For Quick Alerts
ALLOW NOTIFICATIONS  
For Daily Alerts
 

ಐಪಿಎಲ್: ಹೆಚ್ಚು ಪವರ್ ಹಿಟ್ಟರ್ಸ್‌ಗಳಿರುವ ಬಲಿಷ್ಠ ತಂಡ ಯಾವುದು? ಇಲ್ಲಿದೆ ಟಾಪ್ 10 ಪಟ್ಟಿ

IPL 2022: Top 10 list of Teams with most number of power hitters

ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯ್ ಲೀಗ್ ಟೂರ್ನಿಗೆ ನಾಳೆ ( ಮಾರ್ಚ್ 26 ) ಆರಂಭವಾಗುತ್ತಿದ್ದು, ಚೊಚ್ಚಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಸೆಣಸಾಟ ನಡೆಸಲಿವೆ. ಇನ್ನು ಈ ಬಾರಿ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ನಡೆದ ಕಾರಣ ಕಳೆದ ಆವೃತ್ತಿಗೆ ಹೋಲಿಸಿದರೆ ತಂಡಗಳು ಭಾರೀ ವಿಭಿನ್ನವಾಗಿದ್ದು, ತಂಡಗಳು ಸಾಕಷ್ಟು ನೂತನ ಆಟಗಾರರನ್ನು ಹೊಂದಿವೆ. ಹೀಗೆ ನೂತನ ಆಟಗಾರರನ್ನು ಹೊಂದಿರುವ ತಂಡಗಳಲ್ಲಿ ಯಾವ ತಂಡ ಹೆಚ್ಚು ಪವರ್ ಹಿಟ್ಟರ್ಸ್‌ಗಳನ್ನು ಹೊಂದಿ ಬಲಿಷ್ಠವಾಗಿದೆ ಎಂಬ ಲೆಕ್ಕಾಚಾರಗಳು ನಡೆಯುತ್ತಿದೆ. ಟಿ ಟ್ವೆಂಟಿ ಪಂದ್ಯಗಳೆಂದ ಮೇಲೆ ಪವರ್ ಹಿಟ್ಟಿಂಗ್ ಆಟಗಾರರ ಅಗತ್ಯತೆ ಹೆಚ್ಚಿರಲಿದ್ದು, ಹೆಚ್ಚು ಪವರ್ ಹಿಟ್ಟರ್ಸ್‌ಗಳನ್ನು ಹೊಂದಿ ಬಲಿಷ್ಠವಾಗಿರುವ ತಂಡಗಳ ಟಾಪ್ 10 ಪಟ್ಟಿ ಈ ಕೆಳಕಂಡಂತಿದೆ.

10. ಲಕ್ನೋ ಸೂಪರ್ ಜೈಂಟ್ಸ್

10. ಲಕ್ನೋ ಸೂಪರ್ ಜೈಂಟ್ಸ್

ಇದೇ ಮೊದಲ ಐಪಿಎಲ್ ಆವೃತ್ತಿ ಆಡಲಿರುವ ನೂತನ ತಂಡ ಲಕ್ನೋ ಸೂಪರ್ ಜೈಂಟ್ಸ್ ಬಳಗದಲ್ಲಿ ಮಾರ್ಕಸ್ ಸ್ಟಾಯ್ನಿಸ್ ಮತ್ತು ಜೇಸನ್ ಹೋಲ್ಡರ್ ರೀತಿಯ ಪವರ್ ಹಿಟ್ಟರ್ಸ್ ಹೊಂದಿದ್ದು ಈ ಪಟ್ಟಿಯಲ್ಲಿ ಹತ್ತನೇ ಸ್ಥಾನದಲ್ಲಿದೆ. 56 ಐಪಿಎಲ್ ಪಂದ್ಯಗಳನ್ನಾಡಿ 914 ರನ್ ಗಳಿಸಿರುವ ಮಾರ್ಕಸ್ ಸ್ಟಾಯಿನಿಸ್ 135.81 ಸ್ಟ್ರೇಕ್ ರೇಟ್ ಹೊಂದಿದ್ದರೆ, ಜೇಸನ್ ಹೋಲ್ಡರ್ ಕೆರಿಬಿಯನ್ ಆಟಗಾರನಾಗಿದ್ದು ದೊಡ್ಡ ಸಿಕ್ಸರ್ ಬಾರಿಸಬಲ್ಲ ಆಟಗಾರನಾಗಿದ್ದಾರೆ. ಇನ್ನು ಇಲ್ಲಿಯವರೆಗೆ ಮುಂಬೈ ಇಂಡಿಯನ್ಸ್ ಪರ ಕಣಕ್ಕಿಳಿದು ಅಬ್ಬರಿಸಿದ್ದ ಕೃನಾಲ್ ಪಾಂಡ್ಯ ಈ ಬಾರಿಯ ಟೂರ್ನಿಯಲ್ಲಿ ಕೆಎಲ್ ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ಪರ ಕಣಕ್ಕಿಳಿಯಲಿದ್ದು, ಪಾಂಡ್ಯ 138.55 ಸ್ಟ್ರೇಕ್ ರೇಟ್ ಹೊಂದಿದ್ದಾರೆ.

