For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2022: ರೋಹಿತ್ ಶರ್ಮಾ ಆಟಗಾರರ ನಾಯಕ: ಜಹೀರ್ ಖಾನ್

IPL 2022: Zaheer Khan praise Rohit Sharma said he is a players captain

ಮುಂಬೈ ಇಂಡಿಯನ್ಸ್ ತಂಡವನ್ನು ಐದು ಬಾರಿ ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ಯಶಸ್ವಿಯಾಗಿರುವ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಐಪಿಎಲ್ ಇತಿಹಾಸದ ಅತ್ಯಂತ ಯಶಸ್ವಿ ನಾಯಕ ಎನಿಸಿಕೊಂಡಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದುಕೊಂಡು ರೋಹಿತ್ ಶರ್ಮಾ ಪ್ರಮುಖ ನಾಯಕರಲ್ಲಿ ಒಬ್ಬರಾಗಿ ಹೊರಹೊಮ್ಮುವುದನ್ನು ಗಮನಿಸಿಕೊಂಡು ಬಂದಿರುವ ಜಹೀರ್ ಖಾನ್ ರೋಹಿತ್ ಶರ್ಮಾ ನಾಯಕತ್ವದ ಬಗ್ಗೆ ಮಾತನಾಡಿದ್ದಾರೆ. ಪ್ರಸ್ತುತ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯಲ್ಲಿ ಕ್ರಿಕೆಟ್ ಕಾರ್ಯಾಚರಣೆಗಳ ನಿರ್ದೇಶಕನಾಗಿರುವ ಜಹೀರ್ ಖಾನ್ "ತಂಡದ ಪ್ರತಿಯೊಬ್ಬ ಆಟಗಾರನಿಗೆ ರೋಹಿತ್ ಶರ್ಮಾ ಅರ್ಪಿಸಿರುವ ಸಮಯವು ಆತನನ್ನು ಎಲ್ಲರಿಗೂ ಮಾದರಿ ನಾಯಕನನ್ನಾಗಿ ಮಾಡುತ್ತದೆ" ಎಂದು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

"ರೋಹಿತ್ ಶರ್ಮಾ ಒಬ್ಬ ಆಟಗಾರನ ನಾಯಕ. ಅವರು ಮುಂಬೈ ಇಂಡಿಯನ್ಸ್‌ಗೆ ಕಳೆದ ಕೆಲ ವರ್ಷಗಳಿಂದ ಆಟಗಾರನಾಗಿ ಮತ್ತು ನಾಯಕನಾಗಿ ಅದ್ಭುತವಾದ ಕೊಡುಗೆ ನೀಡಿದ್ದಾರೆ.ನಾಯಕನಾಗಿ ಆತ ಪ್ರತಿಯೊಬ್ಬ ಆಟಗಾರನಿಗೆ ವೈಯಕ್ತಿಕ ಸಮಯವನ್ನು ಮೀಸಲಿಡುತ್ತಾರೆ. ಇದು ತಂಡದ ಎಲ್ಲಾ ಆಟಗಾರರನ್ನು ಹತ್ತರವನ್ನಾಗಿಸಿದೆ. ಈ ಅಂಶ ಇತರ ಎಲ್ಲರಿಗೆ ಆತ ಮಾದರಿಯನ್ನಾಗಿ ಮಾಡುತ್ತದೆ ಮಾತ್ರವಲ್ಲದೆ ಶ್ರೇಷ್ಠ ನಾಯಕನನ್ನಾಗಿಸುತ್ತದೆ" ಎಂದು ಜಹೀರ್ ಖಾನ್ ರೋಹಿತ್ ಶರ್ಮಾ ನಾಯಕತ್ವದ ಬಗ್ಗೆ ವಿಶೇಷ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಕಳೆದ ಹಲವು ವರ್ಷಗಳಿಂದ ಮುಂಬೈ ಇಂಡಿಯನ್ಸ್ ತಂಡದೊಂದಿಗೆ ಸಂಬಂಧ ಹೊಂದಿರುವ ಜಹೀರ್ ಖಾನ್ ರೋಹಿತ್ ಶರ್ಮಾ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಮುಂದುವರಿಸಿದರು. ರೋಹಿತ್ ಮಾರ್ಗದರ್ಶನದಲ್ಲಿ ಸಾಕಷ್ಟು ಆಟಗಾರರು ನಾಯಕರಾಗಿ ಬೆಳೆಯುವ ಸಾಮರ್ಥ್ಯವನ್ನು ಪಡೆಯುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.

"ನಾವು ತಂಡವಾಗಿ ಯಾವಾಗಲೂ ಯುವಕರನ್ನು ಉತ್ತೇಜಿಸುವ ಮತ್ತು ಸ್ವಾತಂತ್ರ್ಯವನ್ನು ನೀಡಿಕೊಂಡು ಬಂದಿದ್ದೇವೆ. ರೋಹಿತ್ ಶರ್ಮಾ ಅವರ ಅನುಭವ ಮತ್ತು ವರ್ತನೆಯನ್ನು ನೋಡಿಕೊಂಡು ಹಲವು ಯುವ ಆಟಗಾರರು ತಮ್ಮದೇ ಆದ ರೀತಿಯಲ್ಲಿ ನಾಯಕರಾಗಿ ಬೆಳೆಯುವ ಸಾಮರ್ಥ್ಯವನ್ನು ಪಡೆದುಕೊಳ್ಳಲಿದ್ದಾರೆ ಎಂದು ನಾನು ಭಾವಿಸುತ್ತೇನೆ" ಎಂದಿದ್ದಾರೆ ಜಹೀರ್ ಖಾನ್.

ಇಷ್ಟು ದಿನ ಹೇಳಿದ್ದೆಲ್ಲ ಸುಳ್ಳು!! ಜೆರ್ಸಿ ನಂ 7ರ ಹಿಂದಿನ ನಿಜವಾದ ಕಾರಣ ಬಿಚ್ಚಿಟ್ಟ Dhoni | Oneindia Kannada

Story first published: Friday, March 18, 2022, 9:57 [IST]
Other articles published on Mar 18, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+