ಐಪಿಎಲ್ ಮೆಗಾ ಹರಾಜು: "ಈತನನ್ನು ಖರೀದಿಸಿ ನಾಯಕತ್ವ ನೀಡಲಿದೆ ಆರ್‌ಸಿಬಿ; ಆದರೆ ಇದಕ್ಕಿದೆ ಅವರ ಅಡೆತಡೆ!"

ಏಪ್ರಿಲ್ ತಿಂಗಳಿನಲ್ಲಿ ಆರಂಭವಾಗಲಿರುವ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಕುರಿತಾಗಿ ಕಳೆದ ವರ್ಷದಿಂದಲೇ ಚಟುವಟಿಕೆಗಳು ಆರಂಭವಾಗಿದ್ದು, ಲಕ್ನೋ ಮತ್ತು ಅಹ್ಮದಾಬಾದ್ ಫ್ರಾಂಚೈಸಿಗಳ ಸೇರ್ಪಡೆಯಾಗಿರುವುದರಿಂದ ಕುತೂಹಲ ಮತ್ತು ನಿರೀಕ್ಷೆ ಮಟ್ಟ ಹೆಚ್ಚಿದೆ. ಈ ಬಾರಿ ಟ್ರೋಫಿಗಾಗಿ ಒಟ್ಟು ಹತ್ತು ತಂಡಗಳ ನಡುವೆ ಸೆಣಸಾಟ ನಡೆಯಲಿದ್ದು, ಟೂರ್ನಿ ಸಾಕಷ್ಟು ವಿಶೇಷತೆಗಳಿಂದ ಕೂಡಿರಲಿದೆ. ಇನ್ನು ಟೂರ್ನಿಯ ಆರಂಭಕ್ಕೂ ಮುನ್ನ ಇದೇ ಫೆಬ್ರವರಿ 12 ಮತ್ತು 13ರಂದು ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ಬೆಂಗಳೂರಿನಲ್ಲಿ ನಡೆಯಲಿದ್ದು, ಈ ಹರಾಜಿನಲ್ಲಿ ಪಾಲ್ಗೊಳ್ಳಲು ವಿಶ್ವದ ಹಲವಾರು ದೇಶಗಳ 1214 ಕ್ರಿಕೆಟಿಗರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದರು. ಹೀಗೆ ನೋಂದಾಯಿಸಿಕೊಂಡಿದ್ದ ಆಟಗಾರರ ಪೈಕಿ ಒಟ್ಟು 590 ಆಟಗಾರರನ್ನು ಅಂತಿಮವಾಗಿ ಬಿಸಿಸಿಐ ಆಯ್ಕೆ ಮಾಡಿದೆ.
ಈ ಪಟ್ಟಿಯಲ್ಲಿ ನಾಯಕ ಸ್ಥಾನವನ್ನು ವಹಿಸಿಕೊಂಡು ತಂಡವನ್ನು ಯಶಸ್ವಿಯಾಗಿ ಮುನ್ನಡೆಸಬಲ್ಲಂಥ ನಾಯಕತ್ವದ ಗುಣಗಳಿರುವ ಹಲವಾರು ಆಟಗಾರರಿದ್ದು, ಈ ಆಟಗಾರರ ಮೇಲೆ ಮೆಗಾ ಹರಾಜಿನಲ್ಲಿ ಹಣದ ಹೊಳೆ ಹರಿಯುವ ನಿರೀಕ್ಷೆಗಳಿವೆ. ಅದರಲ್ಲಿಯೂ ಅಸ್ತಿತ್ವದಲ್ಲಿರುವ ಹಲವಾರು ತಂಡಗಳಿಗೆ ನಾಯಕನನ್ನು ಖರೀದಿಸಲೇಬೇಕಾದ ಅನಿವಾರ್ಯತೆ ಇರುವುದರಿಂದ ಈ ಆಟಗಾರರಿಗೆ ಹರಾಜಿನಲ್ಲಿ ಹೆಚ್ಚಿನ ಪ್ರಾಮುಖ್ಯತೆ ಸಿಗುವುದಂತೂ ಖಚಿತ.
ಹೀಗೆ ನಾಯಕನನ್ನು ಖರೀದಿಸಲೇ ಬೇಕಾದ ಅನಿವಾರ್ಯತೆಯಲ್ಲಿ ಪಂಜಾಬ್ ಕಿಂಗ್ಸ್, ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಸೇರಿದಂತೆ ಹಲವಾರು ತಂಡಗಳಿವೆ. ಇನ್ನು ಈ ವಿಷಯದ ಕುರಿತಾಗಿ ಇದೀಗ ಭಾರತದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಮಾತನಾಡಿದ್ದು, ಈ ಕೆಳಕಂಡ ಆಟಗಾರ ಈ ಬಾರಿಯ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಭಾರಿ ಮೊತ್ತಕ್ಕೆ ಬಿಕರಿಯಾಗಲಿದ್ದು, ಈತನನ್ನು ಖರೀದಿಸಿ ನಾಯಕ ಸ್ಥಾನವನ್ನು ನೀಡಲು ಫ್ರಾಂಚೈಸಿಗಳ ನಡುವೆ ಪೈಪೋಟಿ ಏರ್ಪಡಲಿದೆ ಎಂದಿದ್ದಾರೆ.

ಹರಾಜಿನಲ್ಲಿ ಈತನ ಮೇಲೆ ಹರಿಯಲಿದೆ ಹಣದ ಹೊಳೆ
ಸತ್ಯ ಹೇಳಬೇಕೆಂದರೆ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಹರಾಜಿನಲ್ಲಿ ಶ್ರೇಯಸ್ ಅಯ್ಯರ್ ಅತಿ ದೊಡ್ಡ ಮೊತ್ತಕ್ಕೆ ಬಿಕರಿಯಾಗಲಿರುವ ಆಟಗಾರ ಎಂದು ಆಕಾಶ್ ಚೋಪ್ರಾ ಭವಿಷ್ಯ ನುಡಿದಿದ್ದಾರೆ. ಇನ್ನೂ ಮುಂದುವರಿದು ಮಾತನಾಡಿರುವ ಆಕಾಶ್ ಚೋಪ್ರಾ ಒಂದುವೇಳೆ ಇಶಾನ್ ಕಿಶನ್ ಈ ಮೆಗಾ ಹರಾಜಿನಲ್ಲಿ ಭಾಗವಹಿಸಿದ್ದರೆ ಇಬ್ಬರ ನಡುವೆಯೂ ಸಹ ದೊಡ್ಡ ಮಟ್ಟದ ಪೈಪೋಟಿ ಇರುತ್ತಿತ್ತು, ಆದರೆ ಇಶಾನ್ ಕಿಶನ್ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸದೇ ಇರುವುದರಿಂದ ಶ್ರೇಯಸ್ ಅಯ್ಯರ್ ಮೇಲೆ ಹಣದ ಹೊಳೆ ಹರಿಯಲಿದೆ ಎಂದು ಆಕಾಶ್ ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ.

ಶ್ರೇಯಸ್ ಅಯ್ಯರ್ ಖರೀದಿಸಲು ಯತ್ನಿಸಲಿದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು
ಇನ್ನೂ ಮುಂದುವರಿದು ಮಾತನಾಡಿರುವ ಆಕಾಶ್ ಚೋಪ್ರಾ ಈ ಬಾರಿಯ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಶ್ರೇಯಸ್ ಅಯ್ಯರ್ ಅವರನ್ನು ಖರೀದಿಸಲು ಯತ್ನಿಸಲಿದೆ ಎಂದಿದ್ದಾರೆ. ಅದರ ಜತೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ರೀತಿಯೇ ಕೋಲ್ಕತ್ತ ನೈಟ್ ರೈಡರ್ಸ್ ತಂಡ ಕೂಡ ನಾಯಕನ ಖರೀದಿಸುವ ಅನಿವಾರ್ಯತೆಯಲ್ಲಿದ್ದು ಎರಡೂ ಫ್ರಾಂಚೈಸಿಗಳ ನಡುವೆ ಶ್ರೇಯಸ್ ಅಯ್ಯರ್ ಕುರಿತಾಗಿ ಪೈಪೋಟಿ ಏರ್ಪಡಲಿದೆ ಎಂದು ಆಕಾಶ್ ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ. ಹಾಗೂ ನಾಯಕನ ನಿರೀಕ್ಷೆಯಲ್ಲಿರುವ ಮತ್ತೊಂದು ತಂಡವಾದ ಪಂಜಾಬ್ ಕಿಂಗ್ಸ್ ಶ್ರೇಯಸ್ ಅಯ್ಯರ್ ಖರೀದಿಸಲು ಮುಂದಾಗುವುದಿಲ್ಲ ಎಂದು ಕೂಡ ಆಕಾಶ್ ಚೋಪ್ರಾ ಹೇಳಿಕೆ ನೀಡಿದ್ದಾರೆ.

ಶ್ರೇಯಸ್ ಅಯ್ಯರ್ ಐಪಿಎಲ್ ಅಂಕಿಅಂಶ
ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಶ್ರೇಯಸ್ ಅಯ್ಯರ್ ಇದುವರೆಗೂ ಒಟ್ಟು 87 ಪಂದ್ಯಗಳನ್ನಾಡಿದ್ದು 2375 ರನ್ ಕಲೆಹಾಕಿದ್ದಾರೆ. ಈ ಪೈಕಿ 12 ಪಂದ್ಯಗಳಲ್ಲಿ ಅಜೇಯನಾಗಿ ಉಳಿದಿರುವ ಶ್ರೇಯಸ್ ಅಯ್ಯರ್ ಇನ್ನಿಂಗ್ ಒಂದರಲ್ಲಿ ಗರಿಷ್ಠ 96 ರನ್ ಗಳಿಸಿದ್ದು, 16 ಅರ್ಧಶತಕಗಳನ್ನು ಬಾರಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications