DC vs LSG: ಲಕ್ನೋ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಸೋಲಿಗೆ ಕಾರಣ ಯಾರೆಂಬುದನ್ನು ಬಿಚ್ಚಿಟ್ಟ ರಿಷಭ್ ಪಂತ್

ಸದ್ಯ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭವಾಗಿದ್ದು, ಈ ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಕಣಕ್ಕಿಳಿದಿರುವ ನೂತನ ತಂಡ ಲಕ್ನೋ ಸೂಪರ್ ಜೈಂಟ್ಸ್ ತನ್ನ ಮೊದಲ ನಾಲ್ಕು ಪಂದ್ಯಗಳು ಮುಗಿದ ನಂತರ ಅಂಕಪಟ್ಟಿಯಲ್ಲಿ ಅಗ್ರಾಸ್ಥಾನಕ್ಕೇರಿದೆ. ಹೌದು, ಟೂರ್ನಿಯಲ್ಲಿನ ತನ್ನ ಮೊದಲ ಪಂದ್ಯದಲ್ಲಿ ಸೋಲುವ ಮೂಲಕ ಕಳಪೆ ಆರಂಭವನ್ನು ಪಡೆದುಕೊಂಡಿದ್ದ ಲಕ್ನೋ ಸೂಪರ್ ಜೈಂಟ್ಸ್ ನಂತರದ ಮೂರು ಪಂದ್ಯಗಳಲ್ಲಿ ಸತತವಾಗಿ ಗೆದ್ದು ಹ್ಯಾಟ್ರಿಕ್ ಜಯ ಸಾಧಿಸಿದೆ.
ಏಪ್ರಿಲ್ 7ರ ಗುರುವಾರದಂದು ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಿದ ಲಕ್ನೋ ಸೂಪರ್ ಜೈಂಟ್ಸ್ 6 ವಿಕೆಟ್‌ಗಳ ಗೆಲುವನ್ನು ದಾಖಲಿಸಿ ಹ್ಯಾಟ್ರಿಕ್ ಜಯದೊಂದಿಗೆ ಅಗ್ರಸ್ಥಾನಕ್ಕೇರಿದೆ. ಮುಂಬೈನ ಡಾ ಡಿವೈ ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಲಕ್ನೋ ಸೂಪರ್ ಜೈಂಟ್ಸ್ ಬೌಲಿಂಗ್ ಆಯ್ದಕೊಂಡ ಕಾರಣ ಡೆಲ್ಲಿ ಕ್ಯಾಪಿಟಲ್ಸ್ ಮೊದಲು ಬ್ಯಾಟಿಂಗ್ ಮಾಡಿತು.
ಹೀಗೆ ಮೊದಲು ಬ್ಯಾಟಿಂಗ್ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 149 ರನ್ ಗಳಿಸಿ ಎದುರಾಳಿ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ 150 ರನ್‌ಗಳ ಸಾಮಾನ್ಯ ಗುರಿಯನ್ನು ನೀಡಿತು. ಡೆಲ್ಲಿ ಕ್ಯಾಪಿಟಲ್ಸ್ ಪರ ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ಪೃಥ್ವಿ ಶಾ 34 ಎಸೆತಗಳಿಗೆ 61 ರನ್ ಬಾರಿಸಿ ಅಬ್ಬರಿಸಿದರೆ, ಡೇವಿಡ್ ವಾರ್ನರ್ 4 ರನ್‌ಗಳಿಗೆ ಔಟ್ ಆಗಿ ನಿರಾಸೆ ಮೂಡಿಸಿದರು. ಇನ್ನುಳಿದಂತೆ ರೋವ್‌ಮನ್ ಪೊವೆಲ್ 3 ರನ್ ಗಳಿಸಿ ಔಟ್ ಆದರೆ, ನಂತರ ಕಣಕ್ಕಿಳಿದ ರಿಷಭ್ ಪಂತ್ 36 ಎಸೆತಗಳಲ್ಲಿ ಅಜೇಯ 39 ರನ್ ಗಳಿಸಿದರು ಹಾಗೂ ಸರ್ಫರಾಜ್ ಖಾನ್ 28 ಎಸೆತಗಳಿಗೆ ಅಜೇಯ 36 ರನ್ ಕಲೆಹಾಕಿದರು. ಹೀಗೆ ತಂಡದ ಮೂರನೇ ವಿಕೆಟ್ ಉರುಳಿದ ನಂತರ ಕೊನೆಯ 57 ಎಸೆತಗಳಲ್ಲಿ 75 ರನ್ ಮಾತ್ರ ಹರಿದುಬಂತು. ಹೀಗೆ ಆರಂಭದಲ್ಲಿ ಅಬ್ಬರಿಸಿದ್ದ ಡೆಲ್ಲಿ ಕ್ಯಾಪಿಟಲ್ಸ್ ನಂತರ ದೊಡ್ಡ ಮಟ್ಟದ ರನ್ ಕಲೆಹಾಕುವಲ್ಲಿ ವಿಫಲವಾಯಿತು. ಇನ್ನು ಡೆಲ್ಲಿ ಕ್ಯಾಪಿಟಲ್ಸ್ ನೀಡಿದ ಗುರಿಯನ್ನು 19.4 ಓವರ್‌ಗಳಲ್ಲಿ ಮುಟ್ಟಿದ ಲಕ್ನೋ ಸೂಪರ್ ಜೈಂಟ್ಸ್ ಗೆಲುವು ಸಾಧಸಿತು. ಈ ಮೂಲಕ ಟೂರ್ನಿಯಲ್ಲಿನ ತನ್ನ ಎರಡನೇ ಸೋಲನ್ನು ಕಂಡ ಡೆಲ್ಲಿ ಕ್ಯಾಪಿಟಲ್ಸ್ ಹಿನ್ನಡೆ ಅನುಭವಿಸಿದೆ. ಇನ್ನು ಪಂದ್ಯ ಮುಗಿದ ನಂತರ ಮಾತನಾಡಿದ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಭ್ ಪಂತ್ ಪಂದ್ಯದಲ್ಲಿ ತಮ್ಮ ತಂಡ ಸೋತಿದ್ದಕ್ಕೆ ಕಾರಣ ಯಾರು ಎಂಬುದನ್ನು ಈ ಕೆಳಕಂಡಂತೆ ತಿಳಿಸಿದ್ದಾರೆ.

10 - 15 ಓವರ್ ರನ್ ಕೊರತೆ
ಪವರ್‌ಪ್ಲೇನಲ್ಲಿ ಉತ್ತಮ ಪ್ರದರ್ಶನ ನೀಡಿದ ತಮ್ಮ ತಂಡ ಮಧ್ಯದಲ್ಲಿ ಮಂಕಾಯಿತು ಎಂದಿರುವ ರಿಷಭ್ ಪಂತ್ 10 - 15 ರನ್‌ಗಳ ಕೊರತೆಯಿಂದ ತಂಡ ಸೋತಿತು ಎಂದಿದ್ದಾರೆ. ಹಾಗೂ ತಮ್ಮ ತಂಡದ ಸ್ಪಿನ್ನರ್‌ಗಳು ಉತ್ತಮ ಪ್ರದರ್ಶನ ನೀಡಿದರು ಎಂಬುದನ್ನು ಇದೇ ವೇಳೆ ತಿಳಿಸಿದರು.

ರನ್ ಬಾರಿಸದೇ ಇದ್ದದ್ದು ಸ್ವತಃ ರಿಷಭ್ ಪಂತ್!
ಇನ್ನು ತಮ್ಮ ತಂಡದ ಸೋಲಿಗೆ 10 - 15 ರನ್‌ಗಳ ಕೊರತೆಯೇ ಕಾರಣ ಎಂದಿರುವ ರಿಷಭ್ ಪಂತ್ ಸ್ವತಃ ತಮ್ಮನ್ನು ತಾವೇ ಟೀಕಿಸಿಕೊಂಡಂತಿದೆ. ಹೌದು, ಈ ಪಂದ್ಯದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರಿಷಭ್ ಪಂತ್ 36 ಎಸೆತಗಳಲ್ಲಿ ಅಜೇಯ 39 ರನ್ ಗಳಿಸಿದರು. ಹೀಗೆ ಹೊಡಿಬಡಿ ಆಟದಲ್ಲಿ ರಿಷಭ್ ಪಂತ್ ಏಕದಿನ ರೀತಿ ಬ್ಯಾಟ್ ಬೀಸದೇ ಎಂದಿನಂತೆ ಹೊಡಿಬಡಿ ಆಟ ಆಡಿದ್ದರೆ, ಸ್ವತಃ ಅವರೇ ಹೇಳಿರುವ ಆ 10 - 15 ರನ್‌ಗಳ ಕೊರತೆ ಉಂಟಾಗುತ್ತಿರಲಿಲ್ಲ.

ಕ್ವಿಂಟನ್ ಡಿ ಕಾಕ್ ಪಂದ್ಯಶ್ರೇಷ್ಠ
ಇನ್ನು ಈ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ ಆರಂಭಿಕ ಆಟಗಾರನಾಗಿ ಕಣಕ್ಕಿಳಿದ ಕ್ವಿಂಟನ್ ಡಿ ಕಾಕ್ 52 ಎಸೆತಗಳಲ್ಲಿ 80 ರನ್ ಬಾರಿಸಿದರು. ಡಿ ಕಾಕ್ ಆರಂಭದಲ್ಲಿ ಈ ರೀತಿ ಬ್ಯಾಟ್ ಬೀಸದೇ ಇದ್ದಿದ್ದರೆ ಡೆಲ್ಲಿ ಕ್ಯಾಪಿಟಲ್ಸ್ ರೀತಿ ಲಕ್ನೋ ಸೂಪರ್ ಜೈಂಟ್ಸ್ ಕೂಡ ನಿಧಾನಗತಿಯಲ್ಲಿ ಇರುತ್ತಿತ್ತು ಹಾಗೂ ತಂಡ ಹೆಚ್ಚಿನ ಒತ್ತಡಕ್ಕೆ ಸಿಲುಕುತ್ತಿತ್ತು ಎನ್ನಬಹುದು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications