RCB Playing XI IPL 2022 : ಬಲಿಷ್ಠ ತಂಡಗಳಿಗೆ ಟಕ್ಕರ್ ಕೊಡಬಲ್ಲ ಆರ್‌ಸಿಬಿಯ ಸಂಭಾವ್ಯ ಆಡುವ ಬಳಗ ಹೇಗಿದೆ ಗೊತ್ತಾ!

ಈ ಬಾರಿಯ ಐಪಿಎಲ್ ಆವೃತ್ತಿಗೆ ಮುನ್ನ ಮೆಗಾ ಹರಾಜು ಪ್ರಕ್ರಿಯೆ ಮುಕ್ತಾಯವಾಗಿದೆ. ಎಲ್ಲಾ ತಂಡಗಳು ಕೂಡ ಗರಿಷ್ಠ 90 ಕೋಟಿ ಮೌಲ್ಯದ ಪರ್ಸ್ ಬಳಸಿಕೊಂಡು ಆಟಗಾರರನ್ನು ತಂಡಕ್ಕೆ ಸೇರ್ಪಡೆಗೊಳಿಸಿದೆ. ಆರ್‌ಸಿಬಿ ಫ್ರಾಂಚೈಸಿ ಕೂಡ ಈ ಬಾರಿಯ ಹರಾಜಿನಲ್ಲಿ ಕೆಲ ಅತ್ಯುತ್ತಮ ಆಟಗಾರರನ್ನು ತಂಡಕ್ಕೆ ಸೇರ್ಪಡೆಗೊಳಿಸಿದೆ. ಆರ್‌ಸಿಬಿ ಆಯ್ಕೆ ಮಾಡಿಕೊಂಡಿರುವ ಆಟಗಾರರ ಬಳಗ ಎಷ್ಟು ಬಲಿಷ್ಠವಾಗಿದೆ ಎಂಬುದು ಮೈದಾನದಲ್ಲಿ ಕಣಕ್ಕಿಳಿದ ಬಳಿಕ ಸ್ಪಷ್ಟವಾಗಲಿದೆ.
ಆದರೆ ಈ ಬಾರಿಯ ಹರಾಜಿನಲ್ಲಿ ಆರ್‌ಸಿಬಿ ಫ್ರಾಂಚೈಸಿಯ ಕೆಲ ನಿರ್ಧಾರಗಳು ಆರ್‌ಸಿಬಿ ಅಭಿಮಾನಿಗಳಿಗೆ ಸಮಾಧಾನ ತಂದಿಲ್ಲ ಎಂಬುದು ಸ್ಪಷ್ಟ. ಕೆಲ ಆಟಗಾರರ ಮೇಲೆ ಅನಾವಶ್ಯಕವಾಗಿ ದೊಡ್ಡ ಪ್ರಮಾಣದ ಹಣ ಸುರಿದದ್ದು, ಕೆಲ ಬಲಿಷ್ಠ ಆಟಗಾರರು ಉತ್ತಮ ಮೊತ್ತಕ್ಕೆ ಸೇರ್ಪಡೆಗೊಳಿಸುವ ಅವಕಾಶವಿದ್ದರೂ ಕನಿಷ್ಠ ಪ್ರಯತ್ನವನ್ನೂ ನಡೆಸದಿರಿವುದು, ಕನ್ನಡಿಗ ಆಟಗಾರರ ಕಡೆಗಣನೆ ಇದೆಲ್ಲಾ ಆರ್‌ಸಿಬಿ ಅಭಿಮಾನಿಗಳ ನಿರಾಸೆಗೆ ಕಾರಣವಾಗಿದೆ.
ಇದನ್ನೆಲ್ಲಾ ಹೊರತುಪಡಿಸಿಯೂ ಆರ್‌ಸಿಬಿ ಪಾಲಿಗೆ ಕೆಲ ಸಕಾರಾತ್ಮಕ ಅಂಶಗಳು ಕೂಡ ಇದೆ. ಅಂತಿಮವಾಗಿ ಆಟಗಾರರ ಆಡುವ ದಿನ ಮೈದಾನದಲ್ಲಿ ನೀಡುವ ಪ್ರದರ್ಶನ ಹೇಗಿರಲಿದೆ ಎಂಬುದು ಪ್ರಮುಖವಾಗುತ್ತದೆ. ಹೀಗಾಗಿ ಆರ್‌ಸಿಬಿ ತಂಡದ ಬಲಿಷ್ಠ ಆಡುವ ಬಳಗ ಹೇಗಿರಲಿದೆ ಎಂಬುದನ್ನು ಮುಂದೆ ಓದಿ..

ಆರಂಭಿಕರಾಗಿ ಕೊಹ್ಲಿ- ಫಾಪ್
ಆರ್‌ಸಿಬಿ ತಂಡದ ಪ್ರಮುಖ ಆಟಗಾರ ವಿರಾಟ್ ಕೊಹ್ಲಿ ಈ ಬಾರಿ ನಾಯಕತ್ವದ ಹೊಣೆಗಾರಿಕೆಯಿಂದ ಹೊರಬಂದಿದ್ದು ಪೂರ್ಣ ಪ್ರಮಾಣದ ಬ್ಯಾಟರ್ ಆಗಿ ತಂಡಕ್ಕೆ ನೆರವಾಗಲಿದ್ದಾರೆ. ಆರಂಭಿಕ ಆಟಗಾರನಾಗಿ ಕೊಹ್ಲಿ ಕಣಕ್ಕಿಳಿಯುವುದು ಬಹುತೇಕ ನಿಶ್ಚಿತ. ಇನ್ನು ವಿರಾಟ್ ಕೊಹ್ಲಿಗೆ ಮತ್ತೊಂದು ತುದಿಯಲ್ಲಿ ದಕ್ಷಿಣ ಆಫ್ರಕಾದ ಫಾಫ್ ಡು ಪ್ಲೆಸಿಸ್ ಸಾಥ್ ನೀಡಲಿದ್ದಾರೆ. ಕಳೆದ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಯಶಸ್ಸಿಗೆ ಪ್ರಮುಖ ಪಾತ್ರವಹಿಸಿದ್ದ ಫಾಫ್ ಡು ಪ್ಲೆಸಿಸ್ ಈ ಬಾರಿ ಆರ್‌ಸಿಬಿ ಪರವಾಗಿಯೂ ಅಂತಾದ್ದೇ ಅದ್ಭುತ ಪ್ರದರ್ಶನ ನೀಡುವ ನಿರೀಕ್ಷೆಯಿದೆ.

ಮಧ್ಯಮ ಕ್ರಮಾಂಕ
3ನೇ ಕ್ರಮಾಂಕದಲ್ಲಿ ಯುವ ಆಟಗಾರ ಮಹಿಪಾಲ್ ಲೋಮ್ರೊರ್ ಅವಕಾಶ ಪಡೆಯುವ ಸಾಧ್ಯತೆಯಿದೆ. ಇನ್ನು ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿಯಲಿದ್ದಾರೆ. 5ನೇ ಕ್ರಮಾಂಕದಲ್ಲಿ ಮತ್ತೋರ್ವ ಆಲ್‌ರೌಂಡರ್ ಆಟಗಾರ ಶಹ್ಬಾಜ್ ಅಹ್ಮದ್ ಅವಕಾಶ ಪಡೆಯುವ ಸಾಧ್ಯತೆಯಿದೆ. ಇನ್ನು ಅನುಭವಿ ಆಟಗಾರ ದಿನೇಶ್ ಕಾರ್ತಿಕ್ ಕೂಡ ಈ ಬಾರಿ ಆರ್‌ಸಿಬಿ ತಂಡಕ್ಕೆ ಸೇರ್ಪಡೆಯಾಗಿದ್ದು ವಿಕೆಟ್ ಕೀಪರ್ ಜೊತೆಗೆ ಫಿನಿಷರ್ ಜವಾಬ್ಧಾರಿಯು ಕೂಡ ದಿನೇಶ್ ಕಾರ್ತಿಕ್ ಹೆಗಲೇರಿದೆ.

ಕೆಳ ಕ್ರಮಾಂಕ, ಬೌಲರ್‌ಗಳು
ಇನ್ನು 7ನೇ ಕ್ರಮಾಂಕದಲ್ಲಿ ಮತ್ತೋರ್ವ ಆಲ್‌ರೌಂಡರ್ ಆಟಗಾರ ವನಿಂದು ಹಸರಂಗ ಕಣಕ್ಕಿಳಿಯಲಿದ್ದಾರೆ. ಇನ್ನು ವನಿಂದು ಹಸರಂಗ ಈ ಬಾರಿಯ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡದ ಪ್ರಮುಖ ಆಲ್‌ರೌಂಡರ್ ಆಗಿ ಕಣಕ್ಕಿಳಿಯಲಿದ್ದು 7ನೇ ಕ್ರಮಾಂಖದಲ್ಲಿ ಬ್ಯಾಟರ್ ಆಗಿಯೂ ಜವಾಬ್ಧಾರಿ ನಿರ್ವಹಿಸಲಿದ್ದಾರೆ. ಇನ್ನು ಬೌಲಿಂಗ್ ವಿಭಾಗ ಬಲಿಷ್ಠವಾಗಿ ಕಾಣಿಸುತ್ತಿದ್ದು ಹರ್ಷಲ್ ಪಟೇಲ್ ಹಾಗೂ ಮೊಹಮ್ಮದ್ ಸಿರಾಜ್‌ಗೆ ಅನುಭವಿ ಜೋಶ್ ಹೇಜಲ್‌ವುಡ್ ಸಾಥ್ ನೀಡಲಿದ್ದಾರೆ. ಸ್ಪಿನ್ನರ್ ಕರ್ಣ್ ಶರ್ಮಾ ಕೂಡ ಸಂಭಾವ್ಯ ಪ್ಲೇಯಿಂಗ್ XI ತಂಡದಲ್ಲಿದ್ದಾರೆ.

ಹರಾಜಿನ ನಂತರ ಆರ್‌ಸಿಬಿ ತಂಡ
ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಮೊಹಮ್ಮದ್ ಸಿರಾಜ್, ಫಾಫ್ ಡು ಪ್ಲೆಸಿಸ್, ಹರ್ಷಲ್ ಪಟೇಲ್, ವನಿಂದು ಹಸರಂಗ, ಜೋಶ್ ಹೇಜಲ್‌ವುಡ್, ದಿನೇಶ್ ಕಾರ್ತಿಕ್, ಅನುಜ್ ರಾವತ್, ಡೇವಿಡ್ ವಿಲ್ಲಿ, ಶಹಬಾಜ್ ಅಹ್ಮದ್, ಶೆರ್ಫಾನ್ ರುದರ್‌ಫೋರ್ಡ್, ಮಹಿಪಾಲ್ ಲೊಮ್ರೋರ್, ಫಿನ್ ಅಲೆನ್, ಸಿದ್ಧಾರ್ಥ್ ಕೌಲ್, ಜೇಸನ್ ಬೆಹ್ರೆಂಡಾರ್ಫ್, ಕರ್ಣ್ ಶರ್ಮಾ, ಸುಯಶ್ ಪ್ರಭುದೇಸಾಯಿ, ಚಾಮಾ ಮಿಲಿಂದ್, ಆಕಾಶ್ ದೀಪ್, ಅನೀಶ್ವರ್ ಗೌತಮ್, ಲುವ್ನಿತ್ ಸಿಸೋಡಿಯಾ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications