ಆತ 30 ಎಸೆತಗಳಲ್ಲಿ 80 ರನ್‌ಗಳಿಸಬಲ್ಲ ಆಟಗಾರ: ಆತನನ್ನು ಆರ್‌ಸಿಬಿ ಖಂಡಿತಾ ಗುರಿಯಾಗಿಸಲಿದೆ: ಭಜ್ಜಿ

ಐಪಿಎಲ್ ಮೆಗಾ ಹರಾಜಿಗೆ ಕ್ಷಣಗಣನೆ ಆರಂಭವಾಗುತ್ತಿರುವಂತೆಯೇ ಅಭಿಮಾನಿಗಳ ಕಾತುರತೆ ಕೂಡ ಹೆಚ್ಚಾಗುತ್ತಿದೆ. ಇನ್ನು ಆಟಗಾರರು ಹಾಗೂ ಫ್ರಾಂಚೈಸಿಗಳ ಮೇಲೆ ಈ ಸಂದರ್ಭದಲ್ಲಿ ಸಾಕಷ್ಟು ಒತ್ತಡಗಳು ಸಹಜವಾಗಿಯೇ ಇರುತ್ತದೆ. ಯಾವೆಲ್ಲಾ ಆಟಗಾರರನ್ನು ಗುರಿಯಾಗಿಸಿ ಹರಾಜು ನಡೆಸಬೇಕು ಎಂಬ ತನ್ನದೇ ಆದ ಲೆಕ್ಕಾಚಾರಗಳಲ್ಲಿ ಎಲ್ಲಾ ಫ್ರಾಂಚೈಸಿಗಳು ಕೂಡ ಇರುತ್ತವೆ.
ಇನ್ನು ಈ ಸಂದರ್ಭದಲ್ಲಿ ಐಪಿಎಲ್‌ನ ಪ್ರಮುಖ ತಂಡಗಳಲ್ಲಿ ಒಂದಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಈ ಬಾರಿಯ ಹರಾಜು ಯೋಜನೆಗಳು ಈಗ ಸಾಕಷ್ಟು ಕುತೂಹಲ ಮೂಡಿಸಿದೆ. ಹರಾಜಿಗೂ ಮುನ್ನ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಆರ್‌ಸಿಬಿ ತಂಡದ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದಲ್ಲಿ ಮಿಂಚುಹರಿಸಿದ ಓರ್ವ ಯುವ ಆಟಗಾರನ ಮೇಲೆ ಆರ್‌ಸಿಬಿ ಖಂಡಿತಾ ಕಣ್ಣಿಟ್ಟಿದ್ದು ಆತನನ್ನು ಹರಾಜುನಲ್ಲಿ ಕೊಳ್ಳಲು ಸರ್ವ ಪ್ರಯತ್ನವನ್ನು ಆರ್‌ಸಿಬಿ ನಡೆಸಲಿದೆ ಎಂದಿದ್ದಾರೆ ಹರ್ಭಜನ್ ಸಿಂಗ್.

ಭಜ್ಜಿ ಹೇಳಿದ ಆ ಆಟಗಾರ ಯಾರು?
ಹರ್ಭಜನ್ ಸಿಂಗ್ ಹೇಳಿದ ಆ ಆಟಗಾರ ಬೇರೆ ಯಾರೂ ಅಲ್ಲ, ಯುವ ಸ್ಪೋಟಕ ಆಟಗಾರ ಇಶಾನ್ ಕೀಶನ್. ಶನಿವಾರ ನಡೆಯಲಿರುವ ಮೆಗಾ ಹರಾಜಿನಲ್ಲಿ ಆರ್‌ಸಿಬಿ ಖಂಡಿತವಾಗಿಯೂ ಇಶಾನ್ ಕಿಶನ್ ಮೇಲೆ ಬಿಡ್ ಮಾಡಲಿದೆ ಎಂದಿದ್ದಾರೆ ಭಜ್ಜಿ.

ರೀಟೈನ್ ಮಾಡಿಕೊಳ್ಳದ ಎಂಐ
ಈ ಬಾರಿ ಹರಾಜಿಗೂ ಮುನ್ನ ನಡೆದ ರೀಟೆನ್ಶನ್‌ನಲ್ಲಿ ಮುಂಬೈ ಇಂಡಿಯನ್ಸ್ ಇಶಾನ್ ಕಿಶನ್ ಅವರನ್ನು ಹರಾಜುಗೆ ಬಿಟ್ಟುಕೊಟ್ಟಿತು. ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ನಾಯಕ ರೋಹಿತ್ ಶರ್ಮಾ, ಜಸ್ಪ್ರೀತ್ ಬೂಮ್ರಾ, ಕಿರಾನ್ ಪೊಲಾರ್ಡ್ ಹಾಗೂ ಸೂರ್ಯಕುಮಾರ್ ಯಾದವ್ ಅವರನ್ನು ಆಯ್ಕೆ ಮಾಡಿಕೊಂಡಿತ್ತು. ಬೆಂಗಳೂರಿನಲ್ಲಿ ಫೆಬ್ರವರಿ 12 ಹಾಗೂ 13ರಂದು ಹರಾಜು ಪ್ರಕ್ರಿಯೆ ನಡೆಯಲಿದ್ದು ಈ ಹರಾಜಿನಲ್ಲಿ ಇಶಾನ್ ಕಿಶನ್ 2 ಕೋಟಿ ಮೂಲ ಬೆಲೆಯನ್ನು ಹೊಂದಿದ್ದಾರೆ.

ನಾನು ಕೂಡ ಆತನ ಅಭಿಮಾನಿ
"ನಾನು ಕೂಡ ಇಶಾನ್ ಕಿಶನ್ ಅವರ ಅಭಿಮಾನಿಯಾಗಿದ್ದೇನೆ. ಯಾವುದೇ ದಿನದಲ್ಲಾದರೂ ಆತ 30 ಎಸೆತಗಳನ್ನು ಎದುರಿಸಿ 80 ರನ್‌ಗಳಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಈ ಮೂಲಕ ತಮ್ಮ ತಂಡವನ್ನು ಕಿಶನ್ ಗೆಲ್ಲಿಸಬಲ್ಲರು. ಆತ ಮುಂದಿನ ದಿನಗಳಲ್ಲಿ ದೊಡ್ಡ ಆಟಗಾರನಾಗಿ ಬೆಳೆಯುತ್ತಾರೆ. ಆತನಂತಾ ಆಟಗಾರ ಯಾವುದೇ ತಂಡಕ್ಕೆ ಹೋದರೂ ಆತನಿಗೆ ನಾಯಕತ್ವದ ಜವಾಬ್ಧಾರಿಯನ್ನು ನೀಡಬಹುದು. ಆತ ದಿನಕಳೆದಂತೆ ಜವಾಬ್ಧಾರಿಗಳನ್ನು ನೀಡಿದಂತೆಯೇ ಮತ್ತಷ್ಟು ದೊಡ್ಡ ಆಟಗಾರನಾಗಿ ಬೆಳೆಯಬಲ್ಲ. ಆತ ಈಗಾಗಲೇ ಝಾರ್ಖಂಡ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಆರ್‌ಸಿಬಿ ಹರಾಜಿನಲ್ಲಿ ಖಂಡಿತವಾಗಿಯೂ ಇಶಾನ್ ಕಿಶನ್ ಅವರನ್ನು ಗುರಿಯಾಗಿರಿಸಿಕೊಳ್ಳಲಿದೆ" ಎಂದಿದ್ದಾರೆ ಹರ್ಭಜನ್ ಸಿಂಗ್.

ಡಿಕೆ ಮೆಚ್ಚಿದ ಇಶಾನ್ ಕಿಶನ್
ಇನ್ನು ಅನುಭವಿ ಆಟಗಾರ ದಿನೇಶ್ ಕಾರ್ತಿಕ್ ಕೂಡ ಇಶಾನ್ ಕಿಶನ್ ಸಾಮರ್ಥ್ಯದ ಬಗ್ಗೆ ವಿಶೇಷ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. "ಆತನಲ್ಲಿ ಅದ್ಭುತವಾದ ಕೌಶಲ್ಯವಿದೆ. ಆತ ಮೊದಲ ಎಸೆತದಿಂದಲೇ ಆಕ್ರಮಣಕಾರಿಯಾಗಿ ಆಡಬಲ್ಲ ಸಾಮರ್ಥ್ಯವನ್ನು ಹೊಂದಿದ್ದಾರೆ. ಆ ಕೌಶಲ್ಯ ಎಲ್ಲಾ ಆಟಗಾರರಿಗೂ ಬರಲು ಸಾಧ್ಯವಿಲ್ಲ" ಎಂದು ದಿನೇಶ್ ಕಾರ್ತಿಕ್ ಇಶಾನ್ ಕಿಶನ್ ಸಾಮರ್ಥ್ಯದ ಬಗ್ಗೆ ಪ್ರಶಂಸೆಯ ಮಾತುಗಳನ್ನು ಆಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications