IPL 2022: ರೋಹಿತ್ ಶರ್ಮಾ ವಿರಾಟ್ ಕೊಹ್ಲಿ ರೀತಿ ಕೆಟ್ಟ ಫಾರ್ಮ್‌ನಲ್ಲೇನೂ ಇಲ್ಲ ಎಂದ ಮಾಜಿ ಕ್ರಿಕೆಟಿಗ!

ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ, ಸದ್ಯ ಭಾರತ ಕ್ರಿಕೆಟ್ ತಂಡದ ಪ್ರಮುಖ ಆಧಾರ ಸ್ತಂಭಗಳಾಗಿ ಗುರುತಿಸಿಕೊಂಡಿರುವಂತಹ ಪ್ರಮುಖ ಕ್ರಿಕೆಟಿಗರು. ಅಂತರರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಇಬ್ಬರೂ ಸಹ ಓರ್ವ ಆಟಗಾರನಾಗಿ ಹಾಗೂ ನಾಯಕರಾಗಿ ತಮ್ಮದೇ ಆದ ವಿಭಿನ್ನ ಕೊಡುಗೆಗಳನ್ನು ನೀಡಿದ್ದಾರೆ.
ಈ ಇಬ್ಬರೂ ಸಹ ಮೈದಾನಕ್ಕಿಳಿದರೆ ರನ್ ಹೊಳೆ ಹರಿಸಬಲ್ಲಂತಹ ಸ್ಫೋಟಕ ಆಟಗಾರರಾಗಿದ್ದು, ಈ ಕಾರಣದಿಂದಾಗಿಯೇ ಸಾಮಾಜಿಕ ಜಾಲತಾಣದಲ್ಲಿ ಇಬ್ಬರ ನಡುವೆ ದೊಡ್ಡ ಮಟ್ಟದ ಹೋಲಿಕೆಗಳನ್ನು ಮಾಡಿ ನೆಟ್ಟಿಗರು ಚರ್ಚಿಸುತ್ತಿರುತ್ತಾರೆ. ರೋಹಿತ್ ಶರ್ಮಾ ಉತ್ತಮ ಕ್ರಿಕೆಟಿಗರಾ ಅಥವಾ ವಿರಾಟ್ ಕೊಹ್ಲಿ ಉತ್ತಮ ಕ್ರಿಕೆಟಿಗರಾ ಎಂಬ ಚರ್ಚೆ ಇಬ್ಬರ ಅಭಿಮಾನಿ ಬಳಗಗಳಲ್ಲಿ ಆಗಾಗ ನಡೆಯುತ್ತಲೇ ಇರುತ್ತದೆ.
ಇನ್ನು ವಿರಾಟ್ ಕೊಹ್ಲಿ ಭಾರತ ಕ್ರಿಕೆಟ್ ತಂಡದ ನಾಯಕತ್ವದಿಂದ ಕೆಳಗಿಳಿದು ರೋಹಿತ್ ಶರ್ಮಾ ನೂತನ ನಾಯಕನಾಗಿ ಜವಾಬ್ದಾರಿ ವಹಿಸಿಕೊಂಡ ನಂತರವಂತೂ ಇಬ್ಬರ ನಡುವಿನ ಹೋಲಿಕೆ ದೊಡ್ಡ ಮಟ್ಟಕ್ಕೆ ತಲುಪಿದೆ ಎಂದರೆ ತಪ್ಪಾಗಲಾರದು. ಅದರಲ್ಲಿಯೂ ಪ್ರಸ್ತುತ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಈ ಇಬ್ಬರು ಯಾವ ರೀತಿಯ ಪ್ರದರ್ಶನವನ್ನು ನೀಡಲಿದ್ದಾರೆ ಎಂಬ ಕುತೂಹಲ ಕ್ರಿಕೆಟ್ ಅಭಿಮಾನಿಗಳಲ್ಲಿ ಹೆಚ್ಚಿತ್ತು. ಆದರೆ, ಈ ಇಬ್ಬರೂ ಸಹ ಅಭಿಮಾನಿಗಳ ನಿರೀಕ್ಷೆಗೆ ತಕ್ಕಂಥ ಪ್ರದರ್ಶನವನ್ನು ನೀಡಲಾಗದೇ ವಿಫಲರಾಗಿದ್ದಾರೆ. ಟೂರ್ನಿಯಲ್ಲಿ ರನ್ ಗಳಿಸಲು ಪರದಾಡುತ್ತಿರುವ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇಲ್ಲಿಯವರೆಗೂ ನಡೆದಿರುವ ಪಂದ್ಯಗಳ ಪೈಕಿ ಒಮ್ಮೆಯೂ ಅರ್ಧಶತಕವನ್ನು ಕೂಡ ಬಾರಿಸಲಾಗದೇ ಕೆಟ್ಟ ಫಾರ್ಮ್‌ನಲ್ಲಿದ್ದಾರೆ. ಇನ್ನು ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿನ ಈ ಇಬ್ಬರ ಕಳಪೆ ಪ್ರದರ್ಶನದ ಕುರಿತಾಗಿ ಮಾತನಾಡಿರುವ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಈ ಕೆಳಕಂಡಂತೆ ಹೇಳಿಕೆ ನೀಡಿದ್ದಾರೆ.

ರೋಹಿತ್ ಶರ್ಮಾ ಫಾರ್ಮ್ ವಿರಾಟ್ ಕೊಹ್ಲಿಯಷ್ಟು ಕೆಟ್ಟದಾಗಿಲ್ಲ
ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಪ್ರದರ್ಶನದ ಕುರಿತು ಮಾತನಾಡಿದ ಸಂಜಯ್ ಮಂಜ್ರೇಕರ್ ರೋಹಿತ್ ಶರ್ಮಾ ಕೆಲ ಪಂದ್ಯಗಳಲ್ಲಿ 20ಕ್ಕೂ ಹೆಚ್ಚು ರನ್ ಕಲೆ ಹಾಕುತ್ತಿದ್ದು, ಬ್ಯಾಟಿಂಗ್ ವೇಳೆ ಒಳ್ಳೆಯ ಹಿಡಿತವನ್ನು ಹೊಂದಿದ್ದಾರೆ, ರೋಹಿತ್ ಶರ್ಮಾ ಫಾರ್ಮ್ ವಿರಾಟ್ ಕೊಹ್ಲಿ ರೀತಿ ಕೆಟ್ಟದಾಗಿಲ್ಲ ಎಂದು ಇ ಎಸ್ ಪಿ ಎನ್ ಸಂದರ್ಶನದಲ್ಲಿ ಹೇಳಿಕೆ ನೀಡಿದ್ದಾರೆ.

ರೋಹಿತ್ ಶರ್ಮಾ ಜೋಸ್ ಬಟ್ಲರ್ ರೀತಿ ಬ್ಯಾಟ್ ಬೀಸುತ್ತಿಲ್ಲ
ಇನ್ನೂ ಮುಂದುವರಿದು ಮಾತನಾಡಿರುವ ಸಂಜಯ್ ಮಂಜ್ರೇಕರ್ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಜೋಸ್ ಬಟ್ಲರ್ ಹೇಗೆ ದೊಡ್ಡ ಮೊತ್ತಗಳನ್ನು ಕಲೆಹಾಕಿ ಆಸರೆಯಾಗುತ್ತಿದ್ದಾರೋ ಅದೇ ರೀತಿ ಮುಂಬೈ ಇಂಡಿಯನ್ಸ್ ತಂಡಕ್ಕೆ ರೋಹಿತ್ ಶರ್ಮಾ ಆಸರೆಯಾಗಬೇಕೆಂಬ ನಿರೀಕ್ಷೆಯಲ್ಲಿ ತಂಡವಿದೆ ಎಂದು ಹೇಳಿಕೆ ನೀಡಿದ್ದಾರೆ. ಆದರೆ ರೋಹಿತ್ ಶರ್ಮಾ ಜೋಸ್ ಬಟ್ಲರ್ ರೀತಿ ದೊಡ್ಡ ರನ್ ಕಲೆಹಾಕಿ ತಂಡಕ್ಕೆ ಆಸರೆಯಾಗುವಲ್ಲಿ ವಿಫಲರಾಗುತ್ತಿದ್ದಾರೆ ಎಂದೂ ಸಹ ಮಂಜ್ರೇಕರ್ ಅಭಿಪ್ರಾಯಪಟ್ಟಿದ್ದಾರೆ.

ಈ ಬಾರಿಯ ಟೂರ್ನಿಯಲ್ಲಿ ಕೊಹ್ಲಿ ಮತ್ತು ರೋಹಿತ್ ಶರ್ಮಾ ಪ್ರದರ್ಶನ
ಇನ್ನು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಪ್ರದರ್ಶನಗಳತ್ತ ಗಮನಹರಿಸಿದರೆ ಇಬ್ಬರ ಪ್ರದರ್ಶನದಲ್ಲಿ ಹೆಚ್ಚೇನೂ ವ್ಯತ್ಯಾಸಗಳು ಕಂಡುಬರುವುದಿಲ್ಲ. ರೋಹಿತ್ ಶರ್ಮಾ ಟೂರ್ನಿಯಲ್ಲಿ ಇಲ್ಲಿಯವರೆಗೂ 6 ಪಂದ್ಯಗಳಲ್ಲಿ ಬ್ಯಾಟ್ ಬೀಸಿ 114 ರನ್ ಕಲೆಹಾಕಿ 129.55 ಸ್ಟ್ರೈಕ್ ರೇಟ್ ಹೊಂದಿದ್ದರೆ, 7 ಪಂದ್ಯಗಳಲ್ಲಿ ಬ್ಯಾಟಿಂಗ್ ಮಾಡಿರುವ ವಿರಾಟ್ ಕೊಹ್ಲಿ 119 ರನ್ ಕಲೆಹಾಕಿ 124 ಸ್ಟ್ರೈಕ್ ರೇಟ್ ಹೊಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications