Sunil Narine : ಕೆಕೆಆರ್ ಫ್ರಾಂಚೈಸಿ ಬಿಟ್ಟು ಬೇರೆ ಫ್ರಾಂಚೈಸಿಗೆ ನಾನು ಆಡುವುದು ಅನುಮಾನ ಎಂದ ಸುನಿಲ್ ನರೈನ್

ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಸ್ಟಾರ್ ಆಲ್‌ರೌಂಡರ್ ಸುನಿಲ್ ನರೈನ್ ಸುದೀರ್ಘ ಕಾಲದಿಂದ ಇದೊಂದೇ ಫ್ರಾಂಚೈಸಿ ಪರವಾಗಿ ಆಡುತ್ತಿದ್ದಾರೆ. ಅತ್ಯಂತ ಯಶಸ್ವಿ ಬೌಲರ್ ಆಗಿ ಮಿಂಚುತ್ತಿರುವ ಸುನಿಲ್ ನರೈನ್ 2012ರ ಐಪಿಎಲ್ ಆವೃತ್ತಿಯಿಂದಲೂ ಕೆಕೆಆರ್ ತಂಡದ ಭಾಗವಾಗಿದ್ದಾರೆ. ಈ ಬಾರಿಯ ಐಪಿಎಲ್‌ನಲ್ಲಿಯೂ ಮಿಂಚಿನ ಪ್ರದರ್ಶನ ನೀಡುತ್ತಿರುವ ನರೈನ್ ಐಪಿಎಲ್‌ನಲ್ಲಿ ಕೆಕೆಆರ್ ಪರವಾಗಿಯೇ ಕೊನೆಯವರೆಗೂ ಆಡುವ ಇಂಗಿತ ವ್ಯಕ್ತಪಡಿಸಿದ್ದಾರೆ.
ರಾಜಸ್ಥಾನ್ ರಾಯಲ್ಸ ವಿರುದ್ಧ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಮುಖಾಮುಖಿಯಾಗುವ ಸಂದರ್ಭದಲ್ಲಿ ಮತ್ತೊಂದು ಮಹತ್ವದ ಐಪಿಎಲ್‌ನ ಮೈಲಿಗಲ್ಲು ಸಾಧಿಸಲು ಸುನಿಲ್ ನರೈನ್ ಸಜ್ಜಾಗಿದ್ದಾರೆ. ಕೆಕೆಆರ್ ಪರವಾಗಿ ಐಪಿಎಲ್‌ನಲ್ಲಿ 150ನೇ ಪಂದ್ಯದಲ್ಲಿ ನರೈನ್ ಕಣಕ್ಕಿಳಿಯಲಿದ್ದಾರೆ. ಈ ಪಂದ್ಯಕ್ಕೂ ಮುನ್ನ ನರೈನ್ ಕೆಕೆಆರ್ ವೆಬ್‌ಸೈಟ್‌ಗೆ ಸಂದರ್ಶನ ನೀಡಿದ್ದಾರೆ.
"ನಾನು ಯಾವಾಗಲೂ ವೆಂಕಿಗೆ (ವೆಂಕಿ ಮೈಸೂರು, ಕೆಕೆಆರ್ ಸಿಇಒ) ಹೇಳುತ್ತಿದ್ದೆ. ನಾನು ಬಹುಶಃ ಬೇರೆ ಯಾವುದೇ ಫ್ರಾಂಚೈಸಿಗೂ ಆಡುವುದಿಲ್ಲ ಎಂದು. ಕೆಕೆಆರ್‌ನಲ್ಲಿ ನನ್ನ ಪ್ರಯಾಣವನ್ನು ನಾನು ಅನಂದಿಸಿದ್ದೇನೆ. ಬಹುಶಃ ನನ್ನ ಆರಂಭ ಮುತ್ತು ಕೊನೆ ಇಲ್ಲಿಯೇ ಆಗಲಿದೆ. ನನ್ನ ಪ್ರಕಾರ ಇದು ಶ್ರೇಷ್ಠವಾದ ಸಾಧನೆಯಾಗಲಿದೆ. ಹೆಚ್ಚಿನ ವಿದೇಶಿ ಆಟಗಾರರು ಒಂದೇ ಫ್ರಾಂಚೈಸಿಯಲ್ಲಿ ಮುಂದುವರಿಯುವುದನ್ನು ನೀವು ನೋಡಲಾರಿರಿ. ಅದೃಷ್ಟವಶಾತ್ ನಾನು ಕೂಡ ಅದರಲ್ಲಿ ಒಬ್ಬನಾಗಿದ್ದು ಮುಂದೆಯೂ ಇದೇ ತಮಡದ ಪರವಾಗಿ ಮುಂದುವರಿಯುವ ಭರವಸೆಯಿದೆ" ಎಂದಿದ್ದಾರೆ ಸುನಿಲ್ ನರೈನ್.
ಈ ಬಾರಿಯ ಐಪಿಎಲ್‌ನಲ್ಲಿಯೂ ನರೈನ್ ಅದ್ಭುತ ಪ್ರದರ್ಶನ ನೀಡುತ್ತಿದ್ದು ಮಧ್ಯಮ ಓವರ್‌ಗಳಲ್ಲಿ ತಮ್ಮದೇ ಶೈಲಿಯಲ್ಲಿ ಎದುರಾಳಿಯನ್ನು ನಿಯಂತ್ರಿಸುತ್ತಿದ್ದಾರೆ. 33ರ ಹರೆಯದ ನರೈನ್ 6 ಪಂದ್ಯಗಳಲ್ಲಿ ನಾಲ್ಕು ವಿಕೆಟ್ ಸಂಪಾದಿಸಿದ್ದು 5.00ಯಷ್ಟು ಕನಿಷ್ಠ ಎಕಾನಮಿ ಮೂಲಕ ಭಾರೀ ನಿಯಂತ್ರಣ ಸಾಧಿಸಿದ್ದಾರೆ. ತನ್ನ ಈ ಅದ್ಭುತ ಫಾರ್ಮ್‌ಗೆ ಕಠಿಣ ಪರಿಶ್ರಮವೇ ಕಾರಣ ಎಂದಿದ್ದಾರೆ ಸುನಿಲ್ ನರೈನ್.
"ಬಹುಶಃ ಕಳೆದ ಎರಡ್ಮೂರು ವರ್ಷಗಳಲ್ಲಿ ನಾನು ನನ್ನ ಜೀವನದಲ್ಲಿಯೇ ಅತಿ ಹೆಚ್ಚು ಅಭ್ಯಾಸ ನಡೆಸಿದ್ದೇನೆ. ನೀವು ಹೆಚ್ಚು ಅಭ್ಯಾಸ ನಡೆಸಿದಷ್ಟೂ ಹೆಚ್ಚು ಸ್ಥಿರವಾದ ಪ್ರದರ್ಶನ ನೀಡಲು ಸಾಧ್ಯವಿದೆ. ಇದು ನಮ್ಮ ಫಾರ್ಮ್ ಮೇಲೆಯೂ ಅವಲಂಬಿಸಿರುತ್ತದೆ. ನನ್ನ ಬಗ್ಗೆ ನನಗೆ ಆತ್ಮ ವಿಶ್ವಾಸವಿದೆ, ಇದು ಕೂಡ ಪ್ರದರ್ಶನದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ನನ್ನಿಂದ ಉತ್ತಮ ಪ್ರದರ್ಶನ ನಿಡಲು ಸಾಧ್ಯವಾಗುತ್ತಿದೆ ಎಂದಾದರೆ ನಾನು ವಿಕೆಟ್ ಪಡೆಯಲು ಹೆಚ್ಚಿನ ಗಮನ ನೀಡುತ್ತೇನೆ. ನಾನು ಪಂದ್ಯಕ್ಕಿಂತ ಮೊದಲು ಹೆಚ್ಚಿನ ಯೋಜನೆಗಳನ್ನು ಮಾಡಿಕೊಳ್ಳುವುದಿಲ್ಲ" ಎಂದಿದ್ದಾರೆ ಸುನಿಲ್ ನರೈನ್.
ಈ ಬಾರಿಯ ಐಪಿಎಲ್‌ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಶ್ರೇಯಸ್ ಐಯ್ಯರ್ ಮುನ್ನಡೆಸುತ್ತಿದ್ದಾರೆ. ಟೂರ್ನಿಯಲ್ಲಿ ಉತ್ತಮ ಆರಂಭವನ್ನು ಪಡೆದುಕೊಂಡಿದ್ದರೂ ನಂತರ ಹಿನ್ನಡೆ ಅನುಭವಿಸಿದೆ. ಕಳೆದ ಎರಡು ಪಂದ್ಯಗಳಲ್ಲಿ ಕೆಕೆಆರ್ ತಂಡ ಸೋಲು ಅನುಭವಿಸಿದ್ದು ಮತ್ತೆ ಗೆಲುವಿನ ಲಯಕ್ಕೆ ಮರಳುವ ಪ್ರಯತ್ನ ನಡೆಸುತ್ತಿದೆ. ರಾಜಸ್ಥಾನ್ ರಾಯಲ್ಸ್ ತಂಡದ ವಿರುದ್ಧ ಸೋಮವಾರ ತನ್ನ ಪಂದ್ಯವನ್ನಾಡಲಿದೆ ಕೆಕೆಆರ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications