ಐಪಿಎಲ್‌ನಲ್ಲಿ ಮಿಂಚುತ್ತಿರುವ ಈತನನ್ನು ಟಿ20 ವಿಶ್ವಕಪ್‌ನಲ್ಲಿ ಮಿಸ್ ಮಾಡಿಕೊಂಡೆವು ಎಂದು ಬೇಸರ ಹೊರಹಾಕಿದ ರವಿಶಾಸ್ತ್ರಿ

ಕಳೆದ ವರ್ಷ ಯುಎಇಯಲ್ಲಿ ನಡೆದ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ನಾಯಕತ್ವ ಹಾಗೂ ಕೋಚ್ ರವಿಶಾಸ್ತ್ರಿ ನೇತೃತ್ವದಲ್ಲಿ ಕಣಕ್ಕಿಳಿದಿದ್ದ ಟೀಮ್ ಇಂಡಿಯಾ ಲೀಗ್ ಹಂತದಲ್ಲಿಯೇ ಟೂರ್ನಿಯಿಂದ ಹೊರಬೀಳುವ ಮೂಲಕ ತೀವ್ರ ಮುಖಭಂಗಕ್ಕೆ ಒಳಗಾಗಿತ್ತು. ಈ ಟಿ ಟ್ವೆಂಟಿ ವಿಶ್ವಕಪ್‌ನ ಹೀನಾಯ ಸೋಲಿನ ನಂತರ ಟೂರ್ನಿಯಲ್ಲಿ ತಂಡದ ನಾಯಕನಾಗಿದ್ದ ವಿರಾಟ್ ಕೊಹ್ಲಿ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದರೆ, ಕೋಚ್ ಆಗಿ ತಂಡಕ್ಕೆ ಮಾರ್ಗದರ್ಶನ ನೀಡಿದ್ದ ರವಿಶಾಸ್ತ್ರಿ ಸಹ ಕೋಚ್ ಆಗಿ ಮತ್ತೊಂದು ಅವಧಿಯಲ್ಲಿ ಮುಂದುವರೆಯದೇ ರಾಜೀನಾಮೆಯನ್ನು ನೀಡಿದರು.
ಇನ್ನು ಈ ವರ್ಷವೂ ಸಹ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ನಡೆಯಲಿದ್ದು, ಪ್ರಸ್ತುತ ನಡೆಯುತ್ತಿರುವ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಮುಂಬರುವ ಟಿ ಟ್ವೆಂಟಿ ವಿಶ್ವಕಪ್ ತಂಡಕ್ಕೆ ಆಯ್ಕೆಯಾಗುವತ್ತ ಟೀಮ್ ಇಂಡಿಯಾದಿಂದ ಕೆಟ್ಟ ಫಾರ್ಮ್ ಹಾಗೂ ಗಾಯದ ಸಮಸ್ಯೆಗೊಳಗಾಗಿ ಹೊರಬಿದ್ದಿರುವ ಕೆಲ ಆಟಗಾರರು ಪ್ರಯತ್ನಿಸುತ್ತಿದ್ದಾರೆ. ಹೀಗೆ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಟೀಮ್ ಇಂಡಿಯಾದಿಂದ ಹೊರಬಿದ್ದಿರುವ ಕೆಲ ಆಟಗಾರರು ಉತ್ತಮ ಪ್ರದರ್ಶನ ನೀಡಿ ಪ್ರೇಕ್ಷಕರ ಹಾಗೂ ಹಿರಿಯ ಕ್ರಿಕೆಟಿಗರ ಗಮನ ಸೆಳೆಯುತ್ತಿದ್ದು, ಇದೀಗ ಟೀಮ್ ಇಂಡಿಯಾದ ಮಾಜಿ ಕೋಚ್ ರವಿಶಾಸ್ತ್ರಿ ಕೂಡ ಪ್ರಸ್ತುತ ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಆಟಗಾರನೋರ್ವನ ಕುರಿತು ಮಾತನಾಡಿದ್ದು, ಈ ಕೆಳಕಂಡಂತೆ ಹೇಳಿಕೆ ನೀಡಿದ್ದಾರೆ.

ಈತನನ್ನು ಟಿ ಟ್ವೆಂಟಿ ವಿಶ್ವಕಪ್‌ನಲ್ಲಿ ಮಿಸ್ ಮಾಡಿಕೊಂಡೆವು ಎಂದ ಶಾಸ್ತ್ರಿ
ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಟಿ ನಟರಾಜನ್ ಕುರಿತು ಮಾತನಾಡಿರುವ ರವಿಶಾಸ್ತ್ರಿ ಕಳೆದ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಈತನನ್ನು ಮಿಸ್ ಮಾಡಿಕೊಂಡೆವು ಎಂದಿದ್ದಾರೆ. ಹಾಗೂ ನಟರಾಜನ್ ಫಿಟ್ ಆಗಿ ಇದ್ದಿದ್ದರೆ ಖಂಡಿತ ತಂಡದಲ್ಲಿ ಇರುತ್ತಿದ್ದರು ಎಂದೂ ಸಹ ರವಿಶಾಸ್ತ್ರಿ ಹೇಳಿದ್ದಾರೆ.

ನಟರಾಜನ್ ಡೆತ್ ಬೌಲಿಂಗ್ ಸ್ಪೆಷಲಿಸ್ಟ್
ಇನ್ನೂ ಮುಂದುವರೆದು ಟಿ ನಟರಾಜನ್ ಕುರಿತು ಮಾತನಾಡಿರುವ ರವಿಶಾಸ್ತ್ರಿ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಅವರು ಗಾಯದ ಸಮಸ್ಯೆಗೊಳಗಾದರು ಹಾಗೂ ಅವರು ಡೆತ್ ಬೌಲರ್ ಆಗಿದ್ದು, ಅವರನ್ನು ಟಿ ಟ್ವೆಂಟಿ ವಿಶ್ವಕಪ್‌ನಲ್ಲಿ ತಂಡ ಮಿಸ್ ಮಾಡಿಕೊಂಡಿತು ಎಂದಿದ್ದಾರೆ.


ಟಿ ನಟರಾಜನ್ ಐಪಿಎಲ್ ಅಂಕಿಅಂಶ
ಇಲ್ಲಿಯವರೆಗೂ 26 ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಗಳನ್ನಾಡಿರುವ ಟಿ ನಟರಾಜನ್ 24 ವಿಕೆಟ್‌ಗಳನ್ನು ಪಡೆದಿದ್ದಾರೆ. ಇನ್ನು ಈ ಬಾರಿಯ ಆಟಗಾರರ ಮೆಗಾ ಹರಾಜಿನಲ್ಲಿ 4 ಕೋಟಿಗೆ ಸನ್ ರೈಸರ್ಸ್ ಹೈದರಾಬಾದ್ ಪಾಲಾದ ನಟರಾಜನ್ ಟೂರ್ನಿಯ ಮೊದಲ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಹೆಚ್ಚು ರನ್ ನೀಡಿ ಕಳಪೆಯಾಗಿದ್ದರು. ಹಾಗೂ ಎರಡನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 4 ಓವರ್ ಬೌಲಿಂಗ್ ಮಾಡಿ 26 ರನ್ ನೀಡಿ 2 ವಿಕೆಟ್ ಪಡೆದು ಕಮ್‌ಬ್ಯಾಕ್ ಮಾಡಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications