ ಹಂತದಲ್ಲಿ ಕೊಹ್ಲಿಯನ್ನು ಸೇರಿಕೊಂಡ ದಿನೇಶ್ ಕಾರ್ತಿಕ್ ಕೂಡ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ವಿರಾಟ್ ಕೊಹ್ಲಿ 29 ಎಸೆತಗಳಲ್ಲಿ 41 ರನ್ ಬಾರಿಸಿದರು. ಕೊಹ್ಲಿಯ ಈ ಇನ್ನಿಂಗ್ಸ್‌ನಲ್ಲಿ ಎರಡು ಸಿಕ್ಸರ್ ಹಾಗೂ ಒಂದು ಬೌಂಡರಿ ಒಳಗೊಂಡಿತ್ತು. ಇನ್ನು ದಿನೇಶ್ ಕಾರ್ತಿಕ್ ಕೇವಲ 14 ಎಸೆತ ಎದುರಿಸಿದ್ದು ಮೂರು ಬೌಂಡರಿ ಹಾಗೂ ಮೂರು ಸಿಕ್ಸರ್‌ಗಳ ನೆರವಿನಿಂದ 32 ರನ್ ಬಾರಿಸಿದರು. ಈ ಬ್ಯಾಟಿಂಗ್‌ನ ಕಾರಣದಿಂದಾಗಿ ಆರ್‌ಸಿಬಿ ನಿಗದಿತ 20 ಓವರ್‌ಗಳಲ್ಲಿ 205 ರನ್ ಬಾರಿಸಿದರು.

ಅದ್ಭುತ ಆರಂಭ ಪಡೆದ ಪಿಬಿಕೆಎಸ್‌

ಅದ್ಭುತ ಆರಂಭ ಪಡೆದ ಪಿಬಿಕೆಎಸ್‌

ಇನ್ನು ಆರ್‌ಸಿಬಿ ತಂಡದ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಪಂಜಾಬ್ ಕಿಂಗ್ಸ್‌ಗೆ ಉತ್ತಮ ಆರಂಭ ದೊರೆಯಿತು. ನಾಯಕ ಮಯಾಂಕ್ ಅಗರ್ವಾಲ್ ಹಾಗೂ ಶಿಖರ್ ಧವನ್ ಮೊದಲ ವಿಕೆಟ್‌ಗೆ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿ 70 ರನ್‌ಗಳ ಜೊತೆಯಾಟ ನೀಡಿದರು. ನಂತರ ಬಂದ ಭಾನುಕಾ ರಾಜಪಕ್ಸ ಕೂಡ 22 ಎಸೆತಗಳಲ್ಲಿ 43 ರನ್‌ಗಳಿಸಿ ಮಿಂಚಿದರು. ನಂತರ ರಾಜಪಕ್ಸ ಹಾಗೂ ರಾಜ್ ಭಾವಾ ಸತತ ಎರಡು ಎಸೆತಗಳಲ್ಲಿ ವಿಕೆಟ್ ಕಳೆದುಕೊಂಡಾಗ ಆರ್‌ಸಿಬಿ ಪಂದ್ಯದಲ್ಲಿ ಮರಳಿ ಹಿಡಿತ ಸಾಧಿಸುವ ವಿಶ್ವಾಸ ಹೊಂದಿತ್ತು. ನಂತರ ಬಂದ ಲಿವಿಂಗ್‌ಸ್ಟನ್, ಶಾರೂಖ್‌ಖಾನ್ ಹಾಗೂ ಓಡಿಯನ್ ಸ್ಮಿತ್ ಅದಕ್ಕೆ ಅವಕಾಶವನ್ನೇ ನೀಡಲಿಲ್ಲ. ಅದರಲ್ಲೂ ಓಡಿಯನ್ ಕೇವಲ 8 ಎಸೆತಗಳನ್ನು ಎದುರಿಸಿ 25 ರನ್ ಗಳಿಸುವ ಮೂಲಕ ಆರ್‌ಸಿಬಿಗೆ ದೊಡ್ಡ ಆಘಾತ ನೀಡಿದರು. ಈ ಮೂಲಕ ಪಂಜಾಬ್ 206 ರನ್‌ಗಳ ಗುರಿಯನ್ನು ಮೀರಿ ನಿಂತಿತ್ತು ಪಂಜಾಬ್.

ಪ್ಲೇಯಿಂಗ್ XI

ಪ್ಲೇಯಿಂಗ್ XI

ಫಾಫ್ ಡುಪ್ಲೆಸಿಸ್(ಸಿ), ವಿರಾಟ್ ಕೊಹ್ಲಿ, ಅನುಜ್ ರಾವತ್, ದಿನೇಶ್ ಕಾರ್ತಿಕ್(ವಿಕೆಟ್ ಕೀಪರ್), ಶೆರ್ಫೇನ್ ರುದರ್‌ಫೋರ್ಡ್, ಶಹಬಾಜ್ ಅಹ್ಮದ್, ವನಿಂದು ಹಸರಂಗಾ, ಡೇವಿಡ್ ವಿಲ್ಲಿ, ಹರ್ಷಲ್ ಪಟೇಲ್, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್
ಪಂಜಾಬ್ ಕಿಂಗ್ಸ್‌ ಪ್ಲೇಯಿಂಗ್ 11
ಮಯಾಂಕ್ ಅಗರ್ವಾಲ್(ನಾಯಕ), ಶಿಖರ್ ಧವನ್, ಲಿಯಾಮ್ ಲಿವಿಂಗ್‌ಸ್ಟೋನ್‌, ಭಾನುಕಾ ರಾಜಪಕ್ಸೆ(ವಿಕೆಟ್ ಕೀಪರ್), ಶಾರುಖ್ ಖಾನ್, ಓಡಿಯನ್ ಸ್ಮಿತ್, ರಾಜ್ ಬಾವಾ, ಅರ್ಷದೀಪ್ ಸಿಂಗ್, ಹರ್ಪ್ರೀತ್ ಬ್ರಾರ್, ಸಂದೀಪ್ ಶರ್ಮಾ, ರಾಹುಲ್ ಚಾಹರ್

Story first published: Monday, March 28, 2022, 9:47 [IST]
Other articles published on Mar 28, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+