ನಾಯಕತ್ವದ ಹೊರೆಯಿಲ್ಲದೆ ಕೊಹ್ಲಿ ಮತ್ತಷ್ಟು ಅಪಾಯಕಾರಿ: ವಿರಾಟ್ ಬೆಂಬಲಕ್ಕೆ ನಿಂತ ಆರ್‌ಸಿಬಿ ಸ್ಟಾರ್ ಆಟಗಾರ

ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಆರ್‌ಸಿಬಿ ತಂಡದ ನಾಯಕತ್ವ ವಿರಾಟ್ ಕೊಹ್ಲಿಯಿಂದ ಫಾಫ್ ಡು ಪ್ಲೆಸಿಸ್ ಹೆಗಲೇರಿದೆ. 2021ರ ಅವೃತ್ತಿಯ ಎರಡನೇ ಹಂತದ ಪಂದ್ಯಗಳು ಆರಂಭವಾಗುತ್ತದ್ದಂತೆಯೇ ವಿರಾಟ್ ಕೊಹ್ಲಿ ಆರ್‌ಸಿಬಿ ನಾಯಕತ್ವ ತೊರೆಯುವ ಬಗ್ಗೆ ಘೋಷಣೆ ಮಾಡಿದ್ದರು. ಮುಂದಿನ ಆವೃತ್ತಿಗೆ ತಾನು ಆಟಗಾರನಾಗಿ ಮಾತ್ರವೇ ಮುಂದುವರಿಯಲಿದ್ದೇನೆ ಎಂದಿದ್ದರು ವಿರಾಟ್ ಕೊಹ್ಲಿ. ಹೀಗಾಗಿ ಈ ಬಾರಿಯ ಐಪಿಎಲ್ ಹಿನ್ನೆಲೆಯಲ್ಲಿ ಆರ್‌ಸಿಬಿ ಹೊಸ ನಾಯಕನನ್ನು ಆಯ್ಕೆ ಮಾಡಿದೆ.
ಈ ಸಂದರ್ಭದಲ್ಲಿ ಆರ್‌ಸಿಬಿ ತಂಡದ ಪ್ರಮುಖ ಆಟಗಾರ ಗ್ಲೆನ್ ಮ್ಯಾಕ್ಸ್‌ವೆಲ್ ವಿರಾಟ್ ಕೊಹ್ಲಿ ಪ್ರದರ್ಶನದ ಮೇಲೆ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ. ಕೊಹ್ಲಿಗೆ ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ನಾಯಕತ್ವದ ಹೊಣೆಗಾರಿಕೆ ಇಲ್ಲ. ಹೀಗಾಗಿ ವಿರಾಟ್ ಕೊಹ್ಲಿ ಈ ಆವೃತ್ತಿಯಲ್ಲಿ ಈ ಹಿಂದಿಗಿಂತಲೂ ಅಪಾಯಕಾರಿಯಾಗಲಿದ್ದಾರೆ ಎಂದಿದ್ದಾರೆ ಗ್ಲೆನ್ ಮ್ಯಾಕ್ಸ್‌ವೆಲ್. ಈ ಮೂಲಕ ತನ್ನ ತಂಡದ ಮಾಜಿ ನಾಯಕನಿಗೆ ಮ್ಯಾಕ್ಸ್‌ವೆಲ್ ಬೆಂಬಲವನ್ನು ಸೂಚಿಸಿದ್ದಾರೆ.
"ವಿರಾಟ್ ಕೊಹ್ಲಿ ಬಹಳ ಕಾಲದಿಮದ ತಂಡದ ನಾಯಕತ್ವ ವಹಿಸಿಕೊಂಡಿದ್ದರು. ಅದು ಆರನಿಗೆ ಸಾಕಷ್ಟು ದೊಡ್ಡ ಹೊರೆಯಾಗಿತ್ತು ಎಂದು ನಾನು ಭಾವಿಸುತ್ತೇನೆ. ಆ ಕಾರಣದಿಂದಾಗಿಯೇ ಅವರ ಆ ಹುದ್ದೆಯಿಂದ ಕೆಳಗಿಳಿದಿದ್ದಾರೆ. ಹೀಗಾಗಿ ಅವರು ಈಗ ನಿರಾಳರಾಗಿದ್ದು ಎದುರಾಳಿ ತಂಡಗಳ ಪಾಕಿಗೆ ಮತ್ತಷ್ಟು ಅಪಾಯಕಾರಿ ಆಟಗಾರನಾಗಲಿದ್ದಾರೆ" ಎಂದು ಮ್ಯಾಕ್ಸ್‌ವೆಲ್ ಅಭಿಪ್ರಾಯಪಟ್ಟಿದ್ದಾರೆ. "ಆತ ನಿರಾಳವಾಗಿರುವುದು ಒಳ್ಳೆಯ ಸಂಗತಿ. ಅವರ ವೃತ್ತಿ ಜೀವನದ ಮುಂದಿನ ಕೆಲ ವರ್ಷಗಳ ಆಟವನ್ನು ಯಾವುದೇ ಒತ್ತಡಗಳು ಇಲ್ಲದೆ ಅವರು ಚೆನ್ನಾಗಿ ಆನಂದಿಸಲಿ" ಎಂದು ಗ್ಲೆನ್ ಮ್ಯಾಕ್ಸ್‌ವೆಲ್ ಪ್ರತಿಕ್ರಿಯೆ ನಿಡಿದ್ದಾರೆ. ಆರ್‌ಸಿಬಿಯ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಮ್ಯಾಕ್ಸ್‌ವೆಲ್ ಈ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
"ಆರಂಭಿಕ ದಿನಗಳಲ್ಲಿ ಆತನ ವಿರುದ್ಧ ಕಣಕ್ಕಿಳಿಯುತ್ತಿದ್ದಾಗ, ಆತ ಬೆಂಕಿ ಚೆಂಡಿನಂತಾ ಪ್ರತಿಸ್ಪರ್ಧಿಯಾಗಿದ್ದು ಎಲ್ಲವನ್ನೂ ಮುಖದ ಮೇಲೆಯೇ ಹೇಳುತ್ತಿದ್ದರು. ಆತ ಯಾವಾಗಲೂ ತನ್ನನ್ನು ಆಟದೊಳಗೆ ತಲ್ಲೀನಗುವಂತೆ ಮಾಡುತ್ತಿದ್ದರು. ಅಲ್ಲದೆ ಎದುರಾಳಿಗೂ ಭೀತಿಯನ್ನುಂಟು ಮಾಡುತ್ತಿದ್ದರು" ಎಂದಿದ್ದಾರೆ ಮ್ಯಾಕ್ಸ್‌ವೆಲ್.
ಇನ್ನು ಈ ಸಂದರ್ಬದಲ್ಲಿ ವಿರಾಟ್ ಕೊಹ್ಲಿ ಜೊತೆಗಿನ ಕ್ರಿಕೆಟ್ ಕುರಿತಾದ ಸಂವಹನವನ್ನು ತಾನು ಬಹಳಷ್ಟು ಆನಂದಿಸುತ್ತೇನೆ ಎಂದಿದ್ದಾರೆ. ಅಲ್ಲದೆ ಭಾರತದ ಮಾಜಿ ನಾಯಕನೂ ಆಗಿರುವ ವಿರಾಟ್ ಕೊಹ್ಲಿ ತನ್ನ ಆಪ್ತ ಗೆಳೆಯನಾಗಿರುವುದು ಅಚ್ಚರಿ ಮೂಡಿಸಿದೆ ಎಂದು ಕೂಡ ಹೇಳಿದ್ದಾರೆ ಮ್ಯಾಕ್ಸ್‌ವೆಲ್. "ಅವರು ಖಂಡಿತವಾಗಿಯೂ ನನಗೆ ಸಾಕಷ್ಟು ಅಚ್ಚರಿ ಮೂಡಿಸಿದ್ದಾರೆ. ಈ ವರ್ಷ ನಾವು ಮತ್ತಷ್ಟು ಆಪ್ತವಾಗಿದ್ದೇವೆ.ಹೀಗಾಗಿ ಆಟದ ವಿಚಾರವಾಗಿ ನಾವು ಮತ್ತಷ್ಟು ಆಪ್ತವಾಗಿ ಚರ್ಚಿಸಲು ಸಾಧ್ಯವಾಗಲಿದೆ" ಎಂದು ಮ್ಯಾಕ್ಸ್‌ವೆಲ್ ಹೇಳಿದ್ದಾರೆ.
ಈ ಬಾರಿಯ ಆರ್‌ಸಿಬಿ ಸಂಪೂರ್ಣ ಸ್ಕ್ವಾಡ್: ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಮೊಹಮ್ಮದ್ ಸಿರಾಜ್, ಫಾಫ್ ಡು ಪ್ಲೆಸಿಸ್(ನಾಯಕ), ಹರ್ಷಲ್ ಪಟೇಲ್, ವನಿಂದು ಹಸರಂಗ, ದಿನೇಶ್ ಕಾರ್ತಿಕ್, ಜೋಶ್ ಹ್ಯಾಜಲ್‌ವುಡ್, ಶಹಬಾಜ್ ಅಹ್ಮದ್, ಅನುಜ್ ರಾವತ್, ಆಕಾಶ್ ದೀಪ್, ಮಹಿಪಾಲ್ ಲೊಮ್ರೋರ್, ಫಿನ್ ಅಲೆನ್, ಶೆರ್ಫೇನ್ ರುದರ್‌ಫೋರ್ಡ್, ಜೇಸನ್ ಬೆಹ್ರೆಂಡ್, ಸುಯಶ್ ಪ್ರಭುದೇಸಾಯಿ, ಚಾಮಾ ಮಿಲಿಂದ್, ಅನೀಶ್ವರ್ ಗೌತಮ್, ಕರ್ಣ್ ಶರ್ಮಾ, ಡೇವಿಡ್ ವಿಲ್ಲಿ, ಲುವ್ನಿತ್ ಸಿಸೋಡಿಯಾ, ಸಿದ್ಧಾರ್ಥ್ ಕೌಲ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications