
1 RCB ಸ್ಕ್ವಾಡ್ 2022
ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಮೊಹಮ್ಮದ್ ಸಿರಾಜ್, ಹರ್ಷಲ್ ಪಟೇಲ್, ವನಿಂದು ಹಸರಂಗ, ದಿನೇಶ್ ಕಾರ್ತಿಕ್, ಅನುಜ್ ರಾವತ್, ಶಹಬಾಜ್ ಅಹ್ಮದ್, ಆಕಾಶ್ ದೀಪ್, ಜೋಶ್ ಹೇಜಲ್‌ವುಡ್, ಮಹಿಪಾಲ್ ಲೊಮ್ರೋರ್, ಫಿನ್ ಅಲೆನ್, ಶೆರ್ಫಾನ್ ರುದರ್‌ಫೋರ್ಡ್ ಪ್ರಭುದೇಸಾಯಿ, ಚಾಮಾ ಮಿಲಿಂದ್, ಅನೀಶ್ವರ್ ಗೌತಮ್, ಕರ್ಣ್ ಶರ್ಮಾ, ಸಿದ್ಧಾರ್ಥ್ ಕೌಲ್, ಲುವ್ನಿತ್ ಸಿಸೋಡಿಯಾ, ಡೇವಿಡ್ ವಿಲ್ಲಿ.
ಆರ್‌ಸಿಬಿ ಕೋಚ್‌ಗಳು: ಮೈಕ್ ಹೆಸ್ಸನ್ (ಕ್ರಿಕೆಟ್ ನಿರ್ದೇಶಕ), ಸಂಜಯ್ ಬಂಗಾರ್ (ಮುಖ್ಯ ಕೋಚ್), ಶ್ರೀಧರನ್ ಶ್ರೀರಾಮ್ (ಬ್ಯಾಟಿಂಗ್ ಮತ್ತು ಸ್ಪಿನ್ ಕೋಚ್), ಆಡಮ್ ಗ್ರಿಫಿತ್ಸ್ (ಬೌಲಿಂಗ್ ಕೋಚ್), ಮಲೋಲನ್ ರಂಗರಾಜನ್ (ಫೀಲ್ಡಿಂಗ್ ಕೋಚ್).

ಆರ್‌ಸಿಬಿ ತಂಡದ ಬಲಿಷ್ಠ ಪ್ಲೇಯಿಂಗ್ XI
1. ಫಾಫ್ ಡು ಪ್ಲೆಸಿಸ್ (ನಾಯಕ), 2. ಅನುಜ್ ರಾವತ್, 3. ವಿರಾಟ್, ಕೊಹ್ಲಿ, 4. ಮಹಿಪಾಲ್ ಲೊಮ್ರೋರ್, 5. ಗ್ಲೆನ್ ಮ್ಯಾಕ್ಸ್‌ವೆಲ್, 6. ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), 7. ಶಹಬಾಜ್ ಅಹ್ಮದ್, 8. ವನಿಂದು ಹಸರಂಗ, 9. ಹರ್ಷಲ್ ಪಟೇಲ್, 10. ಮೊಹಮ್ಮದ್ ಸಿರಾಜ್, 11. ಜೋಶ್ ಹ್ಯಾಜಲ್‌ವುಡ್.

ಆರ್‌ಸಿಬಿ ತಂಡದ ಬಲ
ಈ ಬಾರಿಯ ಮೆಗಾ ಹರಾಜಿನಲ್ಲಿ ಆರ್‌ಸಿಬಿ ತಂಡ ಫಾಫ್ ಡು ಪ್ಲೆಸಿಸ್ ಅವರಂತಾ ಅನುಭವಿ ಆಟಗಾರನನ್ನು ತಂಡಕ್ಕೆ ಸೇರ್ಪಡೆಗೊಳಿಸುವಲ್ಲಿ ಯಶಸ್ವಿಯಾಗಿದೆ. ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ದಿನೇಶ್ ಕಾರ್ತಿಕ್ ಅವರಂತಾ ಆಟಗಾರರೊಂದಿಗೆ ಬ್ಯಾಟಿಂಗ್ ವಿಭಾಗದ ಹೆಚ್ಚಿಸಲಿದ್ದಾರೆ. ಕಳೆದ ಆವೃತ್ತಿಯಲ್ಲಿ ಫಾಫ್ ಡು ಪ್ಲೆಸಿಸ್ ಚೆನ್ನೈ ಸೂಪರ್ ಕಿಂಗ್ಸ್ ಪರವಾಗಿ ಅದ್ಭುತ ಪ್ರದರ್ಶನ ನೀಡಿದ್ದು ಟೂರ್ನಿಯಲ್ಲಿ ಎರಡನೇ ಅತೀ ಹೆಚ್ಚು ರನ್‌ಗಳಿಸಿದ ಆಟಗಾರನಾಗಿ ಮಿಂಚಿದ್ದರು.
ಬೌಲಿಂಗ್ ವಿಭಾಗದಲ್ಲಿ ಕೂಡ ಆರ್‌ಸಿಬಿ ಸಾಕಷ್ಟು ಅತ್ಯುತ್ತಮ ಸಾಮರ್ಥ್ಯದ ಆಟಗಾರರನ್ನು ಹೊಂದಿದೆ. ಮೊಹಮ್ಮದ್ ಸಿರಾಜ್ ಅವರಂತಾ ಪ್ರತಿಭಾವಂತಾ ಆಟಗಾರನ ಜೊತೆಗೆ ಕಳೆದ ಆವೃತ್ತಿಯಲ್ಲಿ ಅತೀ ಹೆಚ್ಚು ವಿಕೆಟ್ ಕಬಳಿಸಿ ಪರ್ಪಲ್ ಕ್ಯಾಪ್ ಪಡೆದುಕೊಂಡಿದ್ದ ಹರ್ಷಲ್ ಪಟೇಲ್ ಈ ಬಾರಿಯ ಆವೃತ್ತಿಯಲ್ಲಿ ಕೂಡ ಮಿಂಚಲು ಸಜ್ಜಾಗಿದ್ದಾರೆ. ಇನ್ನು 2021ರ ಐಪಿಎಲ್‌ನಲ್ಲಿ ಕೆಲ ಪಂದ್ಯಗಳಲ್ಲಿ ಆಡಿದ್ದ ವನಿಂದು ಹಸರಂಗಾ ಅವರನ್ನು ಆರ್‌ಸಿಬಿ ಮತ್ತೆ ತಂಡಕ್ಕೆ ಸೇರ್ಪಡೆಗೊಳಿಸಿದ್ದು ಆಸಿಸ್ ಪಡೆಯ ಅನುಭವಿ ವೇಗಿ ಜೋಶ್ ಹೇಜಲ್‌ವುಡ್ ಕೂಡ ಆರ್‌ಸಿಬಿ ತಂಡದ ಬೌಲಿಂಗ್ ವಿಭಾಗದ ಬಲ ಹೆಚ್ಚಿಸಲಿದ್ದಾರೆ.

ಆರ್‌ಸಿಬಿ ದೌರ್ಬಲ್ಯ
ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಕಣಕ್ಕಿಳಿಯುತ್ತಿರುವ ಆರ್‌ಸಿಬಿ ತಂಡದಲ್ಲಿ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿರುವ ಭಾರತೀಯ ಸ್ಪಿನ್ ಬೌಲರ್‌ನ ಕೊರತೆ ಎದ್ದು ಕಾಣುತ್ತಿದೆ. ಯುಜುವೇಂದ್ರ ಚಾಹಲ್ ಅವರನ್ನು ಹರಾಜಿಗೆ ಬಿಟ್ಟುಕೊಟ್ಟ ಆರ್‌ಸಿಬಿ ಅವರ ಸಾಮರ್ಥ್ಯದ ಮತ್ತೋರ್ವ ಭಾರತೀಯ ಸ್ಪಿನ್ನರ್‌ನನ್ನು ತಂಡಕ್ಕೆ ಸೇರ್ಪಡೆಗೊಳಿಸುವಲ್ಲಿ ವಿಫಲವಾಗಿದೆ. ಹೀಗಾಗಿ ಕರ್ಣ್ ಶರ್ಮಾ ಅಥವಾ ಶಹಬಾಜ್ ಅಹ್ಮದ್ ಸಂಪೂರ್ಣವಾಗಿ ಚಹಾಲ್ ರೀತಿಯ ಸಾಮರ್ಥ್ಯ ಹೊಂದಿರುವ ಸ್ಪಿನ್ನರ್‌ಗಳು ಆಗಿಲ್ಲವಾಗಿರುವ ಕಾರಣ ಹಸರಂಗ ಮೇಲೆ ಸಹಜವಾಗಿ ಒತ್ತಡ ಹೆಚ್ಚಾಗುತ್ತದೆ.


Click it and Unblock the Notifications
