IPL 2022: ಸಾಲು ಸಾಲು ಸೋಲಿನಿಂದ ಕಂಗಾಲಾಗಿರುವ ರೋಹಿತ್ ಶರ್ಮಾಗೆ ಬ್ಯಾನ್ ಸಂಕಷ್ಟ!

ಪ್ರಸ್ತುತ ನಡೆಯುತ್ತಿರುವ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ನೂತನ ತಂಡಗಳಾಗಿ ಕಣಕ್ಕಿಳಿದಿರುವ ಕೆಎಲ್ ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟನ್ಸ್ ಉತ್ತಮ ಆರಂಭವನ್ನು ಪಡೆದುಕೊಂಡು ಮಿಂಚುತ್ತಿದ್ದರೆ, ಸಾಕಷ್ಟು ದೊಡ್ಡ ಮಟ್ಟದ ಅನುಭವವನ್ನು ಹೊಂದಿರುವ ಹಾಗೂ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಟ್ರೋಫಿಗಳನ್ನು ಗೆದ್ದಿರುವ ತಂಡಗಳು ಎಂಬ ಖ್ಯಾತಿಯನ್ನು ಪಡೆದಿರುವ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಸಾಲು ಸಾಲು ಪಂದ್ಯಗಳಲ್ಲಿ ಸೋತು ಕೆಟ್ಟ ಆರಂಭವನ್ನು ಪಡೆದುಕೊಂಡಿವೆ.
ಚೆನ್ನೈ ಸೂಪರ್ ಕಿಂಗ್ಸ್ ಸತತ 4 ಪಂದ್ಯಗಳಲ್ಲಿ ಸೋತು ತನ್ನ ಐದನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಗೆದ್ದು ಗೆಲುವಿನ ಖಾತೆ ತೆರೆದಿದ್ದರೆ, ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ 5 ಬಾರಿ ಟ್ರೋಫಿಯನ್ನು ಎತ್ತಿ ಹಿಡಿದಿರುವಂತಹ ಬೃಹತ್ ಇತಿಹಾಸವನ್ನು ಹೊಂದಿರುವ ಮುಂಬೈ ಇಂಡಿಯನ್ಸ್ ಸಾಲು ಸಾಲಾಗಿ 5 ಪಂದ್ಯಗಳನ್ನು ಸೋತು ಮುಖಭಂಗಕ್ಕೆ ಒಳಗಾಗಿದೆ. ರೋಹಿತ್ ಶರ್ಮಾ ನಾಯಕತ್ವವಿದ್ದರೆ ಗೆಲುವು ಬಹುತೇಕ ಖಚಿತ ಎನ್ನುತ್ತಿದ್ದವರು ರೋಹಿತ್ ಶರ್ಮಾ ನಾಯಕತ್ವ ಬದಲಾವಣೆಯಾಗಬೇಕಾದ ಸಮಯ ಸನಿಹಕ್ಕೆ ಬಂದಿದೆ ಎಂಬ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಹೀಗೆ ಒಂದೆಡೆ ಸಾಲು ಸಾಲು ಸೋಲು, ಮತ್ತೊಂದೆಡೆ ನಾಯಕತ್ವದ ಕುರಿತಾದ ಟೀಕೆಗಳು ರೋಹಿತ್ ಶರ್ಮಾರನ್ನು ಕಾಡುತ್ತಿದ್ದರೆ, ಮಗದೊಂದೆಡೆ ರೋಹಿತ್ ಶರ್ಮಾಗೆ ಬ್ಯಾನ್ ಭೀತಿ ಶುರುವಾಗಿದೆ.
ಹೌದು, ರೋಹಿತ್ ಶರ್ಮಾ ಸಾಲು ಸಾಲು ಪಂದ್ಯಗಳಲ್ಲಿ ತಮ್ಮ ನಾಯಕತ್ವ ವಿಫಲವಾಗುತ್ತಿರುವ ತಲೆ ಬಿಸಿಯ ನಡುವೆಯೇ ನಿಷೇಧವಾಗುವ ಭಯದಲ್ಲಿದ್ದಾರೆ. ಈ ನಿಷೇಧದಿಂದ ತಪ್ಪಿಸಿಕೊಳ್ಳಲು ಮುಂದಿನ ಪಂದ್ಯಗಳಲ್ಲಿ ಎಚ್ಚರಿಕೆಯ ಆಟವನ್ನು ಆಡಲೇಬೇಕಿರುವ ರೋಹಿತ್ ಶರ್ಮಾ ನಿಷೇಧದಿಂದ ತಪ್ಪಿಸಿಕೊಳ್ಳುತ್ತಾರಾ ಅಥವಾ ನಿಷೇಧದಿಂದ ತಪ್ಪಿಸಿಕೊಳ್ಳುವಲ್ಲಿ ವಿಫಲರಾಗುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ. ರೋಹಿತ್ ಶರ್ಮಾಗೆ ಎದುರಾಗಿರುವ ಆ ನಿಷೇಧದ ಭೀತಿ ಕುರಿತಾದ ವಿವರ ಕೆಳಕಂಡಂತಿದೆ ಓದಿ.

ರೋಹಿತ್ ಶರ್ಮಾ ಬ್ಯಾನ್ ಭೀತಿಗೆ ಇದೇ ಕಾರಣ
ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ಸಾಲು ಸಾಲು ಪಂದ್ಯಗಳಲ್ಲಿ ಸೋಲುವುದು ಮಾತ್ರವಲ್ಲದೇ ಇಲ್ಲಿಯವರೆಗೂ ನಡೆದಿರುವ ಪಂದ್ಯಗಳ ಪೈಕಿ 2 ಪಂದ್ಯಗಳಲ್ಲಿ ನಿಧಾನಗತಿಯ ಬೌಲಿಂಗ್ ಮಾಡಿದ ಕಾರಣಕ್ಕೆ ದಂಡವನ್ನು ತೆತ್ತಿದೆ. ಈಗಾಗಲೇ 2 ಬಾರಿ ನಿಧಾನಗತಿಯ ಬೌಲಿಂಗ್ ವಿಚಾರವಾಗಿ ದಂಡವನ್ನು ಕಟ್ಟಿರುವ ರೋಹಿತ್ ಶರ್ಮಾ ಇನ್ನೊಂದು ಪಂದ್ಯದಲ್ಲಿ ಇದೇ ರೀತಿಯ ನಿಧಾನಗತಿಯ ಬೌಲಿಂಗ್ ಮಾಡಿಸಿದರೆ ಪಂದ್ಯವೊಂದರಲ್ಲಿ ನಿಷೇಧಕ್ಕೊಳಗಾಗಲಿದ್ದಾರೆ.

ನಿಧಾನಗತಿಯ ಬೌಲಿಂಗ್ ಮಾಡಿದ್ದ ಪಂದ್ಯಗಳಿವು
ಮುಂಬೈ ಇಂಡಿಯನ್ಸ್ ಈ ಬಾರಿಯ ಐಪಿಎಲ್ ಟೂರ್ನಿಯ ತನ್ನ ಚೊಚ್ಚಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೆಣಸಾಟ ನಡೆಸಿತ್ತು ಹಾಗೂ ಇದೇ ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್ ಮಾಡಿದ ಕಾರಣ ನಾಯಕ ರೋಹಿತ್ ಶರ್ಮಾಗೆ 12 ಲಕ್ಷ ರೂಪಾಯಿಗಳ ದಂಡವನ್ನು ಕೂಡ ವಿಧಿಸಲಾಗಿತ್ತು. ಇನ್ನು ಇತ್ತೀಚಿಗಷ್ಟೇ ಪಂಜಾಬ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿಯೂ ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ನಿಧಾನಗತಿಯ ಬೌಲಿಂಗ್ ಮಾಡಿದ್ದು ನಾಯಕ ರೋಹಿತ್ ಶರ್ಮಾ 24 ಲಕ್ಷ ದಂಡ ತೆತ್ತಿದ್ದಾರೆ ಹಾಗೂ ತಂಡದ ಉಳಿದ ಆಟಗಾರರಿಗೆ 6 ಲಕ್ಷ ದಂಡವನ್ನು ವಿಧಿಸಲಾಗಿದೆ.

ಮತ್ತೆ ನಿಧಾನಗತಿಯ ಬೌಲಿಂಗ್ ಮಾಡಿದರೆ?
ಈಗಾಗಲೇ 2 ಪಂದ್ಯಗಳಲ್ಲಿ ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ನಿಧಾನಗತಿಯ ಬೌಲಿಂಗ್ ಮಾಡಿದ್ದು, ಇನ್ನೊಂದು ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್ ಮಾಡಿದರೆ ರೋಹಿತ್ ಶರ್ಮಾ ಐಪಿಎಲ್ ನಿಯಮದ ಪ್ರಕಾರ 30 ಲಕ್ಷ ರೂಪಾಯಿಗಳ ದಂಡ ಹಾಗೂ ನಂತರ ನಡೆಯಲಿರುವ ಪಂದ್ಯವೊಂದರಲ್ಲಿ ನಿಷೇಧಕ್ಕೆ ಒಳಗಾಗಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications