For Quick Alerts
ALLOW NOTIFICATIONS  
For Daily Alerts
 

LSG vs RR: ಮುಗ್ಗರಿಸಿದ್ದ ರಾಜಸ್ಥಾನ್‌ಗೆ ಹೆಟ್ಮಾಯೆರ್ ಆಸರೆ; ಲಕ್ನೋಗೆ 166 ರನ್‌ಗಳ ಗುರಿ

IPL 2022: Shimron Hetmyers half century helps RR to mount 165/6 against LSG

ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಇಂದು ( ಏಪ್ರಿಲ್ 10 ) ನಡೆಯುತ್ತಿರುವ 20ನೇ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ತಾನ್ ರಾಯಲ್ಸ್ ಮತ್ತು ಕೆಎಲ್ ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಸೆಣಸಾಟ ನಡೆಸುತ್ತಿವೆ.

ಮುಂಬೈನ ವಾಂಖೆಡೆ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ಕೆಎಲ್ ರಾಹುಲ್ ಫೀಲ್ಡಿಂಗ್ ಆಯ್ದುಕೊಂಡು ಎದುರಾಳಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಹೀಗೆ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ ಪರ ಜೋಸ್ ಬಟ್ಲರ್ ಮತ್ತು ದೇವದತ್ ಪಡಿಕ್ಕಲ್ ಆರಂಭಿಕ ಆಟಗಾರರಾಗಿ ಕಣಕ್ಕಿಳಿದರು. ಜೋಸ್ ಬಟ್ಲರ್ 11 ಎಸೆತಗಳಲ್ಲಿ 13 ರನ್ ಗಳಿಸಿ ಔಟ್ ಆದರೆ, ದೇವದತ್ ಪಡಿಕ್ಕಲ್ 29 ಎಸೆತಗಳಲ್ಲಿ 29 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಇನ್ನುಳಿದಂತೆ ನಾಯಕ ಸಂಜು ಸ್ಯಾಮ್ಸನ್ 12 ಎಸೆತಗಳಲ್ಲಿ 13 ರನ್ ಬಾರಿಸಿದರೆ, ವಾನ್ ಡರ್ ಡುಸೆನ್ 4 ರನ್, ರವಿಚಂದ್ರನ್ ಅಶ್ವಿನ್ 28, ರಿಯಾನ್ ಪರಾಗ್ 8 ರನ್, ಶಿಮ್ರಾನ್ ಹೆಟ್ಮಾಯೆರ್ ಅಜೇಯ 59 ರನ್ ಮತ್ತು ಟ್ರೆಂಟ್ ಬೌಲ್ಟ್ ಅಜೇಯ 2 ರನ್ ಕಲೆ ಹಾಕಿದರು.

ಈ ಮೂಲಕ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಿದ ರಾಜಸ್ಥಾನ್ ರಾಯಲ್ಸ್ ಎದುರಾಳಿ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ 166 ರನ್‌ಗಳ ಗುರಿಯನ್ನು ನೀಡಿದೆ.

lsg

ರಾಜಸ್ಥಾನ್ ರಾಯಲ್ಸ್ ಆರಂಭಿಕ ಆಟಗಾರರು ಹಾಗೂ ಮಧ್ಯಮ ಕ್ರಮಾಂಕದ ಆಟಗಾರರು ದೊಡ್ಡ ಮೊತ್ತ ಗಳಿಸಲಾಗದೆ ಔಟ್ ಆದಾಗ ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿದು ನೆಲಕಚ್ಚಿ ನಿಂತು ಪಂದ್ಯದ ಅಂತಿಮ ಹಂತದವರೆಗೂ ಹೋರಾಟ ನಡೆಸಿ 36 ಎಸೆತಗಳಲ್ಲಿ 59 ರನ್ ಗಳಿಸಿ ಅಜೇಯರಾಗಿ ಉಳಿದ ಶಿಮ್ರಾನ್ ಹೆಟ್ಮಾಯೆರ್ ತಂಡಕ್ಕೆ ಆಸರೆಯಾದರು.

ಈ ಪಂದ್ಯದಲ್ಲಿ ಲಕ್ನೋ ಸೂಪರ್ ಜಯಂಟ್ಸ್ ತಂಡದ ಜೇಸನ್ ಹೋಲ್ಡರ್ ಮತ್ತು ಕೃಷ್ಣಪ್ಪ ಗೌತಮ್ ತಲಾ 2 ವಿಕೆಟ್ ಕಬಳಿಸಿದರು. 4 ಓವರ್ ಬೌಲಿಂಗ್ ಮಾಡಿದ ಜೇಸನ್ ಹೋಲ್ಡರ್ 50 ರನ್ ನೀಡುವ ಮೂಲಕ ದುಬಾರಿಯೂ ಕೂಡ ಆದರು . ಇನ್ನುಳಿದಂತೆ ಅವೇಶ್ ಖಾನ್ 1 ವಿಕೆಟ್ ಪಡೆದುಕೊಂಡರು.

ಪಿಚ್ ವರದಿ: ಪಂದ್ಯ ಆರಂಭಕ್ಕೂ ಮುನ್ನ ಪಿಚ್ ವೀಕ್ಷಣೆ ನಡೆಸಿದ ಮಾಜಿ ಕ್ರಿಕೆಟಿಗ ಮ್ಯಾಥ್ಯೂ ಹೇಡನ್ ಈ ಪಿಚ್‌ನಲ್ಲಿ ಈಗಾಗಲೇ ಕೆಲವೊಂದಷ್ಟು ಪಂದ್ಯಗಳು ನಡೆದಿದು, ಪಿಚ್ ಒಣಗಿರುವ ಕಾರಣ ಹೆಚ್ಚು ಸ್ಪಿನ್ ಆಗಲಿದೆ ಎಂದಿದ್ದಾರೆ ಹಾಗೂ ಇದು ಬ್ಯಾಟ್ಸ್‌ಮನ್‌ಗಳಿಗೆ ಸ್ವರ್ಗವಾಗಿರಲಿದ್ದು, ಬೌಲರ್‌ಗಳು ವಿಕೆಟ್ ಪಡೆಯುವುದು ಕಷ್ಟದ ಕೆಲಸ ಎಂದು ಹೇಳಿಕೆ ನೀಡಿದ್ದಾರೆ.

ಆಡುವ ಬಳಗಗಳು

ರಾಜಸ್ಥಾನ್ ರಾಯಲ್ಸ್ ಆಡುವ ಬಳಗ: ಜೋಸ್ ಬಟ್ಲರ್, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ದೇವದತ್ ಪಡಿಕ್ಕಲ್, ಸಂಜು ಸ್ಯಾಮ್ಸನ್ ( ನಾಯಕ/ ವಿಕೆಟ್ ಕೀಪರ್‌), ಶಿಮ್ರಾನ್ ಹೆಟ್ಮೆಯರ್, ರಿಯಾನ್ ಪರಾಗ್, ಕುಲದೀಪ್ ಸೇನ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಪ್ರಸಿದ್ಧ್ ಕೃಷ್ಣ, ಯುಜ್ವೇಂದ್ರ ಚಾಹಲ್

ಲಕ್ನೋ ಸೂಪರ್‌ ಜೈಂಟ್ಸ್ ಆಡುವ ಬಳಗ: ಕೆಎಲ್ ರಾಹುಲ್ (ನಾಯಕ), ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್‌), ಮಾರ್ಕಸ್ ಸ್ಟೊಯಿನಿಸ್, ದೀಪಕ್ ಹೂಡಾ, ಆಯುಷ್ ಬಡೋನಿ, ಕೃನಾಲ್ ಪಾಂಡ್ಯ, ಜೇಸನ್ ಹೋಲ್ಡರ್, ಕೃಷ್ಣಪ್ಪ ಗೌತಮ್, ದುಷ್ಮಂತ ಚಮೀರಾ, ರವಿ ಬಿಷ್ಣೋಯ್, ಅವೇಶ್ ಖಾನ್

Story first published: Sunday, April 10, 2022, 21:47 [IST]
Other articles published on Apr 10, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+