
ಮುಂದಿನ ಆವೃತ್ತಿಯ ಐಪಿಎಲ್‌ಗಾಗಿ ಆರ್‌ಸಿಬಿ ಮೂವರು ಆಟಗಾರರನ್ನು ರೀಟೈನ್ ಮಾಡಿಕೊಂಡಿದೆ. ನಿರೀಕ್ಷೆಯಂತೆಯೇ ವಿರಾಟ್ ಕೊಹ್ಲಿ ಮೊದಲ ಆಯ್ಕೆಯ ಆಟಗಾರನಾಗಿ ರೀಟೈನ್ ಆಗಿದ್ದರೆ ಗ್ಲೆನ್ ಮ್ಯಾಕ್ಸ್‌ವೆಲ್ ಎರಡನೇ ಆಯ್ಕೆಯ ಆಟಗಾರನಾಗಿ ರೀಟೈನ್ ಆಗಿದ್ದಾರೆ. ವೇಗಿ ಮೊಹಮ್ಮದ್ ಸಿರಾಜ್ ಮೂರನೇ ಆಯ್ಕೆಯ ಆಟಗಾರನಾಗಿ ಆರ್‌ಸಿಬಿ ತಂಡದಲ್ಲಿ ಮುಂದಿನ ಆವೃತ್ತಿಗೆ ಮುಂದುವರಿಯಲಿದ್ದಾರೆ.
ಆರ್‌ಸಿಬಿ ವಿರಾಟ್ ಕೊಹ್ಲಿಯನ್ನು 15 ಕೋಟಿ ನೀಡಿ ಉಳಿಸಿಕೊಂಡಿದ್ದರೆ ಗ್ಲೆನ್ ಮ್ಯಾಕ್ಸ್‌ವೆಲ್‌ಗೆ 11 ಕೋಟಿ ಬೆಲೆ ನಿಗದಿಪಡಿಸಿದೆ. ಇನ್ನು ವೇಗಿ ಮೊಹಮ್ಮದ್ ಸಿರಾಜ್ ಅವರನ್ನು 7 ಕೋಟಿಗೆ ಆರ್‌ಸಿಬಿ ರೀಟೈನ್ ಮಾಡಿಕೊಂಡಿದೆ. ಈ ಮೂಲಕ ಒಟ್ಟು 33 ಕೋಟಿ ರೂಪಾಯಿಯನ್ನು ಆರ್‌ಸಿಬಿ ಫ್ರಾಂಚೈಸಿ ಈ ರೀಟೈನ್ ಪ್ರಕ್ರಿಯೆಗಾಗಿ ಬಳಸಿಕೊಂಡಿದೆ. ಈ ರೀಟೆನ್ಶನ್ ಪ್ರಕ್ರಿಯೆಯ ನಂತರ ಆರ್‌ಸಿಬಿ ತಂಡದ ಪರ್ಸ್‌ನಲ್ಲಿ 57 ಕೋಟಿ ರೂಪಾಯಿ ಹರಾಜು ಪ್ರಕ್ರಿಯೆಗಾಗಿ ಉಳಿದುಕೊಂಡಿದೆ.
ನಿವೃತ್ತರಾದ ಎಬಿ ಡಿವಿಲಿಯರ್ಸ್: ಇನ್ನು ಈ ಬಾರಿಯ ಈ ರೀಟೈನ್ ಪಟ್ಟಿಯಲ್ಲಿ ಎಬಿ ಡಿವಿಲಿಯರ್ಸ್ ಹೆಸರು ಖಂಡಿತಾ ಇರುತ್ತಿತ್ತು. ಆದರೆ ದಿಗ್ಗಜ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಎಲ್ಲಾ ರೀತಿಯ ಕ್ರಿಕೆಟ್‌ನಿಂದಲೂ ನಿವೃತ್ತಿಯನ್ನು ಪಡೆದುಕೊಳ್ಳುವ ನಿರ್ಧಾರ ತೆಗೆದುಕೊಂಡಿದ್ದಾರೆ. ಹೀಗಾಗಿ ಆರ್‌ಸಿಬಿಯ ರೀಟೆನ್ಶನ್ ಪಟ್ಟಿಯಿಂದ ಎಬಿ ಡಿವಿಲಿಯರ್ಸ್ ಸಹಜವಾಗಿಯೇ ಹೊರಬಿದ್ದಿದ್ದಾರೆ. ಆ ಕಾರಣದಿಂದಾಗಿ ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು ತಂಡ ಉಳಿಸಿಕೊಳ್ಳುವ ನಿರ್ಧಾರ ಮಾಡಿದೆ.
ಹರಾಜು ಪ್ರಕ್ರಿಯೆಗೆ ಬಿಡುಗಡೆಯಾದ ಪ್ರಮುಖ ಆಟಗಾರರು: ಇನ್ನು ಈ ಬಾರಿಯ ರೀಟೆನ್ಶನ್ ಪಟ್ಟಿಯಲ್ಲಿ ಯಾರೆಲ್ಲಾ ಅವಕಾಶ ಪಡೆಯಬಹುದು ಎಂಬ ವಿಚಾರಬಾಗಿ ಸಾಕಷ್ಟು ಚರ್ಚೆಗಳು ನಡೆದಿತ್ತು. ಕೆಲ ಆಟಗಾರರು ನೀಡಿದ ಪ್ರದರ್ಶನದ ಹಿನ್ನೆಲೆಯಲ್ಲಿ ಹಾಗೂ ಅನುಭವದ ಕಾರಣದಿಂದಾಗಿ ಆರ್‌ಸಿಬಿ ಈ ಆಟಗಾರರನ್ನು ಉಳಿಸಿಕೊಳ್ಳಬಹುದು ಎಂಬ ಲೆಕ್ಕಾಚಾರವಿತ್ತು. ಅದರಲ್ಲಿ ಪ್ರಮುಖವಾಗಿ ಆರ್‌ಸಿಬಿ ತ
ಹಿಂದಿನ ಆವೃತ್ತಿಗಿಂತ ಕಡಿಮೆ ಮೊತ್ತ ಪಡೆದ ಕೊಹ್ಲಿ: ಇನ್ನು ಆರ್‌ಸಿಬಿ ತಂಡ ನಿರೀಕ್ಷೆಯಂತೆಯೇ ಪ್ರಮುಖ ಆಟಗಾರನಾಗಿ ವಿರಾಟ್ ಕೊಹ್ಲಿಯನ್ನು ತಂಡದಲ್ಲಿ ಉಳಿಸಿಕೊಂಡಿದೆ. ಆದರೆ ವಿರಾಟ್ ಕೊಹ್ಲಿ ಈ ಹಿಂದಿನ ಆವೃತ್ತಿಗಿಂತ ಕಡಿಮೆ ಮೊತ್ತವನ್ನು ಪಡೆದುಕೊಂಡಿದ್ದಾರೆ. ಈ ಹಿಂದಿನ ಆವೃತ್ತಿಯಲ್ಲಿ ಸಂಭಾವನೆಯಾಗಿ 16 ಕೋಟಿ ರೂಪಾಯಿಯನ್ನು ವಿರಾಟ್ ಕೊಹ್ಲಿ ಪಡೆದುಕೊಂಡಿದ್ದರು. ಆದರೆ ಈಗ ಒಂದು ಕೋಟಿ ಕಡಿಮೆ ಮೊತ್ತವನ್ನು ಪಡೆದುಕೊಂಡಿದ್ದಾರೆ. ಕಳೆದ ಆವೃತ್ತಿಯಲ್ಲಿ ವಿರಾಟ್ ಕೊಹ್ಲಿ ಬ್ಯಾಟಿಂಗ್‌ನಲ್ಲಿ ಮಂಕಾಗಿದ್ದು ಕೂಡ ಇದಕ್ಕೆ ಕಾರಣ ಎನ್ನಲಾಗಿದೆ.
ಆರ್‌ಸಿಬಿ ಬಿಡುಗಡೆಗೊಳಿಸಿದ ಆಟಗಾರರು: ದೇವದತ್ ಪಡಿಕ್ಕಲ್, ಶ್ರೀಕರ್ ಭರತ್, ಡೇನಿಯಲ್ ಕ್ರಿಶ್ಚಿಯನ್, ಶಹಬಾಜ್ ಅಹ್ಮದ್, ಜಾರ್ಜ್ ಗಾರ್ಟನ್, ಹರ್ಷಲ್ ಪಟೇಲ್, ಯುಜ್ವೇಂದ್ರ ಚಹಾಲ್, ರಜತ್ ಪಾಟಿದಾರ್, ಕೈಲ್ ಜೇಮಿಸನ್, ನವದೀಪ್ ಸೈನಿ, ಟಿಮ್ ಡೇವಿಡ್, ಸಚಿನ್ ಬೇಬಿ, ಪವನ್ ದೇಶಪಾಂಡೆ, ಮೊಹಮ್ಮದ್ ಅಜರುದ್ದೀನ್, ಸುಯಾಶ್ ದೀಪ್, ಸುಯಶ್ ದೀಪ್