For Quick Alerts
ALLOW NOTIFICATIONS  
For Daily Alerts
 

IPL ಇತಿಹಾಸದಲ್ಲಿ ಅತಿ ದೊಡ್ಡ ಟಾರ್ಗೆಟ್‌ ಯಶಸ್ವಿಯಾಗಿ ಬೆನ್ನತ್ತಿದ ಟಾಪ್ 5 ತಂಡಗಳು

Team

5ನೇ ವರ್ಷಾಚರಣೆಯಲ್ಲಿರುವ ಐಪಿಎಲ್ ಮನರಂಜನೆಯ ಪ್ರಮುಖ ಕೇಂದ್ರವಾಗಿದೆ. ಹಲವಾರು ಪಂದ್ಯಗಳು ಅತಿ ರೋಚಕತೆಯಲ್ಲಿ ಅಂತ್ಯವಾಗಿವೆ. ಬೃಹತ್ ಮೊತ್ತ ಗಳಿಸಿದರೂ ಎದುರಾಳಿ ತಂಡಗಳು ಬಿಟ್ಟು ಬಿಡದೇ ಚೇಸ್‌ ಮಾಡಿರುವ ಮೂಲಕ ದಾಖಲೆಯ ಗೆಲುವು ಸಾಧಿಸಿವೆ.

ಬೃಹತ್ ಮೊತ್ತ ಕಲೆಹಾಕಿದ ಅದೆಷ್ಟೋ ತಂಡಗಳು ಮೈದಾನದಲ್ಲಿ ಮುಗ್ಗರಿಸಿದ ಉದಾಹರಣೆಗಳಿಗೆ ಐಪಿಎಲ್ ಸಾಕ್ಷಿಯಾಗಿದೆ. ಅಸಾಧ್ಯವಾಗಿರುವ ಕೆಲವು ಮ್ಯಾಚ್‌ಗಳಲ್ಲಿ ಎದುರಾಳಿ ತಂಡ ಬ್ಯಾಟಿಂಗ್‌ನಲ್ಲಿ ಚಮತ್ಕಾರ ಮೂಡಿಸಿ ಜಯದ ಬಾಗಿಲು ತಟ್ಟಿವೆ.

ಪಂದ್ಯದ ಅಂತ್ಯದ ವರೆಗೂ ಮೈದಾನದಲ್ಲಿ ಗೆಲುವು ಯಾವುದೇ ತಂಡಕ್ಕೆ ಒಲಿಯಬಹಹುದು ಎನ್ನುವುದಕ್ಕೆ ಈ ಕೆಳಗಿರುವ ಐದು ಯಶಸ್ವಿ ರನ್ ಚೇಸ್‌ಗಳೇ ಸಾಕ್ಷಿ. ಐಪಿಎಲ್ ಇತಿಹಾಸದಲ್ಲಿ ಬೃಹತ್ ಮೊತ್ತಗಳನ್ನು ಯಶಸ್ವಿಯಾಗಿ ಬೆನ್ನತ್ತಿದ ಟಾಪ್ 5 ತಂಡಗಳ ಮಾಹಿತಿ ಈ ಕೆಳಗಿದೆ.

#5 ಲಕ್ನೋ ಸೂಪರ್ ಜೈಂಟ್ಸ್‌

ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ, ಲಕ್ನೋ ಸೂಪರ್ ಜೈಂಟ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಗೆಲುವಿನ ಹುಡುಕಾಟದಲ್ಲಿ ಮುಖಾಮುಖಿಯಾದವು. ಮೊದಲು ಬ್ಯಾಟಿಂಗ್ ಮಾಡಿದ ಜಡೇಜಾ ನಾಯಕತ್ವದ ಚೆನ್ನೈ ತಂಡ ಆರಂಭಿಕ ಆಟಗಾರ ರಾಬಿನ್ ಉತ್ತಪ್ಪ ಅವರ ಅರ್ಧಶತಕ ಮತ್ತು ಶಿವಂ ದುಬೆ ಅವರ 49 ರನ್‌ಗಳ ಸೇರಿದಂತೆ ಮೊಹಿನ್ ಅಲಿ 35 ರನ್‌ಗಳ ಸಹಾಯದಿಂದ ಏಳು ವಿಕೆಟ್‌ ಕಳೆದುಕೊಂಡು 210 ರನ್ ಗಳಿಸುವಲ್ಲಿ ಯಶಸ್ವಿಯಾಯಿತು.

ನಂತರ ಬ್ಯಾಟಿಂಗ್ ಮಾಡಲು ಆಗಮಿಸಿದ್ದ ನಾಯಕ ಕೆ.ಎಲ್ ರಾಹುಲ್ 40 ರನ್ ಗಳಿಸಿ ಪೆವಿಲಿಯನ್ ಗೆ ಮರಳಿದರು. ನಂತರದಲ್ಲಿ ಕ್ವಿಂಟನ್ ಡಿಕಾಕ್ ಮತ್ತು ಎವಿನ್ ಲಿವಿಸ್ ಅವರ ಅರ್ಧ ಶತಕದ ಸಹಾಯದಿಂದ ಗೆಲುವಿಗೆ ಹಾದಿ ಸುಗಮಗೊಳಿಸಿದರು. ಸಿಎಸ್‌ಕೆ ತಂಡದ ಕಳಪೆ ಬೌಲಿಂಗ್ ಪ್ರದರ್ಶನದಿಂದ ಸೋಲು ಅನುಭವಿಸಬೇಕಾಯಿತು. ಮುಖೇಶ್ ಚೌದರಿ, ತುಷಾರ್ ದೇಶಪಾಂಡೆ, ಶಿವಂ ದುಬೆ ಅತಿ ಹೆಚ್ಚು ರನ್‌ಗಳನ್ನು ನೀಡುವ ಮೂಲಕ ತಂಡದ ಸೋಲಿಗೆ ಕಾರಣವಾದರು. ನಾಲ್ಕು ಒವರ್ ಎಸೆದ ಪ್ರಿಟೋರಿಯಸ್ ಅವರು ರಾಹುಲ್ ಮತ್ತು ಡಿ ಕಾಕ್ ಅವರ ವಿಕೆಟ್ ಪಡೆದು 34 ರನ್ ನೀಡಿದರು.

ಆಯುಷ್ ಬದೋನಿ ಅಜೇಯ 9 ಎಸೆತಗಳಲ್ಲಿ 19 ರನ್ ಮತ್ತು ವೆಸ್ಟ್ ಇಂಡೀಸ್ ಎವಿನ್ ಲೂಯಿಸ್ ಅವರ 23 ಎಸೆತಗಳಲ್ಲಿ ಅಜೇಯ 55 ರನ್‌ಗಳು ಲಕ್ನೋಗೆ ಐಪಿಎಲ್‌ನಲ್ಲಿ ಜಯದ ಹಾದಿಯನ್ನು ಸುಗಮಗೊಳಿಸಿದವು. ಇದು ಐಪಿಎಲ್‌ ಇತಿಹಾಸದಲ್ಲಿ ಐದನೇ ಅತಿ ಹೆಚ್ಚು ಯಶಸ್ವಿ ರನ್ ಚೇಸ್ ಆಗಿದೆ.

#4 ಡೆಲ್ಲಿ ಡೇರ್ ‌ಡೆವಿಲ್ಸ್

ಇದು ಐಪಿಎಲ್ 2017ರಲ್ಲಿ ಫಿರೋಜ್ ಷಾ ಕೋಟ್ಲಾದಲ್ಲಿ ಜರುಗಿದ ಪಂದ್ಯ. ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಡೆಲ್ಲಿ ತಂಡ ಗುಜರಾತ್ ಲಯನ್ಸ್‌ ತಂಡದ ಆರಂಭಿಕರನ್ನು ಡ್ವೇನ್ ಸ್ಮಿತ್ ಮತ್ತು ಮೆಕಲಂ ಅವರ ವಿಕೆಟ್‌ಗಳನ್ನು ಪಡೆಯುವಲ್ಲಿ ಯಶಸ್ವಿಯಾದರು. ನಂತರದಲ್ಲಿ ಬ್ಯಾಟಿಂಗ್ ಮಾಡಲು ಬಂದ ನಾಯಕ ರೈನಾ 77 ರನ್‌ಗಳಿಸಿದ್ರೆಮ ದಿನೇಶ ಕಾರ್ತಿಕ್ 65 ರನ್‌ಗಳ ಸಹಾಯದಿಂದ ತಂಡ 208 ರನ್ ಮುಟ್ಟಿತು.

209 ರನ್ ಚೇಸಿಂಗ್ ಮಾಡಿದ ಡೆಲ್ಲಿ ತಂಡ ರಿಷಭ್ ಪಂತ್ ಅವರ ಅಮೋಘ 97 ರನ್‌ಗಳ ಕೊಡುಗೆ ಮೂಲಕ ಗೆಲುವಿನ ದಡ ತಲುಪುವತ್ತ ಹೆಜ್ಜೆ ಇಟ್ಟಿತು. ಮೂರು ರನ್‌ಗಳಿಂದ ಶತಕವಂಚಿತರಾದ ರಿಷಭ್ ಪಂತ್ ಬೇಗನೆ ವಿಕೆಟ್‌ ಒಪ್ಪಿಸಿದರು.

ನಂತರದಲ್ಲಿ ಸಂಜು ಸ್ಯಾಮ್ಸ್‌ನ್ 61 ರನ್‌ಗಳಿಸಿ ವಿಕೆಟ್ ಒಪ್ಪಿಸಿದರು. ಇನ್ನೂ 15 ಎಸೆತಗಳು ಬಾಕಿ ಇರುವಂತೆಯೇ ಬೃಹತ್ ಮೊತ್ತವನ್ನು ಡೆಲ್ಲಿ ಚೇಸ್ ಮಾಡಲು ಯಶಸ್ವಿಯಾಗಿತ್ತು.

#3 ರಾಜಸ್ಥಾನ ರಾಯಲ್ಸ್‌

ಐಪಿಎಲ್ ಆರಂಭಿಕ ಆವೃತ್ತಿಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಮತ್ತು ಡೆಕ್ಕನ್ ಚಾರ್ಜರ್ಸ್ ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣಲ್ಲಿ ಮುಖಾಮುಖಿಯಾದವು. ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ರಾಜಸ್ಥಾನ ತಂಡದ ಪಾಲಿಗೆ ಆಂಡ್ರ್ಯೂ ಸೈಮಂಡ್ಸ್ ಚಂಡಮಾರುತ ಅಪ್ಪಳಿದರು. ಕೇವಲ 53 ಎಸೆತಗಳಲ್ಲಿ ಅಜೇಯ 117 ರನ್ ಗಳಿಸಿದ ಸೈಮಂಡ್ಸ್ ಹೈದ್ರಾಬಾದ್ ತಂಡದ 214 ರನ್ನುಗಳ ಬೃಹತ್ ಮೊತ್ತಕ್ಕೆ ಶಕ್ತಿ ತುಂಬಿದರು.

ಈ ಬೃಹತ್ ಗುರಿ ಬೆನ್ನತ್ತಿದ ರಾಜಸ್ತಾನ ರಾಯಲ್ಸ್ ಪರ ತಂಡದ ಶೇನ್‌ ವಾರ್ನ ನಾಲ್ಕು ಓವರ್‌ಗಳಲ್ಲಿ 47 ರನ್‌ಗಳನ್ನು ಕಲೆಹಾಕಿದರು. ಆರ್‌ ಆರ್‌ ತಂಡದ ಯೂಸುಫ್ ಪಠಾಣ್ ಮತ್ತು ಗ್ರೇಮ್ ಸ್ಮಿತ್‌ ಬ್ಯಾಂಟಿಗ್ ವಿಭಾಗಕ್ಕೆ ಶಕ್ತಿ ತುಂಬಿದರು.

ಎರಡನೇ ವಿಕೆಟ್‌ಗೆ 98 ರನ್‌ಗಳ ಜೊತೆಯಾಟವು ಪಂದ್ಯವನ್ನು ಸಮತೋಲನಕ್ಕೆ ತಂದಿತು. ಪಠಾಣ್ 28 ಎಸೆತಗಳಲ್ಲಿ 61 ರನ್ ಗಳಿಸಿ ನಿರ್ಗಮಿಸಿದರು. ಅಂತಿಮ ಓವರ್‌ನ ಕೊನೆಯ ನಾಲ್ಕು ಎಸೆತಗಳಲ್ಲಿ 14 ರನ್‌ಗಳ ಅವಶ್ಯಕತೆ ರಾಜಸ್ಥಾನ ತಂಡಕ್ಕೆ ಉಂಟಾದಾಗ ನಾಯಕ ಶೇನ್ ವ್ಯಾಟ್ಸ್ ನ್ ಎರಡು ಭರ್ಜರಿ ಸಿಕ್ಸ್‌ ಬಾರಿಸುವ ಮೂಲಕ ದಾಖಲೆಯ ಮೊತ್ತವನ್ನು ಚೇಸ್ ಮಾಡಿತು.

# 2 ಮುಂಬೈ ಇಂಡಿಯನ್ಸ್‌

ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಮುಂಬೈ ವಿರುದ್ದ ಚೆನ್ನೈ ಸವಾಲೆಸೆದಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಸಿಎಸ್‌ಕೆ ಆರಂಭಿಕ ಆಟಗಾರ ರುತುರಾಜ್ ಗಾಯಕ್ವಾಡ್ ವಿಕೆಟ್ ಒಪ್ಪಿಸಿದರು. ಆದಾಗ್ಯೂ, ಮೊಯಿನ್ ಅಲಿ ಮತ್ತು ಫಾಫ್ ಡು ಪ್ಲೆಸಿಸ್ ಅವರ ಉತ್ತಮ ಅರ್ಧಶತಕಗಳು ಮತ್ತು 27 ಎಸೆತಗಳಲ್ಲಿ ಅಜೇಯ 72 ರನ್ ಗಳಿಸಿದ ಅಂಬಾಟಿ ರಾಯುಡು ಅವರ ಅತ್ಯುನ್ನತ ಬ್ಯಾಟಿಂಗ್ ಪ್ರದರ್ಶನದಿಂದ ಸಿಎಸ್‌ಕೆ 20 ಓವರ್‌ಗಳಲ್ಲಿ ಒಟ್ಟು 218ರನ್‌ಗಳನ್ನು ಗಳಿಸಲು ಸಾಧ್ಯವಾಯಿತು.

ಮುಂಬೈ ತಂಡದ ಬೆದರಿಸುವ ಬ್ಯಾಟಿಂಗ್ ಲೈನ್‌ಅಪ್‌ಗೆ ತಕ್ಕಂತೆ ಆರಂಭಿಕರಾದ ರೋಹಿತ್ ಶರ್ಮಾ ಮತ್ತು ಕ್ವಿಂಟನ್ ಡಿ ಕಾಕ್ ಅವರ ಉತ್ತಮ ಆರಂಭ ನೀಡಿದರು. ನಂತರ ಸೂರ್ಯಕುಮಾರ್ ಯಾದವ್ ಕೇವಲ ಮೂರು ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು.

ಇದಾದ ಬಳಿಕ ವೆಸ್ಟ್‌ ಇಂಡಿಸ್ ದೈತ್ಯ ಬ್ಯಾಟ್ಸ್‌ಮನ್ ಕೀರಾನ್ ಪೋಲಾರ್ಡ ಚೆನ್ನೈ ತಂಡಕ್ಕೆ ನುಂಗಲಾರದ ತುತ್ತಾದರು. ಕೃನಾಲ್ ಪಾಂಡ್ಯ ಅವರ ಸಾಥ್ ನಿಂದ ಚೆನ್ನೈ ತಂಡದ ಬೌಲರ್‌ ಗಳ ಹೆಡೆಮುರಿ ಕಟ್ಟಿದ ಪೋಲಾರ್ಡ 34 ಎಸೆತಗಳಲ್ಲಿ 87 ರನ್‌ಗಳಿಸಿ ಚೆನ್ನೈ ಕೈಯಿಂದ ಗೆಲುವನ್ನು ಕಿತ್ತುಕೊಂಡರು. ಚೆನ್ನೈ ತಂಡದ ಶಾರ್ದೂಲ್ ಠಾಕೂರ್ ನಾಲ್ಕು ಓವರ್ 56 ರನ್, ಲುಂಗಿ ಎನ್‌ಗಿಡಿ 62 ರನ್ ನೀಡಿದ್ದು ಅವರ ಅತಿ ಕಳಪೆ ಬೌಲಿಂಗ್ ಸಾಕ್ಷಿಯಾಯಿತು.

#1 ರಾಜಸ್ಥಾನ ರಾಯಲ್ಸ್‌

2020 ರ ಐಪಿಎಲ್ ಇತಿಹಾಸದಲ್ಲಿ ಅತಿ ರೋಚಕತೆಯ ಮ್ಯಾಚ್‌ ಇದಾಗಿತ್ತು. ಗೆಲುವಿಗಾಗಿ ರಾಜಸ್ಥಾನ್ ರಾಯಲ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ಸೆಣಸಿದ ಪಂದ್ಯವಾಗಿತ್ತು.

ಟಾಸ್ ಸೋತು ಬ್ಯಾಟಿಂಗ್ ಮಾಡಿದ್ದ ಪಂಜಾಬ್ ತಂಡದ ನಾಯಕ ಕೆ. ಎಲ್ ರಾಹುಲ್ ಮತ್ತು ಮಾಯಾಂಕ್‌ ಅಗರ್ವಾಲ್ ಪ್ರದರ್ಶನ ವೀಕ್ಷಕರನ್ನು ಹುಬ್ಬೇರಿಸುವಂತೆ ಮಾಡಿತ್ತು. ನಾಯಕ 54 ಎಸೆತಗಳಲ್ಲಿ 69ರನ್ ಗಳಿಸಿದ್ರೆ, ಅಗರ್ವಾಲ್‌ 50 ಎಸೆತಗಳಲ್ಲಿ 106ರನ್ ಗಳಿಸುವ ಮೂಲಕ 20 ಓವರ್ ಕೋಟಾದಲ್ಲಿ ಎರಡು ವಿಕೆಟ್‌ಗಳನ್ನು ಕಳೆದುಕೊಂಡು 223 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತ್ತು.

ಪೊಲ್ಲಾರ್ಡ್ ಗೆ ಕೃನಾಲ್ ಪಾಂಡ್ಯ ಕಿಸ್ ಮಾಡಿದ್ದೇ ಈಗ ದೊಡ್ಡ ಅಪರಾಧ;ಯಾಕೆ ಗೊತ್ತಾ? | Oneindia Kannada

ನಂತರದಲ್ಲಿ ಬ್ಯಾಟಿಂಗ್ ಮಾಡಿದ ರಾಜಸ್ಥಾನ ತಂಡದ ಜೋಸ್ ಬಟ್ಲರ್ ಅವರ ಆರಂಭಿಕ ವಿಕೆಟ್‌ ಪಡೆದ ಪಂಜಾಬ್, ಮ್ಯಾಚ್‌ ಹಿಡಿತದಲ್ಲಿಟ್ಟುಕೊಂಡಿತು.ನಾಯಕ ಸ್ಟೀವ್ ಸ್ಮಿತ್ ಮತ್ತು ಸಂಜು ಸ್ಯಾಮ್ಸನ್ ಜೊತೆಯಾಟ ತಂಡವನ್ನು ಗೆಲುವಿನ ಸೊಪಾನದತ್ತ ಸಾಗಿಸಿತ್ತು. ನಾಯಕ ಸ್ಮಿತ್ 27 ಎಸೆತಗಳಲ್ಲಿ 50 ರನ್ ಗಳಿಸಿದ್ರೆ, ಸ್ಯಾಮ್ಸನ್ 42 ಎಸೆತಗಳಲ್ಲಿ 85 ರನ್‌ಗಳಿಸಿದರು. ನಂತರದಲ್ಲಿ ಕ್ರಿಸ್‌ಗೆ ಇಳಿದ ರಾಹುಲ್ ತೇವಾಟಿಯಾ ಏಳು ಸಿಕ್ಸರ್‌ಗಳ ಸಹಾಯದಿಂದ 31 ಎಸೆತಗಳಲ್ಲಿ 53 ರನ್ ಕಲೆಹಾಕಿದ್ದು ಐಪಿಎಲ್ ಇತಿಹಾಸದಲ್ಲಿ ಅತ್ಯಧಿಕ ಯಶಸ್ವಿ ಚೇಸ್ ಎಂಬ ದಾಖಲೆಯನ್ನು ನಿರ್ಮಿಸಿತು.

Story first published: Tuesday, April 26, 2022, 9:46 [IST]
Other articles published on Apr 26, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+