ಆತನೇ ಉತ್ತರಿಸಲಿ: ಆರ್‌ಸಿಬಿ ವಿರುದ್ಧ ರಾಜಸ್ಥಾನ್ ಸೋಲಿಗೆ ಕಾರಣ ಯಾರೆಂದು ತಿಳಿಸಿದ ರವಿಶಾಸ್ತ್ರಿ, ಗವಾಸ್ಕರ್!

ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 13ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಸೆಣಸಾಟ ನಡೆಸಿದವು. ಇತ್ತಂಡಗಳ ನಡುವಿನ ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ರಾಜಸ್ಥಾನ್ ರಾಯಲ್ಸ್ ವಿರುದ್ಧ 4 ವಿಕೆಟ್‌ಗಳ ಜಯ ಸಾಧಿಸಿ ಟೂರ್ನಿಯಲ್ಲಿನ ತನ್ನ ಎರಡನೇ ಗೆಲುವನ್ನು ಪಡೆದುಕೊಂಡಿತು.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ ಜೋಸ್ ಬಟ್ಲರ್ ಮತ್ತು ಶಿಮ್ರಾನ್ ಹೆಟ್ಮಾಯರ್ ಅವರ ಸ್ಪೋಟಕ ಹಾಗೂ ಜವಾಬ್ದಾರಿಯುತ ಬ್ಯಾಟಿಂಗ್‌ನಿಂದ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 169 ರನ್ ಕಲೆಹಾಕಿ ಎದುರಾಳಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 170 ರನ್‌ಗಳ ಪೈಪೋಟಿಯುತ ಗುರಿಯನ್ನು ನೀಡಿತು. ಇನ್ನು ಈ ಗುರಿಯನ್ನು ಬೆನ್ನತ್ತಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆರಂಭಿಕರಾದ ಫಾಫ್ ಡು ಪ್ಲೆಸಿಸ್ ಮತ್ತು ಅನುಜ್ ರಾವತ್ ಉತ್ತಮ ಆರಂಭವನ್ನು ಕಟ್ಟಿಕೊಟ್ಟರು. ನಂತರ ತಂಡದ ಮಧ್ಯಮ ಕ್ರಮಾಂಕ ವಿಫಲವಾದರೂ ಸಹ ಅಂತಿಮ ಹಂತದಲ್ಲಿ ಒಂದಾದ ಶಹಬಾಜ್ ಅಹ್ಮದ್ ಮತ್ತು ದಿನೇಶ್ ಕಾರ್ತಿಕ್ ಜೋಡಿ 67 ರನ್‌ಗಳ ಜತೆಯಾಟವಾಡುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು.
ಇತ್ತ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ 5 ವಿಕೆಟ್‌ಗಳನ್ನು 87 ರನ್‌ಗಳಿಗೆ ಉರುಳಿಸಿ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದ ರಾಜಸ್ಥಾನ್ ರಾಯಲ್ಸ್ ತಂಡ ಕೆಲವು ಹಂತಗಳಲ್ಲಿ ಎಡವಿದ ಕಾರಣ ಗೆಲ್ಲಬಹುದಾಗಿದ್ದ ಪಂದ್ಯದಲ್ಲಿ ಸೋಲನ್ನು ಕಂಡಿದೆ. ಇನ್ನು ರಾಜಸ್ಥಾನ್ ರಾಯಲ್ಸ್ ಈ ಪಂದ್ಯದಲ್ಲಿ ಈ ರೀತಿ ಸೋಲುವುದಕ್ಕೆ ಕಾರಣವೇನು ಎಂಬುದರ ಕುರಿತು ಸಾಕಷ್ಟು ಚರ್ಚೆಗಳು ನಡೆದಿದ್ದು, ಮಾಜಿ ಕ್ರಿಕೆಟಿಗರಾದ ಸುನಿಲ್ ಗವಾಸ್ಕರ್ ಮತ್ತು ರವಿಶಾಸ್ತ್ರಿ ರಾಜಸ್ಥಾನ್ ರಾಯಲ್ಸ್ ಸೋಲಿಗೆ ಈ ಕೆಳಕಂಡಂತೆ ಕಾರಣವನ್ನು ತಿಳಿಸಿದ್ದಾರೆ.

ಇಲ್ಲೇ ರಾಜಸ್ಥಾನ್ ರಾಯಲ್ಸ್ ಎಡವಿತು ಎಂದ ಶಾಸ್ತ್ರಿ
ರಾಯಲ್ ಚಾಲೆಂಜರ್ಸ್ ಬೆಂಗಳೂರು ಚೇಸ್ ಮಾಡುವ ವೇಳೆ ರವಿಚಂದ್ರನ್ ಅಶ್ವಿನ್ 14ನೇ ಓವರ್ ಬೌಲಿಂಗ್ ಮಾಡಿ 21 ರನ್ ನೀಡಿ ದುಬಾರಿಯಾದ ಬೆನ್ನಲ್ಲೇ 15ನೇ ಓವರ್ ಬೌಲಿಂಗ್ ಮಾಡಲು ಹೆಚ್ಚಿನ ಅನುಭವವಿಲ್ಲದ ನವದೀಪ್ ಸೈನಿಗೆ ಬೌಲಿಂಗ್ ನೀಡಿದ್ದರ ಕುರಿತು ರವಿಶಾಸ್ತ್ರಿ ಅಸಮಾಧಾನ ಹೊರಹಾಕಿದ್ದಾರೆ. ಈ ಸಮಯದಲ್ಲಿ ಅನುಭವವಿರುವ ಯುಜುವೇಂದ್ರ ಚಹಲ್ ಅವರಿಗೆ ಚೆಂಡನ್ನು ನೀಡುವ ಬದಲು ನವದೀಪ್ ಸೈನಿಗೆ ಬೌಲಿಂಗ್ ನೀಡಿದರು ಹಾಗೂ ಆ ಓವರ್‌ನಲ್ಲಿ ಸೈನಿ 16 ರನ್ ನೀಡಿದ ಕಾರಣ ರಾಜಸ್ಥಾನ್ ರಾಯಲ್ಸ್ ಪಂದ್ಯದಲ್ಲಿ ಸೋಲನ್ನು ಅನುಭವಿಸಿದೆ ಎಂದು ರವಿಶಾಸ್ತ್ರಿ ಹೇಳಿದ್ದಾರೆ.

ಸರಿಯಾದ ಯೋಜನೆ ಇಲ್ಲದ ಬೌಲಿಂಗ್
ಇನ್ನು ರಾಜಸ್ಥಾನ್ ರಾಯಲ್ಸ್ ಸೋಲಿನ ಕುರಿತು ಮಾತನಾಡಿರುವ ಮತ್ತೋರ್ವ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಸಂಜು ಸ್ಯಾಮ್ಸನ್ ಇದಕ್ಕೆಲ್ಲಾ ಉತ್ತರಿಸಬೇಕು ಎಂದು ಸೋಲಿಗೆ ಸಂಜು ಸ್ಯಾಮ್ಸನ್ ನಾಯಕತ್ವವೇ ಕಾರಣ ಎಂಬುದನ್ನು ಪರೋಕ್ಷವಾಗಿ ತಿಳಿಸಿದ್ದಾರೆ. ತಂಡದ ಆಟಗಾರ ಪ್ರಸಿದ್ಧ್ ಕೃಷ್ಣ 19ನೇ ಓವರ್ ಬೌಲಿಂಗ್ ಮಾಡಿದಾಗ ಆನ್ ಸೈಡ್ ಡೀಪ್ ವಿಭಾಗದಲ್ಲಿ ಯಾವುದೇ ಫೀಲ್ಡರ್ ಇರಲಿಲ್ಲ, ಇಂಥಹ ಅವಕಾಶಗಳು ದಿನೇಶ್ ಕಾರ್ತಿಕ್ ರೀತಿಯ ಅನುಭವಿ ಆಟಗಾರರಿಗೆ ಸುಲಭ ತುತ್ತು ಎಂದು ಸುನಿಲ್ ಗವಾಸ್ಕರ್ ಸಂಜು ಸ್ಯಾಮ್ಸನ್ ವಿರುದ್ಧ ಮಾತನಾಡಿದ್ಟಾರೆ.

19ನೇ ಓವರ್‌ನಲ್ಲಿಯೂ ಹರಿದು ಬಂತು ರನ್
ಸುನಿಲ್ ಗವಾಸ್ಕರ್ ಹೇಳಿದ ಹಾಗೆ 19ನೇ ಓವರ್‌ನಲ್ಲಿ ಕೂಡ ರಾಜಸ್ಥಾನ್ ರಾಯಲ್ಸ್ ರನ್ ಬಿಟ್ಟುಕೊಟ್ಟಿತು. ಪ್ರಸಿದ್ಧ್ ಕೃಷ್ಣ ಎಸೆದ ಈ ಓವರ್‌ನಲ್ಲಿ ದಿನೇಶ್ ಕಾರ್ತಿಕ್ ಎರಡು ಬೌಂಡರಿ ಬಾರಿಸಿದರು. ಪರಿಣಾಮವಾಗಿ ಆ ಒಂದು ಓವರ್‌ನಲ್ಲಿ 12 ರನ್ ಹರಿದುಬಂತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications