ಐಪಿಎಲ್ 2022: ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಜಿಂಬಾಬ್ವೆ ವೇಗಿ ಸೇರ್ಪಡೆ

ಈ ಬಾರಿಯ ಐಪಿಎಲ್ ಆವೃತ್ತಿಯ ಆರಂಭಕ್ಕೂ ಮುನ್ನ ಲಕ್ನೋ ಸೂಪರ್ ಜೈಂಟ್ಸ್ ತಂಡದ ವೇಗದ ಬೌಲರ್ ಗಾಯಗೊಂಡ ಕಾರಣ ಮತ್ತೋರ್ವ ವೇಗಿಯ ಹುಡುಕಾಟದಲ್ಲಿತ್ತು ಲಕ್ನೋ ಫ್ರಾಂಚೈಸಿ. ಇದೀಗ ಇಂಗ್ಲೆಂಡ್ ಆಟಗಾರನಿಗೆ ಬದಲಿಯಾಗಿ ಜಿಂಬಾಬ್ವೆ ಮೂಲದ ವೇಗಿ ಬ್ಲೆಸ್ಸಿಂಗ್ ಮುಜರಬಾನಿ ಅವರನ್ನು ಲಕ್ನೋ ಸೇರ್ಪಡೆಗೊಳಿಸಿದೆ. ಜಿಂಬಾಬ್ವೆ ಆಟಗಾರ ಈಗಾಗಲೇ ಈ ಒಪ್ಪಂದಕ್ಕೆ ಸಹಿ ಕೂಡ ಹಾಕಿದ್ದಾರೆ.
ಕಳೆದ ಫೆಬ್ರವರಿ ತಿಂಗಳಿನಲ್ಲಿ ಬೆಂಗಳುರಿನಲ್ಲಿ ನಡೆದಿದ್ದ ಹರಾಜು ಪ್ರಕ್ರಿಯೆಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ 7.5 ಕೋಟಿಗೆ ಮಾರ್ಕ್ ವುಡ್ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸಿತ್ತು. ಆದರೆ ಟೂರ್ನಿಯ ಆರಂಭಕ್ಕೂ ಮುನ್ನ ಮೊಣಕೈ ಗಾಯಕ್ಕೆ ಮಾರ್ಕ್ ವುಡ್ ತುತ್ತಾದ ಕಾರಣ ಸಂಪೂರ್ಣ ಟೂರ್ನಿಯಿಂದ ಹೊರಗುಳಿಯುತ್ತಿದ್ದಾರೆ.
ಈ ಮಧ್ಯೆ ಮಾರ್ಕ್‌ವುಡ್ ಸ್ಥಾನಕ್ಕೆ ಬದಲಿ ಆಟಗಾರನಾಗಿ ಬಾಂಗ್ಲಾದೇಶದ ವೇಗಿಯನ್ನು ತಂಡಕ್ಕೆ ಸೇರಿಸಿಕೊಳ್ಳಲು ಲಕ್ನೋ ಸೂಪರ್ ಜೈಂಟ್ಸ್ ತಂಡ ಯೋಜನೆ ರೂಪಿಸಿತ್ತು. ಬಾಂಗ್ಲಾದೇಶ ಕ್ರಿಕೆಟ್ ತಂಡದ ವೇಗದ ಬೌಲರ್ ಟಸ್ಕಿನ್ ಅಹ್ಮದ್ ಅವರನ್ನು ಸೇರ್ಪಡೆಗೊಳಿಸಲು ಅವರೊಂದಿಗೆ ಮಾತುಕತೆ ಕೂಡ ನಡೆಸಿತ್ತು. ಆದರೆ ಪ್ರಸ್ತುತ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಟಸ್ಕನ್ ಅಹ್ಮದ್ ಅವರಿಗೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ನಿರಾಕ್ಷೇಪಣ ಪತ್ರವನ್ನು(NOC) ನೀಡುವುದಿಲ್ಲ ಎಂಬುದನ್ನು ಸ್ಪಷ್ಟವಾಗಿ ತಿಳಿಸಿದ ಕಾರಣ ಬಾಂಗ್ಲಾ ವೇಗಿಯನ್ನು ತಂಡಕ್ಕೆ ಸೇರ್ಪಡೆಗೊಳಿಸುವ ಪ್ರಯತ್ನದಲ್ಲಿ ಲಕ್ನೋ ಮೂಲದ ಫ್ರಾಂಚೈಸಿಗೆ ಹಿನ್ನಡೆಯಾಯಿತು.
ಈ ವಿಚಾರವಾಗಿ ಕ್ರಿಕ್ ಬಜ್ ಬಾಂಗ್ಲಾದೇಶದ ಕ್ರಿಕೆಟ್ ಕಾರ್ಯಾಚರನೆಗಳ ಮುಖ್ಯಸ್ಥ ಜಲಾಲ್ ಯೂನುಸ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ವರದಿ ಮಾಡಿದೆ. ಈ ಹೇಳಿಕೆಯಲ್ಲಿ ಜಲಾಲ್ ಯೂನುಸ್ "ನಾವು ಪ್ರಸ್ತುತ ಬಹಳ ಮುಖ್ಯವಾದ ಸರಣಿಗಾಗಿ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದ್ದೇವೆ. ಈ ಸಂದರ್ಭದಲ್ಲಿ ಆತ ಐಪಿಎಲ್‌ನಲ್ಲಿ ಭಾಗವಹಿಸುವುದು ಆತನಿಗೂ ಒಳ್ಳೆಯದು ಎಂದು ನಮಗೆ ಅನಿಸುತ್ತಿಲ್ಲ" ಎಂದು ಅವರು ಹೇಳಿದ್ದಾರೆ.
ನಾವು ಟಸ್ಕಿನ್ ಅವರೊಂದಿಗೆ ಮಾತುಕತೆ ನಡೆಸಿದ್ದೇವೆ. ಆತ ಸಂಪೂರ್ಣ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡಿದ್ದಾರೆ. ಅವರು ಐಪಿಎಲ್ ಫ್ರಾಂಚೈಸಿಗೆ ತಾನು ಐಪಿಎಲ್‌ನಲ್ಇ ಭಾಗಿಯಾಗಲು ಸಾಧ್ಯವಿಲ್ಲ ಎಂಬುದನ್ನು ತಿಳಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ಅವರು ಲಭ್ಯವಾಗಲಿದ್ದು ಸರಣಿ ಪೂರ್ಣಗೊಂಡ ಬಳಿಕ ತವರಿಗೆ ವಾಪಾಸದಾಗಲಿದ್ದಾರೆ" ಎಂದಿದ್ದಾರೆ.
ಇನ್ನು 25ರ ಹರೆಯದ ಬಲಗೈ ವೇಗಿ ಮುಜರಬಾನಿ ಐಪಿಎಲ್ ಟೂರ್ನಿಯಲ್ಲಿ ಭಾಗವಹಿಸಲು ಸಹಿ ಮಾಡುವ ಮೂಲಕ 8 ವರ್ಷದ ಬಳಿಕ ಐಪಿಎಲ್‌ನಲ್ಲಿ ಜಿಂಬಾಬ್ವೆ ಮೂಲದ ಆಟಗಾರನೋರ್ವ ಭಾಗವಹಿಸಿದಂತಾಗುತ್ತದೆ. ಮುಜರಬಾನಿಗೂ ಮುನ್ನ ಟಟೆಂಡ ಟೈಬು, ರೇ ಪ್ರೈಸ್ ಮತ್ತು ಬ್ರೆಂಡನ್ ಟೇಲರ್ ಐಪಿಎಲ್‌ನಲ್ಲಿ ಭಾಗಿಯಾಗಿದ್ದರು.
ಹರಾರೆ ಮೂಲದ ಮುಜರಬಾನಿ ಜಿಂಬಾಬ್ವೆ ತಂಡವನ್ನು 6 ಟೆಸ್ಟ್ ಪಂದ್ಯಗಳಲ್ಲಿ, 30 ಏಕದಿನ ಹಾಗೂ 21 ಟಿ20 ಪಂದ್ಯಗಳಲ್ಲಿ ಪ್ರತಿನಿಧಿಸಿದ್ದಾರೆ. ಒಟ್ಟು 83 ಅಂತಾರಾಷ್ಟ್ರೀಯ ವಿಕೆಟ್‌ಗಳನ್ನು ಕಬಳಿಸಿದ್ದಾರೆ.
ಲಕ್ನೋ ಸೂಪರ್ ಜೈಂಟ್ಸ್ ಸಂಪೂರ್ಣ ಸ್ಕ್ವಾಡ್: ಕೆಎಲ್ ರಾಹುಲ್, ಮಾರ್ಕಸ್ ಸ್ಟೊಯಿನಿಸ್, ರವಿ ಬಿಷ್ಣೋಯ್, ಕ್ವಿಂಟನ್ ಡಿ ಕಾಕ್, ದೀಪಕ್ ಹೂಡಾ, ಮನೀಶ್ ಪಾಂಡೆ, ಕೃನಾಲ್ ಪಾಂಡ್ಯ, ಜೇಸನ್ ಹೋಲ್ಡರ್, ಅವೇಶ್ ಖಾನ್, ಅಂಕಿತ್ ರಜಪೂತ್, ಕೆ ಗೌತಮ್, ದುಷ್ಮಂತ ಚಮೀರಾ, ಶಹಬಾಜ್ ನದೀಮ್, ಮನನ್ ವೋಹ್ರಾ, ಮೊಹ್ಸಿನ್ ಖಾನ್, ಆಯುಷ್ ಬಡೋನಿ, ಆಯುಷ್ ಬಡೋನಿ, ಶರ್ಮಾ, ಎವಿನ್ ಲೂಯಿಸ್, ಮಯಾಂಕ್ ಯಾದವ್, ಕೈಲ್ ಮೇಯರ್ಸ್, ಬ್ಲೆಸ್ಸಿಂಗ್ ಮುಜರಬಾನಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications