IPL 2022: ಗುಜರಾತ್ ಅಲ್ಲ ಈ ಬಲಿಷ್ಠ ತಂಡ ಈ ಬಾರಿ ಚಾಂಪಿಯನ್ ಆಗುತ್ತೆ ಎಂದ ಹರ್ಭಜನ್ ಸಿಂಗ್

ಕಳೆದ ಮಾರ್ಚ್ ತಿಂಗಳಿನಲ್ಲಿ ಆರಂಭವಾದ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಮುಕ್ತಾಯದ ಹಂತಕ್ಕೆ ಬಂದು ತಲುಪಿದ್ದು, ಭಾನುವಾರ ನಡೆಯಲಿರುವ ಬಹುನಿರೀಕ್ಷಿತ ಫೈನಲ್ ಪಂದ್ಯದ ಮೂಲಕ ಟೂರ್ನಿಗೆ ತೆರೆ ಬೀಳಲಿದೆ. ಈಗಾಗಲೇ ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟನ್ಸ್ ಯಶಸ್ವಿಯಾಗಿ ಫೈನಲ್ ತಲುಪಿದ್ದು, ಹಾರ್ದಿಕ್ ಪಾಂಡ್ಯ ಬಳಗಕ್ಕೆ ಎದುರಾಳಿಯಾಗಿ ಯಾವ ತಂಡ ಫೈನಲ್ ತಲುಪಲಿದೆ ಎಂಬ ಕುತೂಹಲ ಹೆಚ್ಚಾಗಲಿದೆ.
ಇನ್ನು ಗುಜರಾತ್ ಟೈಟನ್ಸ್ ತಂಡದ ವಿರುದ್ಧ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಸೋತ ರಾಜಸ್ಥಾನ್ ರಾಯಲ್ಸ್ ಮತ್ತು ಎಲಿಮಿನೇಟರ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಗೆದ್ದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫೈನಲ್ ಪ್ರವೇಶಿಸಲು ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಸೆಣಸಾಡಲಿವೆ. ಹೌದು, ಸಂಜು ಸ್ಯಾಮ್ಸನ್ ಮತ್ತು ಫಾಫ್ ಡು ಪ್ಲೆಸಿಸ್ ಬಳಗ ಇಂದು ( ಮೇ 27 ) ಅಹ್ಮದಾಬಾದ್‌ನ ನರೇಂದ್ರ ಮೋದಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿದ್ದು, ರಾಯಲ್ಸ್ ಕಾಳಗಕ್ಕೆ ಸಾಕ್ಷಿಯಾಗಲು ಪ್ರೇಕ್ಷಕ ವೃಂದ ಕಾಯುತ್ತಿದೆ. ಈ ಮಹಾ ಕಾಳಗದಲ್ಲಿ ಗೆಲ್ಲಲಿರುವ ತಂಡ ಯಶಸ್ವಿಯಾಗಿ ಫೈನಲ್ ಪ್ರವೇಶಿಸಲಿದ್ದು, ಯಾವ ತಂಡ ಇದರಲ್ಲಿ ಯಶಸ್ವಿಯಾಗಬಹುದು ಎಂಬ ಲೆಕ್ಕಾಚಾರಗಳು ನಡೆಯುತ್ತಿವೆ.
ಇದೇ ವೇಳೆ ಹಲವು ಕ್ರಿಕೆಟ್ ಪಂಡಿತರು ಹಾಗೂ ಕ್ರಿಕೆಟ್ ಅಭಿಮಾನಿಗಳು ಯಾವ ತಂಡ ಫೈನಲ್ ಪ್ರವೇಶಿಸಿ ಗುಜರಾತ್ ಟೈಟನ್ಸ್ ತಂಡದ ವಿರುದ್ಧ ಸೆಣಸಾಟ ನಡೆಸಬಹುದು ಎಂಬುದನ್ನು ಊಹಿಸುತ್ತಿದ್ದರೆ, ಭಾರತದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಮಾತ್ರ ಈ ಬಾರಿ ಯಾವ ತಂಡ ಟ್ರೋಫಿಯನ್ನು ಎತ್ತಿ ಹಿಡಿಯಲಿದೆ ಎಂಬುದನ್ನು ಮುಕ್ತಕಂಠದಿಂದ ಹೇಳಿದ್ದಾರೆ. ಹೌದು, ಸ್ಪೋರ್ಟ್ಸ್ ಕೀಡಾ ವೆಬ್ ತಾಣದ ಜೊತೆ ಮಾತನಾಡಿದ ಹರ್ಭಜನ್ ಸಿಂಗ್ ಈ ಕೆಳಕಂಡಂತೆ ಟ್ರೋಫಿ ಗೆಲ್ಲುವ ತಂಡವನ್ನು ಹೆಸರಿಸಿದ್ದಾರೆ.

ಈ ಬಾರಿ ಈ ತಂಡವೇ ಚಾಂಪಿಯನ್
ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಫಾಫ್ ಡು ಪ್ಲೆಸಿಸ್ ನಾಯಕತ್ವದಲ್ಲಿ ಕಣಕ್ಕಿಳಿದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟ್ರೋಫಿ ಎತ್ತಿ ಹಿಡಿಯಲಿದೆ ಎಂದಿದ್ದಾರೆ. ಬಹುತೇಕ ಮಂದಿ ಈ ಬಾರಿ ಗುಜರಾತ್ ಟೈಟನ್ಸ್ ತಂಡ ಟ್ರೋಫಿ ಎತ್ತಿ ಹಿಡಿಯಲಿದೆ ಎನ್ನುತ್ತಿರುವಾದ ಹರ್ಭಜನ್ ಸಿಂಗ್ ಮಾತ್ರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕಪ್ ಗೆಲ್ಲಲಿದೆ ಎನ್ನುವ ದೃಢ ನಂಬಿಕೆ ನನ್ನಲಿದೆ ಎಂದಿದ್ದಾರೆ.

ಬೌಲಿಂಗ್, ಬ್ಯಾಟಿಂಗ್, ಫೀಲ್ಡಿಂಗ್ ಎಲ್ಲದರಲ್ಲೂ ಉತ್ತಮವಾಗಿದೆ ಆರ್‌ಸಿಬಿ
ಇನ್ನೂ ಮುಂದುವರಿದು ಮಾತನಾಡಿರುವ ಹರ್ಭಜನ್ ಸಿಂಗ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆಲ್ಲುತ್ತದೆ ಎನ್ನಲು ಕಾರಣವನ್ನೂ ಸಹ ತಿಳಿಸಿದ್ದಾರೆ. ಈ ಬಾರಿ ಚಾಲೆಂಜರ್ಸ್ ಬಳಗ ಬಲಿಷ್ಟ ಬ್ಯಾಟಿಂಗ್, ಬಲಿಷ್ಟ ಬೌಲಿಂಗ್ ಮತ್ತು ಬಲಿಷ್ಟ ಫೀಲ್ಡಿಂಗ್ ಮಾಡಬಲ್ಲ ಆಟಗಾರರಿಂದ ಕೂಡಿದ್ದು, ಟ್ರೋಫಿ ಗೆಲ್ಲಲು ಬೇಕಾದ ಪಕ್ಕಾ ತಂಡವನ್ನು ಹೊಂದಿದೆ ಎಂದು ಹೊಗಳಿದ್ದಾರೆ.

ಬಲಿಷ್ಟ ತಂಡಗಳನ್ನೇ ಸದೆಬಡಿದಿದೆ ಆರ್‌ಸಿಬಿ
ಇನ್ನು ಹರ್ಭಜನ್ ಸಿಂಗ್ ಹೇಳಿಕೆಯಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕಳೆದ ಆವೃತ್ತಿಗಳಲ್ಲಿ ಮಾಡುತ್ತಿದ್ದ ತಪ್ಪುಗಳನ್ನು ಈ ಬಾರಿ ಮಾಡುತ್ತಿಲ್ಲ. ಅದರಲ್ಲಿಯೂ ಬಲಿಷ್ಟ ತಂಡಗಳೆನ್ನೆಸಿಕೊಂಡಿದ್ದ ಗುಜರಾತ್ ಟೈಟನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳನ್ನು ತನ್ನ ಕೊನೆಯ ಪಂದ್ಯಗಳಲ್ಲಿ ಎದುರಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎರಡೂ ತಂಡಗಳ ವಿರುದ್ಧ ಗೆದ್ದಿದ್ದು ಬಲಿಷ್ಟವಾಗಿ ತೋರುತ್ತಿದೆ. ಕ್ವಾಲಿಫೈಯರ್ ಸುತ್ತಿನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನೇನಾದರೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೋಲಿಸಿದರೆ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಗೆಲ್ಲುವ ಸಾಧ್ಯತೆ ಹೆಚ್ಚಿದೆ. ಏಕೆಂದರೆ ಲೀಗ್ ಹಂತದ ತನ್ನ ಅಂತಿಮ ಪಂದ್ಯದಲ್ಲಿಯೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗುಜರಾತ್ ಟೈಟನ್ಸ್ ತಂಡವನ್ನು ಸೋಲಿಸಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications