
ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಕಳೆದ ಶನಿವಾರ ( ಮಾರ್ಚ್ 26 ) ಆರಂಭವಾಗಿದ್ದು, ಟೂರ್ನಿಯ ಐದನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಸೆಣಸಾಟ ನಡೆಸಲಿವೆ. ಈ ಎರಡೂ ತಂಡಗಳು ಸಹ ತಮ್ಮ ಹಳೆಯ ನಾಯಕರ ನಾಯಕತ್ವದಲ್ಲಿಯೇ ಕಣಕ್ಕಿಳಿಯುತ್ತಿದ್ದು, ಕಳೆದ ಬಾರಿಯ ಐಪಿಎಲ್ ಟೂರ್ನಿಯಲ್ಲಿ ವಿಫಲವಾಗಿದ್ದ ಇತ್ತಂಡಗಳು ಕೂಡ ಈ ಬಾರಿಯ ಟೂರ್ನಿಯಲ್ಲಿ ಲಯ ಕಂಡುಕೊಳ್ಳುವ ತವಕದಲ್ಲಿವೆ.
ಇನ್ನು ಇತ್ತಂಡಗಳ ನಡುವಿನ ಪಂದ್ಯ ಇಂದು ( ಮಾರ್ಚ್ 29 ) ಸಂಜೆ 7.30ಕ್ಕೆ ಆರಂಭವಾಗಲಿದ್ದು, ಪುಣೆಯ ಎಂಸಿಎ ಕ್ರಿಕೆಟ್ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದೆ. ಕೇನ್ ವಿಲಿಯಮ್ಸನ್ ನಾಯಕತ್ವದ ಸನ್ ರೈಸರ್ಸ್ ಹೈದರಾಬಾದ್ ಮತ್ತು ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ತಾನ್ ರಾಯಲ್ಸ್ ತಂಡಗಳ ನಡುವಿನ ಈ ಪಂದ್ಯದಲ್ಲಿ ಎರಡೂ ತಂಡಗಳ ಕೆಲ ಆಟಗಾರರು ನಿರ್ಮಿಸಬಹುದಾದ ಮೈಲಿಗಲ್ಲುಗಳ ಪಟ್ಟಿ ಈ ಕೆಳಕಂಡಂತಿದೆ.
• ರಾಹುಲ್ ತ್ರಿಪಾಠಿ ಐಪಿಎಲ್ ಇತಿಹಾಸದಲ್ಲಿ ಒಟ್ಟು 48 ಸಿಕ್ಸರ್ ಬಾರಿಸಿದ್ದು, ಈ ಪಂದ್ಯದಲ್ಲಿ 2 ಸಿಕ್ಸರ್ ಬಾರಿಸಿದರೆ 50 ಐಪಿಎಲ್ ಸಿಕ್ಸರ್ ಬಾರಿಸಿದ ಮೈಲಿಗಲ್ಲನ್ನು ಮುಟ್ಟಲಿದ್ದಾರೆ.
• ಐಪಿಎಲ್ ಇತಿಹಾಸದಲ್ಲಿ ಇದುವರೆಗೂ ಒಟ್ಟು 95 ಬೌಂಡರಿಗಳನ್ನು ಬಾರಿಸಿರುವ ದೇವದತ್ ಪಡಿಕ್ಕಲ್ ಈ ಪಂದ್ಯದಲ್ಲಿ 5 ಬೌಂಡರಿಗಳನ್ನು ಬಾರಿಸಿದರೆ 100 ಐಪಿಎಲ್ ಬೌಂಡರಿಗಳ ಮೈಲಿಗಲ್ಲನ್ನು ಮುಟ್ಟಲಿದ್ದಾರೆ.
• 1968 ಐಪಿಎಲ್ ರನ್ ಬಾರಿಸಿರುವ ಜೋಸ್ ಬಟ್ಲರ್ ಈ ಪಂದ್ಯದಲ್ಲಿ 32 ರನ್ ಬಾರಿಸಿದರೆ 2000 ರನ್‌ಗಳ ಮೈಲಿಗಲ್ಲನ್ನು ಮುಟ್ಟಲಿದ್ದಾರೆ.
• ಇಲ್ಲಿಯವರೆಗೂ ಒಟ್ಟು 48 ಐಪಿಎಲ್ ವಿಕೆಟ್‍ಗಳನ್ನು ಪಡೆದಿರುವ ಶ್ರೇಯಸ್ ಗೋಪಾಲ್ ಈ ಪಂದ್ಯದಲ್ಲಿ 2 ವಿಕೆಟ್‍ಗಳನ್ನು ಪಡೆದರೆ 50 ಐಪಿಎಲ್ ವಿಕೆಟ್ ಪಡೆದ ಮೈಲಿಗಲ್ಲನ್ನು ಮುಟ್ಟಲಿದ್ದಾರೆ.
• ಇಲ್ಲಿಯವರೆಗೂ ಒಟ್ಟು 48 ಐಪಿಎಲ್ ವಿಕೆಟ್‍ಗಳನ್ನು ಪಡೆದಿರುವ ನಾಥನ್ ಕೌಲ್ಟರ್ ನೈಲ್ ಈ ಪಂದ್ಯದಲ್ಲಿ 2 ವಿಕೆಟ್‍ಗಳನ್ನು ಪಡೆದರೆ 50 ಐಪಿಎಲ್ ವಿಕೆಟ್ ಪಡೆದ ಮೈಲಿಗಲ್ಲನ್ನು ಮುಟ್ಟಲಿದ್ದಾರೆ.
• 145 ವಿಕೆಟ್ ಪಡೆದಿರುವ ರವಿಚಂದ್ರನ್ ಅಶ್ವಿನ್ ಈ ಪಂದ್ಯದಲ್ಲಿ 5 ವಿಕೆಟ್ ಪಡೆದರೆ 150 ವಿಕೆಟ್‍ಗಳ ಮೈಲಿಗಲ್ಲನ್ನು ಮುಟ್ಟಲಿದ್ದಾರೆ.
• ಟಿ ಟ್ವೆಂಟಿ ಕ್ರಿಕೆಟ್‍ನಲ್ಲಿ ಒಟ್ಟು 46 ಸಿಕ್ಸರ್ ಸಿಡಿಸಿರುವ ಅಬ್ದುಲ್ ಸಮದ್ ಈ ಪಂದ್ಯದಲ್ಲಿ 4 ಸಿಕ್ಸರ್ ಸಿಡಿಸಿದರೆ 50 ಟಿ ಟ್ವೆಂಟಿ ಸಿಕ್ಸರ್ ಮೈಲಿಗಲ್ಲನ್ನು ಮುಟ್ಟಲಿದ್ದಾರೆ.
• ಟಿ ಟ್ವೆಂಟಿ ಕ್ರಿಕೆಟ್ ಇತಿಹಾಸದಲ್ಲಿ ಒಟ್ಟು 247 ವಿಕೆಟ್ ಪಡೆದಿರುವ ಯುಜುವೇಂದ್ರ ಚಾಹಲ್ ಈ ಪಂದ್ಯದಲ್ಲಿ 3 ವಿಕೆಟ್ ಪಡೆದರೆ 250 ವಿಕೆಟ್‍ಗಳ ಮೈಲಿಗಲ್ಲನ್ನು ಮುಟ್ಟಲಿದ್ದಾರೆ.
• ಟಿ ಟ್ವೆಂಟಿ ಕ್ರಿಕೆಟ್ ಇತಿಹಾಸದಲ್ಲಿ ಒಟ್ಟು 295 ಸಿಕ್ಸರ್ ಬಾರಿಸಿರುವ ನಿಕೋಲಸ್ ಪೂರನ್ ಈ ಪಂದ್ಯದಲ್ಲಿ 5 ಸಿಕ್ಸರ್ ಬಾರಿಸಿದರೆ 300 ಐಪಿಎಲ್ ಸಿಕ್ಸರ್ ಮೈಲಿಗಲ್ಲನ್ನು ದಾಟಲಿದ್ದಾರೆ.
• ಐಪಿಎಲ್ ಇತಿಹಾಸದಲ್ಲಿ ಒಟ್ಟು 194 ಬೌಂಡರಿಗಳನ್ನು ಬಾರಿಸಿರುವ ಜೋಸ್ ಬಟ್ಲರ್ ಈ ಪಂದ್ಯದಲ್ಲಿ 6 ಬೌಂಡರಿಗಳನ್ನು ಬಾರಿಸಿದರೆ 200 ಬೌಂಡರಿಗಳ ಮೈಲಿಗಲ್ಲನ್ನು ಮುಟ್ಟಿಲಿದ್ದಾರೆ.
• ಟಿ ಟ್ವೆಂಟಿ ಕ್ರಿಕೆಟ್ ಇತಿಹಾಸದಲ್ಲಿ ಒಟ್ಟು 192 ಬೌಂಡರಿಗಳನ್ನು ಬಾರಿಸಿರುವ ದೇವದತ್ ಪಡಿಕ್ಕಲ್ 8 ಬೌಂಡರಿ ಬಾರಿಸಿದರೆ 200 ಬೌಂಡರಿ ದಾಖಲೆಯನ್ನು ಮುಟ್ಟಲಿದ್ದಾರೆ.