For Quick Alerts
ALLOW NOTIFICATIONS  
For Daily Alerts
 

IPL 2022 : ಬೆಂಚ್ ಕಾಯಲು ಸೀಮಿತವಾಗಲಿದ್ದಾರ ಈ 5 ಅಂಡರ್ 19 ವಿಶ್ವಕಪ್‌ ಸ್ಟಾರ್‌ಗಳು?

IPL: 2022: These 5 Under-19 players still waiting for oportinity in IPL 2022

ಇಂಡಿಯನ್ ಪ್ರೀಮಿಯರ್ ಲೀಗ್ ಅನೇಕ ಕ್ರಿಕೆಟಿಗರಿಗೆ ಅಂತರಾಷ್ಟ್ರೀಯ ತಂಡದಲ್ಲಿ ಸ್ಥಾನವನ್ನು ಗಳಿಸಿ ಮತ್ತು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸುವ ಮಹತ್ವದ ವೇದಿಕೆಯಾಗಿದೆ. 15ನೇ ಆವೃತ್ತಿಯ ಹರಾಜು ಪ್ರಕ್ರಿಯೆಯಲ್ಲಿ ಪ್ರಾಂಚೈಸಿಗಳು ಯುವ ಆಟಗಾರರ ಮೇಲೆ ಕೋಟ್ಯಾಂತರ ರೂಪಾಯಿ ಹೂಡಿಕೆ ಮಾಡಿ ತಂಡಕ್ಕೆ ಸೇರಿಸಿಕೊಂಡಿದ್ದಾರೆ. ಆದರೆ ಈ ಯುವ ಆಟಗಾರರಿಗೆ ಈವರೆಗೂ ಪ್ರತಿಭೆಯನ್ನು ಪ್ರದರ್ಶಿಸಲು ಸೂಕ್ತವಾದ ಅವಕಾಶಗಳನ್ನು ನೀಡದೆ ಇರುವುದು ಯುವ ಆಟಗಾರರ ವೃತ್ತಿಜೀವನದ ಮೇಲೆ ಕಪ್ಪು ಚಾಯೆ ಆವರಿಸಿದಂತೆದೆ.

ಈ ಆವೃತ್ತಿಯಲ್ಲಿ ಅಗ್ರಸ್ಥಾನದಲ್ಲಿರುವ ಐದು ತಂಡಗಳಲ್ಲಿರುವ ಯುವ ಆಟಗಾರರು ಅವಕಾಶಕ್ಕಾಗಿ ಚಾತಕ ಪಕ್ಷಿಯಂತೆ ಕಾಯ್ದು ಕುಳಿತಿದ್ದಾರೆ. ಪ್ರತಿ ಪಂದ್ಯದಲ್ಲೂ ಪ್ಲೇಯಿಂಗ್ ಲೆವೆನ್‌ನಿಂದ ಹೊರಗುಳಿದಿದ್ದು ಅವಕಾಶವಂಚಿತರಾಗಿದ್ದಾರೆ. ತಂಡವನ್ನು ಪ್ರತಿನಿಧಿಸುವ ಒಂದು ಅವಕಾಶ ನೀಡಿದಲ್ಲಿ ಹೇಗೆ ಪ್ರದರ್ಶನ ನೀಡಲಿದ್ದಾರೆ ಎಂಬುದರ ಮೇಲೆ ಕ್ರೀಡಾಭಿಮಾನಿಗಳ ಕಣ್ಣು ನೆಟ್ಟಿವೆ.

ಹಾಗಾದರೆ ಈ ಬಾರಿಯ ಐಪಿಎಲ್‌ನ ಫ್ರಾಂಚೈಸಿಗಳಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದರೂ ಆಡುವ ಬಳಗದಲ್ಲಿ ಅವಕಾಶ ಗಳಿಸದ ಆಟಗಾರರು ಯಾರು? ಮುಂದೆ ಓದಿ..

ಗುಜರಾತ ಟೈಟನ್ಸ್: ನೂರ್ ಅಹ್ಮದ್(17 ವರ್ಷ)

ಗುಜರಾತ ಟೈಟನ್ಸ್: ನೂರ್ ಅಹ್ಮದ್(17 ವರ್ಷ)

ಅಫ್ಘಾನಿಸ್ಥಾನದ ನೂರ್ ಅಹ್ಮದ್ ಅಂಡರ್-19 ವಿಶ್ವಕಪ್‌ನಲ್ಲಿ ಅಫ್ಘನ್ ತಂಡದ ಭಾಗವಾಗಿದ್ದರು. ಅಂಡರ್ 19 ವಿಶ್ವಕಪ್‌ನ 6 ಪಂದ್ಯಗಳಲ್ಲಿ 10 ವಿಕೆಟ್‌ಗಳನ್ನು ಪಡೆದಿದ್ದರು. 15 ನೇ ಈ ಆವೃತ್ತಿಯಲ್ಲಿ ಹೊಸದಾಗಿ ಸೇರ್ಪಡೆಯಾಗಿರುವ ಸೇರಿಕೊಂಡಿರುವ ತಂಡ ಗುಜರಾತ ಟೈಟನ್ಸ್‌ ತಂಡವು ಎಡಗೈ ಸ್ಪಿನ್ನರ್ ನೂರ್ ಅಹ್ಮದ್ ಅವರನ್ನು ಮೂಲ ಬೆಲೆ 30 ಲಕ್ಷಕ್ಕೆ ಖರೀದಿ ಮಾಡಿತ್ತು. ಜಿ.ಟಿ ತಂಡದ ಮೂಲಕ ಐಪಿಎಲ್ ಟೂರ್ನಿಗೆ ಪಾದಾರ್ಪಣೆ ಮಾಡಿರುವ ಅಹ್ಮದ್ ಅವರಿಗೆ ಈವರೆಗೂ ಮೈದಾನಕ್ಕಿಳಿಯುವ ಅವಕಾಶ ದೊರೆತಿಲ್ಲ. ಈ ಆವೃತ್ತಿಯಲ್ಲಿ ಐದು ಪಂದ್ಯಗಳನ್ನಾಡಿರುವ ಜಿ ಟಿ ನಾಲ್ಕು ಪಂದ್ಯಗಳಲ್ಲಿ ಜಯಗಳಿಸುವ ಮೂಲಕ 8 ಅಂಕಗಳೊಂದಿಗೆ ಅಗ್ರ ಸ್ಥಾನದಲ್ಲಿದೆ.

ಕೋಲ್ಕತ್ತಾ ನೈಟ್ ರೈಡರ್ಸ್ : ಅಶೋಕ್ ಶರ್ಮಾ (19 ವರ್ಷ)

ಕೋಲ್ಕತ್ತಾ ನೈಟ್ ರೈಡರ್ಸ್ : ಅಶೋಕ್ ಶರ್ಮಾ (19 ವರ್ಷ)

ಈ ಹಿಂದಿನ ಆವೃತ್ತಿಯಲ್ಲಿ ರಾಜಸ್ಥಾನ್ ರಾಯಲ್ಸ್ ಶಿಬಿರದಲ್ಲಿದ್ದ ಅಶೋಕ್ ಶರ್ಮಾ ಯುವ ಮಧ್ಯಮ ವೇಗಿಯಾಗಿದ್ದಾರೆ. ಶರ್ಮಾ ಅವರ ಸ್ವಿಂಗ್ ಬೌಲಿಂಗ್ ಸಾಮರ್ಥ್ಯದಿಂದ ಅನೇಕರನ್ನು ಆಕರ್ಷಿಸಿದ್ದಾರೆ. ಟ್ರಯಲ್ಸ್ ಶಿಬಿರದಲ್ಲಿ ಕೆಕೆಆರ್ ಮ್ಯಾನೇಜ್‌ಮೆಂಟ್‌ನ ಗಮನಸೆಳೆಯಲು ಯಶಸ್ವಿಯಾಗಿದ್ದರಿಂದ 2022ರ ಐಪಿಎಲ್ ಹರಾಜಿನಲ್ಲಿ 55 ಲಕ್ಷಕ್ಕೆ ಖರೀದಿಸಿದ್ದಾರೆ. ಆದರೆ ಕೆಕೆಆರ್ ಆಡುವ ಬಳಗದಲ್ಲಿ ಸ್ಥಾನ ಪಡೆಯಲು ವಿಫಲವಾಗಿದ್ದಾರೆ. ಈ ಆವೃತ್ತಿಯಲ್ಲಿ ಐದು ಪಂದ್ಯಗಳನ್ನಾಡಿರುವ ಕೆಕೆಆರ್ ತಂಡ ಮೂರು ಪಂದ್ಯಗಳಲ್ಲಿ ಜಯಗಳಿಸುವ ಮೂಲಕ ಆರು ಅಂಕಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದೆ.

ರಾಜಸ್ಥಾನ ರಾಯಲ್ಸ್ : ಯಶಸ್ವಿ ಜೈಸ್ವಾಲ್ (20 ವರ್ಷ )

ರಾಜಸ್ಥಾನ ರಾಯಲ್ಸ್ : ಯಶಸ್ವಿ ಜೈಸ್ವಾಲ್ (20 ವರ್ಷ )

ಮೂಲತಃ ಉತ್ತರ ಪ್ರದೇಶದವರಾದ ಯಶಸ್ವಿ ಜೈಸ್ವಾಲ್ 10ನೇ ವಯಸ್ಸಿನಿಂದ ಕ್ರಿಕೆಟ್ ಆಡುತ್ತಿದ್ದಾರೆ. ಭಾರತದ 19 ವರ್ಷದೊಳಗಿನವರ ವಿಶ್ವಕಪ್ 2020 ಟೂರ್ನಿಯಲ್ಲಿ 400 ರನ್ ಗಳಿಸಿದ್ದರು. ಯಶಸ್ವಿ ಜೈಸ್ವಾಲ್ ಅವರನ್ನು ಐಪಿಎಲ್ 2020ರಲ್ಲಿ 2.40 ಕೋಟಿ ನೀಡಿ ರಾಜಸ್ಥಾನ್ ರಾಯಲ್ಸ್ ಖರೀದಿಸಿತು. ಈ ಆವೃತ್ತಿಯಲ್ಲಿ ಅವರನ್ನು ರಿಟೇನ್ ಮಾಡಿಕೊಂಡಿದೆ ರಾಜಸ್ಥಾನ್ ರಾಯಲ್ಸ್. ಅಗ್ರ ಕ್ರಮಾಂಕದ ಬ್ಯಾಟರ್ ಜೈಸ್ವಾಲ್ ಈವರೆಗೂ 16 ಪಂದ್ಯಗಳಲ್ಲಿ 314 ರನ್ ಗಳಿಸಿದ್ದಾರೆ. ಆದರೆ ಈ ಬಾರಿಯ ಆವೃತ್ತಿಯಲ್ಲಿ ಯಶಸ್ವಿ ಜೈಸ್ವಾಲ್ ಬಹುತೇಕ ಬೆಂಚ್ ಕಾದಿದ್ದಾರೆ. ಈ ಆವೃತ್ತಿಯಲ್ಲಿ ಐದು ಪಂದ್ಯಗಳನ್ನಾಡಿರುವ ರಾಜಸ್ಥಾನ ಮೂರು ಪಂದ್ಯಗಳಲ್ಲಿ ಜಯಶಾಲಿಯಾಗುವ ಮೂಲಕ ಆರು ಅಂಕಗಳೊಂದಿಗೆ ತೃತೀಯ ಸ್ಥಾನದಲ್ಲಿದ್ದಾರೆ.

ಪಂಜಾಬ್ ಕಿಂಗ್ಸ್: ರಾಜ್ ಬಾವಾ (19 ವರ್ಷ )

ಪಂಜಾಬ್ ಕಿಂಗ್ಸ್: ರಾಜ್ ಬಾವಾ (19 ವರ್ಷ )

ಅಂಡರ್ 19 ವಿಶ್ವಕಪ್ ನಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದ ಭಾರತೀಯ ಬೌಲರ್‌ಗಳಲ್ಲಿ ಆಲ್‌ರೌಂಡರ್ ರಾಜ್ ಬಾವಾ ಎರಡನೇ ಸ್ಥಾನದಲ್ಲಿದ್ದಾರೆ. ಅಂಡರ್ 19 ವಿಶ್ವಕಪ್‌ನಲ್ಲಿ 252 ರನ್ ಗಳಿಸಿದ ಅವರು ನಿರ್ಣಾಯಕ ವಿಕೆಟ್‌ಗಳನ್ನು ಪಡೆದಿದ್ದಾರೆ. ಹೀಗಾಗಿ ಪಂಜಾಬ್ ಫ್ರಾಂಚೈಸಿ ಈ ಆಟಗಾರನ ಮೇಲೆ 2 ಕೋಟಿ ಹೂಡಿಕೆ ಮಾಡಿದೆ. ಈ ಮೂಲಕ ಐಪಿಎಲ್ 2022 ರಲ್ಲಿ ರಾಜ್ ಬಾವಾ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಆದರೆ ಸಿಕ್ಕ ಅವಕಾಶವನ್ನು ಪರಿಣಾಮಕಾರಿಯಾಗಿ ಬಳಸಲು ವಿಫಲವಾದ ರಾಜ್ ಬಾವಾ ನಂತರ ಬೆಂಚ್ ಕಾಯಲು ಸೀಮಿತವಾಗಿದ್ದಾರೆ. ಈವರೆಗೂ ಐದು ಪಂದ್ಯಗಳನ್ನಾಡಿರುವ ಪಂಜಾಬ್ ಮೂರು ಪಂದ್ಯಗಳಲ್ಲಿ ಜಯಗಳಿಸಿದ್ದು ಆರು ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ.

Shreyas Iyer ತಂಡ ಮಂಕಾಗಿದ್ದೇಕೆ | Oneindia Kannada
ಲಕ್ನೋ ಸೂಪರ್ ಜೈಂಟ್ಸ್ : ಮಯಾಂಕ್ ಯಾದವ್ (19 ವರ್ಷ )

ಲಕ್ನೋ ಸೂಪರ್ ಜೈಂಟ್ಸ್ : ಮಯಾಂಕ್ ಯಾದವ್ (19 ವರ್ಷ )

ದೆಹಲಿ ಮೂಲದ ಮಧ್ಯಮ ಬಲಗೈ ವೇಗಿ ಮಯಾಂಕ್ ಯಾದವ್ ಇತ್ತೀಚೆಗೆ ವಿಜಯ್ ಹಜಾರೆ ಟ್ರೋಫಿ ಮೂಲಕ ದೇಶೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದಾರೆ. ಗೌತಮ ಗಂಭೀರ್ ಅವರ ಮಾರ್ಗದರ್ಶನದಲ್ಲಿ 20 ಲಕ್ಷಕ್ಕೆ ಲಕ್ನೋ ತಂಡ ಪ್ರವೇಶಿಸಿರುವ ಯಾದವ್‌ಗೆ ಐಪಿಎಲ್‌ನಲ್ಲಿ ಆಡುವ ಅವಕಾಶ ದೊರೆತಿಲ್ಲ. ಈವರೆಗೂ ಐದು ಪಂದ್ಯಗಳನ್ನಾಡಿರುವ ಲಕ್ನೋ ಮೂರು ಪಂದ್ಯಗಳಲ್ಲಿ ಜಯಗಳಿಸಿದ್ದು ಆರು ಅಂಕಗಳೊಂದಿಗೆ ಐದನೇ ಸ್ಥಾನದಲ್ಲಿದ್ದಾರೆ.

Story first published: Saturday, April 16, 2022, 10:43 [IST]
Other articles published on Apr 16, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+