9. ರಾಯಲ್ ಚಾಲೆಂಜರ್ಸ ಬೆಂಗಳೂರು

9. ರಾಯಲ್ ಚಾಲೆಂಜರ್ಸ ಬೆಂಗಳೂರು

ಎಬಿ ಡಿವಿಲಿಯರ್ಸ್ ತಂಡದಲ್ಲಿದ್ದಿದ್ದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನದ ಬದಲಾಗಿ ಇನ್ನೂ ಮೇಲಿನ ಸ್ಥಾನದಲ್ಲಿರುತ್ತಿತ್ತು. ಆದರೂ ಸಹ ಸಾಕಷ್ಟು ಪವರ್ ಹಿಟ್ಟರ್‌ಗಳನ್ನು ಹೊಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ 97 ಐಪಿಎಲ್ ಪಂದ್ಯಗಳನ್ನಾಡಿ 151.84 ಸ್ಟ್ರೇಕ್ ರೇಟ್ ಹೊಂದಿರುವ ಗ್ಲೆನ್ ಮ್ಯಾಕ್ಸ್‌ವೆಲ್ ಇದ್ದರೆ, ಕೆಳ ಕ್ರಮಾಂಕದಲ್ಲಿ ಕಣಕ್ಕಿಳಿದು ಅಬ್ಬರಿಸಬಲ್ಲ ಅನುಭವಿ ದಿನೇಶ್ ಕಾರ್ತಿಕ್ ಕೂಡ ತಂಡದಲ್ಲಿದ್ದಾರೆ. ಇನ್ನು ಈ ಬಾರಿಯ ಮೆಗಾ ಹರಾಜಿನಲ್ಲಿ ತಂಡ ಸೇರಿ ನಾಯಕನಾಗಿರುವ ಫಾಫ್ ಡು ಪ್ಲೆಸಿಸ್ ಕೂಡ ಪವರ್ ಹಿಟ್ಟರ್ ಆಗಿದ್ದು, ವಿರಾಟ್ ಕೊಹ್ಲಿ ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲೂ ಕಿಂಗ್ ಎನ್ನುವುದನ್ನು ಮರೆಯುವ ಹಾಗಿಲ್ಲ.

8. ಡೆಲ್ಲಿ ಕ್ಯಾಪಿಟಲ್ಸ್

8. ಡೆಲ್ಲಿ ಕ್ಯಾಪಿಟಲ್ಸ್

ಇನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್ ಸ್ವತಃ ಪವರ್ ಹಿಟ್ಟರ್ ಆಗಿದ್ದು, ಲೀಲಾಜಾಲವಾಗಿ ಸಿಕ್ಸರ್ ಬಾರಿಸಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಇನ್ನುಳಿದಂತೆ ಈ ಬಾರಿಯ ಮೆಗಾ ಹರಾಜಿನಲ್ಲಿ ತಂಡ ಸೇರಿರುವ ಡೇವಿಡ್ ವಾರ್ನರ್ ಐಪಿಎಲ್ ಇತಿಹಾಸದಲ್ಲಿ ಅತಿ ದೊಡ್ಡ ಯಶಸ್ಸು ಸಾಧಿಸಿರುವ ವಿದೇಶಿ ಆಟಗಾರ ಎನಿಸಿಕೊಂಡಿದ್ದು, ಮೂರು ಬಾರಿ ಆರೆಂಜ್ ಕ್ಯಾಪ್ ಮುಡಿಗೇರಿಸಿಕೊಂಡಿರುವ ಪವರ್ ಹಿಟ್ಟರ್ ಆಗಿದ್ದಾರೆ. ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡದ ರೊವ್‌ಮನ್ ಪೊವೆಲ್ ಕೂಡ ದೊಡ್ಡ ಹೊಡೆತ ಬಾರಿಸಬಲ್ಲ ಆಟಗಾರನಾಗಿದ್ದಾರೆ.

7. ಸನ್‌ ರೈಸರ್ಸ್ ಹೈದರಾಬಾದ್

7. ಸನ್‌ ರೈಸರ್ಸ್ ಹೈದರಾಬಾದ್

ಈ ಬಾರಿಯ ಮೆಗಾ ಹರಾಜಿನಲ್ಲಿ ದೊಡ್ಡ ಮೊತ್ತಕ್ಕೆ ಕೆರಿಬಿಯನ್ ಸ್ಟಾರ್ ನಿಕೋಲಸ್ ಪೂರನ್ ಅವರನ್ನು ಸನ್ ರೈಸರ್ಸ್ ಹೈದರಾಬಾದ್ ಖರೀದಿಸಿದ್ದು, ಇತ್ತೀಚಿನ ದಿನಗಳಲ್ಲಿ ಪೂರನ್ ಉತ್ತಮ ಫಾರ್ಮ್ ಕಂಡುಕೊಂಡಿದ್ದಾರೆ. ಇನ್ನು ಕಾಶ್ಮೀರದ ಆಟಗಾರ ಅಬ್ದುಲ್ ಸಮದ್ ಕೂಡ ಸನ್ ರೈಸರ್ಸ್ ಹೈದರಾಬಾದ್ ಪರ ಕಣಕ್ಕಿಳಿಯಲಿದ್ದು, ಸಮದ್ ರಬಾಡಾ, ಬುಮ್ರಾ ಮತ್ತು ಕಮಿನ್ಸ್ ರೀತಿಯ ಅಂತರರಾಷ್ಟ್ರೀಯ ಸ್ಟಾರ್ ಬೌಲರ್‌ಗಳಿಗೆ ಸಿಕ್ಸರ್ ಬಾರಿಸಿದ್ದು ಪವರ್ ಹಿಟ್ಟರ್ ಎನಿಸಿಕೊಂಡಿದ್ದಾರೆ. ಇನ್ನು ರೊಮಾರಿಯೋ ಶೆಫಾರ್ಡ್ ಕೂಡ ದೊಡ್ಡ ಹೊಡೆತಗಳನ್ನು ಬಾರಿಸಬಲ್ಲ ಆಟಗಾರನಾಗಿದ್ದು, ಸನ್ ರೈಸರ್ಸ್ ಹೈದರಾಬಾದ್ ಈ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ.

6. ಚೆನ್ನೈ ಸೂಪರ್ ಕಿಂಗ್ಸ್

6. ಚೆನ್ನೈ ಸೂಪರ್ ಕಿಂಗ್ಸ್

ಇನ್ನು ಈ ಬಾರಿಯ ಟೂರ್ನಿಯಲ್ಲಿ ರವೀಂದ್ರ ಜಡೇಜಾ ನಾಯಕತ್ವದಲ್ಲಿ ಕಣಕ್ಕಿಳಿಯಲಿರುವ ಚೆನ್ನೈ ಸೂಪರ್‌ ಕಿಂಗ್ಸ್ ತಂಡದಲ್ಲಿ ಫಿನಿಷರ್ ಎಂದೇ ಖ್ಯಾತಿಯನ್ನು ಪಡೆದಿರುವ ಎಂಎಸ್ ಧೋನಿಯನ್ನು ಹೊಂದಿದೆ. ಟಿ ಟ್ವೆಂಟಿ ಮಾದರಿ ಶುರುವಾದಾಗಿನಿಂದ ಆಡಿರುವ ಅಭ್ಯಾಸವಿರುವ ಎಂ ಎಸ್ ಧೋನಿಯಷ್ಟು ಅನುಭವಿ ಆಟಗಾರ ಟಿ ಟ್ವೆಂಟಿ ಕ್ರಿಕೆಟ್ ಇತಿಹಾಸದಲ್ಲಿಯೇ ಯಾರೂ ಇಲ್ಲ ಎನ್ನಬಹುದು. ಇನ್ನು ಧೋನಿ ಜೊತೆಗೆ ಡೇಂಜರಸ್ ರವೀಂದ್ರ ಜಡೇಜಾ ಕೂಡ ಪಂದ್ಯದ ಅಂತಿಮ ಘಟ್ಟಗಳಲ್ಲಿ ಯಾವ ರೀತಿ ಅಬ್ಬರಿಸುತ್ತಾರೆ ಎಂಬುದನ್ನು ಬಿಡಿಸಿ ಹೇಳುವ ಅಗತ್ಯವಿಲ್ಲ.

5. ಗುಜರಾತ್ ಟೈಟನ್ಸ್

5. ಗುಜರಾತ್ ಟೈಟನ್ಸ್

ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಕಣಕ್ಕಿಳಿಯಲಿರುವ ಮತ್ತೊಂದು ನೂತನ ತಂಡ ಗುಜರಾತ್ ಟೈಟನ್ಸ್ ದೊಡ್ಡ ಹೊಡೆತಗಳನ್ನು ಬಾರಿಸಬಲ್ಲ ಆಟಗಾರರನ್ನು ಹೊಂದಿರುವ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ತಂಡದ ನಾಯಕ ಹಾರ್ದಿಕ್ ಪಾಂಡ್ಯ ಐಪಿಎಲ್ ಇತಿಹಾಸದಲ್ಲಿ ಮುಂಬೈ ಇಂಡಿಯನ್ಸ್ ಪರ ದೊಡ್ಡ ದೊಡ್ಡ ಹೊಡೆತಗಳನ್ನು ಬಾರಿಸಿರುವ ಬಲಿಷ್ಟ ಆಟಗಾರ ಎನಿಸಿಕೊಂಡಿದ್ದು, ತಂಡದಲ್ಲಿ ಮತ್ತೋರ್ವ ಪವರ್ ಹಿಟ್ಟರ್ ಡೇವಿಡ್ ಮಿಲ್ಲರ್ ಇರುವುದು ದೊಡ್ಡ ಬಲ ಎಂದೇ ಹೇಳಬಹುದು. ಹಾಗೂ ತಂಡದಲ್ಲಿ ಸ್ಥಾನ ಪಡೆದಿರುವ ರಾಹುಲ್ ತೆವಾಟಿಯಾ ಕೂಡ ಪಂದ್ಯವನ್ನು ಫಿನಿಷ್ ಮಾಡಬಲ್ಲ ಸಾಮರ್ಥ್ಯವಿರುವ ಆಟಗಾರನಾಗಿದ್ದಾರೆ.

4. ಪಂಜಾಬ್ ಕಿಂಗ್ಸ್

4. ಪಂಜಾಬ್ ಕಿಂಗ್ಸ್

ಕಳೆದ ಬಾರಿಯ ಟೂರ್ನಿಗಿಂತ ಸಾಕಷ್ಟು ಭಿನ್ನವಾಗಿರುವ ಪಂಜಾಬ್ ಕಿಂಗ್ಸ್ ಈ ಬಾರಿ ಮಯಾಂಕ್ ಅಗರ್ವಾಲ್ ನಾಯಕತ್ವದಲ್ಲಿ ಕಣಕ್ಕಿಳಿಯಲಿದೆ. ಇನ್ನು ತಂಡದಲ್ಲಿ ಸಿಕ್ಸರ್ ಮಷಿನ್ ಲಿಯಾಮ್ ಲಿವಿಂಗ್‌ಸ್ಟನ್ ಇದ್ದು, ಇವರು ವಿಶ್ವದ ಹಲವಾರು ಫ್ರಾಂಚೈಸಿ ಕ್ರಿಕೆಟ್ ಟೂರ್ನಿಗಳಲ್ಲಿ ದೊಡ್ಡ ಸಿಕ್ಸರ್‌ಗಳನ್ನು ಬಾರಿಸಿದ ಅನುಭವ ಹೊಂದಿದ್ದಾರೆ. ಇನ್ನು ದೇಸಿ ಕ್ರಿಕೆಟ್ ಟೂರ್ನಿಗಳಲ್ಲಿ ತಮಿಳು ನಾಡು ಪರ ಅಬ್ಬರದ ಬ್ಯಾಟಿಂಗ್ ನಡೆಸಿರುವ ಶಾರುಖ್ ಖಾನ್ ಕೂಡ ತಂಡದಲ್ಲಿದ್ದು, ದೊಡ್ಡ ಹೊಡೆತಗಳನ್ನು ಬಾರಿಸಬಲ್ಲ ಆಟಗಾರನಾಗಿದ್ದಾರೆ. ಈ ಇಬ್ಬರ ಜೊತೆಗೆ ಪಂಜಾಬ್ಸ್ ಕಿಂಗ್ಸ್ ತಂಡದಲ್ಲಿ ಜಾನಿ ಬೈರ್‌ಸ್ಟೋ ಕೂಡ ಇದ್ದು, ಇವರೂ ಸಹ ಬಿಗ್ ಹಿಟ್ಟರ್ ಎನಿಸಿಕೊಂಡಿದ್ದಾರೆ.

3. ಮುಂಬೈ ಇಂಡಿಯನ್ಸ್

3. ಮುಂಬೈ ಇಂಡಿಯನ್ಸ್

ಐಪಿಎಲ್ ಇತಿಹಾಸದಲ್ಲಿ ಅತಿ ದೊಡ್ಡ ಯಶಸ್ಸನ್ನು ಸಾಧಿಸಿರುವ ತಂಡ ಎನಿಸಿಕೊಂಡಿರುವ ತಂಡ ಮುಂಬೈ ಇಂಡಿಯನ್ಸ್‌ನಲ್ಲಿ ಈ ಬಾರಿ ನಾಲ್ವರು ಪವರ್ ಹಿಟ್ಟರ್ಸ್ ಇದ್ದಾರೆ. ಮುಂಬೈ ಇಂಡಿಯನ್ಸ್ ಪರ ಹಲವಾರು ಪಂದ್ಯಗಳಲ್ಲಿ ಅಬ್ಬರಿಸಿ ಗೆಲುವು ತಂದು ಕೊಟ್ಟಿರುವ ಕೀರನ್ ಪೊಲಾರ್ಡ್ ಇದ್ದು, ಇವರು ದೊಡ್ಡ ಹೊಡೆತ ಬಾರಿಸುವಲ್ಲಿ ಹೆಸರು ವಾಸಿಯಾಗಿದ್ದಾರೆ. ಇನ್ನು ಈ ಬಾರಿಯ ಮೆಗಾ ಹರಾಜಿನಲ್ಲಿ ದೊಡ್ಡ ಮೊತ್ತಕ್ಕೆ ಬಿಕರಿಯಾಗಿರುವ ಆಟಗಾರ ಎನಿಸಿಕೊಂಡಿರುವ ಇಶಾನ್ ಕಿಶನ್ ಕೂಡ ಪವರ್ ಹಿಟ್ಟರ್ ಆಗಿದ್ದು, ಈ ಇಬ್ಬರ ಜೊತೆಗೆ ತಂಡ ಸೇರಿರುವ ಟಿಮ್ ಡೇವಿಡ್ ಹಾಗೂ ಡೇನಿಯಲ್ ಸ್ಯಾಮ್ಸ್ ಕೂಡ ಪವರ್ ಹಿಟ್ಟರ್ಸ್ ಎನಿಸಿಕೊಂಡಿದ್ದಾರೆ.

2. ಕೋಲ್ಕತ್ತಾ ನೈಟ್ ರೈಡರ್ಸ್

2. ಕೋಲ್ಕತ್ತಾ ನೈಟ್ ರೈಡರ್ಸ್

ಇತ್ತೀಚೆಗಿನ ಐಪಿಎಲ್ ಆವೃತ್ತಿಗಳಲ್ಲಿ ಡೇಂಜರಸ್ ಬ್ಯಾಟ್ಸ್‌ಮನ್ ಯಾರು ಎಂಬ ಪ್ರಶ್ನೆ ಮೂಡಿದಾಗ ಎಲ್ಲರ ಬಾಯಲ್ಲೂ ಮೊದಲು ಬರುವ ಹೆಸರೇ ಆಂಡ್ರೆ ರಸೆಲ್. ಹೌದು, ಆಂಡ್ರೆ ರಸೆಲ್ ಕಣಕ್ಕಿಳಿದು ಪಂದ್ಯದ ಗತಿಯನ್ನೇ ಬದಲಿಸಿದ ಹಲವಾರು ಉದಾಹರಣೆಗಳು ಇವೆ. ರಸೆಲ್ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿಯೂ ಸಹ ಕೋಲ್ಕತ್ತಾ ನೈಟ್ ರೈಡರ್ಸ್ ಪರವೇ ಕಣಕ್ಕಿಳಿಯಲಿದ್ದು, ರಸೆಲ್ ಜತೆಗೆ ಅಲೆಕ್ಸ್ ಹೇಲ್ಸ್ ಬದಲಾಗಿ ತಂಡ ಸೇರಿರುವ ಆರನ್ ಫಿಂಚ್ ಕೂಡ ಎದುರಾಳಿ ಬೌಲರ್‌ಗಳನ್ನು ಕಾಡಬಲ್ಲ ಪವರ್ ಹಿಟ್ಟರ್ ಆಗಿದ್ದಾರೆ.

ಅಭ್ಯಾಸ ಪಂದ್ಯದಲ್ಲಿ Virat ಯಾಕೆ ಆಡ್ಲಿಲ್ಲ? ಫಾಫ್- ವಿರಾಟ್ ಮಧ್ಯೆ ಬಿರುಕು? | Oneindia Kannada
1. ರಾಜಸ್ಥಾನ್ ರಾಯಲ್ಸ್

1. ರಾಜಸ್ಥಾನ್ ರಾಯಲ್ಸ್

2022ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಅತಿಹೆಚ್ಚು ಪವರ್ ಹಿಟ್ಟರ್ಸ್ ಹೊಂದಿರುವ ತಂಡವೆಂದರೆ ಅದು ರಾಜಸ್ಥಾನ್ ರಾಯಲ್ಸ್. ಈ ಅಂಶವೇ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಈ ಬಾರಿ ದೊಡ್ಡ ಪ್ಲಸ್ ಪಾಯಿಂಟ್ ಕೂಡ ಆಗಬಹುದು. ಈ ಬಾರಿಯ ಮೆಗಾ ಹರಾಜಿನಲ್ಲಿ ತಂಡ ಸೇರಿರುವ ಶಿಮ್ರಾನ್ ಹೆಟ್ಮೆಯರ್ ದೊಡ್ಡ ಹೊಡೆತಗಳನ್ನು ಬಾರಿಸುವ ಆಟಗಾರನಾಗಿದ್ದು, 151.17 ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಇನ್ನು ರಾಜಸ್ಥಾನ್ ರಾಯಲ್ಸ್ ತಂಡದ ಮೋಸ್ಟ್ ವ್ಯಾಲ್ಯಯೆಬಲ್ ಪ್ಲೇಯರ್ ಎನಿಸಿಕೊಂಡಿರುವ ಜೋಸ್ ಬಟ್ಲರ್ ಆರಂಭ, ಮಧ್ಯಮ ಕ್ರಮಾಂಕ ಅಥವಾ ಫಿನಿಷಿಂಗ್ ಯಾವುದೇ ಕ್ರಮಾಂಕದಲ್ಲಿ ಬೇಕಾದರೂ ಕಣಕ್ಕಿಳಿದು ಅಬ್ಬರಿಸಬಲ್ಲ ಆಟಗಾರನಾಗಿದ್ದಾರೆ. ಇನ್ನು 65 ಐಪಿಎಲ್ ಪಂದ್ಯಗಳನ್ನಾಡಿ 1968 ರನ್ ಗಳಿಸಿರುವ ಜೋಸ್ ಬಟ್ಲರ್ 150.0 ಸ್ಟ್ರೈಕ್ ರೇಟ್ ಹೊಂದಿದ್ದಾರೆ.

Story first published: Friday, March 25, 2022, 23:25 [IST]
Other articles published on Mar 25, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+