
15ನೇ ಆವೃತ್ತಿಯ ಐಪಿಎಲ್ ಟೂರ್ನಿ ಮಾರ್ಚ್ 26ರಂದು ಚಾಲನೆ ಪಡೆಯಲು ಸಜ್ಜಾಗಿದೆ. 10 ತಂಡಗಳನ್ನು ಒಳಗೊಂಡಿರುವ ಈ ಮೆಗಾ ಟೂರ್ನಿ ಈ ಬಾರಿ ತನ್ನ ಕುತೂಹಲವನ್ನು ಹೆಚ್ಚಿಸಿದೆ. ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಈ ಬಾರಿಯ ಆರಂಭಿಕ ಪಂದ್ಯದಲ್ಲಿ ಮುಖಾಮುಖಿಯಾಗುವ ಮೂಲಕ ಟೂರ್ನಿಗೆ ಅಧಿಕೃತವಾಗಿ ಚಾಲನೆ ದೊರೆಯಲಿದೆ. ಈ ಮಧ್ಯೆ ಈ ಬಾರಿಯ ಮೆಗಾ ಆಕ್ಷನ್‌ನಲ್ಲಿ ಮಿಸ್ಟರ್ ಐಪಿಎಲ್ ಖ್ಯಾತಿಯ ಸುರೇಶ್ ರೈನಾ ಹರಾಜಾಗದೆ ಉಳಿದುಕೊಂಡಿದ್ದ ಕಾರಣ ಅಭಿಮಾನಿಗಳು ಬೇಸರಗೊಂಡಿದ್ದರು. ಆದರೆ ಇದೀಗ ಸುರೇಶ್ ರೈನಾ ಅಭಿಮಾನಿಗಳು ಖುಷಿ ಪಡುವಂತಾ ಸುದ್ದಿ ಅಧಿಕೃತವಾಗಿ ಹೊರಬಿದ್ದಿದೆ.
ಈ ಬಾರಿಯ ಐಪಿಎಲ್ ಟೂರ್ನಿಯ ನೇರ ಪ್ರಸಾರದ ಹಕ್ಕನ್ನು ಕೂಡ ಸ್ಟಾರ್‌ಸ್ಪೋರ್ಟ್ಸ ಹೊಂದಿದ್ದು ಪಂದ್ಯ ಪ್ರಸಾರವಾಗುವ ಎಲ್ಲಾ ಭಾಷೆಗಳ ಒಟ್ಟು 80 ಕಾಮೆಂಟೇಟರ್‌ಗಳ ಪಟ್ಟಿಯನ್ನು ಸ್ಟಾರ್‌ಸ್ಪೋರ್ಟ್ ಬಿಡುಗಡೆಗೊಳಿಸಿದೆ. ಈ ಪಟ್ಟಿಯಲ್ಲಿ ಹಿಂದೆ ಕಾಮೆಂಟೇಟರ್‌ಗಳ ವಿಭಾಗದಲ್ಲಿ ಸುರೇಶ್ ರೈನಾ ಕೂಡ ಇದ್ದಾರೆ. ಇವರ ಜೊತೆಯಲ್ಲಿ ಭಾರತ ತಂಡದ ಮಾಜಿ ಕೋಚ್ ರವಿ ಶಾಸ್ತ್ರಿ ಕೂಡ ಹಿಂದಿ ಕಾಮೆಂಟೇರ್ ಆಗಿ ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಐಪಿಎಲ್‌ನಲ್ಲಿ ಕಾಮೆಂಟೇಟರ್‌ಗಳ ಪಟ್ಟಿಯನ್ನು ಬಿಡುಗಡೆ ಮಾಡುವ ಸಂದರ್ಭದಲ್ಲಿ ಸ್ಟಾರ್‌ಸ್ಪೋರ್ಟ್ಸ್ ನೆಟ್‌ವರ್ಕ್ ಈ ಬಾರಿ ಟೂರ್ನಿಯ ವೀಕ್ಷಕ ವಿವರಣೆ 8 ಭಾಷೆಗಳಲ್ಲಿ ಪ್ರಸಾರವಾಗಲಿದೆ ಎಂಬುದನ್ನು ಕೂಡ ಸ್ಪಷ್ಟಪಡಿಸಿದೆ. ಕನ್ನಡ, ಇಂಗ್ಲೀಷ್, ತಮಿಳು, ತೆಲುಗು, ಮರಾಠಿ, ಮಲಯಾಳಂ, ಹಿಂದಿ ಹಾಗೂ ಬೆಂಗಾಲಿ ಭಾಷೆಯಲ್ಲಿ ಕಾಮೆಂಟರಿ ಪ್ರಸಾರವಾಗಲಿದೆ.
ಸ್ಟಾರ್‌ಸ್ಪೋರ್ಟ್ಸ್ ಬಿಡುಗಡೆಮಾಡಿರುವ ಕಾಮೆಂಟೇಟರ್‌ಗಳ ಪಟ್ಟಿ:
ಇಂಗ್ಲೀಷ್ ಕಾಮೆಂಟರಿ: ಹರ್ಷ ಭೋಗ್ಲೆ, ಸುನಿಲ್ ಗವಾಸ್ಕರ್, ಲಕ್ಷ್ಮಣ್ ಶಿವರಾಮಕೃಷ್ಣನ್, ಮುರಳಿ ಕಾರ್ತಿಕ್, ದೀಪ್ ದಾಸ್‌ಗುಪ್ತ, ಅಂಜುಮ್ ಚೋಪ್ರಾ, ಇಯಾನ್ ಬಿಷಪ್, ಅಲನ್ ವಿಲ್ಕಿನ್ಸ್, ಎಂಬಂಗ್ವಾ, ನಿಕೋಲಸ್ ನೈಟ್, ಡ್ಯಾನಿ ಮಾರಿಸನ್, ಸೈಮನ್ ಡೌಲ್, ಮ್ಯಾಥ್ಯೂ ಹೇಡನ್ ಮತ್ತು ಕೆವಿನ್ ಪೀಟರ್ಸನ್
ಡಗೌಟ್: ಅನಂತ್ ತ್ಯಾಗಿ, ನೆರೋಲಿ ಮೆಡೋಸ್, ಸ್ಕಾಟ್ ಸ್ಟೈರಿಸ್, ಗ್ರೇಮ್ ಸ್ವಾನ್.
ಕನ್ನಡ: ಮಧು ಮೈಲಂಕೋಡಿ, ಕಿರಣ್ ಶ್ರೀನಿವಾಸ್, ಶ್ರೀನಿವಾಸ ಮೂರ್ತಿ ಪಿ, ವಿಜಯ್ ಭಾರದ್ವಾಜ್, ಭರತ್ ಚಿಪ್ಲಿ, ಜಿಕೆ ಅನಿಲ್ ಕುಮಾರ್, ವೆಂಕಟೇಶ್ ಪ್ರಸಾದ್, ವೇದಾ ಕೃಷ್ಣಮೂರ್ತಿ, ಸುಮೇಶ್ ಗೋಣಿ ಮತ್ತು ವಿನಯ್ ಕುಮಾರ್
ಹಿಂದಿ: ಆಕಾಶ್ ಚೋಪ್ರಾ, ಇರ್ಫಾನ್ ಪಠಾಣ್, ಗೌತಮ್ ಗಂಭೀರ್, ಪಾರ್ಥಿವ್ ಪಟೇಲ್, ನಿಖಿಲ್ ಚೋಪ್ರಾ, ತಾನ್ಯಾ ಪುರೋಹಿತ್, ಕಿರಣ್ ಮೋರೆ, ಜತಿನ್ ಸಪ್ರು, ಸುರೇನ್ ಸುಂದರಂ, ರವಿ ಶಾಸ್ತ್ರಿ, ಸುರೇಶ್ ರೈನಾ
ತಮಿಳು: ಮುತ್ತುರಾಮನ್ ಆರ್, ಆರ್ ಕೆ, ಭಾವನಾ, ಆರ್ ಜೆ ಬಾಲಾಜಿ, ಎಸ್ ಬದ್ರಿನಾಥ್, ಅಭಿನವ್ ಮುಕುಂದ್, ಎಸ್ ರಮೇಶ್, ನಾನೀ ಮತ್ತು ಕೆ ಶ್ರೀಕಾಂತ್.
ಮರಾಠಿ: ಕುನಾಲ್ ಡೇಟ್, ಪ್ರಸನ್ನ ಸಂತ, ಚೈತನ್ಯ ಸಂತ, ಸ್ನೇಹಲ್ ಪ್ರಧಾನ್, ಸಂದೀಪ್ ಪಾಟೀಲ್
ಮಲಯಾಳಂ: ವಿಷ್ಣು ಹರಿಹರನ್, ಶಿಯಾಸ್ ಮೊಹಮ್ಮದ್, ಟಿನು ಯೋಹನ್ನನ್, ರೈಫಿ ಗೊಮೆಜ್ ಮತ್ತು ಸಿ ಎಂ ದೀಪಕ್
ತೆಲುಗು: ಎಂ ಎ ಎಸ್ ಕೃಷ್ಣ, ಎನ್ ಮಚ್ಚಾ, ವಿ ವಿ ಮೇಡಪತಿ, ಎಂ ಎಸ್ ಕೆ ಪ್ರಸಾದ್, ಎ ರೆಡ್ಡಿ, ಕೆ ಎನ್ ಚಕ್ರವರ್ತಿ, ಎಸ್ ಅವುಲಪಲ್ಲಿ, ಕಲ್ಯಾಣ್ ಕೃಷ್ಣ ಡಿ, ವೇಣುಗೋಪಾಲರಾವ್ ಮತ್ತು ಟಿ ಸುಮನ್.