ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2022: ಲೀಗ್ ಹಂತದ ಅಂತಿಮ ಪಂದ್ಯದಲ್ಲಿ ಹೈದರಾಬಾದ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಪಂಜಾಬ್‌

IPL 2022: SRH vs PBKS: Highlights: Punjab Kings beat Sunrisers Hyderabad by 5 wickets

ಐಪಿಎಲ್ 15ನೇ ಆವೃತ್ತಿಯ ಲೀಗ್ ಹಂತದ ಅಂತಿಮ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಭರ್ಜರಿಯಾಗಿ ಸೋಲಿಸಿದೆ. ಗೆಲ್ಲಲು 158 ರನ್‌ಗಳ ಸಾಧಾರಣ ಗುರಿ ಪಡೆದಿದ್ದ ಪಂಜಾಬ್ ಕಿಂಗ್ಸ್ ತಂಡ ಇನ್ನೂ ಬಹುತೇಕ ಐದು ಓವರ್‌ಗಳು ಬಾಕಿಯಿರುವಂತೆಯೇ ಗೆದ್ದು ಬೀಗಿದೆ. ಪಂಜಾಬ್ ಕಿಂಗ್ಸ್ ತಂಡದ ಮಧ್ಯಮ ಕ್ರಮಾಂಕದ ಸ್ಪೋಟಕ ಆಟಗಾರ ಲಿಯಾಮ್ ಲಿವಿಂಗ್‌ಸ್ಟನ್ ಮತ್ತೊಂದು ಭರ್ಜರಿ ಇನ್ನಿಂಗ್ಸ್ ನೀಡಿದ್ದು ಪಂಜಾಬ್ ಸುಲಭ ಗೆಲುವಿಗೆ ಕಾರಣವಾದರು.

ಹೈದರಾಬಾದ್ ನೀಡಿದ್ದ ಗುರಿ ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ ತಂಡದ ಪರವಾಗಿ ಜಾನಿ ಬೈರ್‌ಸ್ಟೋವ್ ಸ್ಪೋಟಕ ಆರಂಭ ನಿಡುವ ಲಕ್ಷಣ ತೋರಿಸಿದರು. ಆದರೆ ಅವರ ಆಟ 23 ರನ್‌ಗಳಿಗೆ ಕೊನೆಯಾಯಿತು. ನಂತರ ಶಿಖರ್ ಧವನ್ ಹಾಗೂ ಶಾರೂಖ್ ಖಾನ್ ಜೊತೆಯಾಟವೊಂದರಲ್ಲಿ ಭಾಗಿಯಾದರು. ಶಾರೂಖ್ ಖಾನ್ 19 ರನ್‌ಘಳಿಸಿ ವಿಕೆಟ್ ಕಳೆದುಕೊಂಡ ಬಳಿಕ ನಾಯಕ ಮಯಾಂಕ್ ಅಗರ್ವಾಲ್ ಮತ್ತೊಮ್ಮೆ ವೈಫಲ್ಯವನ್ನು ಅನುಭವಿಸಿದರು. ಕೇವಲ 1 ರನ್‌ಗಳಿಸಿ ಮಯಾಂಕ್ ವಿಕೆಟ್ ಕಳೆದುಕೊಂಡರು. ಆದರೆ ನಂತರ ಜೊತೆಯಾದ ಲಿಯಾಮ್ ಲಿವಿಂಗ್ಟನ್ ಹಾಗೂ ಜಿತೇಶ್ ಶರ್ಮಾ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿ ಸುಲಭ ಗೆಲುವು ತಂದಿತ್ತರು.

ಮುಂಬೈ ವಿರುದ್ಧ ಸೋಲು; ಪಂತ್ ನಾಯಕತ್ವದ ಬಗ್ಗೆ ಕೋಚ್ ರಿಕಿ ಪಾಂಟಿಂಗ್ ಹೇಳಿದ್ದೇನು?ಮುಂಬೈ ವಿರುದ್ಧ ಸೋಲು; ಪಂತ್ ನಾಯಕತ್ವದ ಬಗ್ಗೆ ಕೋಚ್ ರಿಕಿ ಪಾಂಟಿಂಗ್ ಹೇಳಿದ್ದೇನು?

ಜಿತೇಶ್ ಶರ್ಮಾ 7 ಎಸೆತಗಳನ್ನು ಎದುರಿಸಿ 19 ರನ್‌ಗಳ ಕೊಡುಗೆ ನಿಡಿ ವಿಕೆಟ್ ಕಳೆದುಕೊಂಡರೆ ಲಿವಿಂಗ್‌ಸ್ಟೊನ್ 22 ಎಸೆತಗಳಲ್ಲಿ 49 ರನ್‌ಗಳನ್ನು ಬಾರಿಸಿ ಗೆಲುವು ಖಚಿತಪಡಿಸಿದರು. ಈ ಮೂಲಕ ಪಂಜಾಬ್ ಕಿಂಗ್ಸ್ ತಂಡ 15.1 ಓವರ್‌ಗಳಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ನೀಡಿದ್ದ ಗುರಿಯನ್ನು ಮೀರಿ ನಿಂತಿತು. ಈ ಮೂಲಕ ಪಂಜಾಬ್ ಕಿಂಗ್ಸ್ ಗೆಲುವಿನೊಂದಿಗೆ ಟೂರ್ನಿಯನ್ನು ಅಂತ್ಯಗೊಳಿಸಿದೆ.

ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ಮಾಡಿದ ಸನ್‌ರೈಸರ್ಸ್ ಹೈದರಾಬಾದ್ ತಂಡ ನಿಧಾನಗತಿಯ ಬ್ಯಾಟಿಂಗ್‌ನ ಮೊರೆ ಹೋಯಿತು. ಆದರೆ ಅಂತಿಮ ಹಂತದಲ್ಲಿ ವೇಗವನ್ನು ಹೆಚ್ಚಿಸಿಕೊಂಡ ಸನ್‌ರೈಸರ್ಸ್ ಹೈದರಾಬಾದ್ ತಂಡ 158 ರನ್‌ಗಳ ಗುರಿ ನೀಡಲು ಯಶಸ್ವಿಯಾಯಿತು. ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಸನ್‌ರೈಸರ್ಸ್ ಹೈದರಾಬಾದ್ ತಂಡ ಆರಂಭಿಕ ವಿಕೆಟ್‌ಅನ್ನು ಶೀಘ್ರವಾಗಿಯೇ ಕಳೆದುಕೊಂಡಿತು. ಪ್ರಿಯಂ ಗರ್ಗ್ 4 ರನ್‌ಗಳಿಸಿ ವಿಕೆಟ್ ಕಳೆದುಕೊಂಡರು. ಆದರೆ ಎರಡನೇ ವಿಕೆಟ್‌ಗೆ ಅಭಿಶೇಕ್ ಶರ್ಮಾ ಹಾಗೂ ತ್ರಿಪಾಠಿ ಉತ್ತಮ ಜೊತೆಯಾಟವೊಂದನ್ನು ನೀಡಿದರು. 20 ರನ್‌ಗಳ ಕೊಡುಗೆ ನೀಡಿದ ರಾಹುಲ್ ತ್ರಿಪಾಠಿ ಔಟಾದ ಬಳಿಕ 43 ರನ್‌ಗಳಿಸಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದ ಅಭಿಶೇಕ್ ಶರ್ಂಆ ವಿಕೆಟ್ ಕಳೆದುಕೊಂಡರು. ಪೂರನ್ ಐದು ರನ್‌ಗಳಿಗೆ ಔಟಾಗಿ ನಿರಾಸೆ ಮೂಡಿಸಿದರೆ ನಂತರ ಮಾರ್ಕ್ರಮ್ ಕೂಡ 21 ರನ್‌ಗಳ ಕೊಡುಗೆ ನಿಡಿ ನಿರ್ಗಮಿಸಿದರು.

ಬಳಿಕ ವಾಶಿಂಗ್ಟನ್ ಸುಂದರ್ ಹಾಗೂ ರೊಮಾರಿಯೋ ಶೆಫರ್ಡ್ ಅವರಿಂದ ಮಹತ್ವದ ಜೊತೆಯಾಟವೊಂದು ಎಸ್‌ಆರ್‌ಹೆಚ್ ತಂಡಕ್ಕೆ ಲಭ್ಯವಾಯಿತು. ಈ ಜೊತೆಯಾಟದ ಕಾರಣದಿಂದಾಗಿ ಸನ್‌ರೈಸರ್ಸ್ ಹೈದರಾಬಾದ್ 8 ವಿಕೆಟ್ ಕಳೆದುಕೊಂಡು 157 ರನ್‌ಗಳನ್ನು ಗಳಿಸಲು ಯಶಸ್ವಿಯಾಯಿತು. ವಾಶಿಂಗ್ಟನ್ ಸುಂದರ್ 25 ರನ್‌ಗಳಿಸಿ ಔಟಾದರೆ ಶೆಫರ್ಡ್ 15 ಎಸೆತಗಳಲ್ಲಿ 26 ರನ್‌ಗಳ ಕೊಡುಗೆ ನೀಡಿದರು.

MI vs DC: ಟಿಮ್ ಡೇವಿಡ್ ವಿರುದ್ಧ DRS ತೆಗೆದುಕೊಳ್ಳದಿರಲು ಕಾರಣ ತಿಳಿಸಿದ ರಿಷಭ್ ಪಂತ್MI vs DC: ಟಿಮ್ ಡೇವಿಡ್ ವಿರುದ್ಧ DRS ತೆಗೆದುಕೊಳ್ಳದಿರಲು ಕಾರಣ ತಿಳಿಸಿದ ರಿಷಭ್ ಪಂತ್

ಸನ್‌ರೈಸರ್ಸ್ ಹೈದರಾಬಾದ್: ಅಭಿಷೇಕ್ ಶರ್ಮಾ, ಪ್ರಿಯಾಂ ಗಾರ್ಗ್, ರಾಹುಲ್ ತ್ರಿಪಾಠಿ, ಐಡೆನ್ ಮಾರ್ಕ್ರಾಮ್, ನಿಕೋಲಸ್ ಪೂರನ್ (ವಿಕೆಟ್ ಕೀಪರ್), ರೊಮಾರಿಯೋ ಶೆಫರ್ಡ್, ವಾಷಿಂಗ್ಟನ್ ಸುಂದರ್, ಜಗದೀಶ ಸುಚಿತ್, ಭುವನೇಶ್ವರ್ ಕುಮಾರ್ (ನಾಯಕ), ಫಜಲ್ಹಕ್ ಫಾರೂಕಿ, ಉಮ್ರಾನ್ ಮಲಿಕ್

ಬೆಂಚ್: ಟಿ ನಟರಾಜನ್, ಗ್ಲೆನ್ ಫಿಲಿಪ್ಸ್, ಸೀನ್ ಅಬಾಟ್, ರವಿಕುಮಾರ್ ಸಮರ್ಥ್, ಶ್ರೇಯಸ್ ಗೋಪಾಲ್, ಶಶಾಂಕ್ ಸಿಂಗ್, ವಿಷ್ಣು ವಿನೋದ್, ಕಾರ್ತಿಕ್ ತ್ಯಾಗಿ, ಮಾರ್ಕೊ ಜಾನ್ಸೆನ್, ಅಬ್ದುಲ್ ಸಮದ್, ಸುಶಾಂತ್ ಮಿಶ್ರಾ

Wankhede Stadiumನಲ್ಲಿ RCB ಅಭಿಮಾನಿಗಳು ಮಾಡಿದ ವಿಶೇಷ ಕೆಲಸ | Oneindia Kannada

ಪಂಜಾಬ್ ಕಿಂಗ್ಸ್ ಆಡುವ ಬಳಗ: ಜಾನಿ ಬೈರ್‌ಸ್ಟೋವ್, ಶಿಖರ್ ಧವನ್, ಲಿಯಾಮ್ ಲಿವಿಂಗ್‌ಸ್ಟೋನ್, ಮಯಾಂಕ್ ಅಗರ್ವಾಲ್ (ನಾಯಕ), ಶಾರುಖ್ ಖಾನ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಪ್ರೇರಕ್ ಮಂಕಡ್, ಹರ್‌ಪ್ರೀತ್ ಬ್ರಾರ್, ನಾಥನ್ ಎಲ್ಲಿಸ್, ಕಗಿಸೊ ರಬಾಡ, ಅರ್ಶ್‌ದೀಪ್ ಸಿಂಗ್
ಬೆಂಚ್: ಭಾನುಕಾ ರಾಜಪಕ್ಸೆ, ರಿಷಿ ಧವನ್, ರಾಹುಲ್ ಚಾಹರ್, ಬೆನ್ನಿ ಹೋವೆಲ್, ಸಂದೀಪ್ ಶರ್ಮಾ, ಬಲ್ತೇಜ್ ಸಿಂಗ್, ರಿಟಿಕ್ ಚಟರ್ಜಿ, ಓಡಿಯನ್ ಸ್ಮಿತ್, ಇಶಾನ್ ಪೊರೆಲ್, ಅಥರ್ವ ಟೈಡೆ, ಪ್ರಭಾಸಿಮ್ರಾನ್ ಸಿಂಗ್, ವೈಭವ್ ಅರೋರಾ, ಅನ್ಶ್ ಪಟೇಲ್, ರಾಜ್ ಬಾವಾ

Story first published: Sunday, May 22, 2022, 23:39 [IST]
Other articles published on May 22, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X