DC and KKR : ಡೆಲ್ಲಿಗೆ ಇಂದು ಕೊಲ್ಕತ್ತಾ ಸವಾಲು: ಸೋಲಿನ ಸುಳಿಯಿಂದ ಹೊರಬರುತ್ತಾ ಐಯ್ಯರ್ ಪಡೆ

ಐಪಿಎಲ್‌ನಲ್ಲಿ ಇಂದು ಭಾರೀ ನಿರೀಕ್ಷೆ ಮೂಡಿಸಿ ಬಳಿಕ ವೈಫಲ್ಯ ಅನುಭವಿಸಿರುವ ತಂಡಗಳು ಕಾದಾಟ ನಡೆಸಲು ಸಜ್ಜಾಗಿದೆ. ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಆರಂಭದಲ್ಲಿ ಅದ್ಭುತ ಪ್ರದರ್ಶನ ನೀಡಿದರು ಕೂಡ ನಂತರ ಈ ಪ್ರದರ್ಶನ ಮುಂದುವರಿಸಲು ವಿಫಲವಾಗಿದೆ. ಇದೀಗ ಈ ಆವೃತ್ತಿಯಲ್ಲಿ ಎರಡನೇ ಬಾರಿ ಮುಖಾಮುಖಿಯಾಗಲು ಈ ತಂಡಗಳು ಸಜ್ಜಾಗಿದೆ.
ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಸತತ ನಾಲ್ಕು ಸೋಲು ಅನುಭವಿಸಿದ್ದು ಇಂದು ಸೋಲಿನ ಸುಳಿಯಿಂದ ಹೊರಬರುವ ಪ್ರಯತ್ನ ನಡೆಸಲಿದೆ. ಆರಂಭದಲ್ಲಿ ನಾಲ್ಕು ಪಂದ್ಯಗಳಲ್ಲಿ ಮೂರು ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ಕೆಕೆಆರ್ ನಂತರ ಬೌಲಿಂಗ್ ವಿಭಾಗದಲ್ಲಿನ ವೈಫಲ್ಯತೆಯಿಂದಾಗಿ ಸತತ ಸೋಲು ಅನುಭವಿಸುತ್ತಾ ಸಾಗಿದೆ. ಪ್ಯಾಟ್ ಕಮ್ಮಿನ್ಸ್, ವರುಣ್ ಚಕ್ರವರ್ತಿಯಂತಾ ಬೌಲರ್‌ಗಳು ಭಾರೀ ವೈಫಲ್ಯ ಅನುಭವಿಸುತ್ತಿರುವುದು ಇಡೀ ತಂಡಕ್ಕೆ ಆಘಾತ ನೀಡಿದೆ.
ಮತ್ತೊಂದೆಡೆ ಡೆಲ್ಲಿ ಕ್ಯಾಪಿಟಲ್ಸ ತಂಡ ಕೂಡ ಗೆದ್ದಿರುವುದಕ್ಕಿಂತ ಹೆಚ್ಚಿನ ಪಂದ್ಯಗಳನ್ನು ಸೋತು ಹಿನ್ನಡೆ ಅನುಭವಿಸುತ್ತಿದೆ. ತಂಡ ಸ್ಥಿರ ಪ್ರದರ್ಶನ ನೀಡಲು ವಿಫಲವಾಗುತ್ತಿರುವುದು ಈ ಹಿನ್ನಡೆಗೆ ಕಾರಣವಾಗಿದೆ. ಇನ್ನು ಡೆತ್ ಓವರ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸಂಪೂರ್ಣವಾಗಿ ಮುಸ್ತಫಿಸುರ್ ರಹ್ಮಾನ್ ಮೇಲೆ ಅವಲಂಬಿತವಾಗಿರುವುದು ಕೂಡ ತಂಡಕ್ಕೆ ಕಳವಳಕಾರಿ ಸಂಗತಿಯಾಗಿದೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡ ಈ ಆವೃತ್ತಿಯಲ್ಲಿ 7 ಪಂದ್ಯಗಳನ್ನು ಈವರೆಗೆ ಆಡಿದ್ದು ಇದರಲ್ಲಿ 3 ಗೆಲುವು ಸಾಧಿಸಿದೆ. ಹೀಗಾಗಿ 6 ಅಂಕಗಳೊಂದಿಗೆ 7ನೇ ಸ್ಥಾನದಲ್ಲಿದೆ. ಮತ್ತೊಂದೆಡೆ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ 8 ಪಂದ್ಯಗಳನ್ನು ಆಡಿದ್ದು 3 ಗೆಲುವು ಹಾಗೂ 5 ಸೋಲು ಅನುಭವಿಸಿ ಹೀನಾಯ ಸ್ಥಿತಿಯಲ್ಲಿದೆ. ಪ್ರಸ್ತುತ ಕೆಕೆಆರ್ ಅಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ. ಹೀಗಾಗಿ ಇಂದಿನ ಪಂದ್ಯದ ಗೆಲುವು ಎರಡು ತಮಡಗಳುಗೂ ಬಹಳ ಮುಖ್ಯವಾಗಿದೆ ಎಂಬುದು ಸ್ಪಷ್ಟ.
ಡೆಲ್ಲಿ ಕ್ಯಾಪಿಟಲ್ಸ್ ಸ್ಕ್ವಾಡ್: ರಿಷಬ್ ಪಂತ್ (ನಾಯಕ & ವಿಕೆಟ್ ಕೀಪರ್), ಪೃಥ್ವಿ ಶಾ, ಡೇವಿಡ್ ವಾರ್ನರ್, ಸರ್ಫರಾಜ್ ಖಾನ್, ಲಲಿತ್ ಯಾದವ್, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ರೋವ್ಮನ್ ಪೊವೆಲ್, ಕುಲದೀಪ್ ಯಾದವ್, ಮುಸ್ತಾಫಿಜುರ್ ರೆಹಮಾನ್, ಖಲೀಲ್ ಅಹ್ಮದ್, ಮಿಚೆಲ್ ಮಾರ್ಷ್, ಮನ್ದೀಪ್ ಸಿಂಗ್, ಶ್ರೀಕರ್ ಭರತ್, ಟಿಮ್ ಸೀಫರ್ಟ್, ಲುಂಗಿ ಎನ್‌ಗಿಡಿ, ಅಶ್ವಿನ್ ಹೆಬ್ಬಾರ್, ಪ್ರವೀಣ್ ದುಬೆ, ಅನ್ರಿಚ್ ನಾರ್ಟ್ಜೆ, ಕಮಲೇಶ್ ನಾಗರಕೋಟಿ, ಚೇತನ್ ಸಕರಿಯಾ, ರಿಪಾಲ್ ಪಟೇಲ್, ಯಶ್ ಧುಲ್, ವಿಕ್ಕಿ ಓಸ್ಟ್ವಾಲ್
ಕೋಲ್ಕತ್ತಾ ನೈಟ್ ರೈಡರ್ಸ್ ಸ್ಕ್ವಾಡ್: ಸ್ಯಾಮ್ ಬಿಲ್ಲಿಂಗ್ಸ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್ (ನಾಯಕ), ಸುನಿಲ್ ನರೈನ್, ನಿತೀಶ್ ರಾಣಾ, ವೆಂಕಟೇಶ್ ಅಯ್ಯರ್, ರಿಂಕು ಸಿಂಗ್, ಆಂಡ್ರೆ ರಸೆಲ್, ಶಿವಂ ಮಾವಿ, ಉಮೇಶ್ ಯಾದವ್, ಟಿಮ್ ಸೌಥಿ, ವರುಣ್ ಚಕ್ರವರ್ತಿ, ಅಜಿಂಕ್ಯ ರಹಾನೆ, ಆರನ್ ಫಿಂಚ್, ಮೊಹಮ್ಮದ್ ನಬಿ, ಪ್ಯಾಟ್ ಕಮಿನ್ಸ್, ಶೆಲ್ಡನ್ ಜಾಕ್ಸನ್, ಚಾಮಿಕಾ ಕರುಣಾರತ್ನೆ, ಬಾಬಾ ಇಂದ್ರಜಿತ್, ಅನುಕೂಲ್ ರಾಯ್, ಪ್ರಥಮ್ ಸಿಂಗ್, ಅಭಿಜಿತ್ ತೋಮರ್, ಅಮನ್ ಹಕೀಮ್ ಖಾನ್, ಅಶೋಕ್ ಶರ್ಮಾ, ರಮೇಶ್ ಕುಮಾರ್, ಹರ್ಷಿತ್ ರಾಣಾ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